• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • ಸ್ಯಾಮ್‌ಸಂಗ್ ಗ್ಯಾಲಕ್ಸಿ A 12 ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧ; ಬೆಲೆ ಮತ್ತು ಫೀಚರ್ಸ್ ಬಗ್ಗೆ ತಿಳಿಯಿರಿ..!

ಸ್ಯಾಮ್‌ಸಂಗ್ ಗ್ಯಾಲಕ್ಸಿ A 12 ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧ; ಬೆಲೆ ಮತ್ತು ಫೀಚರ್ಸ್ ಬಗ್ಗೆ ತಿಳಿಯಿರಿ..!

ಸ್ಯಾಮ್​ಸಂಗ್​ ಗ್ಯಾಲಕ್ಸಿ A 12

ಸ್ಯಾಮ್​ಸಂಗ್​ ಗ್ಯಾಲಕ್ಸಿ A 12

ಕಂಪನಿಯ ಪ್ರಕಾರ ಗ್ಯಾಲಕ್ಸಿ A 12 ಕಪ್ಪು, ನೀಲಿ ಮತ್ತು ಬಿಳಿ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಈ ಫೋನ್ ಅನ್ನು ವಿವಿಧ RAM ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಗ್ಯಾಲಕ್ಸಿ A 12 4 ಜಿಬಿ + 64 ಜಿಬಿ ರೂಪಾಂತರದ ಬೆಲೆ 12,999 ರೂ. ಹಾಗೂ 4 ಜಿಬಿ + 128 ಜಿಬಿ ರೂಪಾಂತರದ ಬೆಲೆ 13,999 ರೂ. ಇದೆ.

ಮುಂದೆ ಓದಿ ...
  • Share this:

ಖ್ಯಾತ ಸ್ಮಾರ್ಟ್‌ಫೋನ್ ಬ್ರಾಂಡ್ ಸ್ಯಾಮ್‌ಸಂಗ್ ಈ ವರ್ಷ ಭಾರತದಲ್ಲಿ ತನ್ನ ಮೊದಲ ಬಹುನಿರೀಕ್ಷಿತ ಗ್ಯಾಲಕ್ಸಿ A ಸೀರೀಸ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ A 12 ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಗ್ಯಾಲಕ್ಸಿ A 12 ಫೋನ್‌ನಲ್ಲಿ 48 ಎಂಪಿ ಕ್ವಾಡ್-ಕ್ಯಾಮೆರಾ ಸೆಟಪ್, 6.5 ಎಚ್ ಡಿ + ಇನ್ಫಿನಿಟಿ-ವಿ ಡಿಸ್ಪ್ಲೇ ಮತ್ತು 5000 mAh ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.


ಕಂಪನಿಯ ಪ್ರಕಾರ ಗ್ಯಾಲಕ್ಸಿ A 12 ಕಪ್ಪು, ನೀಲಿ ಮತ್ತು ಬಿಳಿ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಈ ಫೋನ್ ಅನ್ನು ವಿವಿಧ RAM ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಗ್ಯಾಲಕ್ಸಿ A 12 4 ಜಿಬಿ + 64 ಜಿಬಿ ರೂಪಾಂತರದ ಬೆಲೆ 12,999 ರೂ. ಹಾಗೂ 4 ಜಿಬಿ + 128 ಜಿಬಿ ರೂಪಾಂತರದ ಬೆಲೆ 13,999 ರೂ. ಇದ್ದು, ಚಿಲ್ಲರೆ ಅಂಗಡಿಗಳು, ಸ್ಯಾಮ್‌ಸಂಗ್.ಕಾಮ್ ಮತ್ತು ಪ್ರಮುಖ ಆನ್‌ಲೈನ್ ಶಾಪಿಂಗ್ ಪೋರ್ಟಲ್‌ಗಳಲ್ಲಿ ಫೆಬ್ರವರಿ 17 ರಿಂದ ಲಭ್ಯವಾಗಲಿವೆ.


ಸ್ಯಾಮ್‌ಸಂಗ್ ಗ್ಯಾಲಕ್ಸಿ A 12 ಲಾಂಚಿಂಗ್ ಆಫರ್:


ಗ್ಯಾಲಕ್ಸಿ A 12 ಝೀರೋ ಡೌನ್-ಪೇಮೆಂಟ್ ಇಎಂಐ ಕೊಡುಗೆಗಳೊಂದಿಗೆ ಲಭ್ಯವಿರುತ್ತದೆ. ಜಿಯೋ ಗ್ರಾಹಕರು 349 ರೂ.ಗಳ ಪ್ರಿಪೇಯ್ಡ್ ರಿಚಾರ್ಜ್ ಮಾಡಿಸಿಕೊಂಡರೆ 3 ಸಾವಿರ ರೂ. ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ. ಅಲ್ಲದೆ ಪಾಲುದಾರರಿಂದ 4 ಸಾವಿರ ರೂ. ಮೌಲ್ಯದ ವೋಚರ್ ಕೂಡ ಪಡೆಯಬಹುದಾಗಿದೆ. ಈ ಕೊಡುಗೆಯು ಹೊಸ ಮತ್ತು ಹಳೆಯ ಜಿಯೋ ಗ್ರಾಹಕರಿಗೆ ಅನ್ವಯಿಸುತ್ತದೆ. Vi(ವೋಡಾಫೋನ್+ಐಡಿಯ)ನಲ್ಲಿರುವ ಗ್ಯಾಲಕ್ಸಿ A 12 ಗ್ರಾಹಕರು ಮೊದಲ 3 ತಿಂಗಳ 299 ರೂ. ರೀಚಾರ್ಜ್‌ನಲ್ಲಿ ಅಥವಾ ಮೊದಲ 3 ರೀಚಾರ್ಜ್‌ಗಳಿಗೆ ಡಬಲ್ ಡೇಟಾ ಪ್ರಯೋಜನಗಳನ್ನು ಪಡೆಯುತ್ತಾರೆ.


ಈ ಮುದ್ದಾದ ಕರುವಿನ ವಿಡಿಯೋ ನೀವು ನೋಡಿದ್ರೆ ನಿಮ್ಮ ದುಃಖವೆಲ್ಲ ದೂರವಾಗುತ್ತೆ..!


‘ಗ್ಯಾಲಕ್ಸಿ A ಸರಣಿಯನ್ನು ಗ್ಯಾಲಕ್ಸಿ A 12 ಸ್ಮಾರ್ಟ್‌ಫೋನ್ ಮುಂದುವರಿಸಲಿದೆ. ಅತ್ಯಂತ ಉತ್ತಮ ಗ್ಯಾಲಕ್ಸಿ A ಸಾಧನದೊಂದಿಗೆ ನಾವು 2021ರ ಹೊಸ ವರ್ಷವನ್ನು ಪ್ರಾರಂಭಿಸಲು ರೋಮಾಂಚಿತರಾಗಿದ್ದೇವೆ. ಈ ಹೊಸ ಸರಣಿಯ ಉತ್ಪನ್ನವು 48 ಎಂಪಿ ಟ್ರೂ ಕ್ವಾಡ್ ಕ್ಯಾಮೆರಾದ ವೈಶಿಷ್ಯದೊಂದಿದೆ ಬರುತ್ತದೆ. 15 ಸಾವಿರ ರೂ. ರೇಂಜ್ ನಲ್ಲಿ ಸಿಗುತ್ತಿರುವ ಈ ಸ್ಮಾರ್ಟ್‌ಫೋನ್ ಅದ್ಭುತ ಛಾಯಾಗ್ರಹಣ ಮತ್ತು ಲೈಫ್ಸ್ಟೈಲ್ ಅನುಭವಕ್ಕಾಗಿ ಸಿಗುತ್ತಿದೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ಮೊಬೈಲ್ ಮಾರ್ಕೆಟಿಂಗ್ ನಿರ್ದೇಶಕ ಮತ್ತು ಮುಖ್ಯಸ್ಥ ಆದಿತ್ಯ ಬಬ್ಬರ್ ತಿಳಿಸಿದ್ದಾರೆ.


ಸ್ಯಾಮ್‌ಸಂಗ್ ಗ್ಯಾಲಕ್ಸಿ A 12ನ ವಿಶೇಷತೆಗಳು


ಗ್ಯಾಲಕ್ಸಿ A 12 ಸ್ಮಾರ್ಟ್‌ಫೋನ್ 6.5 ಇಂಚಿನ ಎಚ್‌ಡಿ + ಇನ್ಫಿನಿಟಿ-ವಿ ಡಿಸ್ಪ್ಲೇಯೊಂದಿಗೆ 20:9 ಆಕಾರ ಅನುಪಾತದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ ನಯವಾದ ಬಾಡಿ ವಿನ್ಯಾಸವನ್ನು ಹೊಂದಿದ್ದು, ಅದು ಹಿಡಿತಕ್ಕೆ ಅನುಕೂಲಕರವಾಗಿದೆ. ಹಿಂಭಾಗದಲ್ಲಿ ಆಕರ್ಷಕ ಮ್ಯಾಟ್ ಫಿನಿಶ್ ಹೊಂದಿದೆ. ಈ ಸಾಧನವು ಮೀಡಿಯಾ ಟೆಕ್ ಹೆಲಿಯೊ P35 ಪ್ರೊಸೆಸರ್ ಹೊಂದಿದೆ ಮತ್ತು ಆಂಡ್ರಾಯ್ಡ್ 10 ಮತ್ತು ಒನ್ ಯುಐ ಕೋರ್ 2.5 ಅನ್ನು ಬೆಂಬಲಿಸುತ್ತದೆ. ಗ್ಯಾಲಕ್ಸಿ A 12 ಸೈಡ್ ಫಿಂಗರ್ ಪ್ರಿಂಟ್ ಸೆನ್ಸಾರ್ನೊಂದಿಗೆ ಬರುತ್ತದೆ.
ಹಿಂಭಾಗದಲ್ಲಿ ಈ ಸಾಧನವು 48 ಎಂಪಿ ಪ್ರೈಮರಿ ಸೆನ್ಸಾರ್, 5 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಶೂಟರ್, 2 ಎಂಪಿ ಮ್ಯಾಕ್ರೋ ಶೂಟರ್ ಮತ್ತು 2 ಎಂಪಿ ಡೆಪ್ತ್ ಸೆನ್ಸಾರ್ ಹೊಂದಿದೆ. ಗ್ಯಾಲಕ್ಸಿ A 12 ಸೆಲ್ಫಿಗಳಿಗಾಗಿ 8 ಎಂಪಿ ಫ್ರಂಟ್ ಕ್ಯಾಮೆರಾದೊಂದಿಗೆ ಬರುತ್ತದೆ. 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ಬೃಹತ್ 5,000mAh ಬ್ಯಾಟರಿಯಿಂದ ಈ ಸಾಧನವು ಬೆಂಬಲಿತವಾಗಿದೆ.

top videos
    First published: