ನಿಮ್ಮ ವಾಟ್ಸಪ್ ಅಪ್ಲಿಕೇಶನ್​​ ಸೇಫ್​ ಅಲ್ಲಾ!


Updated:August 10, 2018, 12:40 PM IST
ನಿಮ್ಮ ವಾಟ್ಸಪ್ ಅಪ್ಲಿಕೇಶನ್​​ ಸೇಫ್​ ಅಲ್ಲಾ!
  • Share this:
ಜಗತ್ತಿನಲ್ಲೇ ಅತ್ಯಂತ ಜನಪ್ರಿಯ ಚಾಟಿಂಗ್​ ಆ್ಯಪ್​ಗಳಲ್ಲಿ ವಾಟ್ಸಪ್​ ಕೂಡಾ ಒಂದು ಎಂಬುದರಲ್ಲಿ ಸಂಶಯವಿಲ್ಲ. ವಾಟ್ಸಪ್​ ಅಪ್ಲಿಕೇಶನ್​ ಗೂಢಲಿಪೀಕರಣದ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುತ್ತಿದ್ದು ಯಾರೂ ಹ್ಯಾಕ್​ ಮಾಡಲು ಅಸಾಧ್ಯ ಎಂದು ಸಂಸ್ಥೆ ಹೇಳಿಕೊಂಡಿತ್ತು.

ಇದೀಗ ಇಸ್ರೇಲ್​ ತಾಂತ್ರಿಕ ತಜ್ಞರು ವಾಟ್ಸಪ್​ನಲ್ಲೂ ಸಾಕಷ್ಟು ಲೋಪದೋಷಗಳಿರುವುದನ್ನು ಕಂಡು ಹಿಡಿದಿದ್ದಾರೆ. ಚೆಕ್​ಪಾಯಿಂಟ್​ ಎಂಬ ಭದ್ರತಾ ತಜ್ಞರ ಪ್ರಕಾರ ಈ ದೋಷದಿಂದಲೇ ಹ್ಯಾಕರ್​​ಗಳು ಯಾವುದೇ ಸಂದೇಶವನ್ನು ಹ್ಯಾಕ್​ ಮಾಡಿ ಅವರಿಗೆ ಬೇಕಾದ ರೀತಿಯಲ್ಲಿ ಮಾರ್ಪಾಡು ಮಾಡುತ್ತಾರೆ ಎಂದು ಹೇಳಿದ್ದಾರೆ.

ಕಳೆದ ಹಲವು ದಿನಗಳಿಂದ ಸಾಕಷ್ಟು ದ್ವೇಷ ಸಂದೇಶಗಳು ಫೇಸ್​​ಬುಕ್​ ಮತ್ತು ವಾಟ್ಸಪ್​ನಲ್ಲಿ ರವಾನೆಯಾಗುತ್ತಿದೆ, ಆದರೆ ಇದನ್ನು ಮಟ್ಟ ಹಾಕಲು ಸಂಸ್ಥೆ ನೂತನ ಭದ್ರತಾ ಅಪ್​ಡೇಟ್​ಗಳನ್ನು ತರುತ್ತಲೇ ಇದೆ. ಆದರೆ ಈ ವರೆಗೂ ವಾಟ್ಸಪ್​ ಚೆಕ್​ಪಾಯಿಂಟ್​ ತಜ್ಞರು ಗುರುತಿಸಿದ ಲೋಪವನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ.

ಚೆಕ್​ಪಾಯಿಂಟ್​ ತಜ್ಞರ ಪ್ರಕಾರ , ಹ್ಯಾಕರ್​ಗಳು ಗುಂಪುಗಳಲ್ಲಿ ಶೇರ್​ ಆಗುವ ಸಂದೇಶವನ್ನು ಯಾರಿಗೂ ತಿಳಿಯದಂತೆ ಓದಬಹುದು, ಸಂದೇಶವನ್ನು ಹೈಜಾಕ್​ ಕೂಡಾ ಮಾಡಬಹುದು. ಈ ಸಂದೇಶಗಳಿಗೆ ಪ್ರತ್ಯುತ್ತರವನ್ನು ಸಹ ನೀಡಬಹುದು. ಮಹತ್ತರ ಸಂಗತಿಯೆಂದರೆ ಗುಂಪುಗಳಲ್ಲಿ ನಡೆಸುವ ಚಾಟ್​ ಆ ವ್ಯಕ್ತಿಗೇ ತಿಳಿಯದಂತೆ ಬದಲಾವಣೆ ಮಾಡಬಹುದು. ಈ ಲೋಪದಿಂದಾಗಿ ಖಾಸಾಗಿ ಸಂದೇಶಗಳನ್ನೂ ಕೂಡಾ ಹ್ಯಾಕರ್ಸ್​​ಗಳು ರವಾನಿಸಬಹುದಾಗಿದೆ.

ಇದೀಗ ವಾಟ್ಸಪ್​ ಈ ವಿಚಾರವನ್ನು ಗಂಭೀರವಾಗಿ ಪರಿಗಣೆನೆಗೆ ತೆಗೆದುಕೊಂಡಿದೆ, ಆದರೆ ತನ್ನ ಗೂಢಲಿಪೀಕರಣದಲ್ಲಿ ದೋಷವಿದೆ ಎಂದು ಹೇಳಿರುವ ಚೆಕ್​ಪಾಯಿಂಟ್​ ಆರೋಪವನ್ನು ತಳ್ಳಿ ಹಾಕಿದೆ. ಗೂಢಲಿಪೀಕರಣ ಕೇವಲ ನೀಲಿ ಮಾರ್ಕ್​ ಕಾಣಿಸಿಕೊಳ್ಳಲು ಬಳಕೆ ಮಾಡಲಾಗುತ್ತದೆ ಎಂದು ಹೇಳಿದೆ.

ವಾಟ್ಸಪ್​ನಲ್ಲಿ ರವಾನೆಯಾಗುವ ಪ್ರಚೋದನಾಕಾರಿ ಅಥವಾ ಸುಳ್ಳು ಸಂದೇಶಗಳಿಗೆ ಕಡಿವಾಣ ಹಾಕಲೆಂದೇ ದಿನಕ್ಕೆ ಐದು ಸಂದೇಶಗಳನ್ನು ಮಾತ್ರಾ ಕಳುಹಿಸಿರುವ ಮಿತಿಯನ್ನು ವಾಟ್ಸಪ್​ ತಂದಿತ್ತು.
First published: August 10, 2018, 12:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading