HOME » NEWS » Tech » ROYAL ENFIELD METEOR 350 LAUNCH BECAUSE REPLACE THE ICONIC THUNDERBIRD 350 BIKE CHECK NEW METEOR BIKE PRICE AND OTHER DETAILS HERE HG

Meteor 350: ರಾಯಲ್​ ಎನ್​ಫೀಲ್ಡ್​ ಮೆಟಿಯೋರ್​ 350 ಬೈಕ್​ ಮಾರುಕಟ್ಟೆಗೆ; ಬೆಲೆ, ಫೀಚರ್ ಬಗ್ಗೆ ಇಲ್ಲಿದೆ ಮಾಹಿತಿ

Royal Enfield Meteor 350: ರಾಯಲ್​ ಎನ್​ಫೀಲ್ಡ್​ ಮೆಟಿಯೋರ್​ 350 ಬೈಕ್​ ಅನ್ನು ಫೈರ್​ಬಾಲ್​, ಸ್ಟೆಲ್ಲರ್​ ಮತ್ತು ಸೂಪರ್​ನೋವಾ ವೇರಿಯಂಟ್​ನಲ್ಲಿ ಪರಿಚಯಿಸಿದೆ.

news18-kannada
Updated:November 6, 2020, 4:56 PM IST
Meteor 350: ರಾಯಲ್​ ಎನ್​ಫೀಲ್ಡ್​ ಮೆಟಿಯೋರ್​ 350 ಬೈಕ್​ ಮಾರುಕಟ್ಟೆಗೆ; ಬೆಲೆ, ಫೀಚರ್ ಬಗ್ಗೆ ಇಲ್ಲಿದೆ ಮಾಹಿತಿ
ಮೆಟಿಯೋರ್​ 350
  • Share this:
ಯುವಕರ ಫೇವರೆಟ್​ ಬೇಕ್​ ಕಂಪನಿಯಾದ ರಾಯಲ್​ ಎನ್​ಫೀಲ್ಡ್​​ ಥಂಡರ್​ಬರ್ಡ್​ 350 ಬೈಕ್​ಗೆ ಬದಲಾಗಿ ಮೆಟಿಯೋರ್​ 350 ಹೆಸರಿನ ಬೈಕ್​ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಬೈಕ್​ ಆಕರ್ಷಕ ಲುಕ್ ಹಾಗೂ ಕಣ್ಣು ಕುಕ್ಕುವ ಬಣ್ಣದಿಂದ ಕೂಡಿದ್ದು, ಮೂರು ವೆರಿಯಂಟ್​ಗಳಲ್ಲಿ ಗ್ರಾಹಕರಿಗೆ ಸಿಗುತ್ತಿದೆ. ರಾಯಲ್​ ಎನ್​ಫೀಲ್ಡ್​ ಮೆಟಿಯೋರ್​ 350 ಬೈಕ್​ ಅನ್ನು ಫೈರ್​ಬಾಲ್​, ಸ್ಟೆಲ್ಲರ್​ ಮತ್ತು ಸೂಪರ್​ನೋವಾ ವೇರಿಯಂಟ್​ನಲ್ಲಿ ಪರಿಚಯಿಸಿದೆ. ಮೆಟಿಯೋರ್​ ಬೈಕ್​ನಲ್ಲಿ 15 ಲೀಟರ್​ ಟ್ಯಾಂಕ್​ ನೀಡಲಾಗಿದೆ. 1400ಎಮ್​ಎಮ್​ ವೀಲ್​ಬೇಸ್​ ಹೊಂದಿರುವ ಈ ಬೈಕ್​ 765ಎಮ್​ಎಮ್​ ಸೀಟ್​ಹೈಟ್​ಯಿದೆ.

ಸಿಂಗರ್​ ಸಿಲಿಂಡರ್​ 349ಸಿಸಿ ಹೊಂದಿರುವ ಮೆಟಿಯೋರ್​ 4 ಸ್ಟ್ರೋಕ್​​ ಎಂಜಿನ್​ ಹೊಂದಿದ್ದು, ಏರ್​ ಕೂಲ್ಡ್​ ಎಂಜಿನ್​ ಪೀಕ್​ ಪವರ್​ ಉತ್ಪಾದಿಸುತ್ತದೆ. ಕಂಪನಿ 20.2ಬಿಹೆಚ್​ಪಿ@6100ಆರ್​ಪಿಎಮ್​ ಪೀಕ್​ ಪವರ್​ ನೀಡುತ್ತದೆ ಎಂದು ತಿಳಿಸಿದೆ. ಇನ್ನು 5 ಸ್ಪೀಡ್​ ಗೇರ್​ ಬಾಕ್ಸ್​ಹೊಂದಿದೆ.

ಇನ್ನು ಅಲಾಯ್​ ವೀಲ್​ಗಳನ್ನು ಹೊಂದಿದ್ದು, ಮುಂಭಾಗದಲ್ಲಿ 300ಎಮ್​ಎಮ್​ ಡಿಸ್ಕ್​ ಬ್ರೇಕ್​ ನೀಡಲಾಗಿದೆ. ಜೊತೆಗೆ 270 ಎಮ್​ಎಮ್​ ಡಿಸ್ಕ್​ ಜೊತೆಗೆ ಸಿಂಗಲ್​ ಫ್ಲೊಟಿಂಗ್​ ಕಾಲಿಪರ್​ ನೀಡಲಾಗಿದೆ.

Royal enfield meteor 350


ನೂತನ ಬೈಕಿನ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಭಾರತದಲ್ಲಿಯೇ ಮಾಡಲಾಗಿದೆ. ಚೆನ್ನೈ, ತಮಿಳುನಾಡು ಮತ್ತು ಬ್ರಂಟಿಂಗ್ಥೋರ್ಪ್ (ಯುಕೆ) ಟೆಕ್ನಿಕಲ್​ ಸೆಂಟರ್​ನಲ್ಲಿ ತಯಾರಿಸಲಾಗಿದೆ.

ಚಾಲನೆ ವೇಳೆ ಆನಂದದಾಯಕ ಅನುಭವ ನೀಡುವ ಮೆಟಿಯೋರ್​ನಲ್ಲಿ ಟಿಪ್ಪರ್​ ನ್ಯಾವಿಗೇಶನ್​ ಸಿಸ್ಟಂ ಅಳವಡಿಸಲಾಗಿದೆ. ಗೂಗಲ್​ ಮ್ಯಾಪ್​​ ಮತ್ತು ರಾಯಲ್​ ಎನ್​ಫೀಲ್ಡ್​ ಆ್ಯಪ್​​ ಮೂಲಕ ಸ್ಮಾರ್ಟ್​ಫೋನಿಗೆ ಕನೆಕ್ಟ್​ ಮಾಡಿಕೊಂಡು ಬಳಸಬಹುದಾಗಿದೆ. ಜೊತೆಗೆ ಯುಎಸ್​ಬಿ ಚಾರ್ಜಿಂಗ್​ ಪೋರ್ಟ್​ ನೀಡಲಾಗಿದೆ.
ಗ್ರಾಹಕರಿಗಾಗಿ ಮೆಟಿಯೋರ್​ 350 ಬೈಕ್​​ ಫೈರ್​ಬಾಲ್ ಹಳದಿ, ಫೈರ್​ಬಾಲ್​​ ಕೆಂಪು, ಸ್ಟೆಲ್ಲರ್​ ನೀಲಿ, ಸ್ಟೆಲ್ಲರ್​ ಕಪ್ಪು, ಸೂಪರ್​ನೋವಾ ಕಂದು, ಸೂಪರ್​ನೋವಾ ನೀಲಿ ಬಣ್ಣದಲ್ಲಿ ಸಿಗಲಿದೆ.

ಬೆಲೆ: ರಾಯಲ್​ ಎನ್​ಫೀಲ್ಡ್​ ಪರಿಚಯಿಸಿರುವ ಮೆಟಿಯೋರ್​ 350 ಬೈಕ್​ ಬೆಲೆ 1,75,825 ರೂ. ಆಗಿದೆ. ಸ್ಟೆಲ್ಲರ್​ ವೆರಿಯಂಟ್​ ಬೈಕ್​ 1,81,342 ರೂ. ಆಗಿದ್ದರೆ,  ಸೂಪರ್​ ನೋವಾ 1,90,536  ರೂ.ಗೆ ಖರೀದಿಗೆ ಸಿಗಲಿದೆ
Published by: Harshith AS
First published: November 6, 2020, 4:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories