Flying car: ರಸ್ತೆ ಮೇಲೆ ಓಡುತ್ತೆ, ಆಕಾಶದಲ್ಲೂ ಹಾರುತ್ತೆ! ಸಖತ್ತಾಗಿದೆ ಗುರು ಈ ಸ್ವಿಚ್‌ಬ್ಲೇಡ್ ಫ್ಲೈಯಿಂಗ್ ಕಾರು

Switchblade Flying Car: ಸ್ವಿಚ್‌ಬ್ಲೇಡ್ ಫ್ಲೈಯಿಂಗ್ ಕಾರು ಮಾಲೀಕರಿಗೆ ವಾಯುಯಾನ ಮತ್ತು ಕಾರ್ ಡ್ರೈವಿಂಗ್ ಲೈಸೆನ್ಸ್ ಅಗತ್ಯವಿದೆ. ಅವರು ಫ್ಲೈಟ್ ಪರೀಕ್ಷಕರಿಂದ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಮತ್ತು ತಮ್ಮ ವಿಮಾನದ ನಿರ್ವಹಣೆಗಾಗಿ ರಿಪೇರಿ ಪರವಾನಗಿಯನ್ನು ಪಡೆಯಬೇಕು.

ಸ್ವಿಚ್‌ಬ್ಲೇಡ್ ಫ್ಲೈಯಿಂಗ್ ಕಾರು

ಸ್ವಿಚ್‌ಬ್ಲೇಡ್ ಫ್ಲೈಯಿಂಗ್ ಕಾರು

  • Share this:
    ಹಾರುವ ಕಾರುಗಳ ಬಗ್ಗೆ ಅನೇಕ ವರ್ಷಗಳಿಂದಲೇ ಸುದ್ದಿ ಕೇಳಿಬರುತ್ತಿದೆ. ಈಗಾಗಲೇ ಅನೇಕ ದೊಡ್ಡ ಕಂಪನಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಕೆಲವು ಕಂಪನಿಗಳು ಹಾರುವ ಕರನ್ನು ತಯಾರಿಸಿ ಪರೀಕ್ಷೆಗೆ ಒಳಪಡಿಸಿವೆ. ಅದರಂತೆಯೇ 14 ವರ್ಷಗಳ ಸಂಶೋಧನೆ ಮತ್ತು ವಿನ್ಯಾಸದ ನಂತರ, ಅಮೇರಿಕನ್ ಕಂಪನಿ ಸ್ಯಾಮ್ಸನ್ ಸ್ಕೈ (Samson sky) ಅಂತಿಮವಾಗಿ ತನ್ನ ಸ್ವಿಚ್‌ಬ್ಲೇಡ್ ಫ್ಲೈಯಿಂಗ್ ಕಾರನ್ನು ( Switchblade Flying Car) ಆಕಾಶ ಎತ್ತರಕ್ಕೆ ಹಾರಿಸಲು ಹೊರಟಿದೆ. ಈ ವಾಹನದ ಹೈಸ್ಪೀಡ್ ಟ್ಯಾಕ್ಸಿ ಪರೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಕಂಪನಿಯು ಘೋಷಿಸಿದೆ. ಇದು ಅಮೆರಿಕದ (America) ನಾಗರಿಕರಿಗೆ ಲಭ್ಯವಿರುವ ಮೊದಲ ಹಾರುವ ಕಾರು (Flying Car) ಎಂದು ಹೇಳಿಕೊಂಡಿದೆ. ಅಚ್ಚರಿಯ ಸಂಗತಿ ಎಂದರೆ ಈಗಾಗಲೇ ಸುಮಾರು 2000 ಜನರು ಈ ಹಾರುವ ಕಾರನ್ನು ಬುಕ್ (Booking) ಮಾಡಿದ್ದಾರೆ.

    ಕಾರು ಮತ್ತು ವಿಮಾನ

    ಆಕಾಶದಲ್ಲಿ ವಿಮಾನ ಹಾರಾಡುವುದನ್ನು ನೋಡಿದ್ದೇವೆ, ಹೆಲಿಕಾಪ್ಟರ್​ ಹಾರಡುವುದನ್ನು ನೋಡಿದ್ದೇವೆ. ಆದರೀಗ ಕಾರುಗಳನ್ನು ಹಾರಾಟ ನಡೆಸಲು ಹಲವು ಕಂಪನಿಗಳು ಸಿದ್ಧತೆ ಮಾಡಿಕೊಂಡಿವೆ. ಅಷ್ಟೇ ಏಕೆ ಆಗಸಲ್ಲಿ ಓಡಾಡಲು ಕಾರು ಟ್ಯಾಕ್ಸಿ ಕೂಡ ಸದ್ಯದಲ್ಲೇ ಬರಲಿದೆ. ಅಮೆರಿಕನ್ ಕಂಪನಿ ಸ್ಯಾಮ್ಸನ್ ಸ್ಕೈ ಕೂಡ 14 ವರ್ಷಗಳ ನಿರಂತರ ಸಂಶೋಧನೆಯಿಂದ ಸ್ವಿಚ್‌ಬ್ಲೇಡ್ ಫ್ಲೈಯಿಂಗ್ ಕಾರನ್ನು ತಯಾರಿಸಿದೆ. ನೂತನ ಹಾರುವ ಕಾರು ಮಾರುಕಟ್ಟೆಯಲ್ಲಿ ಸರಿಯಾದ ಜಾಗ ಮಾಡುವ ಮೊದಲೇ ಜನರು ಬುಕ್ಕಿಂಗ್​ ಕೂಡ ಮಾಡುತ್ತಿದ್ದಾರೆ. ಆದರೆ ಈ ಹಾರುವ ಕಾರುಗಳಿಗೆ ಬೇಡಿಕೆ ಎಷ್ಟಿರಬಹುದು ಎಂಬುದನ್ನು ಊಹಿಸಬೇಕಿದೆ.

    ವಿಶೇಷವೆಂದರೆ ಸ್ಯಾಮ್ಸನ್ ಸ್ಕೈ ತಯಾರಿಸಿದ ಸ್ವಿಚ್‌ಬ್ಲೇಡ್ ಅದು ಕಾರು ಮತ್ತು ವಿಮಾನವೂ ಹೌದು. ಈ ವಾಹನವನ್ನು ಅಮೆರಿಕಾದಲ್ಲಿ ಮೂರು-ಚಕ್ರದ ಮೋಟಾರ್​​ಸೈಕಲ್ ಎಂದು ವಿವರಿಸಲಾಗಿದೆ. ಅದರೆ ಇದು ಹಾರುತ್ತದೆ ಎಂದು ಹೇಳಿದೆ. ಇದರಲ್ಲಿ ಒಬ್ಬ ಚಾಲಕ ಮತ್ತು ಒಬ್ಬ ಪ್ರಯಾಣಿಕ ಕುಳಿತುಕೊಳ್ಳಬಹುದು. ಇದು ರಸ್ತೆಯ ಮೇಲೆ ಓಡುತ್ತದೆ ಮತ್ತು ಹಾರಲು ಸಹ ಸಾಧ್ಯವಾಗುತ್ತದೆ. ಟೇಕ್ ಆಫ್ ಮತ್ತು ಲ್ಯಾಂಡಿಂಗ್‌ಗೆ ರನ್‌ವೇ ಅಗತ್ಯವಿದೆ.

    ಖರೀದಿಸುವುದು ಹೇಗೆ?

    ಸ್ವಿಚ್‌ಬ್ಲೇಡ್ ಫ್ಲೈಯಿಂಗ್ ಕಾರು ಮಾಲೀಕರಿಗೆ ವಾಯುಯಾನ ಮತ್ತು ಕಾರ್ ಡ್ರೈವಿಂಗ್ ಲೈಸೆನ್ಸ್ ಅಗತ್ಯವಿದೆ. ಅವರು ಫ್ಲೈಟ್ ಪರೀಕ್ಷಕರಿಂದ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಮತ್ತು ತಮ್ಮ ವಿಮಾನದ ನಿರ್ವಹಣೆಗಾಗಿ ರಿಪೇರಿ ಪರವಾನಗಿಯನ್ನು ಪಡೆಯಬೇಕು. ಆ ಬಳಿಕ ಸ್ವಿಚ್‌ಬ್ಲೇಡ್ ಫ್ಲೈಯಿಂಗ್ ಕಾರನ್ನು ಖರೀದಿಸಬೇಕು. ಆದರೆ ಬಿಡುಗಡೆಗೂ ಮುನ್ನವೇ ಈ ಕಾರನ್ನು 2000 ಜನರು ಬುಕ್​ ಮಾಡಿದ್ದಾರೆ. ಒಂದು ವೇಳೆ ಮಾರುಕಟ್ಟೆಗೆ ಬಂದಾಗ ಇದಕ್ಕೆ ಡಿಮ್ಯಾಂಡ್​ ಹೇಗಿರಬಹುದು?

    ಇದನ್ನೂ ಓದಿ: iPhone Trick: ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳೊಂದಿಗೆ ಏಕಕಾಲದಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಹೀಗೆ ಮಾಡಿ



    ಬೆಲೆ ಎಷ್ಟು?

    ವಿನ್ಯಾಸವು ಭಿನ್ನವಾಗಿದೆ. ನೋಡಲು ಆಕರ್ಷಕವಾಗಿದೆ. ಆದರೆ ಈ ಕಾರನ್ನು ಖರೀದಿಸುವುದೇನೋ ನಿಜ. ಬೆಲೆಯ ಆಧಾರದ ಮೇಲೆ ಖರೀದಿಸಬೇಕಿದೆ. ಏಕೆಂದರೆ ಕಡಿಮೆ ಬೆಲೆಯದ್ದಾಗಿದ್ದರೆ ಖರೀದಿಸಲು ಸುಲಭ. ಆದರೆ ಸ್ವಿಚ್‌ಬ್ಲೇಡ್ ಫ್ಲೈಯಿಂಗ್ ಕಾರಿನ ಅಂದಾಜು ಬೆಲೆ 1.35 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: Google Paly Store​ನಿಂದ ಆ್ಯಪ್​ ಡೌನ್​ಲೋಡ್​ ಮಾಡುವಾಗ ಎಚ್ಚರದಿಂದಿರಿ! ಯಾಕಂದ್ರೆ ನಿಮ್ಮ ಫೋನ್​ ಹ್ಯಾಕ್​ ಆಗಬಹುದು

    ಹಾರುವ ಕಾರಿನ ವಿಮೆ

    ಹಾರುವ ಕಾರು ವಿಮೆ ಕೂಡ ಕಷ್ಟದ ಕೆಲಸ. ಪ್ರಸ್ತುತ ಹಾರುವ ವಾಹನಗಳಿಗೆ ಯಾವುದೇ ವಿಮೆ ಅಸ್ತಿತ್ವದಲ್ಲಿಲ್ಲ. ಆರಂಭದಲ್ಲಿ, ಈ ವಾಹನವನ್ನು ಚಾಲನೆ ಮಾಡುವ ಗ್ರಾಹಕರು ಎರಡು ಪಾಲಿಸಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಒಂದು ವಿಮಾನ ಪ್ರಯಾಣ ಮತ್ತು ಇನ್ನೊಂದು ರಸ್ತೆ ಪ್ರಯಾಣಕ್ಕಾಗಿ. ಒಂದು ವೇಳೆ ಹಾರುವ ಕಾರುಗಳಿಗೆ ಅವಕಾಶ ಸಿಕ್ಕಿದರೆ ನೆಲದಲ್ಲಿ ಓಡಾಡುವ ಜನರೆಲ್ಲಾ ಹಾರುವ ಕಾರಿನಲ್ಲಿ ಓಡಾಡುವ ದಿನ ಬರಬಹುದು.
    Published by:Harshith AS
    First published: