ಇನೋವಾ ಕಾರಿಗೆ ಪೈಪೋಟಿ ನೀಡಲು ಕಡಿಮೆ ಬೆಲೆಯಲ್ಲಿ ಸಿದ್ಧವಾಗಿದೆ ಹೊಸ ಕಾರು

ರೆನಾಲ್ಟ್​ ಕಂಪೆನಿ ತಯಾರಿಸಿರುವ ನೂತನ ಕಾರಿಗೆ ರೆನಾಲ್ಟ್​ ಟ್ರೈಬರ್​ ಎಂದು ನಾಮಕರಣ ಮಾಡಲಾಗಿದ್ದು, ಗ್ರಾಹಕರಿಕೆ ಕಡಿಮೆ ಬೆಲೆಯಲ್ಲಿ ದೊರಕುವಂತೆ ಕಂಪೆನಿಯು ಯೋಜನೆಯನ್ನು ಹಾಕಿಕೊಂಡಿದೆ.

news18
Updated:April 10, 2019, 6:10 PM IST
ಇನೋವಾ ಕಾರಿಗೆ ಪೈಪೋಟಿ ನೀಡಲು ಕಡಿಮೆ ಬೆಲೆಯಲ್ಲಿ ಸಿದ್ಧವಾಗಿದೆ ಹೊಸ ಕಾರು
ರೆನಾಲ್ಟ್​ ಟ್ರೈಬರ್
news18
Updated: April 10, 2019, 6:10 PM IST
ನವದೆಹಲಿ(ಏ.10): ರೆನಾಲ್ಟ್​ ಕಂಪೆನಿ ಬಿಡುಗಡೆಗೊಳಿಸಿದ ಕ್ವಿಡ್​ ಕಾರು ದೇಶದೆಲ್ಲೆಡೆ ಅಧಿಕ ಮಾರಾಟದಿಂದ ದಾಖಲೆ ಗಿಟ್ಟಿಸಿಕೊಂಡಿದೆ. ಕಡಿಮೆ ಬೆಲೆಯಲ್ಲಿ ಬಳಕೆಗೆ ಉತ್ತಮವಾದ ಕಾರನ್ನು ನೀಡುವ ಮೂಲಕ ಸಾಕಷ್ಟು ಜನರ ಮನ ಗೆದ್ದಿದೆ. ಇದೀಗ ರೆನಾಲ್ಟ್​ ಕಂಪೆನಿ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದು, ರೆನಾಲ್ಟ್​ ಕ್ವಿಡ್​ ಮಾಡರಿಯಲ್ಲೇ ಕಡಿಮೆ ಬೆಲೆಗೆ ಅಧಿಕ ಸ್ಥಳವಕಾಶಹೊಂದಿರುವ  ಹೊಸ ಎಂಪಿವಿ ಕಾರೊಂದನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ಮೂಲಕ ಟೊಯೊಟಾ ಕಂಪೆನಿಯ ಇನೋವಾ, ಮಾರುತಿ ಎರ್ಟಿಗಾ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

ರೆನಾಲ್ಟ್​ ಕಂಪೆನಿ ತಯಾರಿಸಿರುವ ನೂತನ ಕಾರಿಗೆ ರೆನಾಲ್ಟ್​ ಟ್ರೈಬರ್​ ಎಂದು ನಾಮಕರಣ ಮಾಡಲಾಗಿದ್ದು, ಗ್ರಾಹಕರಿಕೆ ಕಡಿಮೆ ಬೆಲೆಯಲ್ಲಿ ದೊರಕುವಂತೆ ಕಂಪೆನಿಯು ಯೋಜನೆಯನ್ನು ಹಾಕಿಕೊಂಡಿದೆ. ಈಗಾಗಲೇ ರೆನಾಲ್ಟ್​​ ಟ್ರೈಬರ್​ ಕಾರಿನ ಬೆಲೆಯನ್ನು 5.5 ಲಕ್ಷ ರೂ ಎಂದು ತಿಳಿಸಿದೆ

 ಕಂಪೆನಿ ಪರಿಚಯಿಸುತ್ತಿರುವ ನೂತನ ರೆನಾಲ್ಟ್​ ಟ್ರೈಬರ್​ ಕಾರು ಜುಲೈನಲ್ಲಿ ಬಿಡುಗಡೆಯಾಗಲಿದೆ . ಚಾಲನೆಗೆ ಮತ್ತು ಸುರಕ್ಷತೆಗೆ ಯೋಗ್ಯವಾದ ಎಂದು ಕಂಪೆನಿ ತಿಳಿಸಿದೆ.
First published:April 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ