Royal Enfield Himalayan 450 ಟೀಸರ್​ ಬಿಡುಗಡೆ; ಯುವಕರ ನಿದ್ದೆ ಕದಿಯಲು ಬರುತ್ತಿದೆ ಆಫ್​​ ರೋಡ್​ ಬೈಕ್​

ಹೊಸ ಹಿಮಾಲಯನ್ ಬೈಕ್​ನಲ್ಲಿ ಕೆಲವೊಂದು ಬದಲಾವಣೆ ಮಾಡಲಿದೆ. ಆದರೆ ವಿನ್ಯಾಸದಲ್ಲೂ ಈ ಬದಲಾವಣೆ ಇದೆಯಾ ಎಂದು ಕಾದುನೋಡಬೇಕಿದೆ. ಮುಂದಿನ ವರ್ಷ ನೂತನ ಬೈಕ್​ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಇದೀಗ ಅಧಿಕೃತವಾಗಿ ಹೊಸ ಬೈಕ್​ನ ಇಂಟ್ರಸ್ಟಿಂಗ್​ ಸುದ್ದಿಗಳು ಹೊರಬಿದ್ದಿವೆ.

ರಾಯಲ್​ ಎನ್​ಫೀಲ್ಡ್​​ ಹಿಮಾಲಯನ್​

ರಾಯಲ್​ ಎನ್​ಫೀಲ್ಡ್​​ ಹಿಮಾಲಯನ್​

 • Share this:
  ಭಾರತೀಯರ ಮನಗೆದ್ದ ಬೈಕ್​ಗಳ ಪಟ್ಟಿಯಲ್ಲಿ ರಾಯಲ್​ ಎನ್​ಫೀಲ್ಡ್​ (Royal Enfield) ಕೂಡ ಒಂದು. ಈಗಾಗಲೇ ಬಹುತೇಕರ ಬಳಿ ಈ ಬೈಕ್​ಗಳಿವೆ. ರಾಯಲ್​ ಎನ್​ಫೀಲ್ಡ್​ ವಿನೂತನ ಮಾದರಿಯಲ್ಲಿ ಬೈಕ್​ಗಳನ್ನು ಪರಿಚಯಿಸಿವೆ. ಅದರಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಬೈಕ್ (Bike)​ ಅಂದರೆ ರಾಯಲ್​ ಎನ್​ಫೀಲ್ಡ್​ ಹಿಮಾಲಯನ್​ (Himalayan). ಈ ಬೈಕ್​ ಮೂಲಕ ಕೇರಳದಿಂದ ಹಿಮಾಲಯದವರೆಗೆ ಬೈಕ್​ ಚಲಾಯಿಸುವವರನ್ನು ಕಾಣಬಹುದಾಗಿದೆ. ಇದೀಗ ಬೈಕ್​ ಕ್ರೇಜ್​ ಇದ್ದವರಿಗಾಗಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 411 ಅನ್ನು ಹೆಚ್ಚು ಶಕ್ತಿಶಾಲಿ 450 ಸಿಸಿ ಮಾದರಿಯೊಂದಿಗೆ ಬದಲಾಯಿಸುವ ನಿರೀಕ್ಷೆಯಿದೆ. ಹೊಸ ಹಿಮಾಲಯ ಬೈಕ್​ ಆಫ್-ರೋಡ್​ಗೆ (Off Road) ಸರಿಹೊಂದುವಂತೆ ಹೆಚ್ಚುವರಿ ಟಾರ್ಕ್ ಅನ್ನು ನೀಡಲಿದೆ. ಅಂದಾಜಿನ ಪ್ರಕಾರ 2023ರಲ್ಲಿ ಈ ನೂತನ ಬೈಕ್​ ಬಿಡುಗಡೆಯಾಗುವ ಸಾಧ್ಯತೆ ಇದೆ.

  ಹೊಸ ಹಿಮಾಲಯನ್ ಬೈಕ್​ನಲ್ಲಿ ಕೆಲವೊಂದು ಬದಲಾವಣೆ ಮಾಡಲಿದೆ. ಆದರೆ ವಿನ್ಯಾಸದಲ್ಲೂ ಈ ಬದಲಾವಣೆ ಇದೆಯಾ ಎಂದು ಕಾದುನೋಡಬೇಕಿದೆ. ಮುಂದಿನ ವರ್ಷ ನೂತನ ಬೈಕ್​ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಇದೀಗ ಅಧಿಕೃತವಾಗಿ ಹೊಸ ಬೈಕ್​ನ ಇಂಟ್ರಸ್ಟಿಂಗ್​ ಸುದ್ದಿಗಳು ಹೊರಬಿದ್ದಿವೆ.

  ಸಖತ್ತಾಗಿದೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450

  ರಾಯಲ್ ಎನ್‌ಫೀಲ್ಡ್ ಕಂಪನಿಯ ಎಂಡಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಹೊಸ ರಾಯಲ್​ ಎನ್​ಫೀಲ್ಡ್​ ಹಿಮಾಲಯನ್​ ಕುರಿತಾದ ಆಸಕ್ತಿದಾಯಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮೊದಲ ನೋಟದಲ್ಲಿ, ಇದು ಲಡಾಖ್ ಪ್ರದೇಶದಲ್ಲಿ ನದಿಯನ್ನು ದಾಟುತ್ತಿರುವಂತೆ ಕಂಡಿದೆ.

  ಸದ್ಯ ಹರಿದಾಡುತ್ತಿರುವ ಮಾಹಿತಿಯಂತೇ, ಹೊಸ ಹಿಮಾಲಯನ್‌ನ ಮೊದಲ ಅಧಿಕೃತ ಟೀಸರ್ ಹೊರ ಬಿದ್ದಿದೆ. ಇದನ್ನು ಹಿಮಾಲಯನ್ 450 ಎಂದು ಕರೆಯಲಾಗುತ್ತದೆ. ಟೀಸರ್ ಮುಂಭಾಗದ ಎಲ್‌ಇಡಿ ಹೆಡ್‌ಲೈಟ್ ಮಾತ್ರ ಕಾಣಿಸುತ್ತಿದೆ. ಚಿತ್ರದಲ್ಲಿ ಹೆಡ್‌ಲ್ಯಾಂಪ್ ಕೌಲ್, ವಿಂಡ್‌ಶೀಲ್ಡ್, ಮುಂಭಾಗದ ವಿನ್ಯಾಸ, ಇಂಧನ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳ ಬದಲಾವಣೆಗಳನನ್ನು ಕಾಣಬಹುದಾಗಿದೆ. ಪ್ರಸ್ತುತ ಮಾಡೆಲ್‌ಗೆ ಹೋಲಿಸಿದರೆ ಹಿಮಾಲಯನ್ 450 ಸ್ಟಬ್ಬಿಯರ್ ಎಕ್ಸಾಸ್ಟ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: JeetX: ಡ್ಯುಯೆಲ್​ ಬ್ಯಾಟರಿಯೊಂದಿಗೆ 200 km ಮೈಲೇಜ್​ ನೀಡುತ್ತೆ ಈ ಎಲೆಕ್ಟ್ರಿಕ್​ ಸ್ಕೂಟರ್​!

  ರಾಯಲ್​ ಎನ್​ಫೀಲ್ಡ್​​ ಹಿಮಾಲಯನ್​ ಬಹುತೇಕರ ಮನಗೆದ್ದ ಬೈಕ್​. ಅದರಲ್ಲಿ ಯುವಕರು ಈ ಬೈಕ್​ಗೆ ಮನಸೋತಿರುವುದು ನಿಜ. ಆಪ್​ ರೋಡ್​ ಮತ್ತು ಜಾಲಿ ರೈಡ್​ಗೆ ಈ ಬೈಕ್​ ಸೂಕ್ತವಾಗಿದೆ. ದೇಶದ ಉದ್ದಗಲಕ್ಕೂ ಈ ಬೈಕ್​ ಸಂಚರಿಸುವ ಸಾಮರ್ಥ್ಯ ಹೊಂದಿದೆ.

  ಇನ್ನು ಹೊಸ ರಾಯಲ್​ ಎನ್​ಫೀಲ್ಡ್​ ಹಿಮಾಲಯನ್​ ಮುಂಭಾಗ ಮತ್ತು ಹಿಂಭಾಗದ ಲಗೇಜ್ ರ್ಯಾಕ್‌ಗಳಂತಹ ವಿಷಯಗಳು ಹೆಚ್ಚಾಗಿ ಒಂದೇ ಆಗಿರುತ್ತವೆ. ಬೈಕ್‌ನ ಪ್ರೊಫೈಲ್‌ಗೆ ಅನುಗುಣವಾಗಿ ಸ್ವಲ್ಪ ವ್ಯತ್ಯಾಸಗಳಿರಬಹುದು. ಆದರೆ ಸ್ಟೆಪ್-ಅಪ್ ಸ್ಪ್ಲಿಟ್ ಸೀಟ್‌ಗಳು ಒಂದೇ ರೀತಿ ಕಾಣುತ್ತವೆ.

  ಹ್ಯಾಂಡಲ್‌ಬಾರ್ ಮತ್ತು ಫುಟ್‌ಪೆಗ್‌ಗಳಿ ಕೂಡ ಹಳೆಯ ಬೈಕ್​ನಲ್ಲಿ ನೀಡಿದಂತಿದೆ. ಆಲ್-ಟೆರೈನ್ ಬೈಕ್ ಆಗಿರುವುದರಿಂದ, ಹೈವೇ ಕ್ರೂಸಿಂಗ್ ಮತ್ತು ಆಫ್-ರೋಡ್ ಟ್ರ್ಯಾಕ್‌ಗಳ ಅಗತ್ಯಗಳನ್ನು ಸಮತೋಲನಗೊಳಿಸುವುದು ವಿನ್ಯಾಸಕರಿಗೆ ಸ್ವಲ್ಪ ಕಷ್ಟ. ಹಿಮಾಲಯವು ವರ್ಷಗಳಲ್ಲಿ ನಿರಂತರ ಸುಧಾರಣೆಗಳನ್ನು ಕಂಡಿದೆ ಮತ್ತು ಹೊಸ 450cc ಮಾದರಿಯೊಂದಿಗೆ ಸವಾರಿ ಸೌಕರ್ಯವು ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಬಹುದು.

  ಇದನ್ನೂ ಓದಿ: Vivo T1 Pro: ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿದೆ ಈ ಸ್ಮಾರ್ಟ್​ಫೋನ್​! ಈ ಚಾನ್ಸ್​ ಮಿಸ್​ ಮಾಡಿದ್ರೆ ಮತ್ತೆಂದೂ ಸಿಗದು


  ಹಿಮಾಲಯನ್ 450 ಎಂಜಿನ್ ಮತ್ತು ವಿಶೇಷಣಗಳು

  ಹೊಸ ಹಿಮಾಲಯನ್ 450cc ಎಂಜಿನ್ ಆಗಿದ್ದು, 40 bhp ಗರಿಷ್ಠ ಶಕ್ತಿ ಮತ್ತು 45 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. KTM 390 ಅಡ್ವೆಂಚರ್ ಮತ್ತು BMW G 310 GS ಗೆ ಹೋಲಿಸಿದರೆ ಇದು ಹೆಚ್ಚು ಶಕ್ತಿಶಾಲಿ ಯಂತ್ರವಾಗಿದೆ. ಅದರ ಪ್ರಸ್ತುತ ರೂಪದಲ್ಲಿ, ಹಿಮಾಲಯವು ಸಾಧಾರಣ 24.3 bhp ಮತ್ತು 32 Nm ಅನ್ನು ಉತ್ಪಾದಿಸುತ್ತದೆ. ಮತ್ತೊಂದು ಪ್ರಮುಖ ಅಪ್ಡೇಟ್ 6-ಸ್ಪೀಡ್ ಟ್ರಾನ್ಸ್ಮಿಷನ್ ಆಗಿದ್ದು, ಅಸ್ತಿತ್ವದಲ್ಲಿರುವ 5-ಸ್ಪೀಡ್ ಅನ್ನು ಬದಲಿಸುತ್ತದೆ.

  ಹೊಸ ಹಿಮಾಲಯನ್ 450 ಹೆಚ್ಚಿನ ವೇಗದಲ್ಲಿ ಉತ್ತಮ ನಿರ್ವಹಣೆ ಮತ್ತು ನಿಯಂತ್ರಣವನ್ನು ಹೊಂದಿರುತ್ತದೆ. ಹಿಂಭಾಗದಲ್ಲಿ, ಬೈಕ್ ಮೊನೊಶಾಕ್ ಸಸ್ಪೆನ್ಶನ್ ಅನ್ನು ಹೊಂದಿರುತ್ತದೆ. 21-ಇಂಚಿನ ಮುಂಭಾಗ ಮತ್ತು 17-ಇಂಚಿನ ಹಿಂಭಾಗದ ಚಕ್ರಗಳಲ್ಲಿ ಸವಾರಿ ಮಾಡುವುದರಿಂದ, ಹೊಸ ಹಿಮಾಲಯನ್ 450 ಪ್ರಸ್ತುತ ಮಾದರಿಗೆ ಆಯಾಮವಾಗಿ ಹೋಲುತ್ತದೆ.
  Published by:Harshith AS
  First published: