Samsung ಬಳಕೆದಾರರೇ! ಈ ಗ್ಯಾಲಕ್ಸಿ ಬಡ್ಸ್ ಧರಿಸಿದವರಿಗೆ ಶುರುವಾಗಿದೆ ಹೀಗೊಂದು ಸಮಸ್ಯೆ!

Samsung Galaxy Buds: ಸ್ಯಾಮ್‌ಸಂಗ್ ಈ ವಿಷಯದ ಕುರಿತು ತನ್ನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಕಂಪನಿಯು ಈ ಸಮಸ್ಯೆ ಎದುರಿಸುತ್ತಿರುವ ಬಳಕೆದಾರರಿಗೆ ಸಂಪೂರ್ಣ ರೀಫಂಡ್‌ ನೀಡುತ್ತಿದೆ ಎಂದು ವರದಿಯಾಗಿದೆ. ಕೆಲವು ಕೇಸುಗಳಲ್ಲಿ ಇದು ಗ್ರಾಹಕರ ವೈದ್ಯಕೀಯ ಬಿಲ್‌ಗಳನ್ನು ಸಹ ಪಾವತಿ ಮಾಡುತ್ತಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್

  • Share this:

    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್ ಪ್ರೋ (Samsung Galaxy Buds Pro) ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್ 2 TWS ಇಯರ್‌ಫೋನ್‌ಗಳು (Samsung Galaxy Buds 2 TWS Earphone) ಸದ್ಯದ ಮಾರುಕಟ್ಟೆಯಲ್ಲಿನ ಅತ್ಯುತ್ತಮ TWS ಇಯರ್ ಫೋನ್‌ಗಳಲ್ಲಿ ಒಂದಾಗಿವೆ ಅನ್ನೋದು ಸತ್ಯ. ಆದರೆ ಈಗ ಇವುಗಳ ಬಗ್ಗೆ ಒಂದು ತಕರಾರು ಶುರುವಾಗಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್ 2 ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್ ಪ್ರೋ ಇಯರ್ ಬಡ್‌ಗಳು ಕಿವಿಯ ಸೋಂಕನ್ನು ಉಂಟುಮಾಡುತ್ತಿದೆ ಎಂದು ಕೆಲವು ಬಳಕೆದಾರರು ವರದಿ ಮಾಡುತ್ತಿದ್ದಾರೆ.


    ಆ್ಯಂಡ್ರಾಯ್ಡ್ ಸೆಂಟ್ರಲ್‌ ವರದಿಯ ಪ್ರಕಾರ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಪ್ರೋ ಮತ್ತು ಗ್ಯಾಲಕ್ಸಿ ಬಡ್ಸ್ 2 ಬಳಸಿದ ನಂತರ ಗಣನೀಯ ಸಂಖ್ಯೆಯ ಬಳಕೆದಾರರು ಕಿವಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಈ ಸೋಂಕುಗಳಿಗೆ ಕಾರಣವೇನು ಎಂದು ತಿಳಿದಿಲ್ಲ, ಆದರೆ ಇದು ಇಯರ್ ಬಡ್‌ಗಳಲ್ಲಿ ಬಳಸಲಾಗಿರುವ ಆಧುನಿಕ ರೀತಿಯ ವಸ್ತುಗಳಿಂದ ಆಗುತ್ತಿರಬಹುದು ಎಂದು ಅಂದಾಜಿಸಲಾಗಿದೆ..


    ಸ್ಯಾಮ್‌ಸಂಗ್ ಈ ವಿಷಯದ ಕುರಿತು ತನ್ನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಕಂಪನಿಯು ಈ ಸಮಸ್ಯೆ ಎದುರಿಸುತ್ತಿರುವ ಬಳಕೆದಾರರಿಗೆ ಸಂಪೂರ್ಣ ರೀಫಂಡ್‌ ನೀಡುತ್ತಿದೆ ಎಂದು ವರದಿಯಾಗಿದೆ. ಕೆಲವು ಕೇಸುಗಳಲ್ಲಿ ಇದು ಗ್ರಾಹಕರ ವೈದ್ಯಕೀಯ ಬಿಲ್‌ಗಳನ್ನು ಸಹ ಪಾವತಿ ಮಾಡುತ್ತಿದೆ. ಕಂಪನಿಯು ಗ್ರಾಹಕರಿಗೆ ಹಣ ವಾಪಸ್ ನೀಡುತ್ತಿರುವುದರಿಂದ, ಈ ಸಮಸ್ಯೆಯ ಬಗ್ಗೆ ಅವರಿಗೆ ತಿಳಿದೇ ಇರುತ್ತದೆ.


    Read Also: Viral Video: ಕೈಗವಸು​ ಧರಿಸಿ ವರ್ಚುವಲ್ ರಿಯಾಲಿಟಿ ಅನುಭವಿಸಿದ ಮಾರ್ಕ್ ಜುಕರ್‌ಬರ್ಗ್!

    ಆದಾಗ್ಯೂ, ದಕ್ಷಿಣ ಕೊರಿಯಾದ ಮೊಬೈಲ್ ತಯಾರಕರಿಂದ ಈ ಸಮಸ್ಯೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆ್ಯಂಡ್ರಾಯ್ಡ್ ಸೆಂಟ್ರಲ್ ಪ್ರಕಾರ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಬಡ್ಸ್‌ನ ಹಿಂದಿನ ಮಾದರಿಗಳ ವಿಷಯದಲ್ಲಿ ಯಾವುದೇ ಸಮಸ್ಯೆಗಳ ಬಗ್ಗೆ ಯಾವುದೇ ಬಳಕೆದಾರರು ದೂರು ನೀಡಿಲ್ಲ. ಆದರೆ ಹೊಸ ಮಾದರಿಗಳು ವಿವಿಧ ರೀತಿಯ ಕಿರಿಕಿರಿ ಉಂಟುಮಾಡುತ್ತಿವೆ. ಇದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್ ಪ್ರೋನಲ್ಲಿ ನಿಕಲ್ ಬಳಕೆಯಿಂದಾಗಿ ಕೆಲವು ಜನರಿಗೆ ಚರ್ಮದ ಕಿರಿಕಿರಿ ಉಂಟುಮಾಡಬಹುದು ಎಂದು ಈ ವರದಿ ಹೇಳುತ್ತದೆ. ಸ್ಯಾಮ್‌ಸಂಗ್ ಹೊಸ ಗ್ಯಾಲಕ್ಸಿ ಬಡ್ಸ್ 2 ಮಾದರಿಗಳಲ್ಲಿ ಅಕ್ರಿಲೇಟ್ ಎಂಬ ಹೊಸ ವಸ್ತುವನ್ನು ಸಹ ಬಳಸಿದೆ, ಇದು ಕೂಡ ಸಮಸ್ಯೆಗೆ ಕಾರಣವಾಗಿರಬಹುದು.


    Read Also: Oppo A95: ತ್ರಿವಳಿ ಕ್ಯಾಮೆರಾ, 5000mAh ಬ್ಯಾಟರಿ…ಸದ್ಯದಲ್ಲೇ ಬಜೆಟ್​ ಬೆಲೆಯ ಈ ಫೋನ್​ ದೇಶೀಯ ಮಾರುಕಟ್ಟೆಗೆ!

    ಕೆಲವರು ಈಗಾಗಲೇ ನ್ಯೂಜೆರ್ಸಿ ಗ್ರಾಹಕ ವಂಚನೆ ಕಾಯಿದೆಯಡಿಯಲ್ಲಿ ಸ್ಯಾಮ್‌ಸಂಗ್ ವಿರುದ್ಧ ಕ್ಲಾಸ್-ಆ್ಯಕ್ಷನ್ ಮೊಕದ್ದಮೆ ಹೂಡಿದ್ದಾರೆ. ನ್ಯೂಜೆರ್ಸಿಯ 26 ಪುಟದ ಪ್ರಕರಣದ ಪ್ರಕಾರ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್ ಪ್ರೋನಲ್ಲಿನ ಸಮಸ್ಯೆ, ತುರಿಕೆ, ಸುಡುವಿಕೆ, ಕೆಂಪು, ಗುಳ್ಳೆಗಳು, ಫ್ಲೇಕಿಂಗ್, ಸ್ಕ್ಯಾಬಿಂಗ್, ಕಿವಿಯಿಂದ ದ್ರವ ಸೋರಿಕೆ ಮುಂತಾದ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತಿದೆ. ನೀವೂ ಕೂಡಾ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಕಂಪನಿಯ ಕಸ್ಟಮರ್ ಕೇರ್‌ಗೆ ಕರೆ ಮಾಡಬಹುದು ಅಥವಾ ಮರುಪಾವತಿ ಪಡೆಯಲು ಸ್ಯಾಮ್‌ಸಂಗ್‌ ಕಂಪನಿಯನ್ನು ಸಂಪರ್ಕಿಸಬಹುದು.


    News18 ತಂಡ ಈ ಕುರಿತು ಪ್ರತಿಕ್ರಿಯೆಗಾಗಿ Samsung ಜೊತೆ ಮಾತನಾಡಲು ಯತ್ನಿಸಿದ್ದೇವೆ. ಕಂಪನಿಯಿಂದ ಅಧಿಕೃತ ಹೇಳಿಕೆ ಸಿಕ್ಕಾಗ ಈ ಬಗ್ಗೆ ಇನ್ನಷ್ಟು ಅಪ್ಡೇಟ್‌ಗಳನ್ನು ನೀಡಲಾಗುತ್ತದೆ.


    Published by:Harshith AS
    First published: