ಸ್ಯಾಮ್​ಸಂಗ್​ನಿಂದ ಗ್ಯಾಲಕ್ಸಿ ಸರಣಿಯ ಸ್ಮಾರ್ಟ್​ಫೋನ್​; ಅತ್ಯಧಿಕ ಬ್ಯಾಟರಿ, ಡ್ಯುಯೆಲ್​ ಕ್ಯಾಮೆರಾ

ನೂತನ ಸ್ಮಾರ್ಟ್​ಫೋನ್​ನಲ್ಲಿ f​/1.8 ಅಪಾರ್ಚರ್​ ಹೊಂದಿರುವ 13 ಮೆಗಾಫಿಕ್ಸೆಲ್​ ಪ್ರೈಮರಿ ಕ್ಯಾಮೆರಾವನ್ನು ಹಾಗೂ f​/2.4 ಅಪಾರ್ಚರ್​​ ಹೊಂದಿರುವ 2 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ. ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ.

news18
Updated:August 13, 2019, 3:53 PM IST
ಸ್ಯಾಮ್​ಸಂಗ್​ನಿಂದ ಗ್ಯಾಲಕ್ಸಿ ಸರಣಿಯ ಸ್ಮಾರ್ಟ್​ಫೋನ್​; ಅತ್ಯಧಿಕ ಬ್ಯಾಟರಿ, ಡ್ಯುಯೆಲ್​ ಕ್ಯಾಮೆರಾ
ಸ್ಯಾಮ್​ಸಂಗ್​ ಗ್ಯಾಲಕ್ಸಿ A10s​
  • News18
  • Last Updated: August 13, 2019, 3:53 PM IST
  • Share this:
ಸ್ಯಾಮ್​​ಸಂಗ್ ಸ್ಮಾರ್ಟ್​ಫೋನ್​ ಸಂಸ್ಥೆ ಗ್ಯಾಲಕ್ಸಿ ಸರಣಿಯ A10s​ ಸ್ಮಾಟ್​ಫೋನ್​ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್​ಫೋನ್​ನಲ್ಲಿ 6.20 ಇಂಚಿನ ಟಚ್​ಸ್ಟ್ರೀನ್​ ಡಿಸ್​ಪ್ಲೇ ಹಾಗೂ 720x​1520 ಪಿಕ್ಸೆಲ್​ ರೆಸಲ್ಯೂಷನ್​ ಹೊಂದಿದೆ.

ಗ್ಯಾಲಕ್ಸಿ A10s​ ಸ್ಮಾಟ್​ಫೋನ್ 1.5GHz​ ಒಕ್ಟಾ ಕೋರ್​ ಪ್ರೊಸೆಸರ್​ ಜೊತೆಗೆ 2G RAM​ ಅಳವಡಿಸಿಕೊಂಡಿದೆ. ಅಂತೆಯೇ ಆ್ಯಂಡ್ರಾಯ್ಡ್​ 9 ಪೈ ನಿಂದ ಕಾರ್ಯನಿರ್ವಹಿಸುವ ಈ ಸ್ಮಾರ್ಟ್​ಫೋನ್​ನಲ್ಲಿ ಬಳಕೆಗೆಗ ಯೋಗ್ಯವಾದ 4000mAh​ ಬ್ಯಾಟರಿಯನ್ನು ಅಳವಡಿಸಲಾಗಿದೆ.

ನೂತನ ಸ್ಮಾರ್ಟ್​ಫೋನ್​ನಲ್ಲಿ f​/1.8 ಅಪಾರ್ಚರ್​ ಹೊಂದಿರುವ 13 ಮೆಗಾಫಿಕ್ಸೆಲ್​ ಪ್ರೈಮರಿ ಕ್ಯಾಮೆರಾವನ್ನು ಹಾಗೂ f​/2.4 ಅಪಾರ್ಚರ್​​ ಹೊಂದಿರುವ 2 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ. ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: ವೈರಲ್ ವಿಡಿಯೋ: ಮನೆಗೆ ಬಂದ ಕಳ್ಳರಿಗೆ ಮೈಚಳಿ ಬಿಡಿಸಿದ ತಮಿಳುನಾಡಿನ ಅಜ್ಜ-ಅಜ್ಜಿ

ಇನ್ನು 32GB ಸ್ಟೊರೇಜ್​ ಆಯ್ಕೆಯ ಜೊತೆಗೆ ಮೈಕ್ರೊಕಾರ್ಡ್​ ಅನ್ನು 512GB ವರೆಗೆ ವೃದ್ಧಿಸಬಹುದಾಗಿದೆ.

ಸ್ಯಾಮ್​ಸಂಗ್​ ಗ್ಯಾಲಕ್ಸಿ A10s​ ಸ್ಮಾಟ್​ಫೋನ್​​ನಲ್ಲಿ​ ಡುಯೆಲ್​ ಸಿಮ್​ ಅಳವಡಿಸಬಹುದಾಗಿದೆ. ಅಂತೆಯೇ, ವೈ-ಫೈ,GPS​, 3G ಮತ್ತು 4G ಸಪೋರ್ಟ್​ ಹೊಂದಿದೆ. ವಿಶೇಷವಾಗಿ ಫಿಂಗರ್​ ಪ್ರಿಂಟ್​​ ಸೆನ್ಸಾರ್​ ಹಾಗೂ ಫೇಸ್​ ಅನ್​ಲಾಕ್​ ಆಯ್ಕೆಗಳಿವೆ.

ಇನ್ನು ಗ್ಯಾಲಕ್ಸಿ A10s ಸ್ಮಾರ್ಟ್​ಫೋನ್​ ನೀಲಿ, ಹಸಿರು, ಕೆಂಪು ಮತ್ತು ಕಪ್ಪು ಬಣ್ಣದಲ್ಲಿ ದೊರಕಲಿದೆ. ಇದರ ಬೆಲೆ ವಿವರವನ್ನು ಸ್ಯಾಮ್ದಸಂಗ್​ ಇನ್ನು ಬಿಡುಗಡೆ ಮಾಡಿಲ್ಲ.
Loading...

First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...