ವೈರಲ್​ ಆಯಿತು ನಟ ರಿಷಿ ಕಪೂರ್​ ಶೇರ್​ ಮಾಡಿದ ರಾಯಲ್​ ವೆಡ್ಡಿಂಗ್​ ವಿಡಿಯೋ!

news18
Updated:May 21, 2018, 4:33 PM IST
ವೈರಲ್​ ಆಯಿತು ನಟ ರಿಷಿ ಕಪೂರ್​ ಶೇರ್​ ಮಾಡಿದ ರಾಯಲ್​ ವೆಡ್ಡಿಂಗ್​ ವಿಡಿಯೋ!
news18
Updated: May 21, 2018, 4:33 PM IST
ನ್ಯೂಸ್​ 18 ಕನ್ನಡ

ಕಳೆದ ಎರಡು ದಿನಗಳಿಂದ ಎಲ್ಲೆಡೆ ಕೇವಲ ಪ್ರಿನ್ಸ್​ ಹ್ಯಾರಿ ಹಾಗೂ ಮೇಘನ್​ ಅವರ ರಾಯಲ್​ ವೆಡ್ಡಿಂಗ್​ನದ್ದೇ ಚರ್ಚೆ. ಎಲ್ಲಿ ನೋಡಿದರೂ ಈ  ವಿವಾಹಕ್ಕೆ ಸಂಬಂಧಪಟ್ಟ ತರತರದ ಸುದ್ದಿಗಳೇ. ಈ ವಿವಾಹದಲ್ಲಿ ನಡೆದ ಸಾಂಪ್ರದಾಯಿಕ ಆಚರಣೆಗಳು ಹಾಗೂ ವಿವಾಹಕ್ಕೆಂದು ನಡೆಯುತ್ತಿರುವ ವಿಶೇಷ ಸಿದ್ಧತೆಗಳ ಬಗೆಗಿನ ಸುದ್ದಿಗಳದ್ದೇ ಕಾರುಬಾರು. ಹೀಗಿರುವಾಗಲೇ ನಟ ರಿಷಿ ಕಪೂರ್​ ಈ ರಾಯಲ್​ ವೆಡ್ಡಿಂಗ್​ಗೆ ಸಂಬಂಧಪಟ್ಟ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಅದು ಈಗ ವೈರಲ್​ ಆಗುತ್ತಿದೆ.

ಪ್ರಿನ್ಸ್​ ಹ್ಯಾರಿ ಹಾಗೂ ಮೇಘನ್​ ಅವರ ವಿವಾಹದ ವಿಡಿಯೋದಲ್ಲಿ ರಾಜ್​ ಕಪೂರ್​ ಅವರ ಒಂದು ಸಿನಿಮಾದ ಡೈಲಾಗ್​ ಅನ್ನು ಸೇರಿಸಿ ಡಬ್​ ಮಾಡಲಾಗಿದೆ. ಈ ವಿಡಿಯೋಗೆ ಈಗ ಲೈಕ್ಸ್​ ಹಾಗೂ ಶೇರ್​ಗಳು ಬರುತ್ತಿವೆ. ವಿಡಿಯೋ ಶೇರ್​ ಮಾಡಿರುವ ರಿಚಿ ಕಪೂರ್​ 'ಡಬ್​ ಮಾಡಲಾಗಿರುವ ರಾಯಲ್​ ವೆಡ್ಡಿಂಗ್​ನ ವಿಶೇಷ ವಿಡಿಯೋ ಕೇವಲ ಭಾರತದಲ್ಲಿ ಮಾತ್ರ ತೆರೆ ಕಂಡಿದೆ'  ಎಂದು ಬರೆದುಕೊಂಡಿದ್ದಾರೆ.

 


Loading... 

 
First published:May 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...