Remove China Apps: ಚೀನಾಗೆ ಬುದ್ಧಿ ಕಲಿಸಿದ ಭಾರತ; 10 ದಿನದಲ್ಲಿ10 ಲಕ್ಷ ಡೌನ್​ಲೋಡ್​ ಆದ ‘ರಿಮೂವ್​ ಚೀನಾ ಆ್ಯಪ್​​​‘

Delete China Apps: ಚೀನಾ ವಸ್ತುಗಳ ನಿಷೇಧ ಅಭಿಯಾನಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ ಚೀನಾ ಆ್ಯಪ್ ಅನ್​​​ ಇನ್​​ಸ್ಟಾಲ್ ಎಂಬ ಮತ್ತೊಂದು​ ಅಭಿಯಾನ ಆರಂಭಿಸಿದ್ದಾರೆ. ಚೀನಾ ಆ್ಯಪ್​ಗಳನ್ನು ಸಂಪೂರ್ಣವಾಗಿ ಸ್ಮಾರ್ಟ್​ಫೋನ್​ನಿಂದ ತೆಗೆದು ಹಾಕುವ ಸಲುವಾಗಿ ‘ರಿಮೂವ್​  ಚೀನಾ ಆ್ಯಪ್​‘ ಹೆಸರಿನ ಅಪ್ಲಿಕೆಶನ್​ ಅನ್ನು ಬಿಡುಗಡೆ ಮಾಡಿದ್ದಾರೆ.

news18-kannada
Updated:June 1, 2020, 1:47 PM IST
Remove China Apps: ಚೀನಾಗೆ ಬುದ್ಧಿ ಕಲಿಸಿದ ಭಾರತ; 10 ದಿನದಲ್ಲಿ10 ಲಕ್ಷ ಡೌನ್​ಲೋಡ್​ ಆದ ‘ರಿಮೂವ್​ ಚೀನಾ ಆ್ಯಪ್​​​‘
ರಿಮೂವ್​  ಚೀನಾ ಆ್ಯಪ್
  • Share this:
ಚೀನಾ ಮೂಲದ ಆ್ಯಪ್​ಗಳಿಗೆ ಭಾರತಲ್ಲಿ ಉಳಿಗಾಲವಿಲ್ಲ ಎಂಬ ಮೂನ್ಸೂಚನೆ ಕಾಣುತ್ತಿದೆ. ಕಳೆದ ಹಲವು ದಿನಗಳಿಂದ ಚೀನಾ ಮೂಲದ ಆ್ಯಪ್​ಗಳನ್ನು ನಿಷೇಧ ಮಾಡಬೇಕೆಂಬ ಕೂಗು ಭಾರತದಲ್ಲಿ ಕೇಳಿಬರುತ್ತಿದೆ. ವಿಶೇಷವಾಗಿ ಜನಪ್ರಿಯ ಟಿಕ್​ಟಾಕ್​ ಆ್ಯಪ್​ ನಿಷೇಧ ಮಾಡುವಂತೆ ಬ್ಯಾನ್​ಟಿಕ್​ಟಾಕ್​ ಆ್ಯಪ್​ ಎಂಬ ಅಭಿಯಾನ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಅಭಿಯಾನಕ್ಕೆ ಅನೇಕರು ಕೈ ಜೋಡಿಸಿದ್ದಾರೆ. ಇದೀಗ ಚೀನಾ ವಸ್ತುಗಳ ನಿಷೇಧ ಅಭಿಯಾನಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ ಚೀನಾ ಆ್ಯಪ್ ಅನ್​​​ ಇನ್​​ಸ್ಟಾಲ್ ಎಂಬ ಮತ್ತೊಂದು​ ಅಭಿಯಾನ ಆರಂಭಿಸಿದ್ದಾರೆ. ಚೀನಾ ಆ್ಯಪ್​ಗಳನ್ನು ಸಂಪೂರ್ಣವಾಗಿ ಸ್ಮಾರ್ಟ್​ಫೋನ್​ನಿಂದ ತೆಗೆದು ಹಾಕುವ ಸಲುವಾಗಿ ‘ರಿಮೂವ್​  ಚೀನಾ ಆ್ಯಪ್​‘ ಹೆಸರಿನ ಅಪ್ಲಿಕೆಶನ್​ ಅನ್ನು ಬಿಡುಗಡೆ ಮಾಡಿದ್ದಾರೆ.

ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಪ್ಟ್​ವೇರ್​ 'ಇನ್​ ಎ ವೀಕ್​​, ಹಾರ್ಡ್​ ವೇರ್​​ ಇನ್​ ಎ ಇಯರ್​'​ ಎನ್ನು ಹ್ಯಾಶ್​ ಟ್ಯಾಗ್​​ ಮೂಲಕ ಟ್ರೆಂಟ್​ ಸೃಷ್ಠಿಯಾಗಿದೆ. ಅನೇಕರು ಚೀನಾ ಆ್ಯಪ್​ ಅನ್​ ಇನ್​ಸ್ಟಾಲ್​ ಮಾಡುವ ಮೂಲಕ ಅದರ ಸ್ಕ್ರೀನ್​ ಶಾಟ್​ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ರಿಮೂವ್​  ಚೀನಾ ಆ್ಯಪ್


ಸ್ಮಾರ್ಟ್​ಫೋನಿನಲ್ಲಿ ಚೀನಾ ಆ್ಯಪ್​​ಗಳನ್ನು ಪತ್ತೆ ಹಚ್ಚುವ ‘ರಿಮೂವ್​​ ಚೀನಾ ​ಅಪ್ಲಿಕೇಶನ್​​‘ ಮೇ 17ರಂದು ಭಾರತದಲ್ಲಿ ಬಿಡುಗಡೆಯಾಯಿತು. ಜೈಪುರ ಮೂಲದ ಒನ್​ಟಚ್​​ ಆ್ಯಪ್​​ಲ್ಯಾಬ್ಸ್​​ ಸಂಸ್ಥೆ ಈ ಆ್ಯಪ್​ ಅನ್ನು ಅಭಿವೃದ್ಧಿ ಪಡಿಸಿದೆ. ಬಿಡುಗಡೆಯಾದ 10 ದಿನಗಳಲ್ಲಿ 10 ಲಕ್ಷ  ಡೌನ್​ಲೋಡ್​ ಕಂಡಿದೆ.

ವಿಶೇಷವೆಂದರೆ ‘ರಿಮೂವ್​​ ಚೀನಾ ​ಅಪ್ಲಿಕೇಶನ್‘​​ ಇನ್​​ಸ್ಟಾಲ್​ ಮಾಡಿದರೆ ಸಾಕು. ನಂತರ ಅದರಲ್ಲಿರುವ ಸ್ಕ್ಯಾನ್​ ನೌ ಆಯ್ಕೆಯನ್ನು ಕ್ಲಿಕ್​ ಮಾಡಿದರೆ ಒಂದೇ ಕ್ಲಿಕ್​ನಲ್ಲಿ ಸ್ಮಾರ್ಟ್​ಫೋನ್​ನಲ್ಲಿರುವ ಚೀನಾ ಆ್ಯಪ್​ಗಳು ಯಾವುದು? ಎಂದು ಪತ್ತೆ ಹಚ್ಚುತ್ತದೆ. ಮಾತ್ರವಲ್ಲದೆ ಡಿಲೀಟ್​ ಕೂಟ ಮಾಡಬಹುದಾಗಿದೆ. ಒನ್​ಟಚ್​​ ಆ್ಯಪ್​​ಲ್ಯಾಬ್ಸ್​​ ಸಂಸ್ಥೆ ‘ರಿಮೂವ್​​ ಚೀನಾ ​ಅಪ್ಲಿಕೇಶನ್​​‘ ಅನ್ನು ಗೂಗಲ್​ ಪ್ಲೇ  ಸ್ಟೋರ್​ನಲ್ಲಿ ಬಿಡುಗಡೆ ಮಾಡಿದೆ. ಆ್ಯಂಡ್ರಾಯ್ಡ್​ ಅಪ್ಲಿಕೇಶನ್​ ಇದಾಗಿದ್ದು, ಸಾಕಷ್ಟು ಜನರು ಡೌನ್​ಲೋಡ್​ ಮಾಡುತ್ತಿದ್ದಾರೆ.
First published: June 1, 2020, 1:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading