• Home
  • »
  • News
  • »
  • tech
  • »
  • Samsung Laptop: ಸ್ಯಾಮ್​ಸಂಗ್​ ಕಂಪನಿಯ ಹೊಸ ಲ್ಯಾಪ್​ಟಾಪ್​ ಬಿಡುಗಡೆ! ಹೇಗಿದೆ ಗೊತ್ತಾ ಫೀಚರ್ಸ್​?

Samsung Laptop: ಸ್ಯಾಮ್​ಸಂಗ್​ ಕಂಪನಿಯ ಹೊಸ ಲ್ಯಾಪ್​ಟಾಪ್​ ಬಿಡುಗಡೆ! ಹೇಗಿದೆ ಗೊತ್ತಾ ಫೀಚರ್ಸ್​?

ಸ್ಯಾಮ್​ಸಂಗ್​ ಗ್ಯಾಲಕ್ಸಿ ಬುಕ್​ 2 ಗೋ ಲ್ಯಾಪ್​ಟಾಪ್​

ಸ್ಯಾಮ್​ಸಂಗ್​ ಗ್ಯಾಲಕ್ಸಿ ಬುಕ್​ 2 ಗೋ ಲ್ಯಾಪ್​ಟಾಪ್​

ಸ್ಯಾಮ್​ಸಂಗ್​ ಕಂಪನಿ ಇದೀಗ ಗ್ಯಾಲಕ್ಸಿ ಬುಕ್​ 2 ಗೋ ಎಂಬ ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆ ಮಾಡಿದೆ. ಇದು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಗುಣಮಟ್ಟದ ಲ್ಯಾಪ್​ಟಾಪ್​ ಆಗಿದೆ. ಇದರ ಫೀಚರ್ಸ್​​, ಬೆಲೆ ಬಗ್ಗೆ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

  • Share this:

    ಸ್ಯಾಮ್​ಸಂಗ್​ ಕಂಪನಿ (Samsung Company) ಹೆಚ್ಚು ಜನಪ್ರಿಯತೆ ಪಡೆದದ್ದು ಸ್ಮಾರ್ಟ್​ಫೋನ್​​ಗಳಿಗೆ. ಯಾರಿಗೇ ಆಗಲಿ ಸ್ಯಾಮ್​ಸಂಗ್​ ಎಂದು ಹೇಳಿದಾಗ ಮೊದಲು ನೆನಪಾಗೋದೆ ಗ್ಯಾಲಕ್ಸಿ ಮೊಬೈಲ್​ಗಳು (Galaxy Mobiles). ಆದರೆ ಇತ್ತೀಚಗೆ ಸ್ಯಾಮ್​​ಸಂಗ್​ ಡಿವೈಸ್​ಗಳಿಗೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಿದೆ. ಹೊಸ ಹೊಸ ಡಿವೈಸ್​ಗಳನ್ನು ಪರಿಚಯಿಸುವಲ್ಲಿಯೂ ಕಂಪನಿ ಯಶಸ್ಚಿಯಾಗಿದೆ. ಆದರೆ ಇದೀಗ ಸ್ಯಾಮ್​ಸಂಗ್​ ಕಂಪನಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲು ರೆಡಿಯಾಗಿದೆ ಅಂತಾನೇ ಹೇಳ್ಬಹುದು. ಸ್ಯಾಮ್​​ಸಂಗ್​ ಇದೀಗ ಹೊಸ ಲ್ಯಾಪ್​​ಟಾಪ್ (Laptop)​ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಈ ಲ್ಯಾಪ್​ಟಾಪ್​ ಗ್ಯಾಲಕ್ಸಿ ಬುಕ್​ 2 ಗೋ (Samsung Galaxy Book 2 Go) ಎಂಬ ಹೆಸರನ್ನು ಹೊಂದಿದೆ.


    ಸ್ಯಾಮ್​ಸಂಗ್​ ಕಂಪನಿ ಇದೀಗ ಗ್ಯಾಲಕ್ಸಿ ಬುಕ್​ 2 ಗೋ ಎಂಬ ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆ ಮಾಡಿದೆ. ಇದು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಗುಣಮಟ್ಟದ ಲ್ಯಾಪ್​ಟಾಪ್​ ಆಗಿದೆ. ಇದರ ಫೀಚರ್ಸ್​​, ಬೆಲೆ ಬಗ್ಗೆ ಕಂಪ್ಲೀಟ್​ ಮಾಹಿತಿ ಇಲ್ಲಿದೆ.


    ಸ್ಯಾಮ್​ಸಂಗ್​ ಗ್ಯಾಲಕ್ಸಿ ಬುಕ್​ 2 ಗೋ ಡಿಸ್​​ಪ್ಲೇ ವಿನ್ಯಾಸ


    ಸ್ಯಾಮ್​ಸಂಗ್​ ಗ್ಯಾಲಕ್ಸಿ ಬುಕ್​​ 2 ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ ಹೆಚ್‌ಡಿ ಎಲ್​ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಉನ್ನತ-ಕಾರ್ಯಕ್ಷಮತೆಯನ್ನು ಹೊಂದಿರು ಲ್ಯಾಪ್​​ಟಾಪ್​ ಆಗಿದೆ. ಈ ಲ್ಯಾಪ್‌ಟಾಪ್ 15.5 ಮಿಮೀ ದಪ್ಪ ಮತ್ತು 1.44 ಕೆಜಿ ತೂಕವನ್ನು ಹೊಂದಿದ್ದು, ತೆಳುವಾದ ಮತ್ತು ಹಗುರವಾದ ಲ್ಯಾಪ್​​ಟಾಪ್ ಇದಾಗಿದೆ.


    ಇದನ್ನೂ ಓದಿ: ವಿವೋ ಕಂಪನಿಯ ಈ ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್​​! ಇಂದು ಮಾತ್ರ


    ಪ್ರೊಸೆಸರ್ ಸಾಮರ್ಥ್ಯ


    ಸ್ಯಾಮ್​ಸಂಗ್​ ಕಂಪನಿಯ ಈ ಲ್ಯಾಪ್​ಟಾಪ್​ 180 ಡಿಗ್ರಿ ಹಿಂಜ್ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7c+ Gen 3 ಕಂಪ್ಯೂಟರ್​ ಪ್ಲಾಟ್‌ಫಾರ್ಮ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಗ್ಯಾಲಕ್ಸಿ ಬುಕ್‌ ಗೋ ನಲ್ಲಿರುವ ಸ್ನಾಪ್‌ಡ್ರಾಗನ್‌ 7c Gen 2 ಪ್ರೊಸೆಸರ್‌ಗಿಂತ 40% ವೇಗದ ಸಿಪಿಯು ಮತ್ತು 35% ಹೆಚ್ಚು ಗುಣಮಟ್ಟದ ಜಿಪಿಯು ಅನ್ನು ಒಳಗೊಂಡಿದೆ.


    ಸ್ಯಾಮ್​ಸಂಗ್​ ಗ್ಯಾಲಕ್ಸಿ ಬುಕ್​ 2 ಗೋ ಲ್ಯಾಪ್​ಟಾಪ್​


    ಸ್ಟೋರೇಜ್​ ಮತ್ತು ಇತರ ಫೀಚರ್ಸ್​


    ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಲ್ಯಾಪ್‌ಟಾಪ್‌ 3,200MHz ಮತ್ತು NVMe SSD ಸ್ಟೋರೇಜ್‌ನಲ್ಲಿ LPDDR4X ರ್‍ಯಾಮ್ ಅನ್ನು ಬೆಂಬಲಿಸಲಿದೆ. ಆದರೆ ಈ ಲ್ಯಾಪ್‌ಟಾಪ್‌ನ ರ್‍ಯಾಮ್, ಸ್ಟೋರೇಜ್‌ ಆಯ್ಕೆ ಬಗ್ಗೆ ಮಾಹಿತಿಯನ್ನು ಇನ್ನೂ ಯಾವುದೇ ರೀತಿಯಲ್ಲಿ ಕಂಪನಿ ಬಹಿರಂಗ ಪಡಿಸಿಲ್ಲ. ಜೊತೆಗೆ ಈ ಸ್ಯಾಮ್​ಸಂಗ್​ ಗ್ಯಾಲಕ್ಸಿ ಬುಕ್​ 2 ಲ್ಯಾಪ್​​ಟಾಪ್​ನ ಬ್ಯಾಟರಿ ಸಾಮರ್ಥ್ಯದ ವಿವರ ಕೂಡ ಬಹಿರಂಗವಾಗಿಲ್ಲ. ಈ ಲ್ಯಾಪ್‌ಟಾಪ್‌ ವೈಫೈ 6E ಮತ್ತು ಬ್ಲೂಟೂತ್ 5.2 ನೊಂದಿಗೆ ಸ್ಪೀಡ್‌ ವಾಯರ್‌ಲೆಸ್‌ ಕನೆಕ್ಟಿವಿಟಿ ಸಾಮರ್ಥ್ಯವನ್ನು ಹೊಂದಿರಲಿದೆ.


    ಇತರ ಫೀಚರ್ಸ್​


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 2 ಗೋ ಲ್ಯಾಪ್‌ಟಾಪ್ ವಿಂಡೋಸ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಗ್ಯಾಲಕ್ಸಿ ಬಡ್ಸ್ ಆಟೋ ಸ್ವಿಚ್, ವಿಂಡೋಸ್‌ಗೆ ಲಿಂಕ್, ಮಲ್ಟಿ ಕಂಟ್ರೋಲ್ (ಗ್ಯಾಲಕ್ಸಿ ಟ್ಯಾಬ್ಲೆಟ್), ಕ್ವಿಕ್ ಶೇರ್, ಸ್ಯಾಮ್‌ಸಂಗ್ ನೋಟ್ಸ್‌ ಮತ್ತು ಸೆಕೆಂಡ್‌ ಸ್ಕ್ರೀನ್‌ನಂತಹ ಗ್ಯಾಲಕ್ಸಿ ಎಕೋ ಸಿಸ್ಟಂ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದನ್ನು MIL-STD-810G ಸ್ಪೆಕ್‌ನೊಂದಿಗೆ ನಿರ್ಮಿಸಲಾಗಿದೆ. ಇದರಿಂದ ನಿಮ್ಮ ಲ್ಯಾಪ್​ಟಾಪ್​ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಬಹುದು.


    ಸ್ಯಾಮ್​ಸಂಗ್​ ಗ್ಯಾಲಕ್ಸಿ ಬುಕ್​ 2 ಗೋ ಲ್ಯಾಪ್​ಟಾಪ್​


    ಮಾರಾಟ ಯಾವಾಗ ಪ್ರಾರಂಭ


    ಸ್ಯಾಮ್​ಸಂಗ್​ ಗ್ಯಾಲಕ್ಸಿ ಬುಕ್​ 2 ಗೋ ಲ್ಯಾಪ್​​ಟಾಪ್​ ಇದೇ 2023ರ ಜನವರಿ 20 ರಂದು ಸ್ಯಾಮ್​ಸಂಗ್​ನ ಅಧಿಕೃತ ವೆಬ್​ಸೈಟ್​ ಮೂಲಕ ಮಾರಾಟ ಪ್ರಾರಂಭವಾಗಲಿದೆ.


    ಸ್ಯಾಮ್​ಸಂಗ್​ ಗ್ಯಾಲಕ್ಸಿ ಬುಕ್​​ 2 ಪ್ರೋ 360


    ಇದಲ್ಲದೆ ಇತ್ತೀಚೆಗೆ ಸ್ಯಾಮ್​ಸಂಗ್ ಕಂಪನಿ ಗ್ಯಾಲಕ್ಸಿ ಬುಕ್​ 2 ಪ್ರೋ ಲ್ಯಾಪ್​ಟಾಪ್ ಅನ್ನು ಪರಿಚಯಿಸಿದೆ, ಈ ಲ್ಯಾಪ್‌ಟಾಪ್‌ ಅನ್ನು ಒಮ್ಮೆ ಫುಲ್ ಚಾರ್ಜ್​ ಮಾಡಿದ್ರೆ 21 ಗಂಟೆಗಳ ನಿರಂತರವಾಗಿ ಬಳಕೆ ಮಾಡಬಹುದು ಎಂದು ಹೇಳಲಾಗಿದೆ. ಈ ಲ್ಯಾಪ್‌ಟಾಪ್ ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಒಳಗೊಂಡಂತೆ ಇದೇ ರೀತಿ ಅನೇಕ ಫೀಚರ್ಸ್​​ಗಳನ್ನು ಒಳಗೊಂಡಿದೆ.

    Published by:Prajwal B
    First published: