ಇತ್ತೀಚೆಗೆ ದೇಶದಲ್ಲಿ ಸ್ಮಾರ್ಟ್ಫೋನ್ಗಳ ಬಳಕೆ ಹೆಚ್ಚಾಗುತ್ತಲೇ ಇದೆ. ಆದರೆ ಕೆಲವೊಂದು ಸ್ಮಾರ್ಟ್ಫೋನ್ಗಳ ಬೆಲೆ ದುಬಾರಿಯಾದ್ದರಿಂದ ಗ್ರಾಹಕರಿಗೆ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಇದಕ್ಕಂತನೇ ಕೆಲವೊಂದು ಇಕಾಮರ್ಸ್ ಕಂಪೆನಿಗಳು ಆಫರ್ಸ್ ಸೇಲ್ (Offers Sale) ಅನ್ನು ಹಮ್ಮಿಕೊಳ್ಳುತ್ತವೆ. ಈ ಸೇಲ್ನಲ್ಲಿ ಅನೇಕ ಇಲೆಕ್ಟ್ರಾನಿಕ್ಸ್ ಸಾಧನಗಳ ಮೇಲೆ, ಗ್ಯಾಜೆಟ್ಸ್ಗಳ ಮೇಲೆ, ಸ್ಮಾರ್ಟ್ಫೋನ್ಗಳ ಮೇಲೆ ವಿಶೇಷ ಆಫರ್ಸ್ಗಳು ಲಭ್ಯವಿರುತ್ತದೆ. ಇತ್ತೀಚೆಗೆ ಅಮೆಜಾನ್, ಫ್ಲಿಪ್ಕಾರ್ಟ್ ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷ ಡಿಸ್ಕೌಂಟ್ ಸೇಲ್ ಅನ್ನು ಆರಂಭಿಸಿತ್ತು. ಅದೇ ರೀತಿ ಇದೀಗ ಜನಪ್ರಿಯ ಇಕಾಮರ್ಸ್ ಕಂಪೆನಿಯಾಗಿರುವ ವಿಜಯ್ಸೇಲ್ಸ್ (Vijay Sales) ‘ಮೆಗಾ ರಿಪಬ್ಲಿಕ್ ಡೇ ಸೇಲ್’ (Mega Republic Day Sale) ಅನ್ನು ಆರಂಭಿಸಿದೆ.
ಸದ್ಯ ಜನಪ್ರಿಯ ಇಕಾಮರ್ಸ್ ಕಂಪೆನಿಯಾಗಿರುವ ವಿಜಯ್ ಸೇಲ್ಸ್ ಮೆಗಾ ರಿಪಬ್ಲಿಕ್ ಡೇ ಸೇಲ್ ಅನ್ನು ಆರಂಭಿಸಿದೆ. ಈ ಸೇಲ್ನಲ್ಲಿ ಲ್ಯಾಪ್ಟಾಪ್ಗಳು, ಸ್ಮಾರ್ಟ್ಫೋನ್, ಹೆಡ್ಫೋನ್, ಇಯರ್ಫೋನ್ಗಳ ಮೇಲೆ ವಿಶೇಷ ಆಫರ್ಸ್ ಅನ್ನು ನೀಡುತ್ತಿದೆ. ಹಾಗಿದ್ರೆ ರಿಯಾಯಿತಿಯಲ್ಲಿರುವ ಸ್ಮಾರ್ಟ್ಫೋನ್ಗಳು ಯಾವುದೆಲ್ಲಾ ಎಂಬುದನ್ನು ಇಲ್ಲಿ ತಿಳಿಯಿರಿ.
ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎ7 ಲೈಟ್
ಇದೀಗ ವಿಜಯ್ ಸೇಲ್ನ ಮೆಗಾ ರಿಪಬ್ಲಿಕ್ ಡೇ ಸೇಲ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎ7 ಲೈಟ್ ಡಿವೈಸ್ ಮೇಲೆ ಭರ್ಜರಿ ಕೊಡುಗಡ ಲಭ್ಯವಿದೆ. ಈ ಕೊಡುಗೆ ಮೂಲಕ ಗ್ರಾಹಕರು ಈ ಡಿವೈಸ್ ಅನ್ನು ಕೇವಲ 9,999 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಈ ಡಿವೈಸ್ನ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು 1,340 x 800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 8.7 ಇಂಚಿನ WXGA + ಟಿಎಫ್ಟಿ ಡಿಸ್ಪ್ಲೇಯನ್ನು ಹೊಂದಿದೆ.
ಹಾಗೆಯೇ ಈ ಟ್ಯಾಬ್ಲೆಟ್ ಮೀಡಿಯಾ ಟೆಕ್ ಹೆಲಿಯೊ ಪಿ22ಟಿ ಎಸ್ಓಸಿ ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಒನ್ ಯುಐ ಕೋರ್ 3.1 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ 3 ಜಿಬಿ ರ್ಯಾಮ್ ಮತ್ತು 32ಜಿಬಿ ಹಾಗೂ 4ಜಿಬಿ ರ್ಯಾಮ್ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿವೆ. ಅಲ್ಲದೇ 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎ23 ಸ್ಮಾರ್ಟ್ಫೋನ್
ಸ್ಯಾಮ್ಸಂಗ್ ಗ್ಯಾಲಕ್ಸಿ ಎ23 ಸ್ಮಾರ್ಟ್ಫೋನ್ ಅನ್ನು ವಿಜಯ್ ಸೇಲ್ನಲ್ಲಿ 18,499 ರೂಪಾಯಿಗಳಿಗೆ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇದರೊಂದಿಗೆ ಈ ಸ್ಮಾರ್ಟ್ಫೋನ್ ಮೇಲೆ ಬ್ಯಾಂಕ್ ಆಫರ್ ಸಹ ದೊರೆಯುತ್ತವೆ. ಇನ್ನು ಈ ಸ್ಮಾರ್ಟ್ಫೋನ್ 6.6 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಪ್ರೊಸೆಸರ್ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್ 12-ಆಧಾರಿತ One UI 4.1 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಹಾಗೆಯೇ 8ಜಿಬಿ ರ್ಯಾಮ್ ಮತ್ತು 128ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 25W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಒಳಗೊಂಡಿದೆ.
ಒನ್ಪ್ಲಸ್ 10ಆರ್ 5ಜಿ ಸ್ಮಾರ್ಟ್ಫೋನ್
ವಿಜಯ್ ಸೇಲ್ಸ್ ಆಯೋಜಿಸಿರುವ ಮೆಗಾ ರಿಪಬ್ಲಿಕ್ ಡೇ ಸೇಲ್ನಲ್ಲಿ ಒನ್ಪ್ಲಸ್ 10ಆರ್ 5ಜಿ ಫೋನ್ ಭಾರೀ ಡಿಸ್ಕೌಂಟ್ನಲ್ಲಿ ಲಭ್ಯವಿದೆ. ಇದರ ರಿಯಾಯಿತಿ ದರದಲ್ಲಿ ಕೇವಲ 32,999 ರೂ. ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಫೋನ್ 6.7 ಇಂಚಿನ ಫುಲ್ ಹೆಚ್ಡಿ ಪ್ಲಸ್ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ನ ಈ ಸ್ಮಾರ್ಟ್ಫೋನ್ ಮೇಲೆ ಊಹೆಯೂ ಮಾಡಿರದ ಆಫರ್ಸ್ ಬಿಡುಗಡೆ! ಫೀಚರ್ಸ್ ಹೇಗಿದೆ?
ಹಾಗೆಯೇ ಈ ಡಿಸ್ಪ್ಲೇ 1,080 x 2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಮ್ಯಾಕ್ಸ್ SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಆಧಾರಿತ OxygenOS 12.1 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 4,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ