ಸ್ಯಾಮ್‌ಸಂಗ್ ಕಂಪೆನಿ (Smasung Company) ತನ್ನ ಬ್ರಾಂಡ್ನ ಅಡಿಯಲ್ಲಿ ಹಲವಾರು ಟೆಕ್ ಡಿವೈಸ್ಗಳನ್ನು ಪರಿಚಯಿಸಿದೆ. ಅದರಲ್ಲೂ ಸ್ಯಾಮ್‌ಸಂಗ್ ಕಂಪೆನಿ ಇತ್ತೀಚಿಗೆ ಗ್ಯಾಲಕ್ಸಿ ಬುಕ್ 3 ಅಲ್ಟ್ರಾ ಲ್ಯಾಪ್‌ಟಾಪ್ (Samsung Galaxy Book 3 Ultra) ಅನ್ನು ಅನಾವರಣ ಮಾಡಿತ್ತು. ಇದೀಗ ಈ ಡಿವೈಸ್ನ ಪ್ರೀ-ಆರ್ಡರ್ (Pre-Order) ಸೇವೆ ಆರಂಭವಾಗಿದೆ. ಭಾರತದಲ್ಲಿ ಈ ತಿಂಗಳ ಆರಂಭದಲ್ಲಿ ಲಾಂಚ್ ಆಗಿದ್ದ ಈ ಲ್ಯಾಪ್‌ಟಾಪ್ ಸಾಕಷ್ಟು ಜನರ ಗಮನಸೆಳೆದಿದೆ. ತನ್ನ ಅತ್ಯಾಕರ್ಷಕ ಫೀಚರ್ಸ್ ಹಾಗೂ ಸ್ಟೈಲಿಶ್ ಡಿಸೈನ್ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಇನ್ನು ಈ ಲ್ಯಾಪ್‌ಟಾಪ್ ಅನ್ನು ಪ್ರಿ ಆರ್ಡರ್ ಮಾಡುವ ಗ್ರಾಹಕರು 6,000 ರೂಪಾಯಿವರೆಗಿನ ಪ್ರಯೋಜನಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಸ್ಯಾಮ್‌ಸಂಗ್ ಹೇಳಿದೆ.‘
ಸ್ಯಾಮ್‌ಸಂಗ್ ಕಂಪೆನಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಗ್ಯಾಲಕ್ಸಿ ಬುಕ್ 3 ಅಲ್ಟ್ರಾ ಲ್ಯಾಪ್ಟಾಪ್ನ ಪ್ರೀ ಆರ್ಡಲ್ ಸೇಲ್ ಸದ್ಯ ಆರಂಭವಾಗಿದ್ದು, ಈ ಸೇಲ್ನಲ್ಲಿ ಖರೀದಿದಾರರು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ.
ಪ್ರೀ ಆರ್ಡರ್ನಲ್ಲಿ ಏನೆಲ್ಲಾ ಸೌಲಭ್ಯಗಳಿವೆ?
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 3 ಅಲ್ಟ್ರಾ ಲ್ಯಾಪ್‌ಟಾಪ್ ಫೆಬ್ರವರಿ 14 ರಿಂದ ಪ್ರಿ ಆರ್ಡರ್ ಮಾಡುವ ಖರೀದಿದಾರರಿಗೆ ಲಭ್ಯವಿದೆ. ಇದು ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್‌ನಲ್ಲಿ 2,81,990 ರೂಪಾಯಿ ಬೆಲೆಯನ್ನು ಹೊಂದಿದೆ. ಇದನ್ನು ಪ್ರಿ ಆರ್ಡರ್ ಮಾಡುವ ಗ್ರಾಹಕರು 6,000 ರೂಪಾಯಿ ಮೌಲ್ಯದ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಸ್ಯಾಮ್‌ಸಂಗ್ ಕಂಪೆನಿ ಹೇಳಿದೆ. ಇದಲ್ಲದೆ ಗ್ಯಾಲಕ್ಸಿ ಬುಕ್ 3 ಅಲ್ಟ್ರಾ ಖರೀದಿಯ ಮೇಲೆ ಬಳಕೆದಾರರು 10,000 ರೂಪಾಯಿ ಮೌಲ್ಯದ ಕ್ಯಾಶ್‌ಬ್ಯಾಕ್ ಪಡೆಯಬಹುದು. ಜೊತೆಗೆ 24 ತಿಂಗಳವರೆಗೆ ನೋ ಕಾಸ್ಟ್ ಇಎಮ್ಐ ಆಯ್ಕೆಯೂ ಲಭ್ಯವಾಗಲಿದೆ.
ಇದನ್ನೂ ಓದಿ: ಮೋಟೋ ಇ13 ಸ್ಮಾರ್ಟ್ಫೋನ್ ಫಸ್ಟ್ ಸೇಲ್ ಆರಂಭ! ಹೇಗಿದೆ ಗೊತ್ತಾ ಆಫರ್ಸ್?
ಇನ್ನು ಈ ಲ್ಯಾಪ್‌ಟಾಪ್ ಮಾರ್ಜ್ 15 ರಿಂದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗುತ್ತದೆ. ಆದರೆ ಮಾರುಕಟ್ಟೆಗೆ ಬರುವ ಮೊದಲೇ ಕಂಪೆನಿ ಪ್ರೀ ಬುಕಿಂಗ್ ಆಯ್ಕೆಯನ್ನು ನೀಡಿರುವುದು ವಿಶೇಷವಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 3 ಅಲ್ಟ್ರಾ ಲ್ಯಾಪ್‌ಟಾಪ್ ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 3 ಅಲ್ಟ್ರಾ ಲ್ಯಾಪ್‌ಟಾಪ್ 16 ಇಂಚಿನ 3ಕೆ ಡೈನಾಮಿಕ್ ಅಮೋಲ್ಡ್ 2X ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2,880x1,800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಡಿಸ್‌ಪ್ಲೇ ಅಡಾಪ್ಟಿವ್ 120Hz ರಿಫ್ರೆಶ್ ರೇಟ್ ಮತ್ತು 400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದೆ.
ಪ್ರೊಸೆಸರ್ ಸಾಮರ್ಥ್ಯ
ಗ್ಯಾಲಕ್ಸಿ ಬುಕ್ 3 ಅಲ್ಟ್ರಾ ಲ್ಯಾಪ್‌ಟಾಪ್ 13ನೇ ಜೆನ್ ಇಂಟೆಲ್ ಕೋರ್ i9 ಪ್ರೊಸೆಸರ್ ವೇಗವನ್ನು ಹೊಂದಿದ್ದು, ವಿಂಡೋಸ್ 11 ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಎನ್‌ವಿಡಿಯಾ ಜಿಫೋರ್ಸ್ RTX 4070 ಲ್ಯಾಪ್‌ಟಾಪ್ ಜಿಪಿಯು ಸಹ ಒಳಗೊಂಡಿದೆ. ಈ ಲ್ಯಾಪ್‌ಟಾಪ್ 76Whr ಸಾಮರ್ಥ್ಯದ ಬ್ಯಾಟರಿಯನ್ನು ಬೆಂಬಲಿಸಲಿದೆ.
ಇತರೆ ಫೀಚರ್ಸ್
ಇನ್ನು ಈ ಲ್ಯಾಪ್‌ಟಾಪ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಸಿಂಗಲ್ HDMI,ಯುಎಸ್ಬಿ ಟೈಪ್ ಎ ಮತ್ತು ಮೈಕ್ರೋಎಸ್‌ಡಿ ಕಾರ್ಡ್ ಅನ್ನು ಒಳಗೊಂಡಿದೆ. ಇದು ಎರಡು ಥಂಡರ್ಬೋಲ್ಟ್ 4 ಪೋರ್ಟ್‌ಗಳನ್ನು ಹೊಂದಿದ್ದು, 40ಜಿಬಿಪಿಎಸ್ ವರೆಗೆ ವೇಗವನ್ನು ನೀಡಲಿದೆ. ಇದಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಡಿವೈಸ್‌ಗಳು ಹಾಗೂ ಗ್ಯಾಲಕ್ಸಿ ಬುಕ್ 3 ಅಲ್ಟ್ರಾ ನಡುವೆ ತಡೆರಹಿತ ಸಂಪರ್ಕವನ್ನು ಅನ್‌ಲಾಕ್ ಮಾಡುತ್ತದೆ ಎಂದು ಸ್ಯಾಮ್‌ಸಂಗ್ ಕಂಪನಿ ಹೇಳಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 3 ಪ್ರೋ 360 ಲ್ಯಾಪ್‌ಟಾಪ್
ಗ್ಯಾಲಕ್ಸಿ ಬುಕ್ 3 ಸೀರಿಸ್ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 3 ಪ್ರೋ 360 ಕೂಡ ಭಾರತದಲ್ಲಿ ಲಾಂಚ್ ಆಗಿತ್ತು. ಈ ಲ್ಯಾಪ್‌ಟಾಪ್ 16 ಇಂಚಿನ ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 400 ನಿಟ್ಸ್ ಬ್ರೈಟ್‌ನೆಸ್ ನೀಡಲಿದೆ. ಇದು 13ನೇ ಜೆನ್ ಇಂಟೆಲ್ ಕೋರ್ i7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್ ಇಂಟೆಲ್ ಐರಿಸ್ Xe ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಇದರೊಂದಿಗೆ ಈ ಲ್ಯಾಪ್‌ಟಾಪ್ 65W ವೇಗದ ಚಾರ್ಜಿಂಗ್ ಬೆಂಬಲಿಸುವ 76Whr ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ