ಸ್ಯಾಮ್ಸಂಗ್​ನ ಎ6 ಮೊಬೈಲ್​ ವೀಡಿಯೋ ಲೀಕ್​!


Updated:May 1, 2018, 12:53 PM IST
ಸ್ಯಾಮ್ಸಂಗ್​ನ ಎ6 ಮೊಬೈಲ್​ ವೀಡಿಯೋ ಲೀಕ್​!

Updated: May 1, 2018, 12:53 PM IST
ನ್ಯೂಸ್​ 18 ಕನ್ನಡ

ಬೀಜಿಂಗ್​: ಸ್ಮಾರ್ಟ್​ಫೊನ್​ ಮಾರುಕಟ್ಟೆಯ ದಿಗ್ಗಜ ಸ್ಯಾಮ್ಸಂಗ್​ ತನ್ನ ನೂತನ ಗೆಲಾಕ್ಸಿ ಎ6 ಮೊಬೈಲ್​ನ್ನು ಮಾರುಕಟ್ಟೆಗೆ ತರಲು ಸಿದ್ಧವಾಗಿದ್ದು, ಮೊಬೈಲ್​ ಗುಣಲಕ್ಷಣದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ.

ಇದೇ ತಿಂಗಳ ಅಂತ್ಯದೊಳಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧಗೊಂಡಿರುವ ಸ್ಯಾಮ್ಸಂಗ್​ನ ಖ್ಯಾತ ಎ6 ಮೊಬೈಲ್​ ಲಾಂಚ್​ಗೂ ಮುನ್ನವೇ ವೀಡಿಯೋ ಲೀಕ್​ ಆಗಿದ್ದು, ಆದರೆ ಆ ವೀಡಿಯೋದಲ್ಲಿ ಮೊಬೈಲ್​ನ ಪ್ರೊಸೆರ್​ ಹಾಗೂ ಮೆಮೊರಿ ಕುರಿತು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.


ಎ6 ಗುಣಲಕ್ಷಣಗಳು
ಇಂಟರ್​ನೆಟ್​ನಲ್ಲಿ ಈವರೆಗೆ ಚಾಲ್ತಿಯಲ್ಲಿರುವ ಊಹಾಪೋಹಗಳ ಪ್ರಕಾರ ಗೆಲಾಕ್ಸಿ ಎ6 ಮೊಬೈಲ್​ 6 ಇಂಚ್​ನ ಫುಲ್​ಹೆಚ್​ಡಿ ಪ್ಲಸ್​ ಡಿಸ್​ಪ್ಲೇ ಹೊಂದಿದ್ದು, ಸ್ನಾಪ್​ಡ್ರಾಗನ್​ 450 ಪ್ರೊಸೆಸರ್​ ವ್ಯವಸ್ಥೆಯನ್ನು ಒಳಗೊಂಡಿದೆ. 4ಜಿಬಿ RAM ಹಾಗೂ 32 ಜಿಬಿ ಮೆಮೊರಿಯೊಂದಿಗೆ ಡ್ಯುಯಲ್​ ಕ್ಯಾಮೆರಾವನ್ನುಒಳಗೊಂಡಿರಬಹುದು ಎಂದು ಹೇಳಿದ್ದಾರೆ.
First published:May 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ