ದೇಶಿಯ ಆ್ಯಪ್ ಎಂದು ಖ್ಯಾತಿ ಪಡೆದಿದ್ದ ‘ಮಿತ್ರೋ‘ ಆ್ಯಪ್ ಅನ್ನು ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ತೆಗೆದುಹಾಕಿದೆ. ಅದರ ಬೆನ್ನಲ್ಲೇ ಭಾರತದ ಮತ್ತೊಂದು ಆ್ಯಪ್ ಪ್ಲೇ ಸ್ಟೋರ್ ಕಣ್ಮರೆಯಾಗಿದೆ.
ಇತ್ತೀಚೆಗೆ ಭಾರತದಲ್ಲಿ ಚೀನಾ ವಸ್ತುಗಳ ನಿಷೇಧದ ಬಗ್ಗೆ ಅಭಿಯಾನ ಆರಂಭಗೊಂಡಿತ್ತು. ಅದರ ಬೆನ್ನಲ್ಲೇ ‘ಮಿತ್ರೋ‘ ಆ್ಯಪ್ ಭಾರತದಲ್ಲಿ ಜನಪ್ರಿಯತೆ ಪಡೆದಿತ್ತು. ಆದರೆ ಈ ಆ್ಯಪ್ನಲ್ಲಿ ಬಳಸಲಾಗಿರುವ ಕೋಡಿಂಗ್ ಪಾಕಿಸ್ತಾನ ಮೂಲದ್ದು ಎಂಬ ವಿಚಾರ ಸುದ್ದಿಯಾಗಿತ್ತು. ಹಾಗಾಗಿ ಪ್ಲೇ ಸ್ಟೋರ್ ಮಿತ್ರೋ ಆ್ಯಪ್ ಅನ್ನು ತೆಗೆದು ಹಾಕಿದೆ.
ಇದಾದ ಬಳಿಕ ಭಾರತೀಯ ಸ್ಮಾರ್ಟ್ಫೋನ್ನಲ್ಲಿ ಚೀನಾ ಆ್ಯಪ್ಗಳನ್ನು ಯಾವುದೆಂದು ಪತ್ತೆ ಹಚ್ಚಲು ಮತ್ತು ಅವುಗಳನ್ನು ಅನ್ಇನ್ಸ್ಟಾಲ್ ಮಾಡಲು ‘ರಿಮೂವ್ ಚೀನಾ ಆ್ಯಪ್‘ ಎಂಬ ಅಪ್ಲಿಕೇಶನ್ ಅನ್ನು ಸಿದ್ಧಪಡಿಸಲಾಗಿತ್ತು. ಈ ಆ್ಯಪ್ ಕೂಡ ಬಾರಿ ಜನಪ್ರಿಯಂತೆಗೊಂಡಿತ್ತು. ಆದರೀಗ ಗೂಗಲ್ ಪ್ಲೇ ಸ್ಟೋರ್ ‘ರಿಮೂವ್ ಚೀನಾ ಅಪ್ಲಿಕೇಶನ್‘ ಅನ್ನು ತೆಗೆದುಹಾಕಿದೆ.
ಸ್ಮಾರ್ಟ್ಫೋನಿನಲ್ಲಿ ಚೀನಾ ಆ್ಯಪ್ಗಳನ್ನು ಪತ್ತೆ ಹಚ್ಚುವ ‘ರಿಮೂವ್ ಚೀನಾ ಅಪ್ಲಿಕೇಶನ್‘ ಮೇ 17ರಂದು ಭಾರತದಲ್ಲಿ ಬಿಡುಗಡೆಯಾಯಿತು. ಜೈಪುರ ಮೂಲದ ಒನ್ಟಚ್ ಆ್ಯಪ್ಲ್ಯಾಬ್ಸ್ ಸಂಸ್ಥೆ ಈ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ. ಬಿಡುಗಡೆಯಾದ 10 ದಿನಗಳಲ್ಲಿ 10 ಲಕ್ಷ ಡೌನ್ಲೋಡ್ ಕಂಡಿತ್ತು.
‘ರಿಮೂವ್ ಚೀನಾ ಅಪ್ಲಿಕೇಶನ್‘ ಇನ್ಸ್ಟಾಲ್ ಮಾಡಿದರೆ ಸಾಕು. ನಂತರ ಅದರಲ್ಲಿರುವ ಸ್ಕ್ಯಾನ್ ನೌ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಒಂದೇ ಕ್ಲಿಕ್ನಲ್ಲಿ ಸ್ಮಾರ್ಟ್ಫೋನ್ನಲ್ಲಿರುವ ಚೀನಾ ಆ್ಯಪ್ಗಳು ಯಾವುದು? ಎಂದು ಪತ್ತೆ ಹಚ್ಚುತ್ತದೆ. ಮಾತ್ರವಲ್ಲದೆ ಡಿಲೀಟ್ ಕೂಟ ಮಾಡಬಹುದಾ ಆಯ್ಕೆಯನ್ನು ನೀಡಿತ್ತು. ಹಾಗಾಗಿ ಸಾಕಷ್ಟು ಜನರು ಈ ಆ್ಯಪ್ ಡೌನ್ಲೋಡ್ ಮಾಡಿಬಳಸುತ್ತಿದ್ದರು. ಆದರೀಗ ರಿಮೂವ್ ಚೀನಾ ಆ್ಯಪ್ ಪ್ಲೇ ಸ್ಟೋರ್ನಿಂದ ಕಣ್ಮರೆಯಾಗಿದೆ. ಪ್ಲೇ ಸ್ಟೋರ್ ನಿಯಮಾವಳಿಯನ್ನು ಮೀರಿದ್ದಕ್ಕಾಗಿ ರಿಮೂವ್ ಚೀನಾ ಅಪ್ಲಿಕೇಶನ್ ಅನ್ನು ತೆಗೆದು ಹಾಕಲಾಗಿದೆ ಎನ್ನಲಾಗಿದೆ.
Prabhas: ಪ್ರಭಾಸ್ ಹೊಸ ಸಿನಿಮಾಗೆ ಸಾಹೋ ಸೂತ್ರ!; ಅದೇನು ಗೊತ್ತಾ?
Mitron App: ಗೂಗಲ್ ಪ್ಲೇ ಸ್ಟೋರ್ನಿಂದ ಮಾಯವಾದ ‘ಮಿತ್ರೋ‘ ಆ್ಯಪ್!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ