HOME » NEWS » Tech » ROYAL ENFIELD CLASSIC 350 METEOR 350 BULLET RECEIVE PRICE HIKE STG HG

ಬುಲೆಟ್‌ ಬೈಕ್‌ ಪ್ರಿಯರಿಗೆ ಶಾಕಿಂಗ್ ನ್ಯೂಸ್‌: ರಾಯಲ್ ಎನ್‍ಫೀಲ್ಡ್‌ನ ಹಲವು ಮಾಡೆಲ್‌ಗಳ ಬೆಲೆ ಹೆಚ್ಚಳ..!

ಇತ್ತೀಚೆಗೆ ರಾಯಲ್ ಎನ್‍ಫಿಲ್ಡ್ ಪ್ರಿಯರು ರಾಯಲ್ ಎನ್‍ಫೀಲ್ಡ್ ಬುಲೆಟ್ 350, ಮೀಟಿಯಾರ್ 350 ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮಗೆ ಕೊಂಚ ಬೇಸರ ಅಥವಾ ನಿರಾಸೆಯಾಗಬಹುದು. ಯಾಕೆಂದರೆ ರಾಯಲ್ ಎನ್‍ಫೀಲ್ಡ್ ಬುಲೆಟ್ 350 ತನ್ನ ಬೆಲೆಯಲ್ಲಿ ಏರಿಕೆ ಮಾಡಿದೆ.

news18-kannada
Updated:April 9, 2021, 9:07 AM IST
ಬುಲೆಟ್‌ ಬೈಕ್‌ ಪ್ರಿಯರಿಗೆ ಶಾಕಿಂಗ್ ನ್ಯೂಸ್‌: ರಾಯಲ್ ಎನ್‍ಫೀಲ್ಡ್‌ನ ಹಲವು ಮಾಡೆಲ್‌ಗಳ ಬೆಲೆ ಹೆಚ್ಚಳ..!
Royal Enfield Classic 350
  • Share this:
ರಾಯಲ್ ಎನ್‍ಫೀಲ್ಡ್ ಇಂದಿನ ರಾಯಲ್ ಲೈಫ್‍ಗೆ ಹೊಂದಿಕೊಂಡಂತಿರುವ ಬೈಕ್. ರಾಯಲ್ ಲುಕ್​ನ‌ಲ್ಲೂ, ಬೆಲೆಯಲ್ಲೂ, ಶಬ್ದದಲ್ಲೂ, ಸಾಮರ್ಥ್ಯದಲ್ಲೂ ಬೈಕ್ ಪ್ರಿಯರ ಮನ ಗೆದ್ದಿದೆ. ರಾಯಲ್ ಎನ್‍ಫೀಲ್ಡ್ ರಸ್ತೆಗಿಳಿದರೆ ಸಾಕು ಅದರ ಗತ್ತು ಗಮ್ಮತ್ತು ಬೇರೆಯೇ ಆಗಿರುತ್ತದೆ. ಅದು ರಸ್ತೆಯಲ್ಲೇ ಹೋಗುತ್ತಿದ್ದರೆ ಕೇವಲ ಶಬ್ದ ಕೇಳಿದರೆ ಸಾಕು ಇದು ರಾಯಲ್ ಎನ್‍ಫೀಲ್ಡ್ ಎಂದು ಸುಲಭವಾಗಿ ಕಣ್ಮುಚ್ಚಿ ಸೂಚಿಸುವಷ್ಟು ಪ್ರತಿಯೊಬ್ಬರಿಗೂ ಇಷ್ಟವಾಗುತ್ತಿದೆ. ಆಧುನಿಕ ಯುವಜನತೆಯ ಬೈಕ್ ಕ್ರೇಜ್ ಅರ್ಥಮಾಡಿಕೊಂಡಿರುವ ಪ್ರತಿವರ್ಷ ಹೊಸ ಹೊಸ ವೈವಿಧ್ಯಮಯ ರಾಯಲ್ ಎನ್‍ಫೀಲ್ಡ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಉತ್ತಮವಾಗಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ.

ಆದರೆ ಇತ್ತೀಚೆಗೆ ರಾಯಲ್ ಎನ್‍ಫಿಲ್ಡ್ ಪ್ರಿಯರು ರಾಯಲ್ ಎನ್‍ಫೀಲ್ಡ್ ಬುಲೆಟ್ 350, ಮೀಟಿಯಾರ್ 350 ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮಗೆ ಕೊಂಚ ಬೇಸರ ಅಥವಾ ನಿರಾಸೆಯಾಗಬಹುದು. ಯಾಕೆಂದರೆ ರಾಯಲ್ ಎನ್‍ಫೀಲ್ಡ್ ಬುಲೆಟ್ 350 ತನ್ನ ಬೆಲೆಯಲ್ಲಿ ಏರಿಕೆ ಮಾಡಿದೆ.

ಅನ್ಯ ಮೋಟರ್ ಸೈಕಲ್‍ಗಳ ಕಂಪೆನಿಗಳ ಬೈಕ್‍ಗಳ ಬೆಲೆಗೆ ಹೋಲಿಸಿದರೆ ರಾಯಲ್ ಎನ್‍ಫೀಲ್ಡ್ ಬೆಲೆ ಹೆಚ್ಚಳದಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ಜನವರಿಯಲ್ಲಿ ಅಂದರೆ ಬೈಕ್‍ಗಳ ವಿಶೇಷತೆ ಮತ್ತು ವೈವಿಧ್ಯತೆಯ ಆಧಾರದ ಮೇಲೆ ಸುಮಾರು 7,000 ದಿಂದ 13,000 ದವರೆಗೆ ಬೆಲೆ ಏರಿಕೆ ಮಾಡಿದೆ. ಇನ್ನು ಇತರೆ ಕಂಪೆನಿಗಳು ಸಹ ಏಪ್ರಿಲ್ ತಿಂಗಳಿನಿಂದ ಬೈಕ್‍ಗಳ ಬೆಲೆ ಏರಿಸಿದೆ.

ಭಾರತದ ಆಟೋ ಕಾರ್ ವರದಿಯ ಪ್ರಕಾರ ಮತ್ತೊಂದು ಕ್ಲಾಸಿಕ್ 350 ಬೈಕ್‍ನ ಬೆಲೆಯನ್ನು 10 ಸಾವಿರದಷ್ಟು ಏರಿಸಿದೆ. ಇದು ಬಣ್ಣ, ವಿನ್ಯಾಸಕ್ಕೆ ಅನುಗುಣವಾಗಿ ಬೆಲೆಯನ್ನು ಏರಿಸಿದೆ ಎಂದು ತಿಳಿದು ಬಂದಿದೆ. ಇನ್ನು ಮೀಟಿಯಾರ್ 350ಯ ಫೈರ್‌ಬಾಲ್‌ ಮಾದರಿಯ ಈಗಿನ ಬೆಲೆ 1,84,319 ರೂ. ಇದ್ದು ಹಿಂದಿನ ಬೆಲೆ 1,78,744 ರೂ. ಇತ್ತು, ಸ್ಟೆಲ್ಲರ್ ಮಾದರಿಯ ಇಂದಿನ ಬೆಲೆ 1,90,079 ರೂ. ಇದೆ, ಸೂಪರ್‌ನೋವಾದ ಇಂದಿನ ಬೆಲೆ 1,99,679 ರೂ. ಆಗಿದೆ.

ವಿವಿಧ ವಿನ್ಯಾಸದ ಬೆಲೆಗಳು ಹೀಗಿವೆ..

1) 2021ರ ಜನವರಿ ತಿಂಗಳಿಂದ ಬುಲೆಟ್ 350 ಬೆಲೆಯು ಮೊದಲು ರೂ. 1,33,446 ಇದ್ದು, ಇದೀಗ ರೂ. 1,40,828ಕ್ಕೆ ಏರಿಕೆ ಕಂಡಿದೆ.

2) ಬುಲೆಟ್ 350 X KS ಬೆಲೆ 1,27,279 ರೂ ಇದ್ದದ್ದು, ಇದೀಗ 1,34,347ಕ್ಕೆ ಏರಿಕೆಯಾಗಿದೆ.ಬುಲೆಟ್ 350 ES ಬೆಲೆ 1,42,890 ರೂ. ದಿಂದ 1,55,480 ರೂ. ಆಗಿದೆ

3) ಕ್ಲಾಸಿಕ್ 350 ಡ್ಯುಯಲ್ ಚಾನಲ್ ABS ದರವು 1,80,880 ರೂ. ಯಿಂದ 1,98,000ರವರೆಗೆ ಹೆಚ್ಚಾಗಿದೆ.ಇತ್ತೀಚೆಗೆ ಈ ಕಂಪನಿಯು ಇಂಟರ್‌ಸೆಪ್ಟರ್‌ 650, ಕಾಂಟಿನೆಂಟಲ್ ಜಿಟಿ 650 ವಿಭಿನ್ನ ಬಣ್ಣಗಳನ್ನು ಒಳಗೊಂಡಿದೆ. ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಕೂಡ ಅಪ್‍ಡೇಟ್ ವರ್ಷನ್‍ ಅನ್ನು ಬಿಡುಗಡೆ ಮಾಡಿದ್ದು, ನ್ಯಾವಿಗೇಷನ್ ಪಾಡ್ ಜೊತೆಗೆ ಬ್ಲೂಟೂತ್ ಸಂಪರ್ಕವನ್ನು ಸಹ ಹೊಂದಿದೆ.
Published by: Harshith AS
First published: April 9, 2021, 9:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories