• Home
  • »
  • News
  • »
  • tech
  • »
  • Asteria Aerospace: ಮೈಕ್ರೋ ಡ್ರೋನ್ ಪ್ರಮಾಣಪತ್ರ ಪಡೆದ ಆಸ್ಟೀರಿಯಾ ಏರೋಸ್ಪೇಸ್

Asteria Aerospace: ಮೈಕ್ರೋ ಡ್ರೋನ್ ಪ್ರಮಾಣಪತ್ರ ಪಡೆದ ಆಸ್ಟೀರಿಯಾ ಏರೋಸ್ಪೇಸ್

ಆಸ್ಟೀರಿಯಾ ಏರೋಸ್ಪೇಸ್

ಆಸ್ಟೀರಿಯಾ ಏರೋಸ್ಪೇಸ್

2022 ಜನವರಿಯಲ್ಲಿ ಪ್ರಕಟಿಸಿದ ಮಾನವರಹಿತ ವೈಮಾನಿಕ ವ್ಯವಸ್ಥೆಗೆ ಪ್ರಮಾಣೀಕರಣ ಯೋಜನೆ ಅಡಿಯಲ್ಲಿ ಆಸ್ಟೀರಿಯಾದ ಎ200 (A200) ಡ್ರೋನ್‌ ಸಂಪೂರ್ಣ ಬದ್ಧವಾಗಿದೆ ಎಂದು ಸಾಬೀತಾಗಿದೆ.

  • Share this:

    ಬೆಂಗಳೂರು, 07 ಅಕ್ಟೋಬರ್ 2022: ಡ್ರೋನ್ ಟೆಕ್ನಾಲಜಿ (Drone Technology) ಕಂಪನಿ ಆಸ್ಟೀರಿಯಾ ಏರೋಸ್ಪೇಸ್ ಲಿಮಿಟೆಡ್‌ (Asteria Aerospace Limited) ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇಂದ ಭಾರತದ ಮೊಟ್ಟ ಮೊದಲ ಮೈಕ್ರೋ ಡ್ರೋನ್ ಪ್ರಮಾಣಪತ್ರವನ್ನು ಪಡೆದಿದೆ. 2022 ಜನವರಿಯಲ್ಲಿ ಪ್ರಕಟಿಸಿದ ಮಾನವರಹಿತ ವೈಮಾನಿಕ ವ್ಯವಸ್ಥೆಗೆ ಪ್ರಮಾಣೀಕರಣ ಯೋಜನೆ ಅಡಿಯಲ್ಲಿ ಆಸ್ಟೀರಿಯಾದ ಎ200 (A200) ಡ್ರೋನ್‌ ಸಂಪೂರ್ಣ ಬದ್ಧವಾಗಿದೆ ಎಂದು ಸಾಬೀತಾಗಿದೆ.


    ಜಿಐಎಸ್‌, ಕೃಷಿ, ನಿರ್ಮಾಣ, ಗಣಿಗಾರಿಕೆ ಮತ್ತು ಇತರ ಉದ್ಯಮಗಳಲ್ಲಿ ಸಮೀಕ್ಷೆ ಮತ್ತು ಮ್ಯಾಪಿಂಗ್‌ ಮಾಡುವ ಉದ್ದೇಶಕ್ಕಾಗಿ ಆಸ್ಟೀರಿಯಾ ಎ200 (A200) ಡ್ರೋನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಡ್ರೋನ್‌ನಲ್ಲಿ ಸಮೀಕ್ಷೆ ಮಾಡುವುದಕ್ಕೆ ಸೂಕ್ತವಾದ ಜಿಪಿಎಸ್ ಮತ್ತು ಅಧಿಕ ರೆಸೊಲ್ಯುಶನ್ ಇಮೇಜಿಂಗ್ ಕ್ಯಾಮೆರಾ ಇದ್ದು, ಇದನ್ನು ಬಳಸಿಕೊಂಡು ಭೂಭಾಗವನ್ನು ನಿಖರವಾಗಿ ಮ್ಯಾಪ್ ಮಾಡಬಹುದು. ದೇಶದ ಗ್ರಾಮೀಣ ಭಾಗಗಳಲ್ಲಿನ ಭೂಮಿಯ ಮಾಲೀತ್ವವನ್ನು ದಾಖಲಿಸಲು ಮತ್ತು ಡಿಜಿಟಲೀಕರಿಸಲು ಸರ್ಕಾರವು ಸ್ವಾಮಿತ್ವ ಎಂಬ ಯೋಜನೆಯನ್ನು ರೂಪಿಸಿದ್ದು, ಇದರಲ್ಲಿ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಈ ಸ್ವಾಮಿತ್ವ ಯೋಜನೆಗೆ ಈ ಡ್ರೋನ್‌ ಅತ್ಯಂತ ಉಪಯುಕ್ತವಾಗಿದೆ. ಬೆಳೆಯ ಬೆಳವಣಿಗೆ ಮತ್ತು ಆರೋಗ್ಯವನ್ನು ವಿಶ್ಲೇಷಿಸಲು, ಹಾನಿಯನ್ನು ವಿಶ್ಲೇಷಿಸಲು ಮತ್ತು ವಿಮೆ ಕ್ಲೇಮ್ ಮಾಡುವುದಕ್ಕಾಗಿ ದಾಖಲೆಗಳನ್ನು ಸಂಗ್ರಹಿಸಲು ಈ ಡ್ರೋನ್‌ಗಳನ್ನು ಬಳಸಿಕೊಳ್ಳಬಹುದಾಗಿದೆ. ರಿಮೋಟ್ ಪೈಲ್ ಪ್ರಮಾಣಪತ್ರವನ್ನು ಪಡೆಯಲು ಬಯಸುವ ವ್ಯಕ್ತಿಗಳಿಗೆ ರಿಮೋಟ್ ಪೈಲಟ್ ತರಬೇತಿಯನ್ನು ನೀಡಲು ರಿಮೋಟ್ ಪೈಲಟ್ ತರಬೇತಿ ಸಂಸ್ಥೆಗಳೂ ಬಳಸಿಕೊಳ್ಳಬಹುದು.


    ಆಸ್ಟೀರಿಯಾ ಏರೋಸ್ಪೇಸ್ ಲಿಮಿಟೆಡ್‌ನ ಸಹಸಂಸ್ಥಾಪಕ ಮತ್ತು ನಿರ್ದೇಶಕ ನೀಲ್ ಮೆಹ್ತಾ ಪ್ರಮಾಣಪತ್ರ ಪಡೆದ ಸಂದರ್ಭದಲ್ಲಿ ಮಾತನಾಡಿ "ಡಿಜಿಸಿಎ ಇಂದ ಮೊದಲ ಮೈಕ್ರೋ ಕ್ಯಾಟಗರಿ ಡ್ರೋನ್ ಪ್ರಮಾಣಪತ್ರವನ್ನು ಪಡೆದಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಭಾರತದಲ್ಲಿ ಡ್ರೋನ್ ಕಾರ್ಯಾಚರಣೆಗೆ ಅಗತ್ಯವಾಗಿರುವ ಡ್ರೋನ್ ನಿಯಮಗಳು 2021 ಕ್ಕೆ ಆಸ್ಟೀರಿಯಾದ ಎ200 ಸಂಪೂರ್ಣ ಬದ್ಧವಾಗಿರುತ್ತದೆ. ಅತ್ಯುತ್ತಮ ಡ್ರೋನ್‌ಗಳನ್ನು ಒದಗಿಸಲು ನಾವು ಬದ್ಧವಾಗಿದ್ದೇವೆ" ಎಂದಿದ್ದಾರೆ.


    ಇದನ್ನೂ ಓದಿ: Jio ಬಿಡುಗಡೆ ಮಾಡಲಿದೆ ಬರೀ 15 ಸಾವಿರ ರೂಪಾಯಿಯ ಲ್ಯಾಪ್​ಟಾಪ್​!


    ಎ200 ಡ್ರೋನ್ ಗಟ್ಟಿಮುಟ್ಟಾಗಿದೆ, ವಿಶ್ವಾಸಾರ್ಹವಾಗಿದೆ ಮತ್ತು ಕಾರ್ಯಕ್ಷಮತೆ ಆಧರಿತವಾಗಿದೆ. ಇದು 2 ಕಿಲೋಗಿಂತ ಕಡಿಮೆ ತೂಕ ಹೊಂದಿದೆ ಮತ್ತು ಸ್ವಯಂಚಾಲಿತ ಟೇಕ್ ಆಫ್‌ ಮತ್ತು ಲ್ಯಾಂಡಿಂಗ್‌, ಹಲವು ಫೇಲ್ ಸೇಫ್‌ಗಳು, ಸಿಂಗಲ್ ಪೈಲಟ್ ಕಾರ್ಯಾಚರಣೆ, ಟೂಲ್‌ ರಹಿತ ಅಸೆಂಬ್ಲಿ ಮತ್ತು ಡಿಸ್‌ಅಸೆಂಬ್ಲಿ ಸೇರಿದಂತೆ ಹಲವು ಸುಧಾರಿತ ಸೌಲಭ್ಯಗಳನ್ನು ಹೊಂದಿದೆ. ಇದು 40 ನಿಮಿಷಗಳವರೆಗೆ ಹಾರಾಟ ಮಾಡಬಲ್ಲದು. ಸರ್ವೇ ಗ್ರೇಡ್‌ ಪಿಪಿಕೆ ಜಿಪಿಎಸ್ ಮತ್ತು ಆರ್‌ಜಿಬಿ ಇಮೇಜಿಂಗ್ ಮತ್ತು ಮಲ್ಟಿಸ್ಪೆಕ್ಟ್ರಲ್ ಇಮೇಜಿಂಗ್ ಕ್ಯಾಮೆರಾ ಆಯ್ಕೆಗಳನ್ನು ಒಳಗೊಂಡಿರುತ್ತದೆ.




    ಇದನ್ನೂ ಓದಿ: Bacteria: ದೇಹದ ಬ್ಯಾಕ್ಟೀರಿಯಾದಿಂದಲೇ ಆಭರಣ ತಯಾರಿಕೆ: ಮಹಿಳೆಯಿಂದ ಅಚ್ಚರಿಯ ಸಾಧನೆ


    ಡ್ರೋನ್‌ಗಳನ್ನು ತೂಕ ಆಧರಿಸಿ ಡಿಜಿಸಿಎ ವರ್ಗೀಕರಿಸುತ್ತದೆ. 250 ಗ್ರಾಂನಿಂದ 2 ಕಿಲೋವರೆಗಿನ ಡ್ರೋನ್‌ಗಳು ಮೈಕ್ರೋ ವಿಭಾಗಕ್ಕೆ ಒಳಪಡುತ್ತವೆ. ಡ್ರೋನ್ ಪ್ರಮಾಣೀಕರಣ ಸ್ಕೀಮ್ ಅನ್ನು ಭಾರತೀಯ ಗುಣಮಟ್ಟ ಕೌನ್ಸಿಲ್ ಪರಿಚಯಿಸಿದ್ದು, ಉದ್ಯಮ, ಸರ್ಕಾರ, ಶೈಕ್ಷಣಿಕ ವಲಯದ ಪರಿಣಿತರ ಸಮಾಲೋಚನೆಯ ಬಳಿಕ ರೂಪಿಸಲಾಗಿದೆ.

    Published by:Harshith AS
    First published: