Bike: ರಾಯಲ್ ಎನ್‌ಫೀಲ್ಡ್ ಹಂಟರ್ 350 v/s ಹೋಂಡಾ CB350RS v/s TVS ರೋನಿನ್​ನಲ್ಲಿ ಬೆಸ್ಟ್​ ಯಾವುದು?

ಹಂಟರ್ 350 ಆಗಸ್ಟ್ 7 ರಂದು ಬಿಡುಗಡೆ ಆಗಿದ್ದು, ಇದರ ಬೆಲೆ ಬರೊಬ್ಬರಿ ರೂ. 1.49 ಲಕ್ಷ ಎಂದು ರಾಯಲ್‌ ಸಂಸ್ಥೆ ತಿಳಿಸಿದೆ. ಈ ಬೈಕ್‌ನ ಕಾಂಪ್ಯಾಕ್ಟ್ ಅನುಪಾತಗಳು ಮತ್ತು ನಿಯೋ-ರೆಟ್ರೊ (Neo-retro) ಪ್ರೊಫೈಲ್‌ನ ಪ್ರಕಾರ, “ರಾಯಲ್‌ ಹಂಟರ್ 350 (Royal Hunter 350) ಪ್ರಾಥಮಿಕವಾಗಿ ಯುವ ಜನತೆಯನ್ನು ಗುರಿಯನ್ನಾಗಿಸಿ ಈ ಬೈಕ್‌ (Bike) ಅನ್ನು ನಿರ್ಮಾಣ ಮಾಡಿದೆ. ಈ ಬೈಕ್‌ಗೆ ಪ್ರತಿಸ್ಪರ್ಧಿ ಆಗಿರುವ ಯಾವ ಯಾವ ಬೈಕ್‌ಗಳು ಬಂದಿವೆ, ಅವುಗಳು ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿವೆ ಎಂಬುದನ್ನು ಈ ಲೇಖನದಲ್ಲಿ ಇಂದು ತಿಳಿಯೋಣ ಬನ್ನಿ.

ರಾಯಲ್ ಎನ್‌ಫೀಲ್ಡ್ ಹಂಟರ್ 350 ವರ್ಸಸ್ ಹೋಂಡಾ CB350RS ವರ್ಸಸ್ TVS ರೋನಿನ್

ರಾಯಲ್ ಎನ್‌ಫೀಲ್ಡ್ ಹಂಟರ್ 350 ವರ್ಸಸ್ ಹೋಂಡಾ CB350RS ವರ್ಸಸ್ TVS ರೋನಿನ್

  • Share this:
ಇಲ್ಲಿಯವರೆಗಿನ ಅತ್ಯಂತ ಅಥ್ಲೆಟಿಕ್ ರಾಯಲ್ ಎನ್‌ಫೀಲ್ಡ್ ಬೈಕ್‌ (Athletic Royal Enfield Bike), ಹಂಟರ್ 350 ಆಗಸ್ಟ್ 7 ರಂದು ಬಿಡುಗಡೆ ಆಗಿದ್ದು, ಇದರ ಬೆಲೆ ಬರೊಬ್ಬರಿ ರೂ. 1.49 ಲಕ್ಷ ಎಂದು ರಾಯಲ್‌ ಸಂಸ್ಥೆ ತಿಳಿಸಿದೆ. ಈ ಬೈಕ್‌ನ ಕಾಂಪ್ಯಾಕ್ಟ್ ಅನುಪಾತಗಳು ಮತ್ತು ನಿಯೋ-ರೆಟ್ರೊ (Neo-retro) ಪ್ರೊಫೈಲ್‌ನ ಪ್ರಕಾರ, “ರಾಯಲ್‌ ಹಂಟರ್ 350 (Royal Hunter 350) ಪ್ರಾಥಮಿಕವಾಗಿ ಯುವ ಜನತೆಯನ್ನು ಗುರಿಯನ್ನಾಗಿಸಿ ಈ ಬೈಕ್‌ (Bike) ಅನ್ನು ನಿರ್ಮಾಣ ಮಾಡಿದೆ. ಈ ಬೈಕ್‌ಗೆ ಪ್ರತಿಸ್ಪರ್ಧಿ ಆಗಿರುವ ಯಾವ ಯಾವ ಬೈಕ್‌ಗಳು ಬಂದಿವೆ, ಅವುಗಳು ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿವೆ ಎಂಬುದನ್ನು ಈ ಲೇಖನದಲ್ಲಿ ಇಂದು ತಿಳಿಯೋಣ ಬನ್ನಿ.

ರಾಯಲ್ ಎನ್‌ಫೀಲ್ಡ್ ಹಂಟರ್ 350 ವರ್ಸಸ್ ಹೋಂಡಾ CB350RS ವರ್ಸಸ್ TVS ರೋನಿನ್ ಹೋಲಿಕೆಗಳು:
ಈ ಎಲ್ಲಾ ಮೂರು ಬೈಕ್‌ಗಳು ರೆಟ್ರೊ ಸ್ಟೈಲಿಂಗ್ ವಿನ್ಯಾಸವನ್ನು ಹೊಂದಿವೆ. ಈ ಸ್ಟೈಲ್‌ - ರೌಂಡ್ ಹೆಡ್‌ಲ್ಯಾಂಪ್, ವೃತ್ತಾಕಾರದ ಹಿಂಬದಿ ಕನ್ನಡಿಗಳು ಮತ್ತು ಟಿಯರ್-ಡ್ರಾಪ್ ಆಕಾರದ ಇಂಧನ ಟ್ಯಾಂಕ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಅದಕ್ಕೆ ಹೊರತಾಗಿ, ಈ ಬೈಕ್‌ಗಳು ವಿಶಿಷ್ಟವಾದ ವೈಶಿಷ್ಠ್ಯಗಳನ್ನು ಹೊಂದಿದ್ದು ಅವು ನೋಡಲು ಅತ್ಯಂತ ಸುಂದರ ಆಗಿದ್ದು, ಅವುಗಳನ್ನು ಒಮ್ಮೆ ನೋಡಿದರೆ ಸಾಕು ನಮ್ಮಲ್ಲಿ ಇದ್ದರೆ ಇಂತಹ ಬೈಕ್‌ ಎಂಬ ಭಾವನೆಯನ್ನು ಹುಟ್ಟು ಹಾಕುತ್ತವೆ.

ಇದನ್ನೂ ಓದಿ:  Cheapest Automatic Car: ಕೇವಲ 4 ಲಕ್ಷಕ್ಕೆ ಖರೀದಿಸಿ 21 Km ಮೈಲೇಜ್​ ನೀಡುವ ಈ ಆಟೋಮ್ಯಾಟಿಕ್​ ಕಾರು!

ಹಂಟರ್ 350 ಮತ್ತು TVS ರೋನಿನ್ ಒಂದೇ ವೈಶಿಷ್ಟ್ಯಗಳನ್ನು ಹೊಂದಿವೆ. ಏಕೆಂದರೆ, ಇವು ಸಂಪೂರ್ಣವಾಗಿ ಹೊಸ ಮಾದರಿಯ ಬೈಕ್‌ಗಳಾಗಿವೆ. ಬೈಕ್‌ನ ವಿನ್ಯಾಸದಲ್ಲಿ ಹೊಸತನ ಇರುವುದರಿಂದ, ಮಾರಾಟದಲ್ಲಿ ಹೆಚ್ಚಳ ಕಾಣುವ ನಿರೀಕ್ಷೆಯನ್ನು ಈ ಬೈಕ್‌ ಸಂಸ್ಥೆಗಳು ಹೊಂದಿವೆ. ಈ ಎಲ್ಲಾ ಮೂರು ಬೈಕ್‌ಗಳು ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿವೆ. ಹಂಟರ್ 350 ಮತ್ತು TVS ರೋನಿನ್ ಜೊತೆಗೆ ವೈಯಕ್ತೀಕರಣ ಆಯ್ಕೆಗಳು ಲಭ್ಯವಿದೆ.

ಈ ಮೂರು ಬೈಕ್‌ಗಳ ಕೆಲವು ವ್ಯತ್ಯಾಸಗಳು ಇಲ್ಲಿವೆ:

  • ಹಂಟರ್ ಕ್ಲಾಸಿಕ್ 350 ಬೈಕ್‌ ಮೆಟಿಯೋರ್ 350 ಜೊತೆಗೆ ಬಳಕೆಯಲ್ಲಿರುವ 349cc ಏರ್ ಕೂಲ್ಡ್ ಮೋಟಾರ್ ಅನ್ನು ಬಳಸುತ್ತದೆ. ಇದು 6,100 rpm ನಲ್ಲಿ 20.2 hp ಗರಿಷ್ಠ ಶಕ್ತಿಯನ್ನು ಮತ್ತು 4,000 rpm ನಲ್ಲಿ 27 Nm ಪೀಕ್ ಟಾರ್ಕ್ ಅನ್ನು ನೀಡುತ್ತದೆ.

  • TVS ರೋನಿನ್ ಟಿಡಿ ಈ ಮೂರು ಬೈಕ್‌ಗಳಲ್ಲಿ ಚಿಕ್ಕ ಸಾಮರ್ಥ್ಯದ ಎಂಜಿನ್ ಹೊಂದಿದೆ. ಆದರೆ, ವಿದ್ಯುತ್ ಉತ್ಪಾದನೆಯು ಹಂಟರ್ 350 ಮತ್ತು ಹೋಂಡಾ CB350RS ಗೆ ಸಮನಾಗಿರುತ್ತದೆ. ರೋನಿನ್ 225.9cc ಏರ್ ಮತ್ತು ಆಯಿಲ್ ಕೂಲ್ಡ್ ಮೋಟರ್ ಅನ್ನು ಹೊಂದಿದ್ದು ಅದು 7,750 rpm ನಲ್ಲಿ 20.1 hp ಮತ್ತು 3,750 rpm ನಲ್ಲಿ 19.93 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.


ಇದನ್ನೂ ಓದಿ: Royal Enfield Hunter 350: ಭಾರಿ ಸೌಂಡ್​ ಮಾಡುತ್ತಿದೆ ಹಂಟರ್​ 350 ಬೈಕ್​! ಬೆಲೆ ಎಷ್ಟು? ಇಲ್ಲಿದೆ ವಿವರ

  • ಹೋಂಡಾ CB350RS ಬೈಕ್‌ 5,500 rpm ನಲ್ಲಿ 20.7 hp ಮತ್ತು 3,000 rpm ನಲ್ಲಿ 30 Nm ಟಾರ್ಕ್ ಅನ್ನು ಹೊರಹಾಕುವ 348cc, ಏರ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದೆ. ಹೋಂಡಾ CB350RS ಈ ಮೂರು ಬೈಕ್‌ನ ಗುಂಪಿನಲ್ಲಿ ಅತ್ಯಧಿಕ ಟಾರ್ಕ್ ಉತ್ಪಾದನೆಯನ್ನು ಹೊಂದಿದೆ.

  • ಈ ಮೂರು ಬೈಕ್ ಗಳು 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿವೆ. ಆದರೆ CB350RS ಮತ್ತು ರೋನಿನ್ ಈ ಎರಡು ಬೈಕುಗಳು ಸ್ಲಿಪ್ಪರ್ ಕ್ಲಚ್ ಅನ್ನು ಹೊಂದಿರುವುದರಿಂದ ಇವೆರಡು ಬೈಕ್‌ಗಳ ಡ್ರೈವ್ ಅನುಭವವು ಬೆಸ್ಟ್‌ ಆಗಿರುತ್ತದೆ.

Published by:Ashwini Prabhu
First published: