HOME » NEWS » Tech » RELIANCE JIOS NEW OFFER SPECIAL HOTSTAR ACCESS TO USERS AHEAD OF IPL 2021 DETAILS HERE ZP

Jio Ipl plans: ಜಿಯೋ ರಿಚಾರ್ಜ್ ಮಾಡಿ, ಉಚಿತವಾಗಿ IPL ನೋಡಿ..!

2599 ರಿಚಾರ್ಜ್ ಮಾಡಿಸಿಕೊಂಡವರಿಗೆ ಜಿಯೋ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದವರೆಗೆ ನೀಡಲಿದೆ.

news18-kannada
Updated:April 8, 2021, 9:36 PM IST
Jio Ipl plans: ಜಿಯೋ ರಿಚಾರ್ಜ್ ಮಾಡಿ, ಉಚಿತವಾಗಿ IPL ನೋಡಿ..!
ಜಿಯೋ
  • Share this:
ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಉತ್ತಮ ಸುದ್ದಿ ಇದೆ, ಜಿಯೋ ಈ ಬಾರಿಯ ಐಪಿಎಲ್ ಅನ್ನು ಹೆಚ್ಚು ಆನಂದದಾಯಕವಾಗಿಸಲು ಹೊಸ ಯೋಜನೆಗಳನ್ನು ಲಾಂಚ್ ಮಾಡಿದೆ. ಜಿಯೋ ಕ್ರಿಕೆಟ್ ಯೋಜನೆಗಳಲ್ಲಿ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಒಂದು ವರ್ಷದ ಚಂದದಾರಿಕೆಯೊಂದಿಗೆ ಡೇಟಾ, ವಾಯ್ಸ್ ಮತ್ತು ಎಸ್‌ಎಂಎಸ್‌ ಲಾಭಗಳನ್ನು ಪಡೆಯಬಹುದಾಗಿದೆ.

ಲೈವ್ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಸಬ್‌ಸ್ಕ್ರಿಪ್ಷನ್‌ನೊಂದಿಗೆ ಲೈವ್ ಐಪಿಎಲ್ ಮ್ಯಾಚ್‌ಗಳನ್ನು ವೀಕ್ಷಿಸಲು ಹೊಸ ಹೊಸ ಟ್ಯಾರಿಫ್ ಯೋಜನೆಗಳನ್ನು ಪ್ರಾರಂಭಿಸುತ್ತಿದೆ. ಇದರಲ್ಲಿ 1 ತಿಂಗಳು, 2 ತಿಂಗಳುಗಳು, 3 ತಿಂಗಳುಗಳು ಮತ್ತು 1 ವರ್ಷದ ಮಾನ್ಯತೆಯನ್ನು ಒಳಗೊಂಡಿರುವ ಪ್ರಿಪೇಯ್ಡ್ ಯೋಜನೆಗಳು ಲಭ್ಯವಿದ್ದು, ಇದರೊಂದಿಗೆ ವಿಶೇಷ ಡೇಟಾ ಲಾಭಗಳು ದೊರೆಯಲಿದೆ.

ರಿಚಾರ್ಜ್​ ಪ್ಲಾನ್‌ಗಳ ವಿವರ:

ರೂ.401 ಪ್ಲಾನ್: ಈ ಪ್ಲಾನ್‌ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಬಳಕೆದಾರರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆ ಒಂದು ವರ್ಷದ ವರೆಗೆ ಉಚಿತವಾಗಿ ದೊರೆಯಲಿದೆ ಮತ್ತು ಪ್ರತಿ ದಿನ 3GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ರೂ.598 ಪ್ಲಾನ್: ಈ ಪ್ಲಾನ್‌ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಬಳಕೆದಾರರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆ ಒಂದು ವರ್ಷದ ವರೆಗೆ ಉಚಿತವಾಗಿ ದೊರೆಯಲಿದೆ ಮತ್ತು ಪ್ರತಿ ದಿನ 2 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ರೂ. 777 ಪ್ಲ್ಯಾನ್: 777ಕ್ಕೆ ರಿಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರಿಗೆ ಜಿಯೋ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಜಿಯೋ ಈ ಪ್ಲಾನ್‌ ರಿಚಾರ್ಜ್ ಮಾಡಿಸುವವರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದ ವರೆಗೆ ನೀಡುವುದರೊಂದಿಗೆ ಪ್ರತಿ ದಿನ 1.5 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ರೂ.2599 ಪ್ಲಾನ್: ರೂ.2599 ರಿಚಾರ್ಜ್ ಮಾಡಿಸಿಕೊಂಡವರಿಗೆ ಜಿಯೋ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದ ವರೆಗೆ ನೀಡಲಿದೆ. ಹಾಗೆಯೇ ಒಂದು ವರ್ಷದ ಅವಧಿಗೆ ಪ್ರತಿ ದಿನ 2 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ.ಇದಲ್ಲದೆ ಐಪಿಎಲ್ ಸಂಭ್ರಮವನ್ನು ಹೆಚ್ಚಿಸಲು ರಿವಾರ್ಡ್​​ಗಳನ್ನು ಗೆಲ್ಲುವ ಅವಕಾಶವನ್ನೂ ಕೂಡ ಜಿಯೋ ನೀಡುತ್ತಿದೆ. ಇದಕ್ಕಾಗಿ ನೀವು ಜಿಯೋ ಆ್ಯಪ್​ನಲ್ಲಿ ಪ್ಲೇ ಅಲಾಂಗ್​ನಲ್ಲಿ ಲಾಗಿನ್ ಆಗಬೇಕು. ಜಿಯೋನ ಲೈವ್ ಗೇಮಿಂಗ್ ಉಪಕ್ರಮ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಸ್ಪರ್ಧಿಸುವಾಗ ಮನರಂಜನೆಯ ಹೊಸ ಭಾಗವನ್ನು ತನ್ನ ಅಭಿಮಾನಿಗಳಿಗೆ ಪ್ರಸ್ತುತಪಡಿಸುತ್ತದೆ. ಸಂವಾದಾತ್ಮಕ ಆಟವು ಎಲ್ಲಾ ಬಳಕೆದಾರರಿಗೆ (ಜಿಯೋ ಅಥವಾ ಜಿಯೋ ಅಲ್ಲದ) ಉಚಿತವಾಗಿ ಲಭ್ಯವಿದೆ. ಕ್ರಿಕೆಟ್ ಉತ್ಸಾಹಿಗಳು ಆಟದ ವಿಶೇಷ ಚಾಟ್ ಬಾರ್​ನಲ್ಲಿ ಎಮೋಜಿ ಸ್ಟಿಕ್ಕರ್​ಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಕ್ರಿಕೆಟ್ ಆಧಾರಿತ ರಸಪ್ರಶ್ನೆಗಳಿಗೆ ಉತ್ತರಿಸಬಹುದು. ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಆಟವನ್ನು ಮೈಜಿಯೊ ಆ್ಯಪ್ ಮೂಲಕ ಪ್ರವೇಶಿಸಬಹುದು.

ಜಿಯೋಫೋನ್ ಬಳಕೆದಾರರಿಗಾಗಿ JIO ಕ್ರಿಕೆಟ್ ಅಪ್ಲಿಕೇಶನ್ ಪ್ರಾರಂಭಿಸಲಾಗಿದೆ: ಜಿಯೋಫೋನ್ ಬಳಕೆದಾರರು ಹೊಸ ಜಿಯೋ ಕ್ರಿಕೆಟ್ ಅಪ್ಲಿಕೇಶನ್ನೊಂದಿಗೆ ಆಚರಣೆಗೆ ಸೇರಬಹುದು. ಎಲ್ಲಾ ಜಿಯೋಫೋನ್ ಬಳಕೆದಾರರಿಗೆ ಅಪ್ಲಿಕೇಶನ್ ಉಚಿತವಾಗಿ ಲಭ್ಯವಿದೆ. ಬಳಕೆದಾರರು ಸ್ಕೋರ್ ನವೀಕರಣಗಳನ್ನು ವೀಕ್ಷಿಸಬಹುದು, ರಸಪ್ರಶ್ನೆಗಳಲ್ಲಿ ಭಾಗವಹಿಸಬಹುದು ಮತ್ತು ಬಹುಮಾನಗಳನ್ನು ಗೆಲ್ಲಬಹುದು. ಇತರೆ ಆಪರೇಟರ್ಸ್ ಗಳು ತಮ್ಮ ಫೀಚರ್ ಫೋನ್ಗಳನ್ನು ಕೇವಲ ಸ್ಕೋರ್​ಗಳನ್ನು ಒದಗಿಸುವುದಕ್ಕಾಗಿ ದಿನಕ್ಕೆ 5 ರೂ. ವಿಧಿಸುತ್ತಾರೆ.

ಪ್ರತಿ ದಿನ ಜಿಯೋ ಬಳಕೆದಾರರಿಗೆ ಸ್ಪರ್ಧೆಗಳು ಮತ್ತು ಐಪಿಎಲ್ ಮರ್ಚಂಡೈಜ್ ಗೆಲ್ಲುವ ಅವಕಾಶ: ಜಿಯೋ ಬಳಕೆದಾರರು ಅತ್ಯಾಕರ್ಷಕ ವಿಷಯಗಳಲ್ಲಿ ಗವಹಿಸಬಹುದು ಮತ್ತು ಪ್ರತಿದಿನ ಮರ್ಚಂಡೈಜ್ ಗಳನ್ನು ಗೆಲ್ಲಬಹುದು. ಪ್ರತ್ಯೇಕವಾಗಿ ಸಹಿ ಮಾಡಿದ ಕ್ರಿಕೆಟ್ ಬ್ಯಾಟ್ ಮತ್ತು ಚೆಂಡುಗಳು, ತಂಡದ ಜರ್ಸಿ ಸೇರಿದಂತೆ ಹಲವು ವಸ್ತುಗಳು ಜಿಯೋ ಬಳಕೆದಾರರಿಗೆ ಲಭ್ಯವಾಗಲಿದೆ.

ಜಿಯೋ ಬಳಕೆದಾರರಿಗಾಗಿ ಎಲ್ಲಾ ತಂಡಗಳೊಂದಿಗೆ ಭೇಟಿ ಮತ್ತು ಶುಭಾಶಯ ಕೋರುವ ಅವಾಕಶ : ಜಿಯೋ ಬಳಕೆದಾರರಿಗೆ ಎಲ್ಲಾ 8 ತಂಡಗಳ ಆಟಗಾರರನ್ನು ಭೇಟಿ ಮಾಡಲು ಮತ್ತು ಕಾಫಿ ಸೆಷನ್​ನಲ್ಲಿ ಶುಭಾಶಯ ಕೋರಲು ಅವಕಾಶ ಸಿಗಲಿದೆ. ಅಂತಹ ವಿಶೇಷ ಪ್ರಯೋಜನವು ಬಳಕೆದಾರರಿಗೆ ಬಲು ಸನಿಹಕೆ ಬರಲು ಮತ್ತು ತಮ್ಮ ನೆಚ್ಚಿನ ಕ್ರಿಕೆಟಿಗರೊಂದಿಗೆ ಹತ್ತಿರವಾಗಲು ಅನುವು ಮಾಡಿಕೊಡುತ್ತದೆ.
Published by: zahir
First published: April 8, 2021, 9:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories