• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Samsung Galaxy: ಬಿಡುಗಡೆಗೆ ರೆಡಿಯಾಗಿದೆ ಸ್ಯಾಮ್​ಸಂಗ್​ನ​ ಎರಡು ಸ್ಮಾರ್ಟ್​ಫೋನ್​ಗಳು! ಬೆಲೆ ನೋಡಿದ್ರೆ ಶಾಕ್ ಆಗ್ತೀರಾ

Samsung Galaxy: ಬಿಡುಗಡೆಗೆ ರೆಡಿಯಾಗಿದೆ ಸ್ಯಾಮ್​ಸಂಗ್​ನ​ ಎರಡು ಸ್ಮಾರ್ಟ್​ಫೋನ್​ಗಳು! ಬೆಲೆ ನೋಡಿದ್ರೆ ಶಾಕ್ ಆಗ್ತೀರಾ

ಸ್ಯಾಮ್​ಸಂಗ್​ ಗ್ಯಾಲಕ್ಸಿ ಸ್ಮಾರ್ಟ್​ಫೋನ್ಸ್​

ಸ್ಯಾಮ್​ಸಂಗ್​ ಗ್ಯಾಲಕ್ಸಿ ಸ್ಮಾರ್ಟ್​ಫೋನ್ಸ್​

ಹೌದು, ಸ್ಯಾಮ್​ಸಂಗ್​ ಇದುವರೆಗೆ ಹಲವಾರು ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿದ್ದು ಇದೀಗ ತನ್ನ  ಎ ಸರಣಿಯಲ್ಲಿ ಎರಡು ಮೊಬೈಲ್​ಗಳನ್ನು ಮುಂದಿನ ವಾರದಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದೆ. ಇದರ ಬೆಲೆ ಮಾತ್ರ 10 ಸಾವಿರಕ್ಕಿಂತಲೂ ಕಡಿಮೆ ಇದ್ದು ಪ್ರೀಮಿಯಂ ಸ್ಮಾರ್ಟ್​​ಫೋನ್​ಗಳಂತೆ ಫೀಚರ್ಸ್ ಅನ್ನು ಹೊಂದಿದೆ.

ಮುಂದೆ ಓದಿ ...
  • Share this:

    ಸ್ಮಾರ್ಟ್​ಫೋನ್ (Smartphone)​ ಮಾರುಕಟ್ಟೆಯಲ್ಲಿ ಹಲವಾರು ಜನಪ್ರಿಯತೆ ಪಡೆದಂತಹ ಕಂಪನಿಗಳಿವೆ. ಅದ್ರಲ್ಲಿ ಸ್ಯಾಮ್​ಸಂಗ್ ಕಂಪನಿ (Samsung Company) ಕೂಡಾ ಒಂದು ಈ ಸ್ಯಾಮ್​ಸಂಗ್ ಕಂಪನಿಯ ಅಡಿಯಲ್ಲಿ ಇದುವರೆ ಸಾಕಷ್ಟು ಮೊಬೈಲ್​ಗಳು (Mobile) ಬಿಡುಗಡೆಯಾಗಿದೆ. ಆದರೆ ಈ ಕಂಪನಿಯಲ್ಲಿ ಬಿಡುಗಡೆಯಾದಂತಹ ಸ್ಮಾರ್ಟ್​​ಫೋನ್​ಗಳೆಲ್ಲವೂ ಉತ್ತಮ ಗುಣಮಟ್ಟದ ಮತ್ತು ಬೆಲೆ ಹೆಚ್ಚಿರುವಂತಹ ಸ್ಮಾರ್ಟ್​​ಫೋನ್​ಗಳೇ. ಆದರೆ ಇದೀಗ ಸ್ಯಾಮ್​ಸಂಗ್​ ಕಂಪನಿ ಎರಡು ಸ್ಮಾರ್ಟ್​ಫೋನ್​​ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಇದರ ಬೆಲೆಗೆ ಗ್ರಾಹಕರು ಫಿದಾ ಆಗ್ಬೋದು ಏಕೆಂದರೆ ಸ್ಯಾಮ್​ಸಂಗ್​ ಎ ಸೀರಿಸ್​ನ (Samsung A Series) ಅಡಿಯಲ್ಲಿ ಬಿಡುಗಡೆಯಾಗುವಂತಹ ಸ್ಮಾರ್ಟ್​ಫೋನ್​ಗಳು ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ04 (Samsung Galaxy A04) ಮತ್ತು ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ04ಇ (Samsung Galaxy A04E) ಎಂಬುದಾಗಿದೆ. ಇದು ಮಾರುಕಟ್ಟೆಗೆ 10 ಸಾವಿರಕ್ಕಿಂತಲೂ ಕಡಿಮೆ ಬೆಲೆ ಹೊಂದಿಕೊಂಡು ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.


    ಹೌದು, ಸ್ಯಾಮ್​ಸಂಗ್​ ಇದುವರೆಗೆ ಹಲವಾರು ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿದ್ದು ಇದೀಗ ತನ್ನ  ಎ ಸರಣಿಯಲ್ಲಿ ಎರಡು ಮೊಬೈಲ್​ಗಳನ್ನು ಮುಂದಿನ ವಾರದಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದೆ. ಇದರ ಬೆಲೆ ಮಾತ್ರ 10 ಸಾವಿರಕ್ಕಿಂತಲೂ ಕಡಿಮೆ ಇದ್ದು ಪ್ರೀಮಿಯಂ ಸ್ಮಾರ್ಟ್​​ಫೋನ್​ಗಳಂತೆ ಫೀಚರ್ಸ್ ಅನ್ನು ಹೊಂದಿದೆ.


    ಈ ಸ್ಮಾರ್ಟ್​​ಫೋನ್​ಗಳ ಫೀಚರ್ಸ್​


    ಸ್ಯಾಮ್​​ಸಂಗ್​ ಗ್ಯಾಲಕ್ಸಿ ಎ ಸೀರಿಸ್​ನಲ್ಲಿ ಬರುವಂತಹ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ04 ಮತ್ತು ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ04ಇ ಹ್ಯಾಂಡ್‌ಸೆಟ್‌ಗಳು ರೂ.10,000 ಕ್ಕಿಂತ ಕಡಿಮೆ ಬೆಲೆ ಹೊಂದಿರುವ ಸಾಧ್ಯತೆಯಿದೆ. ಈ ಸ್ಮಾರ್ಟ್‌ಫೋನ್‌ಗಳು ರ್‍ಯಾಮ್ ಪ್ಲಸ್ ಫೀಚರ್ಸ್​​ನೊಂದಿಗೆ ಬರಲಿದೆ ಎಂದು ವರದಿಯಾಗಿದೆ. ರ್‍ಯಾಮ್ ಅಂದರೆ ರ್‍ಯಾಮ್ ಅನ್ನು ಅಗತ್ಯಕ್ಕೆ ಅನುಗುಣವಾಗಿ ವರ್ಚುವಲ್ ಆಗಿ ಹೆಚ್ಚಿಸಬಹುದು ಎಂದರ್ಥ.


    ಇದನ್ನೂ ಓದಿ: ಜನವರಿ 1ರಿಂದ ಮೊಬೈಲ್​ ಕಂಪನಿಗಳಿಗೆ ನ್ಯೂ ರೂಲ್ಸ್​! ಕಳೆದುಕೊಂಡ ಫೋನ್​ ಹುಡುಕೋದು ಮತ್ತಷ್ಟು ಸುಲಭ!


    ಬ್ಯಾಟರಿ ಫೀಚರ್ಸ್​


    ಸ್ಯಾಮ್​ಸಂಗ್​ನಿಂದ ಬಿಡುಗಡೆಯಾಗುವಂತಹ ಎರಡೂ ಸ್ಮಾರ್ಟ್​​ಫೋನ್​ಗಳು ಕೂಡ 5000mAh ಬ್ಯಾಟರಿ ಬ್ಯಾಕಪ್​ ಅನ್ನು ಹೊಂದಿರಲಿದೆ ಎಂದು ಕಂಪನಿ ವರದಿಯಲ್ಲಿ ಹೇಳಿದೆ.


    ಸ್ಯಾಮ್​ಸಂಗ್​ ಗ್ಯಾಲಕ್ಸಿ ಸ್ಮಾರ್ಟ್​ಫೋನ್ಸ್​


    ಸ್ಪೆಷಲ್​ ಫೀಚರ್ಸ್​


    ಸ್ಯಾಮ್​​ಸಂಗ್​ ಗ್ಯಾಲಕ್ಸಿ ಎ04 ಮತ್ತು ಸ್ಯಾಮ್​​ಸಂಗ್​ ಗ್ಯಾಲಕ್ಸಿ ಎಮ್​04 ಮಾಹಿತಿಯು Geekbench ಡೇಟಾಬೇಸ್‌ನಲ್ಲಿ ಲಭ್ಯವಿದೆ ಎಂದು ಹಿಂದಿನ ವರದಿಯು ಬಹಿರಂಗಪಡಿಸಿದೆ. ಸ್ಯಾಮ್​​ಸಂಗ್​ ಗ್ಯಾಲಕ್ಸಿ ಎ04 Core ಅನ್ನು BIS ಡೇಟಾಬೇಸ್‌ನಲ್ಲಿ SM-A042F/DS ಮಾದರಿ ಸಂಖ್ಯೆಯೊಂದಿಗೆ ಪಟ್ಟಿ ಮಾಡಲಾಗಿದೆ ಎಂದು ವರದಿ ಬಹಿರಂಗಪಡಿಸಿದೆ.


    ಸ್ಯಾಮ್​​ಸಂಗ್​ ಗ್ಯಾಲಕ್ಸಿ ಎಮ್​04 ಅನ್ನು SM-M045F/DS ಮಾದರಿ ಸಂಖ್ಯೆಯೊಂದಿಗೆ ಪಟ್ಟಿ ಮಾಡಲಾಗಿದೆ ಎಂದು ವರದಿಯಾಗಿದೆ. Geekbench ಪಟ್ಟಿಯ ಪ್ರಕಾರ, ಸ್ಯಾಮ್​​ಸಂಗ್​ ಗ್ಯಾಲಕ್ಸಿ ಎ04 ಕೋರ್ 3GB ರ್‍ಯಾಮ್​ನೊಂದಿಗೆ ಪ್ರಾರಂಭಿಸುವ ಸಾಧ್ಯತೆಯಿದೆ. ಇದು ಆಂಡ್ರಾಯ್ಡ್​ನಲ್ಲಿ 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್​ಫೋನ್​​ಗಳು ಮೀಡಿಯಾಟೆಕ್​ ಹೆಲಿಯೋ ಜಿ35 ಎಸ್​ಒಸಿ ಪ್ರೊಸೆಸರ್‌ನೊಂದಿಗೆ ಈ ಸ್ಮಾರ್ಟ್​​ಫೋನ್​ಗಳು ಕಾರ್ಯನಿರ್ವಹಿಸುತ್ತದೆ ಎಮದು ಕೆಲವು ವರದಿಗಳು ತಿಳಿಸಿದೆ.


    ಸ್ಯಾಮ್​ಸಂಗ್​ ಗ್ಯಾಲಕ್ಸಿ ಸ್ಮಾರ್ಟ್​ಫೋನ್ಸ್​


    ಅಕ್ಟೋಬರ್​ನಲ್ಲಿ ಬಿಡುಗಡೆಯಾದ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ04ಎಸ್​


    ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ ಸೀರಿಸ್​ನಲ್ಲಿ ಗ್ಯಾಲಕ್ಸಿ ಎ04ಎಸ್ ಎಂಬ ಸ್ಮಾರ್ಟ್​ಫೋನ್​ ಅನ್ನು ಈ ವರ್ಷದ ಅಕ್ಟೋಬರ್​ನಲ್ಲಿ ಬಿಡುಗಡೆಮಾಡಿತ್ತು. ಈ ಹ್ಯಾಂಡ್ಸೆಟ್ ಕಪ್ಪು, ಹಸಿರು, ಬಿಳಿ ಮತ್ತು ಕಿತ್ತಳೆ ಬಣ್ಣದ ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಈಗಲೂ  ಲಭ್ಯವಿದೆ. ಈ ಸ್ಮಾರ್ಟ್​​ಫೋನ್​ 90Hz ರಿಫ್ರೆಶ್ ದರ, 720x1560 ಪಿಕ್ಸೆಲ್‌ಗಳ ರೆಸಲ್ಯೂಶನ್ ಜೊತೆಗೆ 6.5-ಇಂಚಿನ HD+ ಡಿಸ್​ಪ್ಲೇಯನ್ನು ಹೊಂದಿದೆ. ಇದು Samsung Exynos 850 ಚಿಪ್‌ಸೆಟ್ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ.


    ಇದರ ಕ್ಯಾಮೆರಾ ಫೀಚರ್ಸ್​


    ಈ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎ04ಎಸ್​ ಸ್ಮಾರ್ಟ್​​ಫೊನ್​ ಟ್ರಿಪಲ್ ಕ್ಯಾಮೆರಾ ಸೆಟಪ್‌ಅನ್ನು ಹೊಂದಿದೆ. ಕ್ಯಾಮೆರಾದಲ್ಲಿ 50 ಮೆಗಾಪಿಕ್ಸೆಲ್​ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಇದು 2MP ಡೆಪ್ತ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಸಹ ಹೊಂದಿದೆ. ಸೆಲ್ಫಿಗಾಗಿ ಸ್ಮಾರ್ಟ್‌ಫೋನ್‌ನ ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು