HOME » NEWS » Tech » SAMSUNG GALAXY A22S 5G WITH MEDIATEK DIMENSITY 7000 4GB RAM COMING SOON HG

ಮೀಡಿಯಾಟೆಕ್​ ಡೈಮೆನ್ಸಿಟಿ 700, 4GB RAM ಆಯ್ಕೆಯಲ್ಲಿ ಬರಲಿದೆ ಸ್ಯಾಮ್​ಸಂಗ್​ ಗ್ಯಾಲಕ್ಸಿ A22s!

Samsung Galaxy A22s: ಮೈ ಸ್ಮಾರ್ಟ್​ಪ್ರೈಸ್​​ ಗುರುತಿಸಿರುವ ಗೂಗಲ್​ ಪ್ಲೇ ಕನ್ಸೋಲ್​ ಪಟ್ಟಿಯ ಪ್ರಕಾರ ಗ್ಯಾಲಕ್ಸಿ A22s 5ಜಿ ಮಾದರಿ ಸಂಖ್ಯೆ ಎಸ್​ಎಂ-ಎ226ಬಿ ಆಗಿದೆ. ಸ್ಮಾರ್ಟ್​ಫೋನ್​ ಡೈಮೆನ್ಸಿಟಿ 700 ಪ್ರೊಸೆಸರ್​ ಆಗಿರುವ ಮೀಡಿಯಾ ಟೆಕ್​ ಎಂಟಿ663 ಪ್ರೊಸೆಸರ್​ನಿಂದ ನಿಯಂತ್ರಿಸಲ್ಪಡುತ್ತದೆ. ಇದೀಗ ಮಾಲಿ ಜಿ57 ಜಿಪಿಯು ಮತ್ತು 4ಜಿ ರ್ಯಾಮ್​ ಆಯ್ಕೆಯಲ್ಲೂ ಬರಲಿದೆ ಎಂದು ಹೇಳಲಾಗುತ್ತಿದೆ.

news18-kannada
Updated:May 14, 2021, 11:21 AM IST
ಮೀಡಿಯಾಟೆಕ್​ ಡೈಮೆನ್ಸಿಟಿ 700, 4GB RAM ಆಯ್ಕೆಯಲ್ಲಿ ಬರಲಿದೆ ಸ್ಯಾಮ್​ಸಂಗ್​ ಗ್ಯಾಲಕ್ಸಿ A22s!
Samsung Galaxy A22
  • Share this:
ಸ್ಯಾಮ್​ಸಂಗ್​ ಕಂಪನಿ ಗ್ಯಾಲಕ್ಸಿ A22 5ಜಿ ಸ್ಮಾರ್ಟ್​ಫೋನನ್ನು ಮುಂದಿನ ದಿನಗಳಲ್ಲಿ ಪರಿಚಯಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಅದರ ನಡುವೆ  ಸ್ಯಾಮ್​ಸಂಗ್​ ಗ್ಯಾಲಕ್ಸಿ A22s​ ಅನ್ನು ಕೆಲವು ಪ್ರಾಂತ್ಯಗಳಲ್ಲಿ ಬಿಡುಗಡೆಮಾಡಿದೆ. ಅಂದಹಾಗೆಯೇ ನೂತನ ಸ್ಮಾರ್ಟ್​ಫೋನ್​ 5ಜಿ ನೆಟ್​ವರ್ಕ್​ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಗೂಗಲ್​ ಪೇ ಕನ್ಸೋಲ್​ನಲ್ಲಿ ಫೋನಿನ ಪ್ರಮುಖ ವಿಶೇಷತೆಯನ್ನು ಬಹಿರಂಗಪಡಿಸಿದೆ.

ಮೈ ಸ್ಮಾರ್ಟ್​ಪ್ರೈಸ್​​ ಗುರುತಿಸಿರುವ ಗೂಗಲ್​ ಪ್ಲೇ ಕನ್ಸೋಲ್​ ಪಟ್ಟಿಯ ಪ್ರಕಾರ ಗ್ಯಾಲಕ್ಸಿ A22s 5ಜಿ ಮಾದರಿ ಸಂಖ್ಯೆ ಎಸ್​ಎಂ-ಎ226ಬಿ ಆಗಿದೆ. ಸ್ಮಾರ್ಟ್​ಫೋನ್​ ಡೈಮೆನ್ಸಿಟಿ 700 ಪ್ರೊಸೆಸರ್​ ಆಗಿರುವ ಮೀಡಿಯಾ ಟೆಕ್​ ಎಂಟಿ663 ಪ್ರೊಸೆಸರ್​ನಿಂದ ನಿಯಂತ್ರಿಸಲ್ಪಡುತ್ತದೆ. ಇದೀಗ ಮಾಲಿ ಜಿ57 ಜಿಪಿಯು ಮತ್ತು 4ಜಿ ರ್ಯಾಮ್​ ಆಯ್ಕೆಯಲ್ಲೂ ಬರಲಿದೆ ಎಂದು ಹೇಳಲಾಗುತ್ತಿದೆ. ಗ್ಯಾಲಕ್ಸಿಎ22ಎಸ್​ ಆ್ಯಂಡ್ರಾಯ್ಡ್​ 11ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಫೋನಿನಲ್ಲಿ ಪೂರ್ಣ ಎಸ್​ಡಿ+ ಡಿಸ್​ಪ್ಲೇ ಮತ್ತು ಇನ್ಫಿನಿಟಿ-ವಿ ಕಟೌಟ್​ನೊಂದಿಗೆ ಗಮನಾರ್ಹ ಪ್ರದರ್ಶನಹೊಂದಿರುತ್ತದೆ.

ಗ್ಯಾಲಕ್ಸಿ A22 5ಜಿ ಬಗ್ಗೆ ಬಹಿರಂಗಪಡಿಸಿದ ಕೆಲವು ವಿವರಗಳು ಹೊಂದಿಕೆಯಾಗುತ್ತಿದೆ. ಸ್ಯಾಮ್​ಸಂಗ್​ ಗ್ಯಾಲಕ್ಸಿ A22s 5ಜಿ 6.5 ಇಂಚಿನ ಇನ್ಫಿನಿಟಿ-ವಿ ಡಿಸ್​ಪ್ಲೇ ಮತ್ತು 6ಜಿಬಿ ರ್ಯಾಮ್​ ಹೊಂದಿರುತ್ತದೆ. ಇನ್ನು ಗ್ರಾಹಕರಿಗಾಗಿ ಎರಡು ರ್ಯಾಮ್​ ಆಯ್ಕೆಯಲ್ಲಿ ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ. ಬೂದು, ನೇರಳೆ, ಹಸಿರು, ಬಿಳಿ ಬಣ್ಣದ ಆಯ್ಕೆಯಲ್ಲಿ ಗ್ರಾಹಕರಿಗೆ ಪರಿಚಯಿಸುತ್ತದೆ.

ಇನ್ನು ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​ ಸರಣಿ ಫೋನ್​ ಗ್ಯಾಲಕ್ಸಿ ಎಫ್​22 ಅನ್ನು ಸಿದ್ಧಪಡಿಸುತ್ತಿದೆ. ಈ ಫೋನ್​ ಗ್ಯಾಲಕ್ಸಿ 22ನ ಮರುಬ್ರಾಂಡೆಡ್​ ಆವೃತ್ತಿಯಾಗಿದೆ.
Published by: Harshith AS
First published: May 14, 2021, 11:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories