Royal Enfield Hunter 350: ಭಾರಿ ಸೌಂಡ್​ ಮಾಡುತ್ತಿದೆ ಹಂಟರ್​ 350 ಬೈಕ್​! ಬೆಲೆ ಎಷ್ಟು? ಇಲ್ಲಿದೆ ವಿವರ

ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಹೊಸ ಬೈಕ್‌ಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ವಿಭಾಗಗಳಲ್ಲಿ ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್‌ನ ಉಪಸ್ಥಿತಿಯನ್ನು ಬಲಪಡಿಸಲು ನೆರವಾಗುತ್ತದೆ. ಈ ರಾಯಲ್‌ ಎನ್‌ಫೀಲ್ಡ್‌ನ ಹೊಸ ಬೈಕ್‌ ಯಾವುದು? ಅದರ ಬೆಲೆ ಎಷ್ಟು? ಅದರ ಗಾತ್ರ, ಅದರ ಮೈಲೆಜ್‌? ಎಲ್ಲ ವಿವರವನ್ನು ಇಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ.

ರಾಯಲ್‌ ಎನ್‌ಫಿಲ್ಡ್‌ ಹಂಟರ್‌ 350

ರಾಯಲ್‌ ಎನ್‌ಫಿಲ್ಡ್‌ ಹಂಟರ್‌ 350

  • Share this:
ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ (Royal Enfield) ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಹೊಸ ಬೈಕ್‌ಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ (Indian Market) ವಿವಿಧ ವಿಭಾಗಗಳಲ್ಲಿ ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್‌ನ ಉಪಸ್ಥಿತಿಯನ್ನು ಬಲಪಡಿಸಲು ನೆರವಾಗುತ್ತದೆ. ಈ ರಾಯಲ್‌ ಎನ್‌ಫೀಲ್ಡ್‌ನ ಹೊಸ ಬೈಕ್‌ ಯಾವುದು? ಅದರ ಬೆಲೆ ಎಷ್ಟು? ಅದರ ಗಾತ್ರ, ಅದರ ಮೈಲೆಜ್‌ (Mileage)? ಎಲ್ಲ ವಿವರವನ್ನು ಇಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ. ಈಗ ರಾಯಲ್ ಎನ್‍ಫೀಲ್ಡ್ ಕಂಪನಿಯು ಬಿಡುಗಡೆಗೊಳಿಸಿರುವ ಮಾದರಿಗಳಲ್ಲಿ ಹೊಸ ಬೈಕ್‌ ಹಂಟರ್ 350 (Hunter 350) ಕೂಡ ಒಳಗೊಂಡಿದೆ. ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ ಸೈಕಲ್ ದೇಶದಲ್ಲಿ ಅತ್ಯಂತ ಕೈಗೆಟುಕುವ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಆಗುವ ನಿರೀಕ್ಷೆಯಿದೆ.

ಇದರ ಬೆಲೆ ಎಷ್ಟು?
ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಬಹುನೀರಿಕ್ಷಿತ ಹಂಟರ್ 350 ಮಾದರಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಹೊಸ ಮೋಟಾರ್‌ಸೈಕಲ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.50 ಲಕ್ಷ ಬೆಲೆ ಹೊಂದಿದೆ.

ರಾಯಲ್‌ ಹಂಟರ್‌ 350 ಮೋಟಾರ್‌ಸೈಕಲ್ ವಿಭಾಗದಲ್ಲಿ ಇದು ಅತ್ಯುತ್ತಮ ಬೈಕ್ ಮಾದರಿಯಾಗಿದೆ ಎಂದಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು, ಪ್ರತಿಸ್ಪರ್ಧಿಗಳಿಗೆ ಪೈಪೋಟಿಯಾಗಿ ಬಿಡುಗಡೆ ಮಾಡಿದ್ದು, ಇದು ಯುವ ಗ್ರಾಹಕರ ಹಾಟ್ ಫೇವರಿಟ್ ಮಾದರಿಯಾಗುವ ವಿಶ್ವಾಸ ವ್ಯಕ್ತಪಡಿಸಿದೆ.

ಈ ಹೊಸ ಬೈಕ್‌ನ ಫೀಚರ್ಸ್‌ಗಳೇನು?
ಹೊಸ ಹಂಟರ್ ಬೈಕ್ ಮಾದರಿಯು ಮಿಟಿಯೊರ್ 350 ಮತ್ತು ಕ್ಲಾಸಿಕ್ 350 ಮಾದರಿಯಲ್ಲಿರುವಂತೆಯೇ 349 ಸಿಸಿ ಸಿಂಗಲ್ ಸಿಲಿಂಡರ್, ಟು ವಾಲ್ವ್, ಎಸ್‌ಓಹೆಚ್‌ಸಿ ಫ್ಯೂಲ್ ಇಂಜೆಕ್ಷೆನ್ ಎಂಜಿನ್ ಹೊಂದಿದ್ದು, ಈ ಹೊಸ ಬೈಕ್ 5-ಸ್ಪೀಡ್ ಗೇರ್‌ಬಾಕ್ಸ್ ಮೂಲಕ 20.2 ಬಿಹೆಚ್‌ಪಿ ಪವರ್ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ:  Cheapest Automatic Car: ಕೇವಲ 4 ಲಕ್ಷಕ್ಕೆ ಖರೀದಿಸಿ 21 Km ಮೈಲೇಜ್​ ನೀಡುವ ಈ ಆಟೋಮ್ಯಾಟಿಕ್​ ಕಾರು!

ಈ ಬೈಕ್‌ನ ಮೈಲೇಜ್‌ ಎಷ್ಟಿರಬಹುದು?
ಹಂಟರ್ ಬೈಕ್ ಮಾದರಿಯು ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಇತರೆ ಮೋಟಾರ್‌ಸೈಕಲ್‌ಗಳಿಂತಲೂ ತುಸು ಹಗುರವಾಗಿದ್ದು, ಪ್ರತಿ ಗಂಟೆಗೆ 114 ಕಿ.ಮೀ ಟಾಪ್ ಸ್ಪೀಡ್ ಮೂಲಕ ಪ್ರತಿ ಲೀಟರ್‌ಗೆ ಗರಿಷ್ಠ 36.1 ಕಿ.ಮೀ ಇಂಧನ ದಕ್ಷತೆ ಖಾತ್ರಿಪಡಿಸುತ್ತದೆ.

ಈ ಬೈಕ್‌ನ ಗಾತ್ರ ಏನು?
ಇನ್ನು ಕ್ಲಾಸಿಕ್ 350 ಬೈಕಿಗೆ ಹೋಲಿಸಿದರೆ ಹಂಟರ್ ಬೈಕ್ ಮಾದರಿಯು 90 ಎಂಎಂ ಉದ್ದ ಮತ್ತು 35 ಎಂಎಂ ಎತ್ತರದಲ್ಲಿ ಕಡಿಮೆಯಿದ್ದು, 15 ಎಂಎಂ ನಷ್ಟು ಹೆಚ್ಚು ಅಗಲವಾಗಿರುತ್ತದೆ. ಇದರ ವೀಲ್ಹ್ ಬೇಸ್ ಉದ್ದವು ಕ್ಲಾಸಿಕ್‌ಗಿಂತಲೂ 20 ಎಂಎಂ ಉದ್ದವಾಗಿದ್ದು, 181 ಕೆಜಿಯಷ್ಟು ಭಾರವಾಗಿರಲಿದೆ.

ಈ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಒಟ್ಟಾರೆ ಉದ್ದ 2,055 ಎಂಎಂ, 800 ಎಂಎಂ ಅಗಲ ಮತ್ತು 1,055 ಎಂಎಂ ಎತ್ತರವನ್ನು ಹೊಂದಿದ್ದು, ವೀಲ್‌ಬೇಸ್ ಉದ್ದವು 1,370 ಎಂಎಂ ಮತ್ತು ಒಟ್ಟು ವಾಹನದ ತೂಕ 360 ಕೆಜಿಗಳಷ್ಟಿದೆ. ಈ ಮಿಟಿಯೊರ್ ಬೈಕಿಗೆ ಹೋಲಿಸಿದರೆ, ಹಂಟರ್ 350 ಉದ್ದದಲ್ಲಿ 85 ಎಂಎಂ ಚಿಕ್ಕದಾಗಿದೆ, ಈ ಬೈಕ್ 45 ಎಂಎಂ ಕಿರಿದಾಗಿದೆ ಮತ್ತು 85 ಎಂಎಂ ಎತ್ತರದಲ್ಲಿ ಚಿಕ್ಕದಾಗಿದೆ ಮತ್ತು 30 ಎಂಎಂ ಚಿಕ್ಕದಾದ ವೀಲ್‌ಬೇಸ್ ಉದ್ದವನ್ನು ಹೊಂದಿದೆ.

ಇದನ್ನೂ ಓದಿ:  Alto K10: ಬಿಡುಗಡೆಗೂ ಮುನ್ನವೇ ಸೋರಿಕೆಯಾಯ್ತು ಹೊಸ ಆಲ್ಟೊ K10 ಫೋಟೋಗಳು! ವಿನ್ಯಾಸ ನೋಡಿದ್ರಾ?

ಹೊಸ ಬೈಕ್ ಮಾದರಿಯು 800 ಎಂಎಂ ಸೀಟ್ ಎತ್ತರದೊಂದಿಗೆ 150.5 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್, 13 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದ್ದು, ಮುಂಭಾಗದಲ್ಲಿ 41 ಎನ್ಎಂ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್, ಹಿಂಬದಿಯಲ್ಲಿ 6 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಟ್ವಿನ್ ಶಾಕ್ ಅಬ್ಸಾರ್ಬರ್ ಹೊಂದಿದೆ. ಹಾಗೆಯೇ ಹೊಸ ಬೈಕಿನಲ್ಲಿ 300 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 240-ಎಂಎಂ ರಿಯರ್ ಡಿಸ್ಕ್ ಬ್ರೇಕ್, ಮುಂಭಾಗದಲ್ಲಿ 110/70 17-ಇಂಚಿನ ಟೈರ್ ಮತ್ತು ಹಿಂಬದಿಯಲ್ಲಿ 140/70 17-ಇಂಚಿನ ಟೈರ್ ನೀಡಲಾಗಿದ್ದು, ಹೊಸ ಬೈಕಿನಲ್ಲಿ ಒಟ್ಟು ಆರು ಬಣ್ಣಗಳ ಆಯ್ಕೆ ನೀಡಲಾಗಿದೆ.
Published by:Ashwini Prabhu
First published: