Google Chrome: ಗೂಗಲ್​ ಕ್ರೋಮ್​ನಲ್ಲಿ ಪೋರ್ನ್​ ವಿಡಿಯೋ ವೀಕ್ಷಿಸುತ್ತೀರಾ? ಹಾಗಿದ್ರೆ ಈ ಸ್ಟೋರಿ ಓದಿ..

Google Chrome: ಸ್ಮಾರ್ಟ್​ಫೋನ್​ ಅಥವಾ ಕಂಪ್ಯೂಟರ್​ ಬಳಸುವಾಗ ಮಾಡುವ ಸಣ್ಣಪುಟ್ಟ ತಪ್ಪುಗಳಿಂದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಬಳಕೆದಾರನ ಕೊಂಚ ಮಾಹಿತಿ ಸಿಕ್ಕರೆ ಸಾಕು ಹ್ಯಾಕ್​ ಮಾಡಲು ವೈರಸ್​ ಮೂಲಕ ದಾಳಿ ಮಾಡುತ್ತಾರೆ.

ಗೂಗಲ್​ ಕ್ರೋಮ್ /Google Chrome

ಗೂಗಲ್​ ಕ್ರೋಮ್ /Google Chrome

  • Share this:
    ಬಹುತೇಕ ಆ್ಯಂಡ್ರಾಯ್​ (Android) ಮಂದಿ ಗೂಗಲ್​ ಕ್ರೋಮ್​ (Google Chrome) ಬಳಸಿ ಏನಾರೊಂದು ಹುಡುಕಾಡುತ್ತಿರುತ್ತಾರೆ. ವಾಟ್ಸ್​ಆ್ಯಪ್ (Whatsapp) ​, ಟೆಲಿಗ್ರಾಂ (Telegram) ಆ್ಯಪ್​ಗಳಲ್ಲಿ ಸ್ನೇಹಿತರು ಕಳುಹಿಸಿರುವ ಲಿಂಕ್​ಗಳ ಮೇಲೆ ಕ್ಲಿಕ್​ ಮಾಡುವ ಮೂಲಕ ಗೂಗಲ್ ಕ್ರೋಮ್​ನಲ್ಲಿ ಆ ವಿಚಾರ ಕುರಿತಾಗಿ ಆಳವಾಗಿ ಸರ್ಚ್ ಮಾಡುತ್ತಾರೆ. ಇನ್ನು ಕೆಲವೊಮ್ಮೆ ವಿಡಿಯೋ (Video), ಮ್ಯೂಸಿಕ್ ಡೌನ್​ಲೋಡ್ (Music)​ಗೆಂದೇ ಗೂಗಲ್​ನಲ್ಲಿ ಹುಡುಕಾಡುತ್ತಾರೆ. ಇವೆಲ್ಲ ವಿಚಾರ ಒಂದೆಡೆಯಾದರೆ ಇನ್ನು ಕೆಲವರು ನೀಲಿ ಚಿತ್ರಗಳನ್ನು (Porn Video) ಕ್ರೋಮ್​ ಬಳಸಿ ವೀಕ್ಷಿಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅಪಾಯ ಕಟ್ಟಿಟ್ಟಬುತ್ತಿ ಏಕೆಂದರೆ ಹ್ಯಾಕರ್ಸ್​ ಮತ್ತು ಸ್ಕ್ಯಾಮ್​ ಮಾಡುವವರು ಬಲೆಗೆ ಬಿದ್ದರೆ ಹೊರಬರುವುದು ಕಷ್ಟ.

    ಇಂದು ಇಂಟರ್​ನೆಟ್ (Internet)​ ಬಳಕೆ ವಿಪರೀತವಾಗಿದೆ. ಹಾಗಾಗಿ ಬಹುತೇಕರು ಬಿಡುವಿದ್ದಾಗ ಗೂಗಲ್​ ಕ್ರೋಮ್ ಮೂಲಕ​ ಸುರಕ್ಷತೆಯಲ್ಲದ ಸೈಟ್​ಗೆ ತೆರಳಿ ಅದರಲ್ಲಿ ಏನಾದರು ಹುಡುಕಾಡುತ್ತಿರುತ್ತಾರೆ. ಆದರೆ ಹ್ಯಾಕರ್ಸ್​ಗಳು ಇದೇ ಉತ್ತಮ ಅವಕಾಶವೆಂದು ಬಳಕೆದಾರರ ಮಾಹಿತಿ ಎಗರಿಸುವ ಅಥವಾ ಸಂಕಷ್ಟಕ್ಕೆ ಸಿಲುಕಿಸಲು ಪ್ರಯತ್ನಿಸುತ್ತಾರೆ.

    ಸ್ಮಾರ್ಟ್​ಫೋನ್​ ಅಥವಾ ಕಂಪ್ಯೂಟರ್​ ಬಳಸುವಾಗ ಮಾಡುವ ಸಣ್ಣಪುಟ್ಟ ತಪ್ಪುಗಳಿಂದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಬಳಕೆದಾರನ ಕೊಂಚ ಮಾಹಿತಿ ಸಿಕ್ಕರೆ ಸಾಕು ಹ್ಯಾಕ್​ ಮಾಡಲು ವೈರಸ್​ ಮೂಲಕ ದಾಳಿ ಮಾಡುತ್ತಾರೆ. ಹಾಗಾಗಿ ಸುರಕ್ಷತೆ ಒದಗಿಸದ ವೆಬ್​ಸೈಟ್​​ಗಳನ್ನು ಬ್ರೌಸ್​ ಮಾಡುವುದಕ್ಕೂ ಮುನ್ನ ಎಚ್ಚರವಾಗಿರಬೇಕಿದೆ.

    ಸಾಮಾನ್ಯವಾಗಿ ಹ್ಯಾಕರ್ಸ್​ ಅಥವಾ ಸ್ಕ್ಯಾಮ್ ಆಗದಂತೆ ಸುರಕ್ಷಿತವಾಗಿ ಇರಬೇಕಾದರೆ ಕಂಪ್ಯೂಟರ್​​ ಅಥವಾ ಸ್ಮಾರ್ಟ್​ಫೋನ್​ಗಳಿಗೆ ಸೆಕ್ಯೂರಿಟಿ ಆ್ಯಪ್​ಗಳನ್ನು ಹಾಕಿಕೊಳ್ಳುವುದು ಉತ್ತಮ ಬೆಳವಣಿಗೆ. ಇನ್ನು ಗೂಗಲ್ ಕ್ರೋಮ್​ ಮೂಲಕ ಸರ್ಚ್​ ಮಾಡುವಾಗಲು ತೆರೆದಿರುವ ಸೈಟ್​ ಸುರಕ್ಷತೆಯಾಗಿದೆಯೇ ಎಂದು ಒಂದು ಬಾರಿ ಗಮನಿಸುವುದು ಒಳಿತು. ಕೆಲವೊಂದು ಸೈಟ್​ನಲ್ಲಿ ವಿಪರೀತ ಜಾಹೀರಾತುಗಳು ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್​ ಮಾಡುವ ಮುನ್ನ ಎಚ್ಚರವಾಗಿರುವುದು ಅಗತ್ಯ.

    ಕ್ರೋಮ್​ ಬಳಸುವ ಮುನ್ನ ಪಾಪ್​ ಅಪ್​ ವಿಂಡೋ ತೆರೆದಿಡಬಾರದು. ಈ ಸಮಯದಲ್ಲಿ ಅತಿ ಹೆಚ್ಚು ಮಾಲ್ವೇರ್​ಗಳು ಬ್ರೌಸ್​ ಮಾಡುವ ವೇಳೆ ಆಕ್ರಮಿಸುತ್ತದೆ. ಹಾಗಾಗಿ ಇಂತಹ ಸೂಕ್ಷ್ಮ ತಪ್ಪಿನಿಂದಾಗಿ ಸಂಕಷ್ಟಕ್ಕೆ ಸಿಲುಕುವ ಅನೇಕ ಉದಾಹರಣೆಗಳು ಇರುತ್ತದೆ.ಇನ್ನು ಪಾಪ್​-ಅಪ್​ ವಿಂಡೋಗಳಲ್ಲಿ ಕಾಣಿಸುವ ಲಿಂಕ್​ ಮೇಲೆ ಕ್ಲಿಕ್​ ಮಾಡುವ ಮುನ್ನ ಯೋಚಿಸಿ ಆಮೇಲೆ ತೆರೆದು ನೋಡಿ.

    ಕೆಲವೊಂದು ಸೈಟ್​ಗಳು ಜಾಹೀರಾತುಗಳಿಂದ ಕೂಡಿರುತ್ತದೆ. ಅದರಲ್ಲೂ ಕೆಲವೊಮ್ಮೆ ನಿಮ್ಮ ಸ್ಮಾರ್ಟ್​ಫೋನ್​ ಕ್ಲೀನ್ ಮಾಡವಂತಹ ಅಥವಾ ಹೊಸ ಸಿನಿಮಾ ಉಚಿತವಾಗಿ ಡೌನ್​ಲೋಡ್​ ಮಾಡುವಂತಹ ಜಾಹೀರಾತುಗಳು ಫೋನ್​ ಅಥವಾ ಕಂಪ್ಯೂಟರ್​ ಪರದೆಯ ಮೇಲೆ ಕಾಣಿಸಬಹುದು. ಆದರೆ ಇದನ್ನು ಕ್ಲಿಕ್​ ಮಾಡುವುದು ಅಪಾಯವೇ ಸರಿ.

    ಕೆಲವೊಮ್ಮೆ ಹ್ಯಾಕರ್ಸ್​ಗಳು ಇಂತಹ ಜಾಹೀರಾತುಗಳನ್ನು ಬಿಟ್ಟು ಬಳಕೆದಾರ ಖಾಸಗಿ ಮಾಹಿತಿ ಸೇರಿದಂತೆ ಉಳಿದವೆಲ್ಲವನ್ನು ಹ್ಯಾಕ್​ ಮಾಡುತ್ತಾರೆ. ಇನ್ನು ಪೋರ್ನ್​ ಸೈಟ್​ನಲ್ಲಿ ಇಂತಹ ಲಿಂಕ್​, ಜಾಹೀರಾತು ಮತ್ತು ಆಕರ್ಷಿಸುವ ಪೋಸ್ಟರ್​ಗಳು ಪರದೆಯ ಮೇಲೆ ಹೆಚ್ಚಾಗಿ ಕಾಣಿಸುತ್ತದೆ.

    Read Also: Jio: ಹೀಗೆ ಮಾಡಿದರೆ Ind Vs Pak ಪಂದ್ಯವನ್ನು ಲೈವ್ ವೀಕ್ಷಿಸಬಹುದು!

    ಗೂಗಲ್​ ಕ್ರೋಮ್​ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು. ಆದರೆ ಕ್ರೋಮ್​ ತೆರೆದು ಬ್ರೌಸ್​ ಮಾಡಲು ಆರಂಭಿಸಿದಂತೆ ಬೇರೆಯೇ ಸೈಟ್​ಗೆ ತೆರಳುತ್ತೇವೆ. ಗೊತ್ತಿಲ್ಲದಂತೆ ಸಿಕ್ಕ ಲಿಂಕ್​ ಮೇಲೆ ಕ್ಲಿಕ್ ಮಾಡುತ್ತೇವೆ. ಹಾಗಾಗಿ ಹ್ಯಾಕರ್ಸ್​ ಕೈಗೆ ಸಿಕ್ಕಿಹಾಕಿಕೊಳ್ಳುವ ಮುನ್ನ ಎಚ್ಚರದಿಂದ ಇರುವುದು ಒಳಿತು.

    ಇನ್ನು ಇಂಟರ್​ನೆಟ್​ಗಾಗಿ ಪಬ್ಲಿಕ್​ ವೈ-ಫೈ ಬಳಸುವರು ಅನೇಕರಿದ್ದಾರೆ. ಆದರೆ ಇದರ ಬಳಕೆವ ಮಾಡುವ ಮುನ್ನ ಕೊಂಚ ಆಲೋಚಿಸುವುದು ಒಳಿತು. ಏಕೆಂದರೆ ಪಾಸ್​​ವರ್ಡ್​ ಇಲ್ಲದೆ ಉಚಿತವಾಗಿ ಸಿಗುವ ಪಬ್ಲಿಕ್​ ವೈ-ಫೈ ಬಳಸುವುದು ಸೂಕ್ತವಲ್ಲ. ಒಂದು ವೇಳೆ  ಪಬ್ಲಿಕ್​ ವೈ-ಫೈ ಬಳಸಬೇಕು ಎನ್ನುದಾದರೆ ನಿಮಗೆ ತಿಳಿದಿರುವ ವೈ-ಫೈ ಬಳಸಿ

    Read Also: Vivo Y3s: ಬಜೆಟ್​ ಬೆಲೆಯ ಸ್ಮಾರ್ಟ್​ಫೋನ್​ ಪರಿಚಯಿಸಿದ ವಿವೋ.. ಹೇಗಿದೆ ಗೊತ್ತಾ?

    ಕೆಲವೊಮ್ಮೆ ಉಚಿತ ವೈ-ಫೈ ಮೂಲಕ ಲ್ಯಾಪ್​ಟಾಪ್​, ಸ್ಮಾರ್ಟ್​ಫೋನಿಗೆ ಹಾನಿಯಾಗಬಹುದು ಮಾತ್ರವಲ್ಲದೆ, ಬಳಕೆದಾರ ಸಂಕಷ್ಟಕ್ಕೆ ಸಿಲುಕುವ ಪ್ರವೇಯ ಇದಗಿ ಬರಬಹುದು ಹಾಗಾಗಿ ಯಾವುದೇ ಸೈಟ್​ ಬಳಸುವ ಮುನ್ನ ಎಚ್ಚರಿಕೆ ಅಗತ್ಯ.
    Published by:Harshith AS
    First published: