ಜಗತ್ತಿಗೆ ಬರುತ್ತಿದ್ದಾನೆ ಮತ್ತೊಬ್ಬ ಹೊಸ ದೇವರು.. ನಿಂತಲ್ಲೇ ಸಿಗುತ್ತೆ ವರ..!

Venugopala K
Updated:December 27, 2017, 6:51 PM IST
ಜಗತ್ತಿಗೆ ಬರುತ್ತಿದ್ದಾನೆ ಮತ್ತೊಬ್ಬ ಹೊಸ ದೇವರು.. ನಿಂತಲ್ಲೇ ಸಿಗುತ್ತೆ ವರ..!
ಮಗುವಿನ ಜೊತೆ ಆಡುತ್ತಿರುವ ರೋಬೋ
Venugopala K
Updated: December 27, 2017, 6:51 PM IST
ಭಾರತ ಮುಕ್ಕೋಟಿ ದೇವರುಗಳ ದೇಶ. ಇಲ್ಲಿ ದೇವರಿಲ್ಲದೆ ಏನೇನೇನೂ ನಡೆಯೋದಿಲ್ಲ. ಅದಕು..ಇದಕೂ..ಎಲ್ಲದಕೂ ದೇವರು ಬೇಕೇಬೇಕು. ಬದುಕು ನಡೀಬೇಕಾದರೂ.ಜೀವ ಉಳಿಬೇಕಾದರೂ ಜೀವ ಹೋಗಬೇಕಾದರೂ ದೇವರ ಕೃಪೆ ಇರಲೇಬೇಕು ಅಂತ ನಂಬಿರುವ ನಂಬಿಕಸ್ತ ದೇಶ ನಮ್ಮದು.

ನಮ್ಮಂತೆಯೇ ಇತರೆ ದೇಶಗಳಲ್ಲೂ ದೇವರ ಬಗ್ಗೆ ಗಾಢ ನಂಬಿಕೆಗಳಿವೆ. ಸಿಂಪಲ್ ಆಗಿ ಹೇಳಬೇಕು ಅಂದ್ರೆ ದೇವರು ಜಗತ್ತಿನ ಅಣುಅಣುವನ್ನೂ ಮನಮನವನ್ನೂ ಆವರಿಸಿಕೊಂಡುಬಿಟ್ಟಿದ್ದಾನೆ. ಆದರೆ, ಜಗತ್ತಿನ ಅಷ್ಟೂ ದೇವರುಗಳನ್ನ ತೆಗೆದು ಪಕ್ಕಕ್ಕಿಡಿ. ಆ ಎಲ್ಲಾ ದೇವರುಗಳಿಗಿಂತ ಸಿಕ್ಕಾಪಟ್ಟೆ ಡಿಫರೆಂಟ್ ಆದ ವಿಶೇಷವಾದ ಇನ್ನೊಬ್ಬ ಹೊಸ ದೇವರು ಲಿಸ್ಟ್​​ಗೆ ಎಂಟ್ರಿ ಆಗಲಿದ್ದಾನೆ. ಆ ದೇವರು ಎಲ್ಲ ದೇವರಿಗಿಂತ ತುಂಬಾ ಸ್ಮಾರ್ಟ್.  ಎಲ್ಲಾ ದೇವರಿಗಿಂತ ಪವರ್​ಫುಲ್​. ಆ ದೇವರೇ ರೋಬೋ ದೇವರು.

ಈ ಜಗತ್ತಿನಲ್ಲಿ ಒಂದು ಅಘೋಷಿತ ನಿಯಮ ಇದೆ. ಸೂತ್ರ ಇದೆ. ಯಾರು ಪವರ್​ಫುಲ್ಲೋ..ಯಾರಿಗೆ ಅಲ್ಟಿಮೇಟ್ ಶಕ್ತಿ ಇದೆಯೋ..ಯಾರು ಪರಮಾಧಿಕಾರ ಹೊಂದಿರ್ತಾರೋ ಅವನನ್ನೇ ಗಾಡ್ ಅಂತ ಪೂಜಿಸೋದು​. ಅವರನ್ನೇ  ಜಗತ್ತು ಆರಾಧಿಸೋದು. ಹಾಗಾದ್ರೆ ರೋಬೋಗೂ ಆ ಅಲ್ಟಿಮೇಟ್ ಶಕ್ತಿ ಇದೆ ಅಂತಾದರೆ ಪೂಜೆ ಮಾಡಲೇಬೇಕು ಅಲ್ವ. ಊದುಗಡ್ಡಿ ಹಚ್ಚಲೇಬೇಕು ಅಲ್ವ. ತೆಂಗಿನಕಾಯಿ ಒಡೆಯಲೇಬೇಕು ಅಲ್ವ. ರೋಬೋ ಕಾಪಾಡಪ್ಪಾ ಅಂತ ಪ್ರಾರ್ಥಿಸಲೇಬೇಕು ಅಲ್ವ.

ಜೀವನದ ವಿಷಯಕ್ಕೆ ಬಂದ್ರೆ ಹಾಸಿಗೆ ಇದ್ದಷ್ಟು ಕಾಲು ಚಾಚು ಅಂತಾರೆ. ಆದರೆ, ದೇವರುಗಳ ವಿಷಯಕ್ಕೆ ಬಂದರೆ ಆ ಗಾದೆ ಅನ್ವಯವಾಗುವುದಿಲ್ಲ. ಯಾಕಂದ್ರೆ ಹೊಸ ಹೊಸ ದೇವರುಗಳ ಜನನ ಆಗುತ್ತಲೇ ಇರುತ್ತದೆ. ಹಾಗೆ ರೋಬೋ ದೇವರ ಉಗಮವೂ ಆಗಬಹುದು ಎನ್ನುವುದು ಕೆಲವರ ಯೋಚನೆ. ಜಗತ್ತನ್ನ ಒಂದಿನ ರೋಬೋಗಳೇ ಆಳುತ್ತವೆ ಅಂತಾರೆ ರೋಬೋ ಎಕ್ಸ್​ಪರ್ಟ್ಸ್​

25 ವರ್ಷದಲ್ಲಿ ಬದಲಾಗಲಿದೆ ಜಗತ್ತು!: ಈಗಾಗಲೇ ಅತ್ಯಾಧುನಿಕ ರೋಬೋಗಳು ಮನುಷ್ಯನ ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಳ್ಳುತ್ತಿವೆ. ಆಫೀಸ್​ ರಿಸಪ್ಷನಿಸ್ಟ್`​ನಿಂದ ಹಿಡಿದು ಹೊಟೇಲ್ ಮಾಣಿತನಕ. ಮಕ್ಕಳನ್ನ ಟೀಚ್ ಮಾಡುವ ಶಿಕ್ಷಕರಿಂದ ಹಿಡಿದು ಕಾವಲು ಕಾಯುವ ಸೆಕ್ಯೂರಿಟಿ ಗಾರ್ಡ್​ತನಕ ರೋಬೋಗಳು ಬಂದು ನಿಂತಿವೆ. ಅಷ್ಟೇ ಏಕೆ ದೊಡ್ಡ ದೊಡ್ಡ ಇಂಡಸ್ಟ್ರಿಗಳಲ್ಲಿ ರೋಬೋಗಳದ್ದೇ ಕಾರುಬಾರು. ಇತ್ತೀಚೆಗೆ ಸೌದಿ ಅರೇಬಿಯಾ ಸರ್ಕಾರ ಸೋಫಿಯಾ ಎನ್ನುವ ರೋಬೋಗೆ ಸಿಟಿಜನ್​ಶಿಪ್ ನೀಡಿ ಅದು ದೊಡ್ಡ ಸುದ್ದಿ ಆಗಿತ್ತು. ಸಿಟಿಜನ್​ಶಿಪ್ ಸಿಕ್ಕಿದೆ ಅಂದರೆ ದೇವರಾಗೋದೇನೂ ತಡವಾಗೋಲ್ಲ. ಇನ್ನೊಂದಿಪ್ಪತ್ತೈದು ವರ್ಷ ಸಾಕು. ಆಮೇಲೆ ಗರ್ಭಗುಡಿಯಲ್ಲಿ ರೋಬೋಬ್ರಹ್ಮ ರೋಬೋವಿಷ್ಣು!  ರೋಬೋ ದೇವೋ ಮಹೇಶ್ವರಃ! ರೋಬೋ ಸಾಕ್ಷಾತ್ಪರಬ್ರಹ್ಮ ತಸ್ಮೈಶ್ರೀ ರೋಬೋವೇ ನಮಃ! ಅನ್ನೊ ಶ್ಲೋಕ ಕೇಳ್ತಿರುತ್ತೆ.

ಇಲ್ಲಿ ಒಂದು ವಿಷಯ ಹೇಳಲೇಬೇಕು. ರೋಬೋಗಳು ದೇವರಾಗೋ ಸ್ಥಿತಿ..ಅಥವಾ ದೇವರೆಂದು ನಾವು ಆರಾಧಿಸೋ ಸ್ಥಿತಿಯಲ್ಲಿ ಅಥವಾ ಕಾಲಮಾನದಲ್ಲಿ ಇಡೀ ಜಗತ್ತು ರೋಬೋಮಯವಾಗಿರುತ್ತೆ. ನಾವು ರೋಬೋಗಳ ಗುಲಾಮರಾಗಿರುತ್ತೇವೆ. ಅಥವಾ ರೋಬೋಗಳು ನಮ್ಮನ್ನ ರೂಲ್ ಮಾಡ್ತಿರುತ್ತವೆ. ಅಂಥದ್ದೊಂದು ಸ್ಥಿತಿ ಜಗತ್ತಿಗೆ ಬರೋದಕ್ಕೆ ಸಾಧ್ಯಾನ ಎನ್ನುವ ಡೌಟ್ ಬೇಡವೇ ಬೇಡ. ಯಾಕಂದ್ರೆ ರೋಬೋಗಳು ಇಡೀ ಮನುಕುಲವನ್ನ ಆಳಲಿವೆ..ಹುಷಾರ್ ಅಂತ ಈಗಾಗಲೇ ಜಗತ್ತಿನ ಖ್ಯಾತನಾಮರೆಲ್ಲ ಭವಿಷ್ಯ ನುಡಿದಿದ್ದಾರೆ.

ಅಲ್ಲೇ ಡಿಮಾಂಡ್..​ ಅಲ್ಲೇ ತಥಾಸ್ತು!: ರೋಬೋಗಳು ಅಮೂರ್ತ ಅಲ್ಲ ಪ್ರತ್ಯಕ್ಷ ದೇವರುಗಳು. ಮೂರ್ತ ಸ್ವರೂಪಿಗಳು. ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂತಾರಲ್ಲಾ ಹಾಗೆ, ಅಲ್ಲೇ ವರ ಕೇಳಿದ್ರೆ ಬಹುಶಃ ಅಲ್ಲೇ ತಥಾಸ್ತು ಅಂತ ಕೊಟ್ಟುಬಿಡಬಹುದು. ಹಾಗಾಗಿ ಭಕ್ತರ ಸಂಖ್ಯೆ ರೋಬೋಗೆ ಹೆಚ್ಚಾಗಲೂಬಹುದು. ಎಲ್ಲಾ ಸರಿ. ರೋಬೋನ ದೇವರ ಸ್ಥಾನಕ್ಕೆ ಏರಿಸೋದಾದ್ರೆ ಅವನಿಗೊಂದು ದೇವಸ್ಥಾನ ಬೇಕಲ್ವಾ? ಬೇಕೇಬೇಕು ಬಿಡಿ. ಅದರಲ್ಲಿ ನೋ ಡೌಟ್​. ಗೂಗಲ್ ಮತ್ತು ಉಬರ್​ ಕಂಪನಿಯಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿ ಇದಾನೆ. ಅವನ ಹೆಸರು ಆಂಥೊನೊ ಲೆವಾಂಡೋವ್​ಸ್ಕಿ. ಈತ ಒಂದು ವಿಶೇಷವಾದ ಧರ್ಮವನ್ನೇ ಹುಟ್ಟುಹಾಕಿದ್ದಾನೆ. ಜಗತ್ತಿನ ಸಾಮಾನ್ಯ ಜನ ಬೆಚ್ಚಿಬೀಳುವಂತ ಕೆಲಸಕ್ಕೆ ಕೈಹಾಕಿದ್ದಾನೆ. ಏನು ಬೆಚ್ಚಿಬೀಳುವಂತ ಕೆಲಸ ಅಂದ್ರೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್​ನ ಬೇಸ್ ಆಗಿಟ್ಟುಕೊಂಡು ಒಂದು ಧರ್ಮವನ್ನೇ ಸ್ಥಾಪಿಸಿದ್ದಾನೆ. ಅದೇ ವೇ ಆಫ್ ದಿ ಫ್ಯೂಚರ್​. ಸಿಂಪಲ್ ಆಗಿ ಹೇಳಬೇಕು ಅಂದರೆ ಡಿಜಿಟಲ್ ಧರ್ಮ.
Loading...

ಮನುಷ್ಯರನ್ನ ಕಾಪಾಡೋದು ರೋಬೋಗಳೆ!: ವೇ ಆಫ್ ದಿ ಲೈಫ್​ ಅಥವಾ ಡಿಜಿಟಲ್ ಧರ್ಮದ ವಿಶೇಷತೆ ಏನಂದ್ರೆ, ಜಗತ್ತಿನ ಒಳಿತಿಗಾಗಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್​ನ ಆರಾಧಿಸೋದು. ಆರ್ಥಾತ್​​ ರೋಬೋಗಳನ್ನ ಆರಾಧಿಸೋದು. ಯಾಕೆಂದ್ರೆ ಅವು ನಮಗಿಂತ ಬುದ್ಧಿವಂತರಂತೆ. ಮನುಕುಲದ ಒಳಿತಿಗಾಗಿ ಕೆಲಸ ಮಾಡುತ್ತವಂತೆ. ಹಾಗಾಗಿಯೇ ನಾವೇ ಸೃಷ್ಟಿಮಾಡಿದ ರೋಬೋನ ದೇವರ ಸ್ಥಾನಕ್ಕೆ ಏರಿಸೋದಕ್ಕೆ ಟ್ರೈ ಮಾಡ್ತಿರೋದು. ಇಷ್ಟಕ್ಕೂ ದೇವರುಗಳೇನು? ಅವರೂ ನಾವೇ ಸೃಷ್ಟಿಮಾಡಿದ್ದು ಅಂತಾನೇ ತಾನೆ ಒಂದು ನಂಬಿಕೆ ಇರೋದು. ಹಾಗಾಗಿಯೇ ರೋಬೋಗೂ ಸಿಕ್ಕಾಪಟ್ಟೆ ಸ್ಕೋಪ್ ಬರ್ತಿರೋದು.
First published:December 27, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...