Reliance JioFiber: ಜಿಯೋಫೈಬರ್ ಪೋಸ್ಟ್‌ಪೇಯ್ಡ್ ಬ್ರಾಡ್‌ಬ್ಯಾಂಡ್ ಯೋಜನೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ

JioFiber Buying Guide: ಪ್ರಿಪೇಯ್ಡ್ ಬಿಲ್ಲಿಂಗ್ ಯೋಜನೆಗಳ ಮೇಲೆ ಹೆಚ್ಚುವರಿ ಆಯ್ಕೆಯಾಗಿ 3 ತಿಂಗಳು, 6 ತಿಂಗಳು ಅಥವಾ 12 ತಿಂಗಳು ಪಾವತಿಸುವ ಆಯ್ಕೆಯನ್ನು ನೀಡಿದೆ. ಕೊರೊನಾ, ವರ್ಕ್​ಫ್ರಂ ಹೋಮ್​ ಕಾಲಘಟ್ಟದಲ್ಲಿ ಹೋಮ್​ ಬ್ರಾಂಡ್​ಬ್ಯಾಂಡ್​​ಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಅದಕ್ಕಾಗಿ ಜಿಯೋಫೈಬರ್​ ಹೆಚ್ಚುವರಿ ಬಿಲ್​ ಪ್ಲಾನ್​​ ಆಯ್ಕೆಗಳನ್ನು ನೀಡಿದೆ.

Reliance JioFiber

Reliance JioFiber

 • Share this:
  Reliance JioFiber: ರಿಲಯನ್ಸ್ ಜಿಯೋಫೈಬರ್ ತನ್ನ ಪೋಸ್ಟ್‌ಪೇಯ್ಡ್ ಬ್ರಾಡ್‌ಬ್ಯಾಂಡ್ ಯೋಜನೆ ಬಳಕೆದಾರರಿಗೆ ಹೆಚ್ಚುವರಿ ಆಯ್ಕೆಯನ್ನ ಪರಿಚಯಿಸಿದೆ. ಪ್ರಿಪೇಯ್ಡ್ ಬಿಲ್ಲಿಂಗ್ ಯೋಜನೆಗಳ ಮೇಲೆ ಹೆಚ್ಚುವರಿ ಆಯ್ಕೆಯಾಗಿ 3 ತಿಂಗಳು, 6 ತಿಂಗಳು ಅಥವಾ 12 ತಿಂಗಳು ಪಾವತಿಸುವ ಆಯ್ಕೆಯನ್ನು ನೀಡಿದೆ. ಕೊರೊನಾ, ವರ್ಕ್​ಫ್ರಂ ಹೋಮ್​ ಕಾಲಘಟ್ಟದಲ್ಲಿ ಹೋಮ್​ ಬ್ರಾಂಡ್​ಬ್ಯಾಂಡ್​​ಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಅದಕ್ಕಾಗಿ ಜಿಯೋಫೈಬರ್​ ಹೆಚ್ಚುವರಿ ಬಿಲ್​ ಪ್ಲಾನ್​​ ಆಯ್ಕೆಗಳನ್ನು ನೀಡಿದೆ.

  ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬ್ರಾಡ್‌ಬ್ಯಾಂಡ್ ಮತ್ತು ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಮತ್ತು ಎಸಿಟಿ ಫೈಬರ್‌ನೆಟ್ ಸೇರಿದಂತೆ ಪ್ರತಿಸ್ಪರ್ಧಿಗಳು ದೀರ್ಘಾವಧಿಯ ಬಿಲ್ಲಿಂಗ್ ಯೋಜನೆಗಳನ್ನು ಹೊಂದಿದೆ, ಆದರೂ ಹೆಚ್ಚಾಗಿ ಪ್ರಿಪೇಯ್ಡ್ ಅವತಾರ್‌ನಲ್ಲಿ ಗ್ರಾಹಕರಿಗೆ ರಿಲಯನ್ಸ್ ಜಿಯೋಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಗಳು 30Mbps ಮತ್ತು 1Gbps ನಡುವೆ ವೇಗವನ್ನು ನೀಡುತ್ತಿದೆ. ಇದರಿಂದ ಡೌನ್‌ಲೋಡ್ ಮತ್ತು ಅಪ್‌ಲೋಡ್ ಸುಲಭವಾಗುತ್ತದೆ.

  3 ತಿಂಗಳ ಬಿಲ್ಲಿಂಗ್‌ನೊಂದಿಗೆ ಜಿಯೋಫೈಬರ್ ಬ್ರಾಡ್‌ಬ್ಯಾಂಡ್ ಪೋಸ್ಟ್‌ಪೇಯ್ಡ್: ಇತ್ತೀಚೆಗೆ ಬಿಡುಗಡೆಯಾದ ರಿಲಯನ್ಸ್ ಜಿಯೋಫೈಬರ್ ಬ್ರಾಡ್‌ಬ್ಯಾಂಡ್ ಪೋಸ್ಟ್‌ಪೇಯ್ಡ್ ಬಿಲ್ ಯೋಜನೆಗಳು ತ್ರೈಮಾಸಿಕ ಪಾವತಿ ಆಯ್ಕೆಯೊಂದಿಗೆ ಹೆಚ್ಚು ಗ್ರಾಹಕ ಸ್ನೇಹಿಯಾಗಿದೆ. ಯಾವುದೇ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ನವೀಕರಿಸಿದ ನಂತರ ಅಪ್‌ಗ್ರೇಡ್ ಮಾಡಬಹುದಾಗಿದೆ. ಅಥವಾ ಸ್ವಲ್ಪ ಕಡಿಮೆ ಖರ್ಚು ಮಾಡಲು ಬಯಸುತ್ತೀರಿ ಎಂದಾದರೆ ಅರೆ ವಾರ್ಷಿಕ ಮತ್ತು ವಾರ್ಷಿಕ ಯೋಜನೆಗಳನ್ನು ಬಳಸಬಹುದಾಗಿದೆ.

  ಜಿಯೋಫೈಬರ್ ಯೋಜನೆಗಳು 100Mbps ವೇಗದಿಂದ ಆರಂಭವಾಗುತ್ತವೆ. ಇನ್ನು 100Mbps ಪ್ಲಾನ್‌ 3 ತಿಂಗಳುಗಳ ಬಳಸಬಹುದಾಗಿದ್ದು ಇದರ ಬೆಲೆ 2097 ರೂ. 2997 ರೂ ಪಾವತಿಸಿದರೆ 150Mbps ವೇಗದ ಪ್ಲಾನ್​ ಸಿಗುತ್ತದೆ. ಅಂತೆಯೇ ರೂ 4497 ರೀಚಾರ್ಜ್​ ಮಾಡಿದರೆ 300Mbps ವೇಗದಲ್ಲಿ ಸಿಗಲಿದೆ. 7497ರೂ ರೀಚಾರ್ಜ್​ ಮಾಡಿದರೆ 500Mbps ವೇಗದ ಪ್ಲಾನ್​ ಸಿಗಲಿದೆ ಮತ್ತು 1Gbps ವೇಗಕ್ಕಾಗಿ 11997 ರೂ  ಪಾವತಿಸಬೇಕಿದೆ. ಎಲ್ಲಾ ಯೋಜನೆಗಳು ಅನಿಯಮಿತ ಡೇಟಾವನ್ನು ಒಟ್ಟುಗೊಂಡಿವೆ.

  ಗ್ರಾಹಕರು ಯಾವ ಯೋಜನೆಯನ್ನು ಆರಿಸುತ್ತೀರಿ ಎಂಬುದರ ಆಧಾರದ ಮೇಲೆ, ಅಮೆಜಾನ್ ಪ್ರೈಮ್, ಡಿಸ್ನಿ+ ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್ ಚಂದಾದಾರಿಕೆ ಸಿಗುತ್ತದೆ.

  ಇದನ್ನು ಓದಿ-Facebook: ರೇ-ಬನ್ ಜೊತೆಗೂಡಿ ಸ್ಮಾರ್ಟ್​ಗ್ಲಾಸ್ ಪರಿಚಯಿಸಲಿರುವ ಫೇಸ್​ಬುಕ್; ಏನಿದರೆ ವಿಶೇಷತೆ?

  6 ತಿಂಗಳ ಬಿಲ್ಲಿಂಗ್‌ನೊಂದಿಗೆ ಜಿಯೋಫೈಬರ್ ಬ್ರಾಡ್‌ಬ್ಯಾಂಡ್ ಪೋಸ್ಟ್‌ಪೇಯ್ಡ್: ಎಲ್ಲಾ ಜಿಯೋಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಗಳು ಅನಿಯಮಿತ ಡೇಟಾ ಬಳಕೆ ಮತ್ತು ಉಚಿತ ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳನ್ನು ನೀಡುತ್ತದೆ. 6 ತಿಂಗಳ ಬಿಲ್ಲಿಂಗ್ ಆಯ್ಕೆಯನ್ನು ಗ್ರಾಹಕರು ಆರಿಸಿದರೆ, 30Mbps ಬ್ರಾಡ್‌ಬ್ಯಾಂಡ್ ಪ್ಲಾನ್‌ಗೆ ನೀವು 2394 ರೂಪಾಯಿಗಳನ್ನು ಪಾವತಿಸಬೇಕು ಮತ್ತು 100Mbps ಪ್ಲಾನ್ ಆರಿಸಿದರೆ 6 4194 ರೂ.ಪಾವತಿಸಬೇಕು. 699 ರೂ  150Mbps ವೇಗದ ಇಂಟರ್​ನೆಟ್​ ಪ್ಲಾನ್ ಸಿಗಲಿದೆ. ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್ ಸ್ಟಾರ್ ವಿಐಪಿ, ಸೋನಿ ಲೈವ್, ಜೀ 5, ಸನ್ ಎನ್ಎಕ್ಸ್‌ಟಿ, ವೂಟ್ ಸೆಲೆಕ್ಟ್, ವೂಟ್ ಕಿಡ್ಸ್, ಆಲ್ಟ್‌ಬಾಲಾಜಿ, ಹೊಯಿಚೊಯ್, ಶೆಮರೂಮಿ, ಲಯನ್ಸ್‌ಗೇಟ್ ಪ್ಲೇ, ಡಿಸ್ಕವರಿ+, ಇರೋಸ್ ಚಂದಾದಾರಿಕೆಗಳು ಸಿಗುತ್ತದೆ. ಜೊತೆಗೆ JioCinema ಮತ್ತು JioSaavn ಬಳಸಬಹುದಾಗಿದೆ.

  ಇದನ್ನು ಓದಿ-World Beauty Day 2021: ನಿಮ್ಮ ಸೌಂದರ್ಯ ಹಾಳು ಮಾಡುತ್ತದೆ ಈ ಆಹಾರಗಳು! ಸೇವನೆಗೂ ಮುನ್ನ ಇರಲಿ ಎಚ್ಚರ!

   12 ತಿಂಗಳ ಬಿಲ್ಲಿಂಗ್‌ನೊಂದಿಗೆ ಜಿಯೋಫೈಬರ್ ಬ್ರಾಡ್‌ಬ್ಯಾಂಡ್ ಪೋಸ್ಟ್‌ಪೇಯ್ಡ್: ಈ  ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಬಯಸಿದಾದರೆ 4788 ರೂ.ಗೆ 30Mbpsವೇಗದ ಇಂಟರ್​ನೆಟ್​ ಪಡೆಯುತ್ತೀರಿ. 8388 ರೂ,ಗೆ 100Mbps ವೇಗದ ಇಂಟರ್​ಎಟ್​ ಪಡೆಯುತ್ತೀರಿ. 11988 ರೂ ಪಾವತಿಸಿದರೆ 150Mbps ವೇಗದಲ್ಲಿ. 500Mbps ವೇಗದ ಪ್ಲಾನ್​ ಬೇಕಾದರೆ 29988 ರೂ ಪಾವತಿಸಬೇಕು ಮತ್ತು 1Gbpsಗೆ 47988 ರೂ ನೀಡಬೇಕು. ಈ ಯೋಜನೆಗಳು ವೀಡಿಯೋ ಸ್ಟ್ರೀಮಿಂಗ್ ಆಪ್ ಚಂದಾದಾರಿಕೆ ಅನಿಯಮಿತ ಡೇಟಾ ಬಳಕೆ ಮತ್ತು ಉಚಿತ ಸ್ಥಳೀಯ ಹಾಗೂ ರಾಷ್ಟ್ರೀಯ ಧ್ವನಿ ಕರೆಗಳನ್ನು ಒಟ್ಟುಗೂಡಿಸುತ್ತವೆ.
  Published by:Harshith AS
  First published: