Trending ವಿಭಾಗವನ್ನೇ ಕಿತ್ತೆಸೆದ Facebook


Updated:June 4, 2018, 2:12 PM IST
Trending ವಿಭಾಗವನ್ನೇ ಕಿತ್ತೆಸೆದ Facebook

Updated: June 4, 2018, 2:12 PM IST
ನ್ಯೂಯಾರ್ಕ್​: ಫೇಸ್​ಬುಕ್​ನಲ್ಲಿ ಹೆಚ್ಚು ಪ್ರಚಾರಕ್ಕೊಳಪಡದ ಟ್ರೆಂಡಿಂಗ್​ ಬಟನ್​ಗೆ ಮುಕ್ತಿ ನೀಡಲು ಕೊನೆಗೂ ಸಂಸ್ಥೆ ನಿರ್ಧರಿಸಿದೆ.

ಸುಮಾರು ನಾಲ್ಕು ವರ್ಷಗಳಿಗಿಂತಲೂ ಅಧಿಕ ಕಾಲ ಫೇಸ್​ಬುಕ್​ ಟ್ರೆಂಡಿಂಗ್​ ನ್ಯೂಸ್​ಗಳನ್ನು ತನ್ನ ಟ್ರೆಂಡ್​ ಸೆಕ್ಷನ್​ನಲ್ಲಿ ಅಪ್​ಡೇಟ್​ ನೀಡುತ್ತಾ ಬಂದಿತ್ತು. ಆದರೆ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಫೇಸ್​ಬುಕ್​ ಬಳಕೇದಾರರು ಉಪಯೋಗಿಸಿಕೊಂಡಿಲ್ಲ. ಹೀಗಾಗಿ ಶೀಘ್ರದಲ್ಲೇ ಈ ಸೆಕ್ಷನ್​ನ್ನು ಕೊನೆಗೊಳಿಸಿ ಅದರ ಬದಲು ಬ್ರೇಕಿಂಗ್​ ನ್ಯೂಸ್​ನಂತಹ ಹೊಸ ಫೀಚರ್​ಗಳನ್ನು ಫೇಸ್​ಬುಕ್​ನಲ್ಲಿ ತರಲು ಕಂಪನಿಯು ಚಿಂತನೆ ನಡೆಸುತ್ತಿದೆ.

ಟ್ರೆಂಡಿಂಗ್​ ವಿಚಾರದ ಮೇಲೆ ಆಯ್ದ ಸುದ್ದಿಗಳ ಹೆಡ್​ಲೈನ್​ನ್ನು ಫೇಸ್​ಬುಕ್​ ತನ್ನ ಟ್ರೆಂಡಿಂಗ್​ ವಿಭಾಗದಲ್ಲಿ ಪಬ್ಲಿಷ್​ ಮಾಡುತ್ತಾ ಬಂದಿತ್ತು. ಆದರೆ ಕಳೆದ ಹಲವು ದಿನಗಳಿಂದ ಯತೇಚ್ಚವಾಗಿ ಸುಳ್ಳು ಸುದ್ದಿಗಳು ಫೇಸ್​ಬುಕ್​ನಲ್ಲಿ ಹರಿದಾಡ ತೊಡಗಿತ್ತು. ಈ ಸುದ್ದಿಗಳು ಸಹ ಹಲವು ಸಂದರ್ಭದಲ್ಲಿ ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿತ್ತು. ಇದರಿಂದ ಮುಜುಗರಕ್ಕೊಳಗಾದ ಫೇಸ್​ಬುಕ್​ ಈ ಬಟನ್​ನ್ನು ತೆಗೆದು ಹಾಕಿ ಅದರ ಜಾಗಕ್ಕೆ ಹೊಸ ಫೀಚರ್​ ಅಳವಡಿಸುವ ಕುರಿತು ಚಿಂತನೆ ನಡೆಸಿದೆ.

ಈ ಕುರಿತು ತನ್ನ ನ್ಯೂಸ್​ರೂಂನಲ್ಲಿ ಲೇಖನವನ್ನು ಫೇಸ್​ಬುಕ್​ ಪ್ರಕಟಿಸಿದೆ, ಅಲ್ಲದೇ ಮುಂದಿನ ಪ್ರಾಯೋಗಿಕ ಹಂತವಾಗಿ ನ್ಯೂಸ್ ವೀಡಿಯೋ, ಇಂದಿನ ಸಮಾಚಾರ ತಿಳಿಯಲು Today In , Breaking News Label ಎಂಬ ವಿಶೇಷ ಸೆಕ್ಷನ್​ ಹುಟ್ಟುಹಾಕಲು ಚಿಂತನೆ ನಡೆಸಿರುವುದಾಗಿ ಹೇಳಿದೆ.
First published:June 4, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ