Reliance JioFiber Offer: ಜಿಯೋ ಫೈಬರ್​ ನೆಟ್ ಸೇವೆ ಆರಂಭ; ಇಲ್ಲಿದೆ ಆಫರ್​ಗಳ ವಿವರ

699 ರೂ. ಪ್ಲ್ಯಾನ್​ನಲ್ಲಿ 100 ಎಂಬಿಪಿಎಸ್​ ವೇಗ ಸಿಗಲಿದ್ದು, 8,499 ರೂ. ಪ್ಯಾಕ್​ನಲ್ಲಿ 1ಜಿಬಿಪಿಎಸ್​ ವೆರೆಗೆ ವೇಗ ಸಿಗಲಿದೆ. ಎಲ್ಲ ಯೋಜನೆಗಳಿಗೂ ಅನಿಯಮಿತ ಡಾಟಾ ಸೇವೆ ಲಭ್ಯವಿದೆ.

Rajesh Duggumane | news18-kannada
Updated:September 6, 2019, 10:25 AM IST
Reliance JioFiber Offer: ಜಿಯೋ ಫೈಬರ್​ ನೆಟ್ ಸೇವೆ ಆರಂಭ; ಇಲ್ಲಿದೆ ಆಫರ್​ಗಳ ವಿವರ
ರಿಲಾಯನ್ಸ್ ಜಿಯೋ ಗಿಗಾ ಫೈಬರ್
Rajesh Duggumane | news18-kannada
Updated: September 6, 2019, 10:25 AM IST
ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ 42ನೇ ವಾರ್ಷಿಕ ಸಭೆಯಲ್ಲಿ ಸಂಸ್ಥೆಯ ಮುಖ್ಯಸ್ಥ ಮುಖೇಶ್​ ಅಂಬಾನಿ ಜಿಯೋಫೈಬರ್​ ನೆಟ್​ ಬಗ್ಗೆ ಮಾಹಿತಿ ನೀಡಿದ್ದರು. ಸೆ.5ಕ್ಕೆ ಈ ಸೇವೆ ಆರಂಭಗೊಂಡಿದೆ. ಆರಂಭದಲ್ಲಿ ಕೆಲವೇ ನಗರಗಳಲ್ಲಿ ಮಾತ್ರ ಈ ಸೇವೆ ಲಭ್ಯವಿದೆ. ವಿಶೇಷ ಎಂದರೆ, 700 ರೂನಿಂದ ಆರಂಭಿಸಿ 10,000 ರೂವರೆಗೆ ವಿವಿಧ ಪ್ಯಾಕ್​ಗಳು ಲಭ್ಯವಿದೆ.

699 ರೂ. ಪ್ಲ್ಯಾನ್​ನಲ್ಲಿ 100 ಎಂಬಿಪಿಎಸ್​ ವೇಗ ಸಿಗಲಿದ್ದು, 8,499 ರೂ. ಪ್ಯಾಕ್​ನಲ್ಲಿ 1ಜಿಬಿಪಿಎಸ್​ ವರೆಗೆ ವೇಗ ಸಿಗಲಿದೆ. ಎಲ್ಲ ಯೋಜನೆಗಳಿಗೂ ಅನಿಯಮಿತ ಡಾಟಾ ಸೇವೆ ಲಭ್ಯವಿದೆ. ಆದರೆ, ಸೂಚಿಸಿದ್ದಕ್ಕಿಂತ ಹೆಚ್ಚಿನ ಡಾಟಾ ಬಳಸಿದರೆ ಇಂಟರನೆಟ್​ ವೇಗ ಕಡಿಮೆ ಆಗಲಿದೆ. ಡಾಟಾ ಜೊತೆಗೆ ಉಚಿತ ಅನಿಯಮಿತ ಕರೆ, ಟಿವಿ ವಿಡಿಯೋ ಕಾಲಿಂಗ್​ (ಪ್ರತಿ ವರ್ಷಕ್ಕೆ 1,200 ರೂ.) ಸೇವೆಯೂ ಸಿಗಲಿದೆ.

ವೆಲ್‌ಕಮ್​ ಆಫರ್ ಅಲ್ಲದೆ ಇನ್ನೂ ಅನೇಕ ಪ್ಲ್ಯಾನ್​ಗಳು ಇಲ್ಲಿ ಲಭ್ಯವಿದೆ. ಗ್ರಾಹಕರಿಗಾಗಿ 4,500 ರೂ. ಅಥವಾ 2,500 ರೂ. ಎರಡು ಪ್ಯಾಕೇಜ್​ಗಳು ದೊರೆಯುತ್ತದೆ. ಜಿಯೋ ತನ್ನ ನೂತನ ಸೇವೆಯನ್ನು ಲಾಂಚಿಂಗ್ ಆಫರ್​ನೊಂದಿಗೆ ಪ್ರಾರಂಭಿಸಲಿದ್ದು, ಇಲ್ಲಿ ಗ್ರಾಹಕರಿಗೆ ಆರಂಭದಲ್ಲೇ ಹಲವು ಕೊಡುಗೆಗಳು ಸಿಗಲಿದೆ. ವೆಲ್​ಕಮ್ ಆಫರ್​ ಅಡಿಯಲ್ಲಿ ಗ್ರಾಹಕರಿಗೆ HD ಅಥವಾ 4K LED TV ಅಥವಾ 4K ಸೆಟ್-ಟಾಪ್ ಬಾಕ್ಸ್ ಉಚಿತವಾಗಿ ದೊರೆಯಲಿದೆ. ಹಾಗೆಯೇ ಲ್ಯಾಂಡ್‌ಲೈನ್ ಸಂಪರ್ಕವೂ ಉಚಿತವಾಗಿರುತ್ತದೆ. ಈ ಖರೀದಿಗೆ ಯಾವುದೇ ಇನ್​ಸ್ಟಾಲೇಶನ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂಬುದು ವಿಶೇಷ.

ಇದನ್ನೂ ಓದಿ: ಜಿಯೋ ಗಿಗಾ ಫೈಬರ್ ಲ್ಯಾಂಡ್‌ಲೈನ್ ಸೇವೆ ಆರಂಭ: ಹೈ ಸ್ಪೀಡ್ ಇಂಟರ್​ನೆಟ್ ಸೇರಿದಂತೆ ಹಲವು ಆಫರ್​ ಪಡೆಯಲು ಇಂದೇ ರಿಜಿಸ್ಟರ್ ಮಾಡಿ

ಏರ್​ಟೆಲ್​​ ಬ್ರಾಡ್​ಬ್ಯಾಂಡ್​ಗೆ ಈ ಸೇವೆ ಕಾಂಪಿಟೇಟ್​ ಮಾಡಲಿದೆ. ಕಳೆದಬಾರಿ ಜಿಯೋ ಆರಂಭವಾದಾಗ ಏರ್​ಟೆಲ್​ ಸೇರಿ ಸಾಕಷ್ಟು ಸಂಸ್ಥೆಗಳು ತತ್ತರಿಸಿದ್ದವು. ಈಗ ಜಿಯೋಫೈಬರ್​ನಿಂದ ಬ್ರಾಡ್​ಬ್ಯಾಂಡ್​ ಸಂಸ್ಥೆಗಳಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.

ನೋಂದಣಿ ಮಾಡಿಕೊಳ್ಳುವುದು ಹೇಗೆ?
ಜಿಯೋ ಗಿಗಾ ಫೈಬರ್‌ ಸೇವೆ ಅಧಿಕೃತವಾಗಿ ಸೆಪ್ಟೆಂಬರ್ 5 ರಿಂದ ಪ್ರಾರಂಭವಾಗಲಿದ್ದು, ಅದಕ್ಕಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ನೀವು ಈ ಸೇವೆಯನ್ನು ಪಡೆಯಲು gigafiber.jio.com ನಲ್ಲಿ ಮೂರು ಸರಳ ಹಂತಗಳ ನೋಂದಣಿ ಮಾಡಿಕೊಳ್ಳಬಹುದು.
Loading...

ಮೊದಲ ಪುಟದಲ್ಲಿ, ನಿಮಗೆ ಜಿಯೋ ಫೈಬರ್ ಸಂಪರ್ಕ ಅಗತ್ಯವಿರುವ ಸ್ಥಳದಲ್ಲಿ ನಿಮ್ಮ ವಿಳಾಸವನ್ನು ನಮೂದಿಸಬೇಕಾಗುತ್ತದೆ. ಇದರ ನಂತರ, ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನೀಡಬೇಕು. ಬಳಿಕ ನಿಮ್ಮ ಮೊಬೈಲ್ ನಂಬರ್​ಗೆ ಒಟಿಪಿ ಕಳುಹಿಸಲಾಗುತ್ತದೆ. ಅದನ್ನು ಒಟಿಪಿ ನೋಂದಣಿ ಮಾಡಿದ ನಂತರ ಅಪ್ಲಿಕೇಶನ್ ಭರ್ತಿ ಪೂರ್ಣಗೊಳ್ಳಲಿದೆ.

ಇದಾದ ಬಳಿಕ ನೀವು ನೀಡಿದ ಮೊಬೈಲ್​ ಸಂಖ್ಯೆಗೆ ಜಿಯೋ ಪ್ರತಿನಿಧಿಯಿಂದ ಕರೆ ಬರುತ್ತದೆ. ಈ ಸೇವೆಯನ್ನು ಪಡೆಯಲು ನೀವು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಅಥವಾ ಚಾಲನಾ ಪರವಾನಗಿಯ ಯಾವುದಾದರೊಂದು ಪುರಾವೆ ನೀಡಬೇಕಾಗುತ್ತದೆ.

First published:September 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...