Samsung: ಭಾರತೀಯರಿಗಾಗಿ ಸ್ಯಾಮ್​ಸಂಗ್ ಪರಿಚಯಿಸಲಿದೆ ಕೇವಲ 10 ಸಾವಿರ ಬೆಲೆಯ ಸ್ಮಾರ್ಟ್​ಫೋನ್!

Samsung Galaxy A03: ಸ್ಯಾಮ್​ಸಂಗ್​ ಗ್ಯಾಲಕ್ಸಿ A03 ಬಜೆಟ್​ ಬೆಲೆಯ ಸ್ಮಾರ್ಟ್​ಫೋನ್​ ಆಗಿದ್ದು, ಕಡಿಮೆ ಬೆಲೆಗೆ ಗ್ರಾಹಕರ ಕೈಸೇರಲಿದೆ. 6.5 ಇಂಚಿನ ಡಿಸ್​ಪ್ಲೇ, 48MP ಕ್ಯಾಮೆರಾ ಮತ್ತು 5000mAh ಸ್ಟ್ರಾಂಗ್ ಬ್ಯಾಟರಿಯನ್ನು ಹೊಂದಿದೆ.

Samsung Galaxy A03 / ಸ್ಯಾಮ್​ಸಂಗ್​ ಗ್ಯಾಲಕ್ಸಿ A03

Samsung Galaxy A03 / ಸ್ಯಾಮ್​ಸಂಗ್​ ಗ್ಯಾಲಕ್ಸಿ A03

 • Share this:
  ಕಳೆದ ವರ್ಷ ಡಿಸೆಂಬರ್‌ನಲ್ಲಿ ಸ್ಯಾಮ್​ಸಂಗ್​ ಕಂಪನಿ ವಿಯೆಟ್ನಾಂನಲ್ಲಿ (vietnam) ಸ್ಯಾಮ್​ಸಂಗ್​ ಗ್ಯಾಲಕ್ಸಿ A03 (Samsung Galaxy A03) ಹೆಸರಿನ HD+ ಸ್ಕ್ರೀನ್ ಮತ್ತು ಡ್ಯುಯಲ್ ಕ್ಯಾಮೆರಾಗಳಂತಹ ಪ್ರವೇಶ ಮಟ್ಟದ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್​ಫೋನನ್ನು (Smartphone) ಬಿಡುಗಡೆ ಮಾಡಿತು. ಆದರೀಗ ಈ ಸ್ಮಾರ್ಟ್‌ಫೋನ್ ಭಾರತಕ್ಕೆ (India) ಬರುವ ನಿರೀಕ್ಷೆಯಿದೆ ಮತ್ತು MySmartPrice ನೂತನ ಸ್ಮಾರ್ಟ್‌ಫೋನಿನ ಭಾರತೀಯ ಬೆಲೆಯನ್ನು (Price) ಬಹಿರಂಗಪಡಿಸಿದೆ.

  ಸ್ಯಾಮ್​ಸಂಗ್​ ಗ್ಯಾಲಕ್ಸಿ A03 ಬಜೆಟ್​ ಬೆಲೆಯ ಸ್ಮಾರ್ಟ್​ಫೋನ್​ ಆಗಿದ್ದು, ಕಡಿಮೆ ಬೆಲೆಗೆ ಗ್ರಾಹಕರ ಕೈಸೇರಲಿದೆ. 6.5 ಇಂಚಿನ ಡಿಸ್​ಪ್ಲೇ, 48MP ಕ್ಯಾಮೆರಾ ಮತ್ತು 5000mAh ಸ್ಟ್ರಾಂಗ್ ಬ್ಯಾಟರಿಯನ್ನು ಹೊಂದಿದೆ.

  Samsung Galaxy A03 ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ....

  ಭಾರತದಲ್ಲಿ Samsung Galaxy A03 ಬೆಲೆ ಎಷ್ಟಿರಲಿದೆ?

  ಮಾಹಿತಿಯ ಪ್ರಕಾರ, Samsung Galaxy A03 ಭಾರತದಲ್ಲಿ 3GB RAM ಮತ್ತು 32GB ಸ್ಟೋರೇಜ್ ರೂಪಾಂತರವನ್ನು ಪರಿಚಯಿಸಲಿದೆ. ಹಾಗಾಗಿಈ ಸ್ಮಾರ್ಟ್​ಫೋನ್​ 10,499 ರೂಗಳ ಆರಂಭಿಕ ಬೆಲೆಯಲ್ಲಿ ಗ್ರಾಹಕರ ಕೈಸೇರಲಿದೆ. 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 11,999 ರೂ. ಇರಲಿದೆ.

  Samsung Galaxy A03 ಎರಡು ಬಣ್ಣ ಆಯ್ಕೆಗಳಲ್ಲಿ ಬರಲಿದೆ

  ವಿಯೆಟ್ನಾಂನಲ್ಲಿ ಫೋನ್‌ನ ಮೂಲ ರೂಪಾಂತರವು VND 2,990,000 ಬೆಲೆಯದ್ದಾಗಿದೆ. ವಿಯೆಟ್ನಾಂನಲ್ಲಿ, ಫೋನ್ ಕಪ್ಪು, ಕಡು ಹಸಿರು ಮತ್ತು ಕೆಂಪು ಬಣ್ಣಗಳಲ್ಲಿ ಗ್ರಾಹಕರಿಗೆ ಪರಿಚಯಿಸಿದೆ. ಹಿಂದಿನ ಸೋರಿಕೆಯಾದ ಮಾಹಿತಿ ಪ್ರಕಾರ, Galaxy A03 ಭಾರತದಲ್ಲಿ ಕೇವಲ ಎರಡು ಬಣ್ಣ ರೂಪಾಂತರಗಳಲ್ಲಿ ಬರುತ್ತದೆ ಎನ್ನಲಾಗುತ್ತಿದೆ. ಕಪ್ಪು ಮತ್ತು ಕೆಂಪು ಬಣ್ಣದಲ್ಲಿ ಸಿಗಲಿದೆ ಎನ್ನಲಾಗುತ್ತಿದೆ.

  ಇದನ್ನೂ ಓದಿ: Samsung Galaxy F22 ಖರೀದಿಗೆ ಕ್ಯೂ ನಿಂತ ಜನರು: ಕೇವಲ 50 ರೂ.ಗೆ ಸಿಗುತ್ತಿದೆ ಈ ಸ್ಮಾರ್ಟ್​ಫೋನ್!

  ಬೆಲೆಯ ಹೊರತಾಗಿ, ಸ್ಮಾರ್ಟ್‌ಫೋನ್‌ನ ಬಿಡುಗಡೆಯ ಟೈಮ್‌ಲೈನ್ ಅನ್ನು ಈ ಹಿಂದೆ ಮತ್ತೊಂದು ಪ್ರಕಟಣೆಯಿಂದ ಬಹಿರಂಗಪಡಿಸಲಾಗಿದೆ. Samsung Galaxy A03 ಫೆಬ್ರವರಿ ಅಂತ್ಯದ ವೇಳೆಗೆ ಅಥವಾ ಮಾರ್ಚ್ ವೇಳೆಗೆ ಭಾರತಕ್ಕೆ ಆಗಮಿಸಲಿದೆ.

  Samsung Galaxy A03 ವಿಶೇಷಣಗಳು

  ಸ್ಯಾಮ್​ಸಂಗ್​ ಗ್ಯಾಲಕ್ಸಿ A03 ಸ್ಮಾರ್ಟ್​ಫೋನ್​ 6.5-ಇಂಚಿನ HD+ ರೆಸಲ್ಯೂಶನ್ ಡಿಸ್​​ಪ್ಲೇ ಹೊಂದಿದೆ. ಸಾಧನವು ಮುಂಭಾಗದಲ್ಲಿ 5MP ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 48MP ಮುಖ್ಯ ಲೆನ್ಸ್ ಮತ್ತು 2MP ಸಹಾಯಕ ಸೆನ್ಸಾರ್​ ಹೊಂದಿರುವ ಡ್ಯುಯಲ್-ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ.

  Samsung Galaxy A03 ಬ್ಯಾಟರಿ

  ಸ್ಮಾರ್ಟ್​ಫೋನ್ UNISOC T606 SoC ನಿಂದ ಚಾಲಿತವಾಗಿದೆ ಮತ್ತು 5,000mAh ಬ್ಯಾಟರಿಯನ್ನು ಪ್ಯಾಕ್ ಹೊಂದಿದೆ. ಈ ಸಾಧನವು Android 11 OS ನ ಮೇಲ್ಭಾಗದಲ್ಲಿ OneUI ಅನ್ನು ಹೊಂದಿದೆ. ಗ್ರಾಹಕರು ನೂತನ ಸ್ಮಾರ್ಟ್​ಫೋನಿನ ನಿರೀಕ್ಷೆಯಲ್ಲಿದ್ದಾರೆ.

  ಇದನ್ನೂ ಓದಿ: Vivo V23e: ಭಾರತದಲ್ಲಿ ಬಿಡುಗಡೆಯಾದ ವಿವೋ ವಿ23ಇ..! 3 ಕ್ಯಾಮೆರಾವುಳ್ಳ ಈ ಸ್ಮಾರ್ಟ್​ಫೋನ್ ಬೆಲೆ ಎಷ್ಟು?

  ಮಾಹಿತಿಯಂತೆ ಸ್ಯಾಮ್​ಸಂಗ್​ ಗ್ಯಾಲಕ್ಸಿ A03 ಸ್ಮಾರ್ಟ್​ಫೋನ್​ 12 ಸಾವಿರಕ್ಕಿಂತ ಕಡಿಮೆ ಬೆಲೆಗೆ ಬಂದರೆ ಸ್ಮಾರ್ಟ್​ಫೋನ್​ ಪ್ರಿಯರಿಗೆ ಸಂತಸವಾಗಲಿದೆ. ಜೊತೆಗೆ ಡ್ಯುಯೆಲ್​​ ಕ್ಯಾಮೆರಾದ ಈ ಫೋನ್​ ಬೇಗನೆ ಗ್ರಾಹಕರ ಮನಗೆಲ್ಲಲಿದೆ.

  ಸ್ಯಾಮ್​ಸಂಗ್​ ಜನಪ್ರಿಯ ಕಂಪನಿಗಳಲ್ಲಿ ಒಂದಾಗಿದ್ದುಮ ಚೀನಾ ಉತ್ಪಾದಿಸುವ ಪ್ರಬಲವಾದ ಸ್ಮಾರ್ಟ್​ಫೊನ್​ಗಳಿಗೆ ಪೈಪೋಟಿ ನೀಡುತ್ತಾ ಬಂದಿದೆ. ಜೊತೆಗೆ ಬೇಡಿಕೆಯನ್ನು ಹೆಚ್ಚಿಸುತ್ತಾ ಬಂದಿದೆ. ಇದೀಗ ಭಾರತಕ್ಕೆ ಬಜೆಟ್​ ಬೆಲೆಯ ಫೋನ್​ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಅಂದಹಾಗೆಯೇ ಸ್ಯಾಮ್​ಸಂಗ್​ ಗ್ಯಾಲಕ್ಸಿ A03 ಸ್ಮಾರ್ಟ್​ಫೋನ್​ ಯಾವಾಗ ಬರಲಿದೆ ಎಂಬುದರ ಬಗ್ಗೆ ನಿಖರವಾಗಿ ಕಂಪನಿಯೇ ತಿಳಿಯಪಡಿಸಬೇಕಿದೆ.
  Published by:Harshith AS
  First published: