'ರಾಯಲ್ ಎನ್​ಫೀಲ್ಡ್'-ಕ್ಲಾಸಿಕ್ 500 ಪೆಗಾಸಸ್; ಜುಲೈ 25ರಿಂದ ಬುಕ್ಕಿಂಗ್ ಆರಂಭ

news18
Updated:July 24, 2018, 4:46 PM IST
'ರಾಯಲ್ ಎನ್​ಫೀಲ್ಡ್'-ಕ್ಲಾಸಿಕ್ 500 ಪೆಗಾಸಸ್; ಜುಲೈ 25ರಿಂದ ಬುಕ್ಕಿಂಗ್ ಆರಂಭ
news18
Updated: July 24, 2018, 4:46 PM IST
-ನ್ಯೂಸ್ 18 ಕನ್ನಡ

ಜನಪ್ರಿಯ ಬೈಕ್ ತಯಾರಿಕಾ ಕಂಪನಿ ರಾಯಲ್ ಎನ್​ಫೀಲ್ಡ್​ ತನ್ನ ಹೊಸ ಮಾಡೆಲ್​ ಕ್ಲಾಸಿಕ್ 500 ಪೆಗಾಸಸ್  ಅನ್ನು ಈ ಹಿಂದೆಯೇ ಪರಿಚಯಿಸಿತ್ತು. ಅಲ್ಲದೆ ಜುಲೈ 10 ರಂದು ಈ ಹೊಸ ಮಾದರಿಯ ಬುಲೆಟ್​ನ ಆನ್​ಲೈನ್​ ಬುಕ್ಕಿಂಗ್​ ಪ್ರಾರಂಭಿಸಿದ್ದರು. ಆದರೆ ರಾಯಲ್​ ಎನ್​​ಫೀಲ್ಡ್​ ಅಧಿಕೃತ ವೆಬ್​ಸೈಟ್​ ಕ್ರ್ಯಾಶ್ ಆಗಿದ್ದರಿಂದ ಬುಕ್ಕಿಂಗ್​ ಅನ್ನು ಮುಂದೂಡಲಾಗಿತ್ತು. ಇದೀಗ  2018, ಜುಲೈ 25 ರಿಂದ ಮತ್ತೆ ಈ ವಿಶೇಷ ಆವೃತ್ತಿಯ ಬೈಕ್​ನ ಆನ್​ಲೈನ್​ ಬುಕ್ಕಿಂಗ್​ ಪ್ರಾರಂಭವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಈ ಹಿಂದೆ ಬುಕ್ಕಿಂಗ್ ವೇಳೆ ತಾಂತ್ರಿಕ ತೊಂದರೆ ಉಂಟಾಗಿರುವುದರಿಂದ ಬುಕ್ಕಿಂಗ್​ ಅನ್ನು ನಿಲ್ಲಿಸಲಾಗಿತ್ತು ಎಂದು ತಿಳಿಸಿದ್ದ ರಾಯಲ್ ಎನ್​ಫೀಲ್ಡ್​ ಕಂಪನಿಯು, ಬುಧವಾರ ಸಂಜೆ 4ಗಂಟೆಯ ಬಳಿಕ ಹೊಸ ಬುಕ್ಕಿಂಗ್ ಆರಂಭಿಸುವುದಾಗಿ ತಿಳಿಸಿದೆ.


Loading...

ರಾಯಲ್ ಎನ್​ಫೀಲ್ಡ್​ನ ಈ ಬೈಕ್ ಲಿಮಿಟೆಡ್ ಎಡಿಷನ್ ಆಗಿದ್ದು, ಒಟ್ಟಾರೆ ವಿಶ್ವದಲ್ಲಿ ಕೇವಲ 1000 ಕ್ಲಾಸಿಕ್ 500 ಪೆಗಾಸಸ್ ರೋಡಿಗಿಳಿಯಲಿದೆ. ಇದರಲ್ಲಿ ಭಾರತದ ಗ್ರಾಹಕರಿಗೆ 250 ಬೈಕ್​ಗಳನ್ನು ನೀಡಿದ್ದು, ಸಾವಿರಾರು ಬುಲೆಟ್​ ಪ್ರೇಮಿಗಳು ಇದನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಅತಿ ಹೆಚ್ಚಿನ ಗ್ರಾಹಕರು ಏಕಕಾಲಕ್ಕೆ ಬೈಕ್ ಬುಕ್ಕಿಂಗ್​ಗೆ ಪ್ರತಿಕ್ರಿಯಿಸಿದ್ದರಿಂದ ವೆಬ್​ಸೈಟ್​ನಲ್ಲಿ​ ತಾಂತ್ರಿಕ ದೋಷ ಕಾಣಿಸಿತ್ತು. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಬುಲೆಟ್​ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾದರಿಂದ ವೆಬ್​ಸೈಟ್​ ಅನ್ನು ಪರಿಷ್ಕೃತಗೊಳಿಸಿ ಬುಕ್ಕಿಂಗ್ ಆರಂಭಿಸುವುದಾಗಿ ರಾಯಲ್ ಎನ್​ಫೀಲ್ಡ್ ಕಂಪನಿ ಟ್ವೀಟ್ ಮಾಡಿ ತಿಳಿಸಿತ್ತು.

2ನೇ ಮಹಾಯುದ್ಧದ ಸಂದರ್ಭದಲ್ಲಿ 'ಫ್ಲೈಯಿಂಗ್ ಫ್ಲಿಯಾ' ಎಂದು ಜನಪ್ರಿಯವಾಗಿದ್ದ RE/WD 125 ಮೋಟರ್​ಸೈಕಲ್​ನ ಪ್ರೇರಣೆಯಿಂದ ಕ್ಲಾಸಿಕ್ 500 ಪೆಗಾಸಸ್ ಬೈಕ್​ನ್ನು ವಿನ್ಯಾಸಗೊಳಿಸಲಾಗಿದೆ.  ಮಹಾಯುದ್ದದ ವೇಳೆ ಯುನೈಟೆಡ್ ಕಿಂಗ್​ಡಮ್​ನಲ್ಲಿ ಓಡಿಸಲಾಗಿದ್ದ ಸೈನಿಕರ ಬೈಕ್​ಅನ್ನು ಹೋಲುವ 'ಕ್ಲಾಸಿಕ್ 500 ಪೆಗಾಸಸ್'ನ ಭಾರತದ ಎಕ್ಸ್​-ಶೋ ರೂಂ ಬೆಲೆ 2.4 ಲಕ್ಷ ರೂ. ಆಗಿದೆ.ಲಿಮಿಟೆಡ್​ ಎಡಿಷನ್​ನ ಈ ಬುಲೆಟ್​ಗಳು ಎರಡು ಬಣ್ಣಗಳಲ್ಲಿ ಲಭ್ಯವಿದ್ದು, ಸೈನ್ಯದ ಬಣ್ಣವನ್ನು ಪ್ರತಿನಿಧಿಸುವ ಸರ್ವೀಸ್ ಬ್ರೌನ್ ಮತ್ತು ಒಲಿವ್​ ಡ್ರಾಬ್​ ಗ್ರೀನ್ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಬ್ರಿಟನ್​ನಲ್ಲಿ 190 ಬೈಕ್​ಗಳ ಬುಕ್ಕಿಂಗ್ ಅವಕಾಶ ನೀಡಿದ್ದು, ಭಾರತದ ಮಾರುಕಟ್ಟೆಗೆ ಅನುಗುಣವಾಗಿ 250 ಕ್ಲಾಸಿಕ್ 500 ಪೆಗಾಸಸ್ ಅನ್ನು ನೀಡಲಾಗಿದೆ ಎಂದು ಎನ್​ಫೀಲ್ಡ್​ ಸಂಸ್ಥೆ ತಿಳಿಸಿದೆ. ಹಾಗೆಯೇ ಪ್ರತಿಯೊಂದು ಬೈಕ್​ನ ಟ್ಯಾಂಕ್​ಗೂ ಹಲವು ರೀತಿಯ ವಿಶೇಷವಾದ ಸೀರಿಯಲ್ ನಂಬರ್ ನೀಡಲಾಗಿದೆ.

499 ಸಿಸಿ ಸಾಮರ್ಥ್ಯದ ಏರ್​ ಕೂಲ್ಡ್​ ಎಂಜಿನ್​ ಅನ್ನು ಪೆಗಾಸಸ್ ಬೈಕ್ ಹೊಂದಿದ್ದು, ಸಿಂಗಲ್​ ಸಿಲಿಂಡರ್ ಎಂಜಿನ್ 27.5 ಪಿಎಸ್​​ ಮತ್ತು 41.3-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ. ಇದರ ಚಾಸಿಸ್​, ಬ್ರೇಕ್​ ಮತ್ತು ಟೈಯರ್​ಗಳು ಸಾಮಾನ್ಯ ರಾಯಲ್ ಎನ್​ಫೀಲ್ಡ್​​ ಕ್ಲಾಸಿಕ್​ 500 ಅನ್ನು ಹೋಲುತ್ತದೆ. ರಾಯಲ್​ ಎನ್​​ಫೀಲ್ಡ್​ ಕ್ಲಾಸಿಕ್ 500 ಪೆಗಾಸಸ್ ಮೊದಲ ಆವೃತಿಯನ್ನು ಈ ಹಿಂದೆ ಇಂಗ್ಲೆಂಡ್​ನಲ್ಲಿ ಪರಿಚಯಿಸಲಾಗಿತ್ತು.
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...