Malicious Apps: ಬ್ಯಾಂಕ್ ಖಾತೆ ವಿವರವನ್ನು ಎಗರಿಸುತ್ತೆ ಈ 12 ಅಪ್ಲಿಕೇಶನ್​ಗ​ಳು! ಡೌನ್ಲೋಡ್ ಮಾಡುವ ಮುನ್ನ ಎಚ್ಚರ!

Dangerous Apps: ಇತ್ತೀಚಿನ ವರದಿಯ ಪ್ರಕಾರ, ಬಳಕೆದಾರರ ಹೆಸರು, ಪಾಸ್‌ವರ್ಡ್‌ಗಳು (Password) ಮತ್ತು ಬಳಕೆದಾರರ ಬ್ಯಾಂಕ್ ಖಾತೆಯ (Bank Account) ವಿವರಗಳನ್ನು ಕದಿಯುವ 12 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಸಂಶೋಧಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕಂಡುಹಿಡಿದಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಗೂಗಲ್​ ಪ್ಲೇ ಸ್ಟೋರ್​ನಲ್ಲಿ (Google Play Store) ಮಾಲ್‌ವೇರ್ (Malware)-ಪ್ರೇರಿತ ಅಪ್ಲಿಕೇಶನ್‌ಗಳು ಆಗಾಗ ಕಾಣಿಸಿಕೊಳ್ಳುತ್ತಿವೆ. ಈ ಹಿಂದೆಯೂ ಇಂತಹ ಹಲವಾರು ಘಟನೆಗಳು ವರದಿಯಾಗಿವೆ. ಅದರಲ್ಲೂ ಬಳಕೆದಾರರ ವೈಯಕ್ತಿಕ ವಿವರಗಳ ಮೇಲೆ ಕಣ್ಣಾಡಿಸುವ ಮತ್ತು ಸಂಕಷ್ಟಕ್ಕೆ ದೂಡುವಂತಹ ಹಲವಾರು ಆ್ಯಪ್​ಗಳು ಮತ್ತು ಮಾಲ್​ವೇರ್​​ಗಳನ್ನು ಗೂಗಲ್​ ಪತ್ತೆಹಚ್ಚಿ ಪ್ಲೇ ಸ್ಟೋರ್​ನಿಂದ ಡಿಲೀಟ್​ ಮಾಡುತ್ತಾ ಬಂದಿದೆ. ಇದೀಗ ಮತ್ತೆ ಅಂತಹ 12 ಅಪ್ಲಿಕೇಶನ್​ಗಳು ಸಿಕ್ಕಿದ್ದು, ಪ್ಲೇ ಸ್ಟೋರ್​ನಿಂದ ತೆಗೆದು ಹಾಕಿದೆ. ಜೊತೆಗೆ ಬಳಕೆದಾರರಿಗೂ ಎಚ್ಚರಿಕೆಯ ಸಂದೇಶ ರವಾನಿಸಿದೆ.

  ಇತ್ತೀಚಿನ ವರದಿಯ ಪ್ರಕಾರ, ಬಳಕೆದಾರರ ಹೆಸರು, ಪಾಸ್‌ವರ್ಡ್‌ಗಳು (Password) ಮತ್ತು ಬಳಕೆದಾರರ ಬ್ಯಾಂಕ್ ಖಾತೆಯ (Bank Account) ವಿವರಗಳನ್ನು ಕದಿಯುವ 12 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಸಂಶೋಧಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕಂಡುಹಿಡಿದಿದ್ದಾರೆ. ಈ ಅಪ್ಲಿಕೇಶನ್‌ಗಳನ್ನು ಕಳೆದ ನಾಲ್ಕು ತಿಂಗಳಲ್ಲಿ ಸುಮಾರು 30000 ಬಾರಿ ಡೌನ್‌ಲೋಡ್ (Download) ಮಾಡಲಾಗಿದೆ ಎಂದು ತಿಳಿದುಬಂದಿದೆ.

  ಹಾಗಾಗಿ ಆಂಡ್ರಾಯ್ಡ್ ಬಳಕೆದಾರರು ತಮ್ಮ ಫೋನ್​ನಲ್ಲಿ ಯಾವ ರೀತಿಯ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುತ್ತಿದ್ದಾರೆ ಎಂಬುದರ ಕುರಿತು ಜಾಗರೂಕರಾಗಿರಬೇಕು. ದುರುದ್ದೇಶಪೂರಿತ ಮಾಲ್‌ವೇರ್ ಅಥವಾ ಸ್ಪೈವೇರ್‌ನಿಂದ ಜಾಗರೂಕರಾಗಿದ್ದರೆ ವೈಯ್ಯಕ್ತಿಕ ಮಾಹಿತಿ ಅಥವಾ ಸಂಕಷ್ಟಕ್ಕೆ ಸಲುಕುವ ಪ್ರಮೇಯ ಕಡಿಮೆಯಾದಿತು.

  ಥ್ರೆಟ್‌ಫ್ಯಾಬ್ರಿಕ್‌ನ ಸಂಶೋಧಕರ ಪ್ರಕಾರ, ಈ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಹೆಚ್ಚಾಗಿ ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳು ಮತ್ತು ಕೆಲವೊಮ್ಮೆ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳಂತೆ ಕಾಣಿಸುತ್ತವೆ. ಈ ಎಲ್ಲಾ ಅಪ್ಲಿಕೇಶನ್‌ಗಳನ್ನು ಪ್ರಾಥಮಿಕವಾಗಿ ಬ್ಯಾಂಕ್ ಖಾತೆಯ ವಿವರಗಳನ್ನು ಮತ್ತು ಎರಡು ಅಂಶದ ದೃಢೀಕರಣ ಕೋಡ್‌ಗಳನ್ನು ಕದಿಯಲು ವಿನ್ಯಾಸಗೊಳಿಸಲಾಗಿದೆ.

  ಈ ಎಲ್ಲಾ ಅಪ್ಲಿಕೇಶನ್‌ಗಳನ್ನು ಆರಂಭದಲ್ಲಿ ಯಾವುದೇ ಮಾಲ್‌ವೇರ್ ಅಥವಾ ಅನುಮಾನದ ಸುಳಿವುಗಳಿಲ್ಲದೆ ಕಾನೂನುಬದ್ಧ ಅಪ್ಲಿಕೇಶನ್‌ಗಳಾಗಿ ಪ್ರದರ್ಶಿಸಿಸಿತ್ತು ಎಂದು ಸಂಶೋಧಕರು ಹೈಲೈಟ್ ಮಾಡಿದ್ದಾರೆ. ವಾಸ್ತವವಾಗಿ, ಈ ಎಲ್ಲಾ ಅಪ್ಲಿಕೇಶನ್‌ಗಳು Google Play ಸ್ಟೋರ್‌ನಲ್ಲಿ ಸಕಾರಾತ್ಮಕ ವಿಮರ್ಶೆಗಳನ್ನು ಹೊಂದಿದ್ದವು. ಆದರೆ ಗೂಗಲ್​ ಅವುಗಳನ್ನು ಪತ್ತೆಹಚ್ಚುವ ಮೂಲಕ ಪ್ಲೇ ಸ್ಟೋರ್​ನಿಂದ ತೆಗೆದು ಹಾಕಿದೆ. ಆ ಮೂಲಕ ಬಳಕೆದಾರರಿಗೆ ಸುರಕ್ಷತೆ ಒದಗಿಸಲು ಮುಂದಾಗಿದೆ.

  ಇದನ್ನು ಓದಿ: WhatsApp: ಅಕ್ಟೋಬರ್​ನಲ್ಲಿ 20 ಲಕ್ಷ ವಾಟ್ಸ್​ಆ್ಯಪ್​ ಖಾತೆಗಳು ಬ್ಯಾನ್​! ಯಾಕಾಗಿ?

  ಬಳಕೆದಾರರು ಈ ಅಪ್ಲಿಕೇಶನ್‌ಗಳನ್ನು ಒಮ್ಮೆ ಇನ್​ಸ್ಟಾಕ್​ ಮಾಡಿದ ನಂತರ, ಹೆಚ್ಚುವರಿ ವೈಶಿಷ್ಟ್ಯಗಳಿಗಾಗಿ ಸಾಫ್ಟ್‌ವೇರ್ ನವೀಕರಣ ಮಾಡಲು ಬಳಕೆದಾರರನ್ನು ಕೇಳಲಾಯಿತು. ಈ ನವೀಕರಣಗಳು ಮೊಬೈಲ್ ಸಾಧನಗಳಲ್ಲಿ 'ಅನಾಟ್ಸಾ' ಎಂಬ ಸುಧಾರಿತ ಆಂಡ್ರಾಯ್ಡ್ ಬ್ಯಾಂಕಿಂಗ್ ಟ್ರೋಜನ್ ಅನ್ನು ಸ್ಥಾಪಿಸಿವೆ.

  ವರದಿಯ ಪ್ರಕಾರ, ಆಂಡ್ರಾಯ್ಡ್ ಟ್ರೋಜನ್ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಸಂಕಷ್ಟಕ್ಕೆ ದಾರಿ ಮಾಡಿಕೊಡುತ್ತದೆ.  ಅಂದರೆ ಹ್ಯಾಕರ್‌ಗಳಿಗೆ ರಿಮೋಟ್ ಪ್ರವೇಶವನ್ನು ನೀಡುವ ಸಾಮರ್ಥ್ಯವನ್ನು ಒದಗಿಸುತ್ತದೆ. ಈ ರೀತಿಯ ಪ್ರವೇಶ ಪಡೆದ ನಂತರ ಸ್ಕ್ಯಾಮರ್‌ಗಳು ಅಂತಿಮವಾಗಿ ಎಲ್ಲಾ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸುವ ಮೂಲಕ ಬ್ಯಾಂಕ್ ಖಾತೆಯನ್ನು ಅಳಿಸಿಹಾಕುತ್ತಾರೆ. ಅನಾಟ್ಸಾ ಜೊತೆಗೆ, ಈ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಏಲಿಯನ್, ಹೈಡ್ರಾ ಮತ್ತು ಎರ್ಮಾಕ್ ಸೇರಿದಂತೆ ಇತರ ಮಾಲ್‌ವೇರ್‌ಗಳನ್ನು ಸಹ ಹೊಂದಿವೆ ಎಂದು ವರದಿಯಲ್ಲಿ ಸೂಚಿಸಲಾಗಿದೆ.

  ಇದನ್ನು ಓದಿ: Twitter ಹೊಸ ಸಿಇಒ ಪರಾಗ್ ಅಗ್ರವಾಲ್ ಮತ್ತು ಬಾಲಿವುಡ್​ನ ಈ ಖ್ಯಾತ ಗಾಯಕಿ ಬಾಲ್ಯ ಸ್ನೇಹಿತರು!

  ಥ್ರೆಟ್‌ಫ್ಯಾಬ್ರಿಕ್ ಈ ಅಪ್ಲಿಕೇಶನ್‌ಗಳು ಹೆಚ್ಚು ದೊಡ್ಡ ಬೆದರಿಕೆಯನ್ನು ಉಂಟುಮಾಡಬಹುದು ಎಂದು ಹೈಲೈಟ್ ಮಾಡಿದೆ, ಆದರೆ ಹೊಸದಾಗಿ ಜಾರಿಗೊಳಿಸಲಾದ Google Play ನಿರ್ಬಂಧಗಳು, ಪ್ರವೇಶ ಸೇವೆಯಂತಹ ಅಪ್ಲಿಕೇಶನ್ ಅನುಮತಿಗಳ ಮೇಲೆ ಮಿತಿಗಳನ್ನು ಹಾಕುತ್ತದೆ, ಪರಿಸ್ಥಿತಿಯನ್ನು ನಿಯಂತ್ರಿಸುತ್ತದೆ.
  Published by:Harshith AS
  First published: