Earbuds: ಭಾರತದಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ ಬಡ್ಸ್ 2 ಪ್ರೋ ಬೆಲೆ ಎಷ್ಟು ಗೊತ್ತಾ?

ಸ್ಯಾಮ್​ಸಂಗ್ ಗ್ಯಾಲಕ್ಸಿ ಕಂಪನಿ ಬಡ್ಸ್ 2 ಪ್ರೋ ಹೆಸರಿನ ಮತ್ತೊಂದು ಅದ್ಭುತವಾದ ಇಯರ್ ಬಡ್ಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹಿಂದಿನ ಇಯರ್ ಬಡ್ಸ್ ಗಳಿಗಿಂತ ಹಲವಾರು ಹೆಚ್ಚಿನ ವೈಶಿಷ್ಟ್ಯತೆ ಹೊಂದಿರುವ ಪ್ರೀಮಿಯರ್ TWS ಇಯರ್ ಬಡ್ಸ್ ನ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾಹಿತಿ ಹೊರಬಿದ್ದಿದೆ.

 ಸ್ಯಾಮ್ಸಂಗ್ ಗ್ಯಾಲಾಕ್ಸಿ ಬಡ್ಸ್ 2 ಪ್ರೋ

ಸ್ಯಾಮ್ಸಂಗ್ ಗ್ಯಾಲಾಕ್ಸಿ ಬಡ್ಸ್ 2 ಪ್ರೋ

  • Share this:
ಸ್ಯಾಮ್​ಸಂಗ್ ಗ್ಯಾಲಕ್ಸಿ (Samsung Galaxy) ಕಂಪನಿ ಬಡ್ಸ್ 2 ಪ್ರೋ (Buds 2 Pro) ಹೆಸರಿನ ಮತ್ತೊಂದು ಅದ್ಭುತವಾದ ಇಯರ್ ಬಡ್ಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹಿಂದಿನ ಇಯರ್ ಬಡ್ಸ್ ಗಳಿಗಿಂತ ಹಲವಾರು ಹೆಚ್ಚಿನ ವೈಶಿಷ್ಟ್ಯತೆ ಹೊಂದಿರುವ ಪ್ರೀಮಿಯರ್ TWS ಇಯರ್ ಬಡ್ಸ್ ನ ಬೆಲೆ (Price) ಮತ್ತು ಲಭ್ಯತೆ (Availability) ಬಗ್ಗೆ ಮಾಹಿತಿ ಹೊರಬಿದ್ದಿದೆ. ಇದು ಭಾರತದ ಮಾರುಕಟ್ಟೆಗಳಲ್ಲಿ ಆ.26 ರಿಂದ 17,999 ರೂಪಾಯಿಗೆ ಲಭ್ಯವಿರಲಿದೆ. ಬಡ್ಸ್ 2 ಪ್ರೊ ವೈರ್‌ಲೆಸ್ ಇಯರ್‌ ಬಡ್‌ಗಳನ್ನು ಆಗಸ್ಟ್ 10 ರಂದು ಜಾಗತಿಕವಾಗಿ ಬಿಡುಗಡೆ ಮಾಡಲಾಯಿತಾದರೂ ಅಂದು ಬೆಲೆ ಬಗ್ಗೆ ಯಾವುದೇ ಘೋಷಣೆ ಮಾಡಿರಲಿಲ್ಲ. ಪ್ರಸ್ತುತ ಬೆಲೆ ಸೇರಿ ಹಲವು ಮಾಹಿತಿಯನ್ನು ಕಂಪನಿ ಬಹಿರಂಗಪಡಿಸಿದೆ.

ಭಾರತದಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ ಬಡ್ಸ್ 2 ಪ್ರೊ ಬೆಲೆ, ಲಭ್ಯತೆ
ಸ್ಯಾಮ್​ಸಂಗ್ ಗ್ಯಾಲಕ್ಸಿ ಬಡ್ಸ್ 2 ಪ್ರೊ ವೈರ್‌ಲೆಸ್ ಇಯರ್‌ಬಡ್‌ಗಳನ್ನು ಭಾರತದಲ್ಲಿ ರೂ 17,999 ಬೆಲೆಗೆ ದೊರೆಯಲಿದೆ. Samsung.com ಮತ್ತು ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಆಗಸ್ಟ್ 16ರಿಂದ ಮುಂಗಡ ಬುಕಿಂಗ್ ಪ್ರಾರಂಭವಾಗಲಿದ್ದು, ನೀವು ಗ್ರ್ಯಾಫೈಟ್, ವೈಟ್ ಮತ್ತು ಬೋರಾ ಪರ್ಪಲ್ ಎಂಬ ಮೂರು ಬಣ್ಣಗಳಲ್ಲಿ ಈ ಸಾಧನವನ್ನು ಆಯ್ಕೆ ಮಾಡಬಹುದು. ಭಾರತದಲ್ಲೂ ಕೂಡ ಮುಂಗಡ ಬುಕಿಂಗ್ ಆಗಸ್ಟ್ 16 ರಿಂದ ಪ್ರಾರಂಭವಾಗುತ್ತದೆ.

ಆಫರ್
ಸ್ಯಾಮ್​ಸಂಗ್ ಗ್ಯಾಲಕ್ಸಿ ಬಡ್ಸ್ 2 ಪ್ರೊ ಖರೀದಿ ಸಂದರ್ಭದಲ್ಲಿ ಎಲ್ಲಾ ಪ್ರಮುಖ ಬ್ಯಾಂಕ್‌ಗಳ ವಹಿವಾಟುಗಳಲ್ಲಿ 3,000 ರೂಪಾಯಿಗಳ ತ್ವರಿತ ಕ್ಯಾಶ್‌ಬ್ಯಾಕ್ ಅನ್ನು ಗ್ರಾಹಕರು ಪಡೆಯಬಹುದು. ಈ ಮೂಲಕ 17,999ರ ಇಯರ್ ಬಡ್ಸ್ ಅನ್ನು ನೀವು ಕೇವಲ 14,999 ಕ್ಕೆ ಖರೀದಿ ಮಾಡಬಹುದು. ಅಲ್ಲದೇ ಬಡ್ಸ್ 2 ಪ್ರೊ ಅನ್ನು ಮುಂಗಡವಾಗಿ ಬುಕ್ ಮಾಡುವುದರಿಂದ ರೂ. 499 ರ ರಿಯಾಯಿತಿ ದರದಲ್ಲಿ ರೂ. 2,999 ಮೌಲ್ಯದ ಸ್ಯಾಮ್‌ಸಂಗ್ ವೈರ್‌ಲೆಸ್ ಚಾರ್ಜರ್ ಪ್ಯಾಡ್ ಅನ್ನು ಸಹ ನೀವು ಪಡೆಯಬಹುದು.

ಇದನ್ನೂ ಓದಿ: Redmi K50 Ultra: 108MP ಕ್ಯಾಮೆರಾ, 5000 mAh ಬ್ಯಾಟರಿ! ಬಜೆಟ್​ ಬೆಲೆಗೆ ಬಿಡುಗಡೆಗೊಂಡು ಹೊಸ ಸ್ಮಾರ್ಟ್​ಫೋನ್

ಸ್ಯಾಮ್​ಸಂಗ್ ಗ್ಯಾಲಕ್ಸಿ ಬಡ್ಸ್ 2 ಪ್ರೊ ವಿಶೇಷಣಗಳು, ವೈಶಿಷ್ಟ್ಯಗಳು
ಬಡ್ಸ್ ಪ್ರೊ ನಂತರ ಪರಿಚಯವಾದ ಬಡ್ಸ್ 2 ಪ್ರೊ ಹಲವು ವೈಶಿಷ್ಟ್ಯತೆ ಹೊಂದಿದೆ. ಅವುಗಳನ್ನು ಒಂದೊಂದಾಗಿ ನೋಡುವುದಾದರೆ,

  • ವೈರ್ಲೆಸ್ ಆದ ಬಡ್ಸ್ 2 ಪ್ರೋ ಈ ಹಿಂದಿನ ಇಯರ್ಬಡ್ಸ್ಗಿಂತಲೂ ಶೇ.15 ರಷ್ಟು ಚಿಕ್ಕದಾಗಿದೆ.
    ಈ ಬಡ್ಸ್ ಅನ್ನು ಗಾಳಿಯು ಹೊರ ಹೋಗುವಂತೆ ವಿನ್ಯಾಸ ಮಾಡಲಾಗಿದೆ. ಇದಕ್ಕಾಗಿ ರಂಧ್ರ ಮತ್ತು ನಳಿಕೆಯನ್ನು ರೂಪಿಸಲಾಗಿದೆ. ಹೊರಗಿನ ಶಬ್ದ ಕಡಿಮೆ ಮಾಡಲು ಮೂರು ಮೈಕ್ ಸಿಸ್ಟಂ ಮತ್ತು ವಿಸ್ತರಿತ ವಿಂಡ್ಶೀಲ್ಡ್ ಅನ್ನು ಹೊಂದಿದೆ. ಅತ್ಯುತ್ತಮ ಧ್ವನಿ ನಿಯಂತ್ರಕವನ್ನು ಹೊಂದಿದೆ.

  • 24 ಬಿಟ್ ಹೈ-ಫೈ ಶಬ್ದ ಮತ್ತು ಪ್ರತಿ ಬಡ್‌ 10 ಎಂಎಂ ಡ್ರೈವರ್ ಮತ್ತು Dolby Atmos ನಿಂದ ನಡೆಸಲ್ಪಡುವ 360 ಆಡಿಯೊದ ಬೆಂಬಲವನ್ನು ಹೊಂದಿದೆ. ಅಲ್ಲದೇ ಇದು ಡೈರೆಕ್ಟ್ ಮಲ್ಟಿಚಾನೆಲ್ ಅನ್ನು ಸಹ ಬೆಂಬಲಿಸುತ್ತದೆ.


ಇದನ್ನೂ ಓದಿ:  Earbuds: ನೀವಂದುಕೊಂಡಂತೆ ಇದು ಕ್ರಿಕೆಟ್​ ಬಾಲ್​​ ಅಲ್ಲ! UBON BT-210 ಇಯರ್‌ಬಡ್ಸ್​, 20 ಗಂಟೆಗಳ ಬ್ಯಾಟರಿ ಬ್ಯಾಕಪ್​ ನೀಡುತ್ತದೆ

  • ಪ್ರತಿ ಬಡ್ಸ್ 61 ಎಂಎಎಚ್ ಬ್ಯಾಟರಿ ಶಕ್ತಿ ಹೊಂದಿದೆ. ಇವುಗಳನ್ನು 8 ಗಂಟೆಯವರೆಗೂ ಬಳಸಬಹುದಾಗಿದೆ. ಪ್ಲೇಬ್ಯಾಕ್ ಆಗಿ 5 ಗಂಟೆಗಳವರೆಗೆ ಬಳಕೆಗೆ ಬರುತ್ತವೆ. ಇದರ ಚಾರ್ಜಿಂಗ್ ಕೇಸ್ 515 mAh ಬ್ಯಾಟರಿ ಯುಎಸ್ಬಿ ಸಿ ಪೋರ್ಟ್ ಅನ್ನು ಹೊಂದಿದೆ. ಒಟ್ಟು ಪ್ಲೇಬ್ಯಾಕ್ ಸಮಯವನ್ನು 29 ಗಂಟೆಗಳವರೆಗೆ ವಿಸ್ತರಿಸುತ್ತದೆ. ಐದು ನಿಮಿಷಗಳ ಚಾರ್ಜ್ 60 ನಿಮಿಷಗಳ ಪ್ಲೇಟೈಮ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಬಡ್ಸ್ 2 ಪ್ರೊ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

  • 5.3 ವೇಗದ ಬ್ಲೂಟೂರ್ ಸಂಪರ್ಕ, ಎಕೆಜಿ ಟ್ಯೂನಿಂಗ್ ಇದರ ವಿಶೇಷವಾಗಿದೆ. ಟ್ಯಾಬ್ಲೆಟ್, ಸ್ಮಾರ್ಟ್ ವಾಚ್, ಕಂಪ್ಯೂಟರ್, ಸ್ಮಾರ್ಟ್ ಟಿವಿ ಮತ್ತು ಸ್ಮಾರ್ಟ್‌ಫೋನ್ಗಳಿಗೆ ಇವುಗಳನ್ನು ಬಳಸಬಹುದು.

Published by:Ashwini Prabhu
First published: