ಜಿಯೋ ಬಳಕೆದಾರರೇ ಎಚ್ಚರ! ಹ್ಯಾಕರ್ಸ್​ ದಾಳಿಗೆ ತುತ್ತಾಗಬಹುದು ನಿಮ್ಮ ಸ್ಮಾರ್ಟ್​ಫೋನ್​

Jio: ಯಾರಿಗೂ ತಿಳಿಯದೇ ಎಕ್ಸ್​ಹೆಲ್ಪರ್​ ಮಾಲ್​ವೇರ್​ ಸ್ಮಾರ್ಟ್​ಫೋನ್​ ಒಳಕ್ಕೆ ಸೇರಿಕೊಳ್ಳುತ್ತಿದೆ. ಮಾತ್ರವಲ್ಲದೆ, ಅನ್​ಇನ್​ಸ್ಟಾಲ್​ ಮಾಡಿದರೂ ಅದಾಗಿಯೇ ಇನ್​ಸ್ಟಾಲ್​ ಆಗುತ್ತದೆ.

news18-kannada
Updated:November 1, 2019, 4:24 PM IST
ಜಿಯೋ ಬಳಕೆದಾರರೇ ಎಚ್ಚರ! ಹ್ಯಾಕರ್ಸ್​ ದಾಳಿಗೆ ತುತ್ತಾಗಬಹುದು ನಿಮ್ಮ ಸ್ಮಾರ್ಟ್​ಫೋನ್​
ಜಿಯೋ
  • Share this:
ಜಿಯೋ ಬಳಕೆದಾರರ ಸ್ಮಾರ್ಟ್​ಫೋನ್​ಗಳಿಗೆ ಹಾನಿ ಮಾಡಲು ಹಾಕರ್ಸ್​ಗಳು ವೈರಸ್​ವೊಂದನ್ನು ಬಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಜಿಯೋ ಗ್ರಾಹಕರು ಜಾಗೃತೆಯಿಂದ ಇರಬೇಕು ಎಂದು ಸೈಬರ್​ ಸೆಕ್ಯೂರಿಟಿ ಸಂಸ್ಥೆ ಸಿಮ್ಯಾಂಟಿಕ್​ ಎಚ್ಚರಕೆಯನ್ನು ನೀಡಿದೆ.

ಸಿಮ್ಯಾಂಟಿಕ್​ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ‘ಎಕ್ಸ್​​ಹೆಲ್ಪರ್​ ಎಂಬ ಮಾಲ್​ವೇರ್​ವೊಂದು ಪತ್ತೆಯಾಗಿದ್ದು, ಬಳಕೆದಾರರು ಆ್ಯಪ್​ಗಳನ್ನು ಡೌನ್​ಲೋಡ್​ ಮಾಡುತ್ತಿದ್ದಂತೆ ಹಾಗೂ ಜಾಹಿರಾತುಗಳನ್ನು ವೀಕ್ಷಿಸುತ್ತಿದಂತೆ ಈ ಮಾಲ್​ವೇರ್​ ಸ್ಮಾರ್ಟ್​ಫೋನ್​ಗಳ ಒಳಕ್ಕೆ ಸೇರಿಕೊಳ್ಳುತ್ತಿದೆ‘ ಎಂದು ಹೇಳಿದೆ.

ಇದನ್ನೂ ಓದಿ: BSNL offer: ಬೇರೆ ನೆಟ್​ವರ್ಕ್​ಗೆ ಕರೆ ಮಾಡಿದ್ರೆ ಬಿಎಸ್ಎನ್ಎಲ್​​ ನೀಡುತ್ತೆ 6 ಪೈಸೆ ಕ್ಯಾಶ್​​ಬ್ಯಾಕ್​​

ಯಾರಿಗೂ ತಿಳಿಯದೇ ಎಕ್ಸ್​ಹೆಲ್ಪರ್​ ಮಾಲ್​ವೇರ್​ ಸ್ಮಾರ್ಟ್​ಫೋನ್​ ಒಳಕ್ಕೆ ಸೇರಿಕೊಳ್ಳುತ್ತಿದೆ. ಮಾತ್ರವಲ್ಲದೆ, ಅನ್​ಇನ್​ಸ್ಟಾಲ್​ ಮಾಡಿದರೂ ಅದಾಗಿಯೇ ಇನ್​ಸ್ಟಾಲ್​ ಆಗುತ್ತದೆ ಎಂದು ಹೇಳಿದೆ.

ಜಿಯೋ ಬಳಕೆದಾರರು ಈ ಬಗ್ಗೆ ಎಚ್ಚರಿಕೆಯಿಂದಿದ್ದು, ಪ್ಲೇಸ್ಟೋರ್​ ಬಿಟ್ಟು ಬೇರೆ ಯಾವುದೇ ಆ್ಯಪ್​ಸ್ಟೋರ್​ನಿಂದ ಡೌನ್​ಲೋಡ್​ ಮಾಡದಂತೆ ಸಿಮ್ಯಾಂಟಿಕ್​ ಸಂಸ್ಥೆ ಎಚ್ಚರಿಕೆ ನೀಡಿದೆ.

First published:November 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading