HOME » NEWS » Tech » RENAULT CARS PRICE IN INDIA INCREASED AGAIN CHECK NEW PRICES HERE STG HG

Renault ಪ್ರಿಯರಿಗೆ ಶಾಕಿಂಗ್ ನ್ಯೂಸ್‌: ಭಾರತದಲ್ಲಿ ಕಾರುಗಳ ಬೆಲೆ ಮತ್ತೆ ಹೆಚ್ಚಳ 

Renault car: ಫ್ರೆಂಚ್ ವಾಹನ ತಯಾರಕ ಭಾರತದಲ್ಲಿ ತನ್ನ ವಾಹನಗಳಿಗೆ ಮತ್ತೊಮ್ಮೆ ಬೆಲೆ ಏರಿಕೆ ಮಾಡಿದೆ. ನೀವು ಮರೆತಿದ್ದರೆ ಕಂಪನಿಯು ಕೊನೆಯ ಬಾರಿಗೆ ಬೆಲೆಗಳನ್ನು ಏಪ್ರಿಲ್ 2021ರಲ್ಲಿ ಹೆಚ್ಚಿಸಿತ್ತು. ಈಗ ಜೂನ್‌ ತಿಂಗಳಿಗೆ ಮತ್ತೊಮ್ಮೆ ಸೈಲೆಂಟಾಗಿ ಬೆಲೆಗಳನ್ನು ಹೆಚ್ಚಿಸಿದೆ.

news18-kannada
Updated:June 8, 2021, 2:08 PM IST
Renault ಪ್ರಿಯರಿಗೆ ಶಾಕಿಂಗ್ ನ್ಯೂಸ್‌: ಭಾರತದಲ್ಲಿ ಕಾರುಗಳ ಬೆಲೆ ಮತ್ತೆ ಹೆಚ್ಚಳ 
ರೆನಾಲ್ಟ್ ಕಾರು
  • Share this:

ಭಾರತದಲ್ಲಿ ರೆನಾಲ್ಟ್ ಕಾರು ಜನಪ್ರಿಯ ಕಾರುಗಳಲ್ಲಿ ಒಂದು. ಆದರೆ, ಈ ಕಾರು ತೆಗೆದುಕೊಳ್ಳಬೇಕೆಂದವರಿಗೆ ಇಲ್ಲಿದೆ ಬ್ಯಾಡ್‌ ನ್ಯೂಸ್‌. ಹಲವರಂತೆ ನೀವೂ ಸಹ ಈ ಕಾರು ಕೊಳ್ಳಲು ಆಸೆ ಪಡುತ್ತಿದ್ದು, ಈಗ ಬುಕ್‌ ಮಾಡಬೇಕೆಂದಿದ್ದರೆ ನಿಮಗೆ ಶಾಕಿಂಗ್ ನ್ಯೂಸ್‌ ಕಾದಿದೆ. ಅದೇನೆಂದರೆ ಫ್ರೆಂಚ್ ವಾಹನ ತಯಾರಕ ಭಾರತದಲ್ಲಿ ತನ್ನ ವಾಹನಗಳಿಗೆ ಮತ್ತೊಮ್ಮೆ ಬೆಲೆ ಏರಿಕೆ ಮಾಡಿದೆ. ನೀವು ಮರೆತಿದ್ದರೆ ಕಂಪನಿಯು ಕೊನೆಯ ಬಾರಿಗೆ ಬೆಲೆಗಳನ್ನು ಏಪ್ರಿಲ್ 2021ರಲ್ಲಿ ಹೆಚ್ಚಿಸಿತ್ತು. ಈಗ ಜೂನ್‌ ತಿಂಗಳಿಗೆ ಮತ್ತೊಮ್ಮೆ ಸೈಲೆಂಟಾಗಿ ಬೆಲೆಗಳನ್ನು ಹೆಚ್ಚಿಸಿದೆ.


ಇನ್ನು, ರೆನಾಲ್ಟ್‌ ಕಂಪನಿ ಈ ಬೆಲೆ ಹೆಚ್ಚಳದ ಬಗ್ಗೆ ಯಾವುದೇ ವಿವರಣೆಯನ್ನೂ ನೀಡಿಲ್ಲ. ಆದರೂ, ಇನ್‌ಪುಟ್‌ ವೆಚ್ಚಗಳ ಹೆಚ್ಚಳದಿಂದ ಈ ಕ್ರಮ ಎನ್ನಲಾಗಿದ್ದು, ಇದನ್ನೇ ಕಾರಣವಾಗಿ ನೀಡಬಹುದು. ರೆನಾಲ್ಟ್ ಡಸ್ಟರ್, ರೆನಾಲ್ಟ್ ಕಿಗರ್, ರೆನಾಲ್ಟ್ ಕ್ವಿಡ್ ಮತ್ತು ರೆನಾಲ್ಟ್ ಟ್ರೈಬರ್ - ಎಲ್ಲ ವಾಹನಗಳ ಬೆಲೆಯನ್ನೂ ಹೆಚ್ಚಿಸಲಾಗಿದೆ. ಪ್ರತಿ ಮಾಡೆಲ್‌ಗೆ 7,095 ರೂ. ರಿಂದ, 39,030 ರೂ. ನಡುವೆ ಯಾವ್ಯಾವ ಕಾರುಗಳ ಮೇಲೆ ಎಷ್ಟು ಬೆಲೆ ಏರಿಕೆ ಅಂತೀರಾ.. ಇಲ್ಲಿ ನೋಡಿ..



ಪರಿಷ್ಕೃತ ಬೆಲೆಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. (ಕಾರುಗಳ ಮಾಡೆಲ್‌ಗಳ ಆಧಾರಾದ ಮೇಲೆ ಈ ಬೆಲೆ ವ್ಯತ್ಯಾಸ ಆಗುತ್ತದೆ)


ಮಾಡೆಲ್‌ ಪ್ರಸ್ತುತ ಬೆಲೆ ಶ್ರೇಣಿ (ಎಕ್ಸ್ ಶೋರೂಮ್) ಬೆಲೆ ವ್ಯತ್ಯಾಸ


ರೆನಾಲ್ಟ್ ಡಸ್ಟರ್ 9.86 ಲಕ್ಷ ರೂ. - 14.25 ಲಕ್ಷ ವರೆಗೆ 13,050 ರೂ. ವರೆಗೆ
ರೆನಾಲ್ಟ್ ಕ್ವಿಡ್ 3.32 ಲಕ್ಷ ರೂ. ನಿಂದ 5.48 ಲಕ್ಷ ವರೆಗೆ 13,900 ರೂ. ವರೆಗೆ
ರೆನಾಲ್ಟ್ ಟ್ರೈಬರ್ 5.5 ಲಕ್ಷ ರೂ. ನಿಂದ 7.95 ಲಕ್ಷ ರೂ. ವರೆಗೆ 39,030 ರೂ. ವರೆಗೆ

ಈ ವರ್ಷದಲ್ಲಿ ಅಂದರೆ 2021 ರಲ್ಲಿ ವಾಹನ ತಯಾರಕ ಮೂರನೇ ಬಾರಿ ತನ್ನ ಬೆಲೆಯನ್ನು ಹೆಚ್ಚಿಸಿದೆ. ಜನವರಿ 2021 ರಲ್ಲಿ ಭಾರತದಲ್ಲಿ ತನ್ನ ಕಾರುಗಳ ಬೆಲೆಯನ್ನು, 28,000 ವರೆಗೆ ಪರಿಷ್ಕರಣೆ ಮಾಡಿದ್ದಾಗಿ ಘೋಷಿಸಿತ್ತು. ಇಡೀ ಪರಿಸರ ವ್ಯವಸ್ಥೆಯಾದ್ಯಂತ ಹೆಚ್ಚುತ್ತಿರುವ ಇನ್ಪುಟ್ ವೆಚ್ಚಗಳ ಪರಿಣಾಮ ಬೆಲೆ ಏರಿಕೆಯಾಗಿದೆ ಎಂದು ರೆನಾಲ್ಟ್‌ ಕಂಪನಿ ಆ ವೇಳೆ ತಿಳಿಸಿತ್ತು. ಇದರಲ್ಲಿ ಉಕ್ಕು, ಅಲ್ಯೂಮಿನಿಯಂ, ಪ್ಲಾಸ್ಟಿಕ್ ಮತ್ತು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಕಾರುಗಳ ಉತ್ಪಾದನೆಗೆ ಸಂಬಂಧಿಸಿದ ಇತರ ವೆಚ್ಚಗಳು ಸೇರಿವೆ.

ನಂತರ ಏಪ್ರಿಲ್‌ 2021 ರಲ್ಲಿ ಮತ್ತೆ ರೆನಾಲ್ಟ್‌ ತನ್ನ ಹಲವು ಕಾರುಗಳ ಮೇಲೆ ಬೆಲೆ ಹೆಚ್ಚಿಸಿತ್ತು. ಈಗ ಮತ್ತೆ ಕೊರೊನಾ ಪ್ರಕರಣಗಳ ಹೆಚ್ಚಳದಿಂದ ಲಾಕ್‌ಡೌನ್‌ ಆಗಿರುವ ಪರಿಣಾಮ ಕಾರುಗಳ ಮಾರಾಟ ಪಾತಾಳಕ್ಕೆ ಕುಸಿದಿದೆ. ಇದರಿಂದ ಹಲವು ಕಾರು ಕಂಪನಿಗಳು ನಷ್ಟ ಅನುಭವಿಸುತ್ತವೆ. ಈ ಹಿನ್ನೆಲೆ ಹಲವು ಕಾರು ಕಂಪನಿಗಳು ಬೆಲೆ ಏರಿಕೆಯ ಮೊರೆ ಹೋಗಿವೆ.


First published: June 8, 2021, 2:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories