ರೋಬೊಟ್​ಗಳ ಮೊರೆ ಹೋಗುತ್ತಿರುವ ಚೀನಾ ರೆಸ್ಟೋರೆಂಟ್​ಗಳು

news18
Updated:August 21, 2018, 1:09 PM IST
ರೋಬೊಟ್​ಗಳ ಮೊರೆ ಹೋಗುತ್ತಿರುವ ಚೀನಾ ರೆಸ್ಟೋರೆಂಟ್​ಗಳು
news18
Updated: August 21, 2018, 1:09 PM IST
-ನ್ಯೂಸ್ 18 ಕನ್ನಡ

ಯಂತ್ರ ಮಾನವ ರೋಬೊಟ್​ ಈಗಾಗಲೇ ಹಲವು ಕ್ಷೇತ್ರಗಳಿಗೆ ಲಗ್ಗೆಯಿಟ್ಟಿದೆ. ಸಂಶೋಧಕರು ಮಾನವ ನಿರ್ಮಿತ ರೋಬೊಟ್​ಗಳನ್ನು ಬಾಹ್ಯಕಾಶಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಚೀನಾದ ರೆಸ್ಟೋರೆಂಟ್​ಗಳು ಮಾಣಿ(ವೈಟರ್) ಕೆಲಸಕ್ಕೂ ರೋಬೊಟ್​ಗಳನ್ನು ಬಳಸಲು ಮುಂದಾಗಿದೆ.ಶಾಂಘೈನ ಪ್ರತಿಷ್ಠಿತ ರೆಸ್ಟೋರೆಂಟ್​ನಲ್ಲಿ ಆಹಾರವನ್ನು ತೆಗೆದುಕೊಳ್ಳಲು ಸಹಾಯ ಮಾಡುವ ರೋಬೊಟ್​ಗಳನ್ನು ನಿಲ್ಲಿಸಲಾಗಿದೆ. ಗ್ರಾಹಕರಿಗೆ ಪಾತ್ರೆಗಳ ಮುಚ್ಚಳವನ್ನು ತೆರೆಯುವ ಈ ರೋಬೊಟಿಕ್​ಗಳು ಕೃತಕ ಸ್ವರದಲ್ಲಿ 'ನಿಮ್ಮ ಊಟವನ್ನು ಆನಂದಿಸಿ' ಎಂದು ಸೂಚಿಸುತ್ತದೆ. ಭವಿಷ್ಯದ ವೈಟರ್​ಗಳ ಪರಿಕಲ್ಪನೆಯ ರೋಬೊಟ್​ಗಳನ್ನು ಚೀನಿ ಇ-ಕಾಮರ್ಸ್​ ದೈತ್ಯ ಕಂಪನಿ ಅಲಿಬಾಬಾ ಒದಗಿಸುತ್ತಿದೆ.

ರೆಸ್ಟೋರೆಂಟ್​ಗಳಲ್ಲಿ ಕಾರ್ಮಿಕ ವೆಚ್ಚಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಅಲಿಬಾಬಾ ರೋಬೊಟ್​ಗಳ ಉದ್ದೇಶವಾಗಿದೆ. ಇಲ್ಲಿ ವೈಟರ್​ಗಳು ಮಾಡುವ ಕೆಲಸಗಳನ್ನು ರೋಬೊಟ್​ಗಳು ಮಾಡಲಿದ್ದು, ಟೇಬಲ್ ಎತ್ತರಕ್ಕೆ ಅನುಗುಣವಾಗಿ ಸುತ್ತಲು ಸುತ್ತುವ ಕಾರ್ಯಗಳನ್ನು ಇದು ಮಾಡಲಿದೆ. ಶಾಂಘೈ ನಗರದಲ್ಲಿ ವೈಟರ್​ಗಳ ಸಂಬಳ ವೆಚ್ಚ ಹೆಚ್ಚಾಗುತ್ತಿದ್ದು, ಪ್ರತಿ ತಿಂಗಳು 10 ಸಾವಿರ ಯುವಾನ್ ( 1ಲಕ್ಷ ರೂ.ಗಿಂತ ಹೆಚ್ಚು) ನೀಡಲಾಗುತ್ತದೆ. ಪ್ರತಿ ವರ್ಷ ರೆಸ್ಟೊರೆಂಟ್​ ಮಾಲೀಕರು ಸಂಬಳಕ್ಕಾಗಿ ಕೋಟಿಗಟ್ಟಲೇ ಹಣವನ್ನು ವರ್ಗಾಯಿಸುತ್ತಿದ್ದಾರೆ. ಅಲ್ಲದೆ ಕೆಲಸಗಾರರು ಎರಡು ಶಿಫ್ಟ್​ಗಳಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ರೋಬೊಟ್​ಗಳನ್ನು ಪ್ರಸ್ತುತ ಪಡಿಸಲಾಗುತ್ತಿದೆ ಎಂದು ಅಲಿಬಾಬಾ ಉತ್ಪನ್ನ ನಿರ್ವಾಹಕ ಕ್ಯಾವೊ ಹೈಟಾವೊ ತಿಳಿಸಿದ್ದಾರೆ.

ಅಲಿಬಾಬಾ ಕಂಪನಿಯ ಒಡೆತನದಲ್ಲಿರುವ ಹೆಮಾ ಚೈನ ಸೂಪರ್​ ಮಾರ್ಕೆಟ್​ಗಳಲ್ಲಿ ಕೂಡ ರೋಬೊಟಿಕ್​ ಸೇವೆಯನ್ನು ನೀಡಲು ಸಂಸ್ಥೆ ಯೋಚಿಸುತ್ತಿದೆ. ಚೀನಾದ 13 ನಗರದಲ್ಲಿ 57 ಸೂಪರ್ ಮಾರ್ಕೆಟ್​ ಹೊಂದಿರುವ ಅಲಿಬಾಬಾ ಕಂಪನಿ ಮುಂದಿನ ದಿನಗಳಲ್ಲಿ ಸರಕು ಮತ್ತು ಸೇವೆಗಳನ್ನು ನೀಡುವ ರೋಬೊಟ್​ಗಳನ್ನು ನಿರ್ಮಿಸಲಿದೆ ಎನ್ನಲಾಗಿದೆ.

ಅಲಿಬಾಬಾ ಕಂಪನಿಯ ಪ್ರತಿಸ್ಪರ್ಧಿ ಜೆಡಿ.ಕಾಮ್ ಸಂಸ್ಥೆ ಕೂಡ 2020ರ ವೇಳೆಗೆ 1000 ರೆಸ್ಟೋರೆಂಟ್​ಗಳನ್ನು ತೆರೆಯುವ ಯೋಜನೆಯನ್ನು ಘೋಷಿಸಿದ್ದಾರೆ. ಇದರಲ್ಲಿ ರೋಬೊಟ್​ಗಳೇ ಆಹಾರವನ್ನು ತಯಾರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈಗಾಗಲೇ ಡ್ರೋಣ್​ಗಳ ಸಹಾಯದಿಂದ ಡೆಲಿವರಿ ಸೌಲಭ್ಯ ಒದಗಿಸುತ್ತಿರುವ ಜೆಡಿ.ಕಾಮ್ ಸಂಸ್ಥೆ ಚೀನಾ ಇ-ಕಾಮರ್ಸ್​ನಲ್ಲಿ ಅಲಿಬಾಬಾಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಚೀನಾದ ರಿಟೈಲ್ ಸಂಸ್ಥೆ ಬೈನ್ ಅಂಡ್ ಕಂಪನಿ ಕೂಡ ತನ್ನ ಖರ್ಚು ವೆಚ್ಚವನ್ನು ಕಡಿತಗೊಳಿಸಿ ಮತ್ತು ಉತ್ತಮ ಸೇವೆ ಒದಗಿಸಲು ರೋಬೊಟ್​ಗಳನ್ನು ಬಳಸಲು ಮುಂದಾಗಿದೆ.

ಉತ್ತಮ ಆಹಾರಕ್ಕಾಗಿ ರೆಸ್ಟೋರೆಂಟ್​ಗೆ ತೆರಳಿದ್ದವು. ಈ ಸಮಯದಲ್ಲಿ ನಮ್ಮ ಟೇಬಲ್​ಗೆ ರೋಬೊಟ್​ ಸೇವೆ ಒದಗಿಸಿರುವುದು ಹೊಸ ಅನುಭವ ಎಂದು ಹೇಳುತ್ತಾರೆ ಮಾ ಹಿವೆನ್. ಅಲ್ಲದೆ ರೋಬೊಟ್ ವೈಟರ್​ಗಳನ್ನು ಬಳಸುವುದರಿಂದ ಆಹಾರಗಳ ದರದಲ್ಲೂ ಇಳಿಕೆ ಮಾಡಲಾಗುತ್ತಿದೆ. ಈ ಹಿಂದೆ ಮೂರು ನಾಲ್ಕು ಮಂದಿಯೊಂದಿಗೆ ರೆಸ್ಟೋರೆಂಟ್​ಗೆ ತೆರಳಿದರೆ 300-400 ಯುವಾನ್ ಖರ್ಚಾಗುತ್ತಿತ್ತು. ಆದರೆ ರೋಬೊಟ್ ಸೇವೆ ಇರುವ ರೆಸ್ಟೊರೆಂಟ್​ಗಳಲ್ಲಿ ಕೇವಲ 100 ಯುವಾನ್​ನಲ್ಲಿ ಆಹಾರ ಸಿಗುತ್ತಿದೆ ಎಂದು ಮಾ ಶೆನ್​ಪೆಂಗ್ ತಿಳಿಸಿದ್ದಾರೆ. ಒಟ್ಟಿನಲ್ಲಿ ರೋಬೊಟ್​ಗಳ ಸೇವೆ ಹೊಂದಿರುವ ರೆಸ್ಟೋರೆಂಟ್​ಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.
Loading...

ಆದರೆ ಚೀನಾದ ಉದ್ಯೋಗ ಕ್ಷೇತ್ರದಲ್ಲಿ ರೋಬೊಟ್​ ಬಳಕೆಯಿಂದಾಗಿ ನಿರುದ್ಯೋಗದ ಸಮಸ್ಯೆ ಉಂಟಾಗಲಿದೆ ಎನ್ನಲಾಗುತ್ತಿದೆ. ಕಾರ್ಮಿಕರ ಸಂಬಳ ಕೂಡ ಕಂಪನಿಗಳ ದೊಡ್ಡ ಸಮಸ್ಯೆಯಾಗಿದ್ದು, ಮುಂದಿನ ದಿನಗಳಲ್ಲಿ ರೋಬೊಟ್ ಬಳಕೆ ಹೆಚ್ಚಾದರೆ ಕಾರ್ಮಿಕ ವೇತನಗಳು ಸಮತೋಲನಕ್ಕೆ ಬರಲಿದೆ ಶಾಂಘೈನ ಜಿಯೊಟಾಂಗ್ ವಿಶ್ವವಿದ್ಯಾಲಯದ ರೋಬಾಟಿಕ್ಸ್ ಪ್ರೊಫೆಸರ್ ವಾಂಗ್ ಹೆಶೆಂಗ್ ಹೇಳಿದ್ದಾರೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626