Flipkart Mobiles Bonanza: ಯಾರಿಗುಂಟು.. ಯಾರಿಗಿಲ್ಲ… ಕೇವಲ 74 ರೂ.ಗೆ ಖರೀದಿಸಿ ಈ ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್!

Samsung Galaxy F12: ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​12 (Samsung Galaxy F12) ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಮಾತ್ರವಲ್ಲದೆ ಆಫರ್‌ಗಳನ್ನು ಪಡೆಯುವ ಮೂಲಕ ಫೋನ್ ಅನ್ನು 74 ರೂ.ಗೆ ತೆಗೆದುಕೊಂಡು ಹೋಗಬಹುದಾಗಿದೆ.

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​12

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​12

 • Share this:
  Flipkart Mobiles Bonanza:  ಫ್ಲಿಪ್​ಕಾರ್ಟ್​ನಲ್ಲಿ (Flipkart) ಮೊಬೈಲ್​ ಬಿನಾನ್ಜಾ (Mobiles Bonanza) ಮಾರಾಟ ನಡೆಯುತ್ತಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ದೊಡ್ಡ ರಿಯಾಯಿತಿಗಳನ್ನು ನೀಡುತ್ತಿದೆ. ಗ್ರಾಹಕರು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಇಂದು ಉತ್ತಮ ಅವಕಾಶವಾಗಿದೆ. ಸ್ಯಾಮ್‌ಸಂಗ್ ಫೋನ್‌ಗಳನ್ನು ಈ ಸೇಲ್‌ನಲ್ಲಿ ಅತ್ಯಂತ ಅಗ್ಗವಾಗಿ ಖರೀದಿಸಬಹುದು. ಅಂದಹಾಗೆಯೇ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​12 (Samsung Galaxy F12) ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ಮಾತ್ರವಲ್ಲದೆ ಆಫರ್‌ಗಳನ್ನು ಪಡೆಯುವ ಮೂಲಕ ಫೋನ್ ಅನ್ನು 74 ರೂ.ಗೆ ತೆಗೆದುಕೊಂಡು ಹೋಗಬಹುದಾಗಿದೆ.

  Samsung Galaxy F12 ಕೊಡುಗೆಗಳು ಮತ್ತು ರಿಯಾಯಿತಿಗಳು

  ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​12 (Samsung Galaxy F12) 4GB RAM + 64GB ಸ್ಟೋರೇಜ್ ರೂಪಾಂತರದ ಬಿಡುಗಡೆಯ ಬೆಲೆ ರೂ 12,499 ಆಗಿದೆ. ಆದರೆ ಫೋನ್ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ರೂ 9,499 ಗೆ ಲಭ್ಯವಿದೆ. ಅಂದರೆ, ಫೋನ್ ಮೇಲೆ 3500 ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೆ, ಹಲವಾರು ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳಿವೆ. ಇದರಿಂದಾಗಿ ಫೋನ್‌ನ ಬೆಲೆ ಗಣನೀಯವಾಗಿ ಕಡಿಮೆಯಾಗುತ್ತದೆ.

  ಇದನ್ನೂ ಓದಿ: Xiaomi Electric Air Compressor 1S: ಪಂಚರ್​ ಆದ್ರೆ ತಲೆ ಕೆಡಿಸ್ಕೋಬೇಡಿ.. ಇದೊಂದು ಸಾಧನ ಜೊತೆಗಿದ್ರೆ 6 ನಿಮಿಷದಲ್ಲೇ ಟೈರ್​ಗೆ ಗಾಳಿ ತುಂಬಿಸುತ್ತೆ!

  Samsung Galaxy F12 ಬ್ಯಾಂಕ್ ಕೊಡುಗೆಗಳು

  ಫೋನ್ ಖರೀದಿಸಲು ನೀವು Axis ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ ಸಾಕು 475 ರೂಗಳ ರಿಯಾಯಿತಿಯನ್ನು ಸಿಗಲಿದೆ. ಅಂದರೆ ಫೋನ್‌ನ ಬೆಲೆ ರೂ 9,024 ಆಗಿರುತ್ತದೆ. ಅದರ ನಂತರ ವಿನಿಮಯ ಕೊಡುಗೆಯೂ ಇದೆ.

  ಇದನ್ನೂ ಓದಿ: Internet ಇಲ್ಲದೆಯೂ UPI ಪಾವತಿಗಳನ್ನು ಮಾಡಬಹುದು; ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ

  Samsung Galaxy F12 ಎಕ್ಸ್​ಚೇಂಜ್ ಆಫರ್

  Samsung Galaxy F12 ನಲ್ಲಿ 8,950 ರೂಪಾಯಿಗಳ ವಿನಿಮಯ ಕೊಡುಗೆ ನೀಡಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ನೀವು ವಿನಿಮಯ ಮಾಡಿಕೊಂಡರೆ, ತುಂಬಾ ರಿಯಾಯಿತಿ ಪಡೆಯಬಹುದು. ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 8,950 ಪೂರ್ಣ ಲಾಭ ಪಡೆಯಬಹುದಾಗಿದೆ. ಪೂರ್ಣ ಲಾಭದೊಂದಿಗೆ ಸಿಗುವುದಾದರೆ ಫೋನ್‌ನ ಬೆಲೆ 74 ರೂ ಆಗಿರುತ್ತದೆ. ಅಂದರೆ, 12,499 ರೂಗಳ ಫೋನ್ ಅನ್ನು ರೂ 74 ಗೆ ಖರೀದಿಸಬಹುದು.
  Published by:Harshith AS
  First published: