Rolls-Royce Motor Cars| 2023ರಲ್ಲಿ ಮಾರುಕಟ್ಟೆಗೆ ಬರಲಿರುವ ರೋಲ್ಸ್-ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರು

ಈ ಪ್ಲಾಟ್‌ಫಾರ್ಮ್‌ನಡಿಯಲ್ಲಿ, ಹೊಸ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರು ಭವಿಷ್ಯದ ರೋಲ್ಸ್ ರಾಯ್ಸ್ ಉತ್ಪನ್ನಗಳಿಗೆ ಹೊಸ ಮೇಲ್ದರ್ಜೆ ಒದಗಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

ರೋಲ್ಸ್-ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರು.

ರೋಲ್ಸ್-ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರು.

  • Share this:
ರೋಲ್ಸ್ ರಾಯ್ಸ್ (Rolls-Royce) ಮೋಟಾರ್ ಕಾರುಗಳು ತನ್ನದೇ ಎಲೆಕ್ಟ್ರಿಕ್ ಕಾರಾದ (Electric Car) ರೋಲ್ಸ್ ರಾಯ್ಸ್ ಸ್ಪೆಕ್ಟರ್‌ ರೂಪಿಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದು 2023ರಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದೆ. ರೋಲ್ಸ್ ರಾಯ್ಸ್ ಮೋಟಾರ್ ಕಾರುಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಟಾರ್ಸ್ಟನ್ ಮುಲ್ಲರ್-ಒಟ್ವೋಸ್ ಈ ಕುರಿತು ಘೋಷಣೆ ಮಾಡಿದ್ದು ರೋಲ್ಸ್ ರಾಯ್ಸ್ ಸಂಸ್ಥಾಪಕರಾದ ಚಾರ್ಲ್ಸ್ ರೋಲ್ಸ್‌ರ ಭವಿಷ್ಯವಾಣಿ ಈಡೇರಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ರೂಪಿಸುವತ್ತ ನಾವು ದೃಷ್ಟಿ ನೆಟ್ಟಿದ್ದೇವೆ ಎಂದು ತಿಳಿಸಿದ್ದಾರೆ. ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರು 2.5 ಮಿಲಿಯನ್ ಕಿಮೀ ವ್ಯಾಪ್ತಿಯನ್ನು ಒಳಗೊಳ್ಳಲಿದೆ ಹಾಗೂ ರೋಲ್ಸ್ ರಾಯ್ಸ್‌ನ ವಾಸ್ತುಶಿಲ್ಪವನ್ನು ಕಾರು ಆಧರಿಸಲಿದೆ. 2030ರೊಳಗೆ ಬ್ರ್ಯಾಂಡ್ ಎಲೆಕ್ಟ್ರಿಕ್ ಕಾರುಗಳನ್ನು ಮಾತ್ರವೇ ಆಫರ್ ಮಾಡಲಿದೆ ಎಂದು ಘೋಷಿಸಿದ್ದು ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್‌ನೊಂದಿಗೆ ಎಲೆಕ್ಟ್ರಿಕ್ ಕಾರುಗಳ ಆರಂಭಕ್ಕೆ ಮುನ್ನುಡಿ ನೀಡಲಿದೆ.

2017ರಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಅನ್ನು ಪರಿಚಯಿಸಿತು ಹಾಗೂ ಇದರೊಂದಿಗೆ ಅಲ್ಯುಮಿನಿಯಂ ರಚನಾ ವಿನ್ಯಾಸವು ಎಲ್ಲಾ ಮುಂಬರುವ ರೋಲ್ಸ್ ರಾಯ್ಸ್ ಕಾರುಗಳಿಗೆ ಪ್ರಮುಖ ಆಧಾರವಾಗಿದೆ. ಪ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸಿರುವುದು ಕುಲ್ಲಿನಾನ್ ಹಾಗೂ ಘೋಸ್ಟ್ ಆವೃತ್ತಿಗಳನ್ನು ಬೆಂಬಲಿಸಲು ಮಾತ್ರವಲ್ಲದೆ ಭವಿಷ್ಯದ ಎಲೆಕ್ಟ್ರಿಕ್ ಕಾರುಗಳನ್ನು ಕೂಡ ಕಂಪನಿಯು ಗುಡ್‌ವುಡ್ ಇಂಗ್ಲೆಂಡ್‌ನಲ್ಲಿರುವ ತಯಾರಿಕಾ ಘಟಕ ಹಾಗೂ ಪ್ರಧಾನ ಕಚೇರಿಯಲ್ಲಿ ನಿರ್ಮಿಸಲಿದೆ.

ಈ ಪ್ಲಾಟ್‌ಫಾರ್ಮ್‌ನಡಿಯಲ್ಲಿ, ಹೊಸ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಎಲೆಕ್ಟ್ರಿಕ್ ಕಾರು ಭವಿಷ್ಯದ ರೋಲ್ಸ್ ರಾಯ್ಸ್ ಉತ್ಪನ್ನಗಳಿಗೆ ಹೊಸ ಮೇಲ್ದರ್ಜೆ ಒದಗಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

ಕಾರಿನ ಸಾಮರ್ಥ್ಯ ಹಾಗೂ ವಿನ್ಯಾಸವನ್ನು ದೃಢೀಕರಿಸದೇ ಇದ್ದರೂ ಇದೇ ಬ್ರ್ಯಾಂಡ್‌ನ ಘೋಸ್ಟ್‌ ಆವೃತ್ತಿಯ 4.3 ಸೆಕೆಂಡ್ ಸ್ಪ್ರಿಂಟ್ ಅನ್ನು ಬೆಂಚ್‌ಮಾರ್ಕ್ ಆಗಿ ತೆಗೆದುಕೊಂಡಲ್ಲಿ ಎರಡು ಬಾಗಿಲಿನ ಕೂಪ್ 4 ಸೆಕೆಂಡ್‌ಗಳ ಕಡಿಮೆ ಅವಧಿಯಲ್ಲಿ 0-100 ಕಿಲೋಮೀಟರ್‌ ವೇಗ ಪಡೆಯಲು ಸಾಧ್ಯವಾಗುತ್ತದೆ.

ಪ್ರಸ್ತುತ ಕಂಪನಿಯು ಹೊಸ ಸ್ಪೆಕ್ಟ್ರಮ್ ಕಾರಿನ ಕೆಲವೊಂದು ಚಿತ್ರಗಳನ್ನು ಬಹಿರಂಗಪಡಿಸಿದ್ದು, ಕಾರು ಇದುವೇ ವಿನ್ಯಾಸಗಳಲ್ಲಿ ಬರಲಿದೆಯೇ ಎಂಬುದನ್ನು ಕಂಪನಿ ದೃಢಪಡಿಸಿಲ್ಲ. ಹಿಂಭಾಗದ ರಿಯರ್ ಹಿಂಗ್ಡ್ ಡೋರ್‌ಗಳ (ಮೇಲಕ್ಕೆ ಕೆಳಕ್ಕೆ ರೋಲ್ ಆಗುವ) ಚಿತ್ರಗಳ ಹೊರತಾಗಿ ಕಂಪನಿಯು ಕಾರಿನ ಯಾವುದೇ ಪ್ರಮುಖ ವಿವರಗಳನ್ನು ಬಹಿರಂಗಪಡಿಸಿಲ್ಲ.

ಎಲೆಕ್ಟ್ರಿಕ್ ಕಾರುಗಳ ತಯಾರಿಯಲ್ಲಿ ಕಂಪನಿ ತನ್ನ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿರುವುದು ಇದೇನು ಮೊದಲ ಬಾರಿಯಲ್ಲ. 2011 ರ ಜಿನೀವಾ ಆಟೋ ಪ್ರದರ್ಶನದಲ್ಲಿ, ಕಾರು ತಯಾರಕ ಸಂಸ್ಥೆಯು ಹಿಂದಿನ ಜನರೇಶನ್ ಫ್ಯಾಂಟಮ್ ಪರಿಕಲ್ಪನೆ ಆಧರಿಸಿದ EV ಕಲ್ಪನೆ ಪ್ರದರ್ಶಿಸಿದ್ದು102EX ಕಾರಿನ ಹೆಸರಾಗಿತ್ತು. ಇದು 71.0kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಸಿಕೊಂಡಿತ್ತು.

ಇದನ್ನೂ ಓದಿ: ಬೆಂಗಳೂರಿಗರೇ....ಕೇವಲ 6.25 ಲಕ್ಷಕ್ಕೆ ಖರೀದಿಸಲು ಸಿಗುತ್ತಿದೆ BMW 3 Series 320d ಕಾರು!

ಅದೂ ಅಲ್ಲದೆ ಹಿಂದಿನ ಚಕ್ರಗಳಿಗೆ 389bhp ಸಾಮರ್ಥ್ಯವನ್ನು ಒದಗಿಸಲು ವಿದ್ಯುತ್ ಮೋಟಾರುಗಳನ್ನು ಉಪಯೋಗಿಸಿತು. ಆದರೆ ಇದು ಒಂದು ದಶಕದ ಹಿಂದಿನ ಮಾತಾಗಿದೆ. ಕಂಪನಿ ಲಾಂಚ್ ಮಾಡಹೊರಟಿರುವ ಸ್ಪೆಕ್ಟರ್ ತನ್ನ ಹಿಂದಿನ ಆವೃತ್ತಿಗಿಂತ ಹೆಚ್ಚು ಪ್ರಬಲ ಆವೃತ್ತಿಯಾಗಿ ಹೊರಹೊಮ್ಮಲಿದ್ದು ಸಿಂಗಲ್ ಚಾರ್ಜ್‌ನಲ್ಲಿ 400km ವ್ಯಾಪ್ತಿಯನ್ನೊದಗಿಸಲಿದೆ ಎಂಬ ವದಂತಿ ಇದೆ.
Published by:MAshok Kumar
First published: