HOME » NEWS » Tech » RELIANCE JIO USERS CAN NOW EASY TO RECHARGE MOBILE NUMBER USING WHATSAPP HG

Whatsapp ಮೂಲಕ ಜಿಯೋ ರೀಚಾರ್ಜ್ ಮಾಡುವ ಅವಕಾಶ; ಹೊಸ ಸೇವೆ ಒದಗಿಸಿದ ಕಂಪೆನಿ

Reliance Jio: ಹೊಸ ಜಿಯೋ ಸಿಮ್​  ಖರೀದಿಸಲು, ಅಥವಾ ಪೋರ್ಟ್​ ಮಾಡಲು, ಜಿಯೋ ಸಿಮ್​ ಒಳಗೊಂಡಿರುವ ಸವಲತ್ತುಗಳನ್ನು ತಿಳಿಯಲು , ಜಿಯೋ ಫೈಬರ್​, ಜಿಯೋ ಮಾರ್ಟ್​ ಹೀಗೆ ನಾನಾ ಕೆಲಸವನ್ನು ಇದರ ಮೂಲಕವೇ ಮಾಡಬಹುದಾಗಿದೆ.

news18-kannada
Updated:June 10, 2021, 10:42 AM IST
Whatsapp ಮೂಲಕ ಜಿಯೋ ರೀಚಾರ್ಜ್ ಮಾಡುವ ಅವಕಾಶ; ಹೊಸ ಸೇವೆ ಒದಗಿಸಿದ ಕಂಪೆನಿ
Jio
  • Share this:
ನೀವು ಜಿಯೋ ಸಿಮ್ ಬಳಕೆದಾರರೇ? ಜಿಯೋ ನೆಟ್​ವರ್ಕ್​ನಲ್ಲಿ ವಾಟ್ಸ್​ಆ್ಯಪ್​ ಬಳಸುತ್ತಿದ್ದೀರಾ? ಹಾಗಿದ್ದರೆ, ಇನ್ನುಂದೆ ವಾಟ್ಸ್​ಆ್ಯಪ್​ ಮೂಲಕವೇ ಸುಲಭವಾಗಿ ರೀಚಾರ್ಜ್​ ಮಾಡಬಹುದಾಗಿದೆ. ಅದು ಹೇಗೆ? 

ಟೆಲಿಕಾಂ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ಹಲವಾರು ಫೀಚರ್ಸ್​​ಗಳನ್ನು ಮತ್ತು ಸೌಲಭ್ಯಗಳನ್ನು ಪರಿಚಯಿಸುತ್ತಾ ಬಂದಿದೆ. ಜಿಯೋ ಪೋನ್​ ಬಳಕೆದಾರರಿಗಾಗಿ ನಿನ್ನೆ ವಾಯ್ಸ್​ ಕರೆಯನ್ನು ನೀಡಿದೆ. ಇದೀಗ ಗ್ರಾಹಕರು ವಾಟ್ಸ್​ಆ್ಯಪ್​ ಮೂಲಕ ರೀಚಾರ್ಜ್ ಮಾಡುವ ವಿನೂತನ ಅವಕಾಶ ಕಲ್ಪಿಸಿದೆ. ಅದರ ಜತೆಗೆ ಹಣ ಪಾವತಿ, ಅಹವಾಲುಗಳಿಗೆ ಉತ್ತರ, ದೂರು ನೀಡುವುದು ಹೀಗೆ ಕೆಲವು ಚಟುವಟಿಕೆಗಳನ್ನು ವಾಟ್ಸ್​ಆ್ಯಪ್ ಮೂಲಕವೇ ಮಾಡಬಹುದಾಗಿದೆ.

ಇನ್ನು ಹೊಸ ಜಿಯೋ ಸಿಮ್​  ಖರೀದಿಸಲು, ಅಥವಾ ಪೋರ್ಟ್​ ಮಾಡಲು, ಜಿಯೋ ಸಿಮ್​ ಒಳಗೊಂಡಿರುವ ಸವಲತ್ತುಗಳನ್ನು ತಿಳಿಯಲು , ಜಿಯೋ ಫೈಬರ್​, ಜಿಯೋ ಮಾರ್ಟ್​ ಹೀಗೆ ನಾನಾ ಕೆಲಸವನ್ನು ಇದರ ಮೂಲಕವೇ ಮಾಡಬಹುದಾಗಿದೆ.

ಜಿಯೋ ಸಿಮ್​ ಬಳಕೆದಾರರು ವಾಟ್ಸ್​​ಆ್ಯಪ್​ ಮೂಲಕ ಈ ಸೇವೆ ಪಡೆಯಲು ಮೊದಲು ವಾಟ್ಸ್​ಆ್ಯಪ್​ ಮೂಲಕ 70007 70007 ಸಂಖ್ಯೆಯನ್ನು ಸೇವ್​ ಮಾಡಿ ಹಾಯ್​ ಎಂದು ಮೆಸೇಜ್​ ಮಾಡಬೇಕು. ಇಷ್ಟಾದ ಬಳಿಕ ವ್ಯಾಲೆಟ್​​, ಯುಪಿಐ, ಕ್ರೆಡಿಟ್​ ಮತ್ತು ಡೆಬಿಟ್​ ಕಾರ್ಡ್​​ ಮೂಲಕ ಪಾವತಿ ಆಯ್ಕೆಯನ್ನು ಪಡೆದುಕೊಳ್ಳಬಹುದಾಗಿದೆ. ಆ ಬಳಿಕ ರೀಚಾರ್ಜ್​​ ಸೇರಿದಂತೆ ಎಲ್ಲಾ ಸೇವೆಯನ್ನು ಮಾಡಬಹುದಾಗಿದೆ.

ಸದ್ಯ ಗ್ರಾಹಕರಿಗಾಗಿ ವಾಟ್ಸ್​​ಆ್ಯಪ್​ ಮೂಲಕ 1)ಜಿಯೋ ರೀಚಾರ್ಜ್​, 2)ಹೊಸ ಸಿಮ್​ ಪಡೆಯುವುದು, 3)ಪೋರ್ಟ್​ ಮಡುವುದು, 4)ಜಿಯೋ ಫೈಬರ್, 5)ಜಿಯೋ ಸಿಮ್​ ನೆರವು, 6)ಅಂತರಾಷ್ಟ್ರೀಯ ರೋಮಿಂಗ್​, 7)ಜಿಯೋ ಮಾರ್ಟ್​ ಸೇವೆ ಪಡೆಯಬಹುದಾಗಿದೆ.

ಸದ್ಯ ಜಿಯೋ ಗ್ರಾಹಕರಿಗೆ ಈ ಸೇವೆ ಇಂಗ್ಲೀಷ್​​ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಈ ಸೇವೆ ಸಿಗುತ್ತಿದೆ. ಮುಂದಿನ ದಿನದಲ್ಲಿ ದೇಶಿ ಭಾಷೆಯಲ್ಲೂ ಬಳಸಬಹುದಾದ ಆಯ್ಕೆ ನೀಡಲಿದೆ.
Published by: Harshith AS
First published: June 10, 2021, 10:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories