• Home
  • »
  • News
  • »
  • tech
  • »
  • Royal Enfield: 2023ಕ್ಕೆ ರಾಯಲ್ ಎನ್‌ಫೀಲ್ಡ್‌ ಕಡೆಯಿಂದ ಮತ್ತಷ್ಟು ಸ್ಟೈಲಿಶ್​ ಬೈಕ್​ ಬಿಡುಗಡೆ!

Royal Enfield: 2023ಕ್ಕೆ ರಾಯಲ್ ಎನ್‌ಫೀಲ್ಡ್‌ ಕಡೆಯಿಂದ ಮತ್ತಷ್ಟು ಸ್ಟೈಲಿಶ್​ ಬೈಕ್​ ಬಿಡುಗಡೆ!

ರಾಯಲ್​ ಎನ್ಫೀಲ್ಡ್​

ರಾಯಲ್​ ಎನ್ಫೀಲ್ಡ್​

ರಾಯಲ್‌ ಎನ್‌ಫೀಲ್ಡ್ ಬೈಕ್‌ ಅಭಿಮಾನಿಗಳಿಗಾಗಿಯೇ ಕಂಪನಿಯು ಹೊಸ ಹೊಸ ಮಾದರಿಗಳನ್ನು ಮಾರುಕಟ್ಟೆಗೆ ತರುತ್ತಲೇ ಇರುತ್ತದೆ.

  • Trending Desk
  • 4-MIN READ
  • Last Updated :
  • Share this:

ರಾಯಲ್ ಎನ್‌ಫೀಲ್ಡ್ (Royal Enfield), ಅದರ ಶಬ್ದ, ವಿನ್ಯಾಸಕ್ಕೆ ಮಾರುಗಹೋಗದವರೇ ಇಲ್ಲ. ಎಂತಾ ಲಕ್ಸುರಿ ಬೈಕ್‌ ಹೊಂದಿದವರು ಸಹ ತಗೋಳಲೇಬೇಕು ಎನ್ನುವ ಬೈಕ್‌ ಇದು. ಸಣ್ಣವರಿಂದ ದೊಡ್ಡವರವರೆಗೂ ರಾಯಲ್‌ ಎನ್‌ಫೀಲ್ಡ್ ಎಂದರೆ ಒಂದು ರೀತಿ ಕ್ರೇಜ್.‌ ರಾಯಲ್‌ ಎನ್‌ಫೀಲ್ಡ್ ಬೈಕ್‌ ಅಭಿಮಾನಿಗಳಿಗಾಗಿಯೇ ಕಂಪನಿಯು ಹೊಸ ಹೊಸ ಮಾದರಿಗಳನ್ನು ಮಾರುಕಟ್ಟೆಗೆ ತರುತ್ತಲೇ ಇರುತ್ತದೆ. ರಾಯಲ್ ಎನ್‌ಫೀಲ್ಡ್ 2022 ರಲ್ಲಿ ಸ್ಕ್ರಾಮ್ 411 ಮತ್ತು ಹಂಟರ್ 350 ಸಿಸಿಯಂತಹ ಕೆಲವು ಅದ್ಭುತ ಬೈಕ್‌ಗಳನ್ನು(Bike) ಬಿಡುಗಡೆ ಮಾಡಿತ್ತು. ಅಂತೆಯೇ ಮುಂದಿನ ವರ್ಷ ಅಂದರೆ 2023 ರಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿ ಸುಮಾರು ಐದು ಹೊಸ ಮಾದರಿ ಬೈಕ್‌ಗಳನ್ನು ಪರಿಚಯಿಸಲು ನೋಡುತ್ತಿದೆ. ಈ ಐದು ಬೈಕ್‌ಗಳಲ್ಲಿ ಎರಡು 350 CC ಬೈಕ್‌ಗಳು ಮುಂದಿನ ವರ್ಷದ ಮಧ್ಯದಲ್ಲಿ ಭಾರತದಲ್ಲಿ (India) ಬಿಡುಗಡೆ ಆಗುವ ಸಾಧ್ಯತೆಯಿದೆ.


ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗಾಗಿ ಕಂಪನಿ ಹಲವಾರು ಹೊಸ ಮೋಟಾರ್‌ಸೈಕಲ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, 350 cc ಮತ್ತು 650 cc ಅವುಗಳಲ್ಲಿ ಒಂದು. ನವೆಂಬರ್ 2022ರ ಆರಂಭದಲ್ಲಿ, ರಾಯಲ್ ಎನ್‌ಫೀಲ್ಡ್ ಪ್ರಮುಖ ಸೂಪರ್ ಮೀಟಿಯೋರ್ 650 ಅನ್ನು ಇಟಲಿಯ ಮಿಲನ್‌ನಲ್ಲಿ ಅನಾವರಣಗೊಳಿಸಿತ್ತು.


ಫೆಬ್ರುವರಿಗೆ ಬುಲೆಟ್ 350 ಸಿಸಿ ಬೈಕ್


ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯೋರ್ 650 ಬೆಲೆಗಳನ್ನು ಮುಂದಿನ ತಿಂಗಳು ಘೋಷಿಸಲಾಗುವುದು ಮತ್ತು ಫೆಬ್ರವರಿ 2023 ರ ಮಧ್ಯಭಾಗದಲ್ಲಿ ವಿತರಣೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ.


ಪ್ರಮುಖ ಕ್ರೂಸರ್ ಜೊತೆಗೆ, ರಾಯಲ್ ಎನ್‌ಫೀಲ್ಡ್ ಎರಡು ಹೊಸ 350 ಸಿಸಿ ಮೋಟಾರ್‌ಸೈಕಲ್‌ಗಳನ್ನು ತರಲಿದೆ ಎಂದು ಊಹೆ ಮಾಡಲಾಗಿದೆ. ಇನ್ನೂ ಕೆಲವರು 2023ರ ಬುಲೆಟ್ 350 ಬೈಕ್ ಫೆಬ್ರವರಿಯಲ್ಲಿ ಸುಮಾರು 1.80 ಲಕ್ಷ ರೂ (ಎಕ್ಸ್ ಶೋ ರೂಂ) ಬೆಲೆಗೆ ಬಿಡುಗಡೆ ಆಗುವ ನಿರೀಕ್ಷೆಯಿದೆ ಎಂದಿದ್ದಾರೆ.


ಈ ವರ್ಷ ಬಿಡುಗಡೆಯಾದ ಹಂಟರ್ 350 ಸೃಷ್ಟಿಸಿದ ಹೈಪ್‌ ಅನ್ನು ಬಂಡವಾಳವಾಗಿಟ್ಟುಕೊಂಡ ಚೆನ್ನೈ ಮೂಲದ ತಯಾರಕರು 2023ರ ಮಧ್ಯದದ ವೇಳೆಗೆ ಹೊಸ ಪೀಳಿಗೆಯ ಬುಲೆಟ್ 350 ಅನ್ನು ಪರಿಚಯಿಸುವ ಸಾಧ್ಯತೆಯಿದೆ ಇದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ಹೊಸವರ್ಷದ ಸಂಭ್ರಮದಲ್ಲಿ ಬಿಡುಗಡೆಯಾಗ್ತಿದೆ ರೆಡ್​ಮಿ ಇಯರ್​ಬಡ್ಸ್​! ಇದ್ರ ಫೀಚರ್ಸ್​ಗೆ ಫಿದಾ ಆಗ್ತೀರಾ


ಹೊಸ ತಲೆಮಾರಿನ ಬುಲೆಟ್ 350 ಈಗಾಗಲೇ ಅದರ ಉತ್ಪಾದನೆಯ ಸಮೀಪದಲ್ಲಿ ಹಲವು ಬಾರಿ ಪರೀಕ್ಷಿಸಲ್ಪಟ್ಟಿದೆ. ಇದು 2023 ರ ಮಧ್ಯದ ಮೊದಲು ಶೋರೂಮ್‌ಗಳನ್ನು ತಲುಪಬಹುದು ಮತ್ತು ಇದು ಬ್ರ್ಯಾಂಡ್‌ನಿಂದ ಮಾಡಲಾಗುತ್ತಿರುವ ಪ್ರಮುಖ ಬಿಡುಗಡೆಗಳಲ್ಲಿ ಒಂದಾಗಿದೆ.


ಹಲವಾರು ಪರಿಷ್ಕರಣೆ


ಟೆಸ್ಟ್‌ ಡ್ರೈವ್‌ ಸಮಯದಲ್ಲಿ ಫೋಟೋಗಳು ಕ್ಯಾಮೆರಾಗೆ ಸೆರೆಯಾಗಿವೆ. ಅಲ್ಲದೇ ಬೈಕ್ ಉತ್ಪಾದನಾ ಸ್ಥಿತಿಗೆ ಸಮೀಪದಲ್ಲಿದೆ ಮತ್ತು ಮೋಟಾರ್ಸೈಕಲ್ ಹಲವಾರು ಪರಿಷ್ಕರಣೆಗಳಿಗೆ ಒಳಪಟ್ಟಿರುತ್ತದೆ ಎಂದು ಮೂಲಗಳು ತಿಳಿಸಿವೆ.


ವೈಶಿಷ್ಟ್ಯತೆಗಳು ಏನಿರಬಹುದು?


ಕ್ಲಾಸಿಕ್, ಹಂಟರ್‌ ಬೈಕ್‌ನಲ್ಲಿ ಕಂಡು ಬರುವ ಹಾಗೆ ಡಬಲ್ ಕ್ರೇಡಲ್ ಫ್ರೇಮ್‌ನಿಂದ ಇದು ವಿನ್ಯಾಸಗೊಂಡಿದೆ. ಬುಲೆಟ್ 350 ಪ್ರಸ್ತುತ ಬ್ರ್ಯಾಂಡ್‌ನ ಅತ್ಯಂತ ಕೈಗೆಟುಕುವ ಕೊಡುಗೆಯಾಗಿದೆ. ಪ್ರಸ್ತುತಪಡಿಸಲಾಗುವ ಬದಲಾವಣೆಗಳ ಹೊರತಾಗಿಯೂ ಬೈಕ್‌ನ ಬೆಲೆ ಅಗ್ಗವಾಗದೆ.


Is Royal Enfield going to launch a new bike, What is the price of Bullet new model 2023, Which is the best Royal Enfield bike 2023, Which bullet is expensive, Is Enfield a good investment, kannada news, karnataka news, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, 2023ರ ಹೊತ್ತಿಗೆ ಹೊಸ ಬೈಕ್​ ಬರಲಿದ್ಯಾ, ರಾಯಲ್​ ಎನ್ಫೀಲ್ಡ್​ ಮಾರುಕಟ್ಟೆಗೆ ಬರಲಿದ್ಯಾ, ಹೊಸ ವರ್ಷಕ್ಕೆ ಹೊಸ ಬೈಕ್​ ಬರುತ್ತಾ,
ರಾಯಲ್​ ಎನ್ಫೀಲ್ಡ್​


* ಈ ಹೊಸ ಬೈಕ್‌ 349 cc ಸಿಂಗಲ್-ಸಿಲಿಂಡರ್ SOHC ಏರ್ ಮತ್ತು ಆಯಿಲ್-ಕೂಲ್ಡ್ ಎಂಜಿನ್ ಅನ್ನು 20.2 bhp ಮತ್ತು 27 Nm ಪೀಕ್ ಗರಿಷ್ಠ ಶಕ್ತಿಯ ಉತ್ಪಾದನೆಯನ್ನು ಒಳಗೊಂಡಿದೆ.
* ಇದು ಐದು-ವೇಗದ ಗೇರುಗಳನ್ನು ಹೊಂದಿದೆ.
* ಜಾವಾ 42 ಬಾಬರ್ ಮತ್ತು ಜಾವಾ ಪೆರಾಕ್ ವಿರುದ್ಧ ಸ್ಪರ್ಧಿಸಲು ರಾಯಲ್ ಎನ್‌ಫೀಲ್ಡ್ ಮುಂದಿನ ವರ್ಷ ಕ್ಲಾಸಿಕ್ 350 ನ ಸಿಂಗಲ್-ಸೀಟರ್ ಆವೃತ್ತಿಯನ್ನು ಪರಿಚಯಿಸಬಹುದು.
* 2023 ರಲ್ಲಿ, RE 450 cc ಡ್ಯುಯಲ್-ಪರ್ಪಸ್ ಅಡ್ವೆಂಚರ್ ಟೂರರ್ ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

First published: