HOME » NEWS » Tech » RENAULT OFFERING HUGE SAVINGS OF UPTO RS 75000 ON DUSTER KWID TRIBER FOR MAY 2021 HG

Renault; ರೈತರು, ಪಂಚಾಯತ್​ ಸದಸ್ಯರಿಗೆ ಒಂದೊಳ್ಳೆ ಅವಕಾಶ; ರೆನಾಲ್ಟ್​ ಕಾರುಗಳ ಮೇಲೆ 75 ಸಾವಿರ ಡಿಸ್ಕೌಂಟ್​!

ಕಾರು ಪ್ರಿಯರಿಗಾಗಿ ರೆನಾಲ್ಟ್​ ಇಂಡಿಯಾ ಭರ್ಜರಿ ಆಫರ್ ನೀಡಿದ್ದಲ್ಲದೆ, ಗ್ರಾಮೀಣ ಮತ್ತು ಕಾರ್ಪೊರೇಟ್​​ ಕೊಡುಗೆಯನ್ನು ಸಹ ನೀಡುತ್ತಿದೆ . ಗ್ರಾಮೀಣ ಯೋಜನೆಯಡಿ ರೈತರು, ಸರ್ಪಂಚ್​ ಮತ್ತು ಗ್ರಾಮ ಪಂಚಾಯತ್​ ಸದಸ್ಯರಿಗೆ ಹೆಚ್ಚುವರಿ ರಿಯಾಯಿತಿ ನೀಡುತ್ತಿದೆ.

news18-kannada
Updated:May 8, 2021, 3:19 PM IST
Renault; ರೈತರು, ಪಂಚಾಯತ್​ ಸದಸ್ಯರಿಗೆ ಒಂದೊಳ್ಳೆ ಅವಕಾಶ; ರೆನಾಲ್ಟ್​ ಕಾರುಗಳ ಮೇಲೆ 75 ಸಾವಿರ ಡಿಸ್ಕೌಂಟ್​!
Renault Triber
  • Share this:
ರೆನಾಲ್ಡ್​ ಇಂಡಿಯಾ ತನ್ನ ಕಾರುಗಳ ಮೇಲೆ ರಿಯಾಯಿತಿ ನೀಡಿದೆ. ಮೇ ತಿಂಗಳಿನಲ್ಲಿ ಕಾರು ಖರೀದಿಸಬೇಕೆಂದುಕೊಂಡ ಗ್ರಾಹಕರಿಗಾಗಿ ಈ ಸೌಲಭ್ಯವನ್ನು ಒದಗಿಸಿದೆ. ರೆನಾಲ್ಟ್​ ಇಂಡಿಯಾ ಸುಮಾರು 75 ಸಾವಿರ ರೂಗಳ ಡಿಸ್ಕೌಂಟ್​ ನೀಡಿದ್ದು, ಡಸ್ಟರ್​, ಕಿಗರ್​, ಟ್ರೈಬರ್​ ಮತ್ತು ಕ್ವಿಡ್​ ಕಾರು ಒಳಗೊಂಡಿದೆ.

ಕಾರು ಪ್ರಿಯರಿಗಾಗಿ ರೆನಾಲ್ಟ್​ ಇಂಡಿಯಾ ಭರ್ಜರಿ ಆಫರ್ ನೀಡಿದ್ದಲ್ಲದೆ, ಗ್ರಾಮೀಣ ಮತ್ತು ಕಾರ್ಪೊರೇಟ್​​ ಕೊಡುಗೆಯನ್ನು ಸಹ ನೀಡುತ್ತಿದೆ . ಗ್ರಾಮೀಣ ಯೋಜನೆಯಡಿ ರೈತರು, ಸರ್ಪಂಚ್​ ಮತ್ತು ಗ್ರಾಮ ಪಂಚಾಯತ್​ ಸದಸ್ಯರಿಗೆ ಹೆಚ್ಚುವರಿ ರಿಯಾಯಿತಿ ನೀಡುತ್ತಿದೆ. ಜೊತೆಗೆ ಕಾರ್ಪೊರೇಟ್​ ಯೋಜನೆಯ ಮೂಲಕ ಹೆಚ್ಚುವರಿ ರಿಯಾಯಿತಿ ಮತ್ತು ಕಾರ್ಪೊರೇಟ್​ ಪಟ್ಟಿಯನ್ನು ನೀಡುತ್ತದೆ. ಇನ್ನು ಮೇ 31ರವರೆಗೆ ಮಾಡಿದ ಎಲ್ಲಾ ಬುಕ್ಕಿಂಗ್​ನಲ್ಲಿ ಈ ಕೊಡುಗೆ ಮಾನ್ಯವಾಗುತ್ತದೆ

ರೆನಾಲ್ಟ್​ ಕಾರುಗಳ ಮೇಲಿನ ಆಫರ್​ ಹೀಗೆದೆ…

Renault Kwid:​  ಅಧಿಕ ಮಾರಾಟವಾದ ಕಾರು- ಮೈ2020 ಕಾರಿನ ಮೇಲೆ 20 ಸಾವಿರ ಕ್ಯಾಶ್​ ಡಿಸ್ಕೌಂಟ್​​ ನೀಡುತ್ತಿದೆ. ಅಂತೆಯೇ ಮೈ2021 ಮಾಡೆಲ್​ ಕಾರಿನ ಮೇಲೆ 10 ಸಾವಿರ ರಿಯಾಯಿತಿ ನೀಡುತ್ತಿದೆ. ಜೊತೆಗೆ 20 ಸಾವಿರ ಅಡಿಷನಲ್​ ಎಕ್ಸ್​ಚೇಂಜ್​ ಬೋನಸ್​ ನೀಡುತ್ತಿದೆ. ಗ್ರಾಹಕರಿಗಾಗಿ ಗ್ರಾಮೀಣ ಮತ್ತು ಕಾರ್ಪೊರೇಟ್​ ಯೋಜನೆ ಮೂಲಕ 5 ಸಾವಿರ ಮತ್ತು 10 ಸಾವಿರ ಡಿಸ್ಕೌಂಟ್​ ನೀಡುತ್ತಿದೆ.

Triber: ರೆನಾಲ್ಟ್​ ಟ್ರೈಬರ್​​ ಕಾರು ವಿನ್ಯಾಸ ಮತ್ತು ಕೆಲವು ಅಪ್ಡೇಟ್​ ಮಾಡಿದೆ. ಗ್ರಾಹಕರಿಗಾಗಿ ಮೈ2020 ಕಾರಿನ ಮೇಲೆ 25 ಸಾವಿರ ಡಿಸ್ಕೌಂಟ್​ ನೀಡುತ್ತಿದೆ. ಮೈ2021 ಮಾಡೆಲ್​ ಕಾರಿನ ಮೇಲೆ 15 ಸಾವಿರ ಡಿಸ್ಕೌಂಟ್​ ನೀಡುತ್ತಿದೆ. ಅದರ ಜೊತೆಗೆ 20 ಸಾವಿರ ಎಕ್ಸ್​ಚೇಂಜ್​ ಬೋನಸ್​ ಮತ್ತು ಆರ್​ಎಕ್ಸ್​ಇ ಮಾಡೆಲ್​ ಮೇಲೆ 10 ಸಾವಿರ ಲಾಯಲ್ಟ್​ ಬೋನಸ್​ ನೀಡುತ್ತಿದೆ. ಗ್ರಾಮೀಣ ಮತ್ತು ಕಾರ್ಪೊರೇಟ್​ ಯೋಜನೆಯಡಿಯಲ್ಲೂ  5 ಸಾವಿರ ಮತ್ತು  10 ಸಾವಿರ ಡಿಸ್ಕೌಂಟ್​ ನೀಡುತ್ತಿದೆ.

Duster​: 1.5 ಲೀಟರ್​ ಮತ್ತು 1.3 ಲೀಟರ್​ ಟರ್ಬೊ ಎಂಜಿನ್​ ದಸ್ಟರ್​ ಕಾರಿನ ಮೇಲೆ 75 ಸಾವಿರ ಆಫರ್​ ನೀಡಿದೆ. ಅದರಲ್ಲಿ ಆರ್​ಎಕ್ಸ್​ಎಸ್​ ಮತ್ತು ಆರ್​ಎಕ್ಸ್​ಝೆಡ್​ ವೇರಿಯಂಟ್​ 1.5 ಲೀಟರ್​ ವರ್ಷನ್​ ಮೇಲೆ 30 ಸಾವಿರ ಎಕ್​ಸ್​ಚೇಂಜ್​ ಆಫರ್​ ನೀಡಿದೆ. ಜೊತೆಗೆ 15 ಸಾವಿರ ಗ್ರಾಮೀಣ ಡಿಸ್ಕೌಂಟ್​ ಮತ್ತು 30 ಸಾವಿರ ಕಾರ್ಪೊರೇಟ್​ ಡಿಸ್ಕೌಂಟ್​ ನೀಡಿದೆ. ಆರ್​ಎಕ್ಸ್​ಎಸ್​ ಮ್ಯಾನುಯೆಲ್​ ಮತ್ತು ಸಿವಿಟಿ ವರ್ಷನ್​1.3 ಟರ್ಬೊ ಎಂಜಿನ್​ ಕಾರಿನ ಮೇಲೆ 30 ಸಾವಿರ ಕ್ಯಾಶ್​ ಬ್ಯಾಕ್​ ನೀಡಿದೆ.
Youtube Video
Kiger: ಈ ಕಾರಿನ ಮೇಲೆ 5 ವರ್ಷ ಅಥವಾ 10 ಲಕ್ಷ ಕಿ.ಮೀ ವಿಸ್ತೃತ ಖಾತರಿ, ಲಾಯಲ್ಟಿ ಪ್ರಯೋಜನ ನೀಡುತ್ತಿದೆ. ಇದು ವಿನಿಮಯದ ಲಾಭ ಮತ್ತು ಯಾವುದೇ ರೆನಾಲ್ಟ್​ ಮಾದರಿ ಖರೀದಿಗೆ ಅನ್ವಯಿಸುತ್ತದೆ.
Published by: Harshith AS
First published: May 8, 2021, 3:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories