RIL AGM 2020: ಜಿಯೋ ಗ್ಲಾಸ್​ ಪರಿಚಯಿಸಿದ ರಿಲಾಯನ್ಸ್​ ಸಂಸ್ಥೆ; ಆಧುನಿಕ ಜಗತ್ತಿನಲ್ಲಿ ಹೊಸ ಅನ್ವೇಷಣೆ

Jio Glass: ಜಿಯೋ ಗ್ಲಾಸ್ ಇಂಟರ್​ನೆಟ್​​ನಿಂದ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ​ಸ್ಮಾರ್ಟ್​ಫೋನ್​ಗಳ ಮೂಲಕ ಜಿಯೋ ಗ್ಲಾಸ್​​ ಅನ್ನು ಬಳಸಬಹುದಾಗಿದೆ. 75 ಗ್ರಾಂ ತೂಕವಿರುವ ನೂತನ ಗ್ಲಾಸ್​​ ಹೈ ರೆಸಲ್ಯೂಶನ್​ ಡಿಸ್​ಪ್ಲೇಯನ್ನೂ ಹೊಂದಿದೆ. ಗ್ರಾಹಕರಿಗೆ 3ಡಿ ವಿಶುವಲ್​ ಅನುಭವವನ್ನು ನೀಡಲಿದೆ.

news18-kannada
Updated:July 15, 2020, 3:35 PM IST
RIL AGM 2020: ಜಿಯೋ ಗ್ಲಾಸ್​ ಪರಿಚಯಿಸಿದ ರಿಲಾಯನ್ಸ್​ ಸಂಸ್ಥೆ; ಆಧುನಿಕ ಜಗತ್ತಿನಲ್ಲಿ ಹೊಸ ಅನ್ವೇಷಣೆ
Jio Glass:
  • Share this:
ಪ್ರತಿಷ್ಠಿತ ಟೆಲಿಕಾಂ ಸಂಸ್ಥೆ ರಿಲಾಯನ್ಸ್​ ಜಿಯೋ ಇಂದು 43ನೇ ವಾರ್ಷಿಕ ಸಭೆಯನ್ನು ಆಯೋಜಿಸಿದೆ. ಪ್ರತಿವರ್ಷದಂತೆ ಹೊಸ ಉತ್ಪನ್ನಗಳನ್ನು ರಿಲಾಯನ್ಸ್​ ಜಿಯೋ ಗ್ರಾಹಕರ ಮುಂದೆ ಪರಿಚಯಿಸುತ್ತಾ ಬಂದಿದೆ. ಅದರಂತೆ ಇಂದು ಹಲವು ಉತ್ಪನ್ನಗಳ ಜೊತೆಗೆ ಜಿಯೋ ಗ್ಲಾಸ್​​ ಅನ್ನು ಪರಿಚಯಿಸಿದೆ. ನೂತನ ಜಿಯೋ ಗ್ಲಾಸ್​ ಹಲವು ವಿಶೇಷತೆಗಳನ್ನು ಹೊಂದಿದ್ದು, ಪ್ರಸ್ತುತ ಜಗತ್ತಿಗೆ ಜಿಯೋ ಗ್ಲಾಸ್​ ವಿಶೇಷ ತಂತ್ರಜ್ಞಾನವನ್ನಅಳವಡಿಸುವುದರ ಮೂಲಕ ಬೆರಗುಗೊಳಿಸುವಂತೆ ಮಾಡಿದೆ.

ಜಿಯೋ ಗ್ಲಾಸ್​​​​ ವಿಶೇಷತೆ:

ಜಿಯೋ ಗ್ಲಾಸ್ ಇಂಟರ್​ನೆಟ್​​ನಿಂದ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ​ಸ್ಮಾರ್ಟ್​ಫೋನ್​ಗಳ ಮೂಲಕ ಜಿಯೋ ಗ್ಲಾಸ್​​ ಅನ್ನು ಬಳಸಬಹುದಾಗಿದೆ. 75 ಗ್ರಾಂ ತೂಕವಿರುವ ನೂತನ ಗ್ಲಾಸ್​​ ಹೈ-ರೆಸಲ್ಯೂಶನ್​ ಡಿಸ್​ಪ್ಲೇಯನ್ನೂ ಹೊಂದಿದೆ. ಗ್ರಾಹಕರಿಗೆ 3ಡಿ ವಿಶುವಲ್​ ಅನುಭವವನ್ನು ನೀಡಲಿದೆ.

ಆಡಿಯೋ ಸಿಸ್ಟಂ ಆಯ್ಕೆಯನ್ನು ಇದರಲ್ಲಿ ನೀಡಲಾಗಿದ್ದು, ಸಂದೇಶ, ಫೋನ್​​ ಕರೆಗಳನ್ನು ಜಿಯೋ ಗ್ಲಾಸ್​ ಆಡಿಯೋದ ಮೂಲಕ ಆಲಿಸಬಹುದಾಗಿದೆ. ಜೊತೆಗೆ 75ಕ್ಕೂ ಹೆಚ್ಚಿ ಅಪ್ಲಿಕೇಶನ್​ ಅನ್ನು ಇದರಲ್ಲಿ ನೀಡಲಾಗಿದೆ. ಕೊರೋನಾ ಲಾಕ್​ಡೌನ್​ ಸಮಯದಲ್ಲಿ ಅನೇಕರು ಮನೆಯಲ್ಲಿಯೇ ಕುಳಿತು ಆಫೀಸು ಕೆಲಸಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಜಿಯೋ ಗ್ಲಾಸ್​ ಇಂತಹ ಸಂದರ್ಭದಲ್ಲಿ ಹೆಚ್ಚಿನ ಉಪಯೋಗಕ್ಕೆ ಬರಲಿದೆ.

jio Glass


ಜಿಯೋ ಗ್ಲಾಸ್​ ಮೂಲಕ ಕರೆ ಮಾಡಬಹುದಾಗಿದೆ


3ಡಿ ಗ್ಲಾಸ್​ ಫಾರ್ಮೆಟ್​ನಲ್ಲಿ ಕರೆಗಳನ್ನು ಆಲಿಸಬಹುದು ಜೊತೆಗೆ ವೀಕ್ಷಣೆಯನ್ನು ಮಾಡಬಹುದಾಗಿದೆ. ವಿದ್ಯಾರ್ಥಿಗಳಿಗೂ ಆನ್​ಲೈನ್​ ತರಗತಿಯನ್ನು ಆಲಿಸಲು ಈ ಜಿಯೋ ಗ್ಲಾಸ್​ ಹೆಚ್ಚಿನ ಸಹಾಯಕ್ಕೆ ಬರಲಿದೆ. ಇಂಟರ್​ನೆಟ್​ ಮೂಲಕ ಕಾರ್ಯನಿರ್ವಹಿಸುವ ಜಿಯೋ ಗ್ಲಾಸ್​​ ಆಧುನಿಕ ಜಗತ್ತಿದೆ ಹತ್ತಿರವಾಗಲಿದೆ.
Published by: Harshith AS
First published: July 15, 2020, 3:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading