ಭಾರತದಲ್ಲಿ ಸ್ಯಾಮ್ಸಂಗ್ ಕಂಪನಿ (Samsung Galaxy) ಹಲವಾರು ಮೊಬೈಲ್ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳ ಬರುವಿಕೆಗಾಗಿಯೇ ಹಲವಾರು ಸ್ಮಾರ್ಟ್ಫೋನ್ ಪ್ರಿಯುರು ಕಾದು ಕುಳಿತಿರುತ್ತಾರೆ. ಇದೀಗ ಸ್ಯಾಮ್ಸಂಗ್ ಅಭಿಮಾನಿಗಳಿಗೆ ಕಂಪನಿ ಶುಭ ಸುದ್ದಿಯನ್ನು ನೀಡಿದೆ. ಇದೀಗ ಸ್ಯಾಮ್ಸಂಗ್ ಹೊಸ ಸ್ಮಾರ್ಟ್ಫೋನ್ (Smartphone) ಒಂದನ್ನು ಲಾಂಚ್ (Launch) ಮಾಡಿದೆ. ಈ ಸ್ಮಾರ್ಟ್ಫೋನ್ ಭಾರೀ ಅಗ್ಗದ ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಫ್ಲಿಪ್ಕಾರ್ಟ್ನಲ್ಲಿ ಅನಾವರಣಗೊಳಿಸಲಾಗಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್04 (Samsung Galaxy F04) ಎಂಬ ಸ್ಮಾರ್ಟ್ಫೋನ್ ಇದಾಗಿದ್ದು ಬಹಳಷ್ಟು ಫೀಚರ್ಸ್ಗಳನ್ನು ಒಳಗೊಂಡ ಸ್ಮಾರ್ಟ್ಫೋನ್ ಇದಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್04 ಸ್ಮಾರ್ಟ್ಫೋನ್ ಭಾರೀ ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಹಾಗಿದ್ರೆ ಇದರ ಬೆಲೆ ಎಷ್ಟು, ಫೀಚರ್ಸ್ ಹೇಗಿದೆ?ಇವೆಲ್ಲದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಹೇಗಿದೆ ಬೆಲೆ?
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್04 ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ ಲಾಂಚ್ ಆಫರ್ನಲ್ಲಿ ಕೇವಲ 7,499 ರೂಪಾಯಿ ಬೆಲೆಯಲ್ಲಿ ಖರೀದಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಆಫರ್ ಮುಗಿದ ಬಳಿಕ ಈ ಸ್ಮಾರ್ಟ್ಫೋನ್ 9,499 ರೂಪಾಯಿ ಬೆಲೆಯಲ್ಲಿ ಮಾರಾಟವಾಗಲಿದೆ. ಇನ್ನು ಈ ಸ್ಮಾರ್ಟ್ಫೋನ್ ಇದೇ ಜನವರಿ 12 ರಿಂದ ತನ್ನ ಸೇಲ್ ಅನ್ನು ಪ್ರಾರಂಭಿಸಲಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಅಪ್ಡೇಟ್ ಮಾಡುವಾಗ ಎಚ್ಚರ! ಫೋಟೋ, ವಿಡಿಯೋ ಎಲ್ಲವೂ ಡಿಲೀಟ್ ಆಗ್ಬಹುದು
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್04 ಸ್ಮಾರ್ಟ್ಫೋನ್ ಫೀಚರ್ಸ್
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್04 ಸ್ಮಾರ್ಟ್ಫೋನ್ 6.5 ಇಂಚಿನ ಹೆಚ್ಡಿ+ ಇನ್ಫಿನಿಟಿ ವಿ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 1560 × 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಈ ಡಿಸ್ಪ್ಲೇ ಹೈ ಡೆಫಿನಿಷನ್ ವ್ಯೂವಿಂಗ್ ಎಕ್ಸ್ಪಿರಿಯನ್ಸ್ ಅನ್ನು ಕೂಡ ಹೊಂದಿದೆ. ಇದು ವಾಟರ್ಡ್ರಾಪ್ ನಾಚ್ ವಿನ್ಯಾಸ ಮತ್ತು ಸ್ಲಿಮ್ ಬೆಜೆಲ್ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತದೆ.
ಕ್ಯಾಮೆರಾ ಫೀಚರ್ಸ್
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್04 ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ ಸೆಲ್ಫಿಗಳು ಮತ್ತು ವಿಡಿಯೋ ಕಾಲ್ಗಳಿಗಾಗಿ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಇನ್ನು ಹಿಂಭಾಗದ ಕ್ಯಾಮೆರಾ ಸಿಸ್ಟಮ್ ಅನ್ನು ಎಲ್ಇಡಿ ಫ್ಲ್ಯಾಷ್ನೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಪ್ರೊಸೆಸರ್ ಸಾಮರ್ಥ್ಯ
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್04 ಸ್ಮಾರ್ಟ್ಫೋನ್ ಮೀಡಿಯಾ ಟೆಕ್ ಪಿ35 ಪ್ರೊಸೆಸರ್ ವೇಗವನ್ನು ಹೊಂದಿದೆ. ಸ್ಯಾಮ್ಸಂಗ್ನ ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 2 ವರ್ಷಗಳ ಓಎಸ್ ಅಪ್ಗ್ರೇಡ್ ಅನ್ನು ನೀಡುವುದಾಗಿ ಸ್ಯಾಮ್ಸಂಗ್ ಕಂಪನಿ ತನ್ನ ಗ್ರಾಹಕರಿಗೆ ಭರವಸೆ ನೀಡಿದೆ.
ಹಾಗೆಯೇ 4 ಜಿಬಿ ರ್ಯಾಮ್ ಮತ್ತು 64 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ವರ್ಚುವಲ್ ರ್ಯಾಮ್ನ ಸಹಾಯದಿಂದ 8 ಜಿಬಿ ರ್ಯಾಮ್ ವರೆಗೆ ವಿಸ್ತರಿಸಬಹುದು. ಜೊತೆಗೆ ಮೆಮೊರಿ ಕಾರ್ಡ್ ಮೂಲಕ 1ಟಿಬಿ (1000ಜಿಬಿ) ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಬ್ಯಾಟರಿ ಫೀಚರ್ಸ್
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್04 ಸ್ಮಾರ್ಟ್ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಒಳಗೊಂಡಿದೆ. ಇದು ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುವುದರ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಹಾಟ್ಸ್ಪಾಟ್, ಹೆಚ್ಡಿಎಂಐ ಪೋರ್ಟ್, ಹೆಡ್ಫೋನ್ ಜ್ಯಾಕ್ ಅನ್ನು ಹೊಂದಿರುತ್ತದೆ.
ಸ್ಯಾಮ್ಸಂಗ್ ಕಂಪನಿಯಿಂದ ಬಿಡುಗಡೆಯಾಗುತ್ತಿರುವ ಗ್ಯಾಲಕ್ಸಿ ಎಫ್04 ಸ್ಮಾರ್ಟ್ಫೋನ್ ಜೇಡ್ ಪರ್ಪಲ್ ಮತ್ತು ಆ್ಯಪಲ್ ಗ್ರೀನ್ ಕಲರ್ ಆಯ್ಕೆಗಳಲ್ಲಿ ಖರೀದಿಸುವ ಅವಕಾಶ ಸಿಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ