HOME » NEWS » Tech » SAMSUNG ANNOUNCES SPECIAL OFFERS FOR ITS CUSTOMERS HG

ಸ್ಯಾಮ್​ಸಂಗ್​ ಹೊರಡಿಸಿದೆ ಸ್ಪೆಷಲ್​ ಆಫರ್​; ಆಕರ್ಷಕ ಬೆಲೆಗೆ ಸ್ಮಾರ್ಟ್​ಫೋನ್​ಗಳು

Samsung Special Offers: ಸ್ಯಾಮ್​ಸಂಗ್​​ ಸ್ಟೋರ್​ ಮೂಲಕ ಸ್ಮಾರ್ಟ್​ಫೋನ್​ ಖರೀದಿಸಿದರೆ ಪಾಯಿಂಟ್​, ಸರ್ವೀಸ್​ ಕೂಪನ್​, 15 ಸಾವಿರದವರೆಗೆ ಬೆನಿಫಿಟ್​ ನೀಡುತ್ತಿದೆ.  ಜೊತೆಗೆ 6 ಸಾವಿರದವರೆಗೆ ಸ್ಮಾರ್ಟ್​ಕ್ಲಬ್ ಮೆಂಬರ್​ಶಿಪ್​ ನೀಡುತ್ತಿದೆ.

news18-kannada
Updated:December 2, 2020, 5:57 PM IST
ಸ್ಯಾಮ್​ಸಂಗ್​ ಹೊರಡಿಸಿದೆ ಸ್ಪೆಷಲ್​ ಆಫರ್​; ಆಕರ್ಷಕ ಬೆಲೆಗೆ ಸ್ಮಾರ್ಟ್​ಫೋನ್​ಗಳು
ಸ್ಯಾಮ್​ಸಂಗ್ S20 ಅಲ್ಟ್ರಾ
  • Share this:
ಸ್ಯಾಮ್​ಸಂಗ್​ ತನ್ನ ಗ್ರಾಹಕರಿಗಾಗಿ ಸ್ಪೆಷಲ್​ ಆಫರ್​ ನೀಡಿದ್ದು. ಸ್ಯಾಮ್​ಸಂಗ್​ ಸ್ಮಾರ್ಟ್​ ಮತ್ತು ಸ್ಯಾಮ್​ಸಂಗ್​ ಸ್ಮಾರ್ಟ್​ ಪ್ಲಾಜಾ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಗ್ರಾಹಕರ ಗ್ಯಾಲಕ್ಸಿ ಸ್ಮಾರ್ಟ್​ಫೋನ್ ಅನ್ನು ​ಈ ಸ್ಪೆಷಲ್​ ಆಫರ್​ ಮೂಲಕ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

ಸ್ಯಾಮ್​ಸಂಗ್​​ ಸ್ಟೋರ್​ ಮೂಲಕ ಸ್ಮಾರ್ಟ್​ಫೋನ್​ ಖರೀದಿಸಿದರೆ ಪಾಯಿಂಟ್​, ಸರ್ವೀಸ್​ ಕೂಪನ್​, 15 ಸಾವಿರದವರೆಗೆ ಬೆನಿಫಿಟ್​ ನೀಡುತ್ತಿದೆ.  ಜೊತೆಗೆ 6 ಸಾವಿರದವರೆಗೆ ಸ್ಮಾರ್ಟ್​ಕ್ಲಬ್ ಮೆಂಬರ್​ಶಿಪ್​ ನೀಡುತ್ತಿದೆ. ಡಿಸೆಂಬರ್​ ತಿಂಗಳಾಂತ್ಯದವರೆಗೆ ಗ್ರಾಹಕತರು ಈ ಸೇವೆಯನ್ನು ಪಡೆಯಬಹುದಾಗಿದೆ.

ಇನ್ನು 2,500 ರೂ.ವರೆಗೆ ರಿವರ್ಡ್​ ನೀಡುತ್ತಿದೆ. ಸ್ಯಾಮ್​ಸಂಗ್​ ಗ್ಯಾಲಕ್ಸಿ ಝೆಡ್​ ಫೋಲ್ಡ್​ 2 5ಜಿ, ಗ್ಯಾಲಕ್ಸಿ ಝೆಡ್​ ಫೋಲ್ಡ್​​ ಮತ್ತು ಗ್ಯಾಲಕ್ಸಿ ಝೆಡ್​ ಫ್ಲಿಪ್​ ಸ್ಮಾರ್ಟ್​ಫೋನ್​ ಖರೀದಿಸಿದರೆ 3,500 ರೂ.ವಿನ ರಿವಾರ್ಡ್​​ ಸಿಗಲಿದೆ.

ಗ್ಯಾಲಕ್ಸಿ ನೋಟ್ 20 ಸಿರೀಸ್​, ಗ್ಯಾಲಕ್ಸಿ ನೋಟ್ 10, ಗ್ಯಾಲಕ್ಸಿ ನೋಟ್ 10 +, ಗ್ಯಾಲಕ್ಸಿ ಎಸ್ 20 ಸಿರೀಸ್​, ಗ್ಯಾಲಕ್ಸಿ ಎಸ್ 10 +, ಗ್ಯಾಲಕ್ಸಿ ಎಸ್ 10, ಮತ್ತು ಗ್ಯಾಲಕ್ಸಿ ಎಸ್ 10 ಇ ಮೇಲೆ 2 ಸಾವಿರವರೆಗೆ ರಿವಾರ್ಡ್​ ಸಿಗಲಿದೆ.

ಅಷ್ಟು ಮಾತ್ರವಲ್ಲದೆ, ವಾರೆಂಟಿ ನೀಡುತ್ತಿದೆ. ಸ್ಮಾರ್ಟ್​ಫೋನ್​ಗಳ ರಿಪೇರಿಗಳ ಮೇಲೆ ಡಿಸ್ಕೌಂಟ್ ಕೂಪನ್​​ ನೀಡುತ್ತಿದೆ. ಸ್ಮಾರ್ಟ್​ಕೆಫೆ, ಸ್ಯಾಮ್​ಸಂಗ್​​ ಪ್ಲಾಜಾ, ಸ್ಮಾರ್ಟ್​ಸಂಗ್​ ಇ-ಸ್ಟೋರ್​ಗಳಲ್ಲಿ ಬಳಸಬಹುದಾಗಿದೆ.
Published by: Harshith AS
First published: December 2, 2020, 5:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories