ಡಿ. 6 ರಿಂದ ಶೇ.40 ರಷ್ಟು ದುಬಾರಿಯಾಗಲಿದೆ ರಿಲಯನ್ಸ್ ಜಿಯೋ

ಜಿಯೋ ಸಂಸ್ಥೆಯು ಗ್ರಾಹಕರ ಹಿತಾಸಕ್ತಿಗೆ ಬದ್ಧವಾಗಿದ್ದು, ಭಾರತೀಯ ದೂರಸಂಪರ್ಕ ಉದ್ಯಮವನ್ನು ಉಳಿಸಿಕೊಳ್ಳಲು ಈ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ರಿಲಯನ್ಸ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

zahir | news18-kannada
Updated:December 2, 2019, 11:39 AM IST
ಡಿ. 6 ರಿಂದ ಶೇ.40 ರಷ್ಟು ದುಬಾರಿಯಾಗಲಿದೆ ರಿಲಯನ್ಸ್ ಜಿಯೋ
jio
  • Share this:
ಟೆಲಿಕಾಂ ಕ್ಷೇತ್ರದ ದಿಗ್ಗಜ ರಿಲಯನ್ಸ್ ಜಿಯೋ ಡಿಸೆಂಬರ್ 6 ರಿಂದ ಟ್ಯಾರಿಫ್ ಪ್ಲ್ಯಾನ್​ನಲ್ಲಿ ಶೇ. 40 ರಷ್ಟು ಶುಲ್ಕವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಇದರೊಂದಿಗೆ ಆಲ್​ ಇನ್ ಪ್ಲ್ಯಾನ್​ಗಳ ಮೂಲಕ ಗ್ರಾಹಕರಿಗೆ 300% ಕ್ಕಿಂತಲೂ ಹೆಚ್ಚಿನ ಪ್ರಯೋಜನಗಳನ್ನು ನೀಡಲಿದೆ ಎಂದು ರಿಯಲನ್ಸ್ ಹೇಳಿಕೊಂಡಿದೆ.

ಭಾರತೀಯ ಟೆಲಿಕಾಂ ಉದ್ಯಮವನ್ನು ಉಳಿಸಿಕೊಳುವ ಸಲುವಾಗಿ ಈ ಟ್ಯಾರಿಫ್ ಪ್ಲ್ಯಾನ್ ಹೆಚ್ಚಿಸುವುದು ಅನಿವಾರ್ಯ. ಹೀಗಾಗಿ ರಿಚಾರ್ಜ್ ಪ್ಲ್ಯಾನ್​ಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಕಂಪೆನಿ ಮುಂದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ರಿಲಯನ್ಸ್ ತಿಳಿಸಿದೆ.

ವೊಡಾಫೋನ್- ಐಡಿಯಾ ಶೇ.42 ರಷ್ಟು ಮತ್ತು ಭಾರ್ತಿ ಏರ್‌ಟೆಲ್‌ ಶೇ.42 ರಷ್ಟು ಸುಂಕ ಹೆಚ್ಚಳವನ್ನು ಈಗಾಗಲೇ ಘೋಷಿಸಿದ್ದು, ಇದರ ಬೆನ್ನಲ್ಲೇ ಇದೀಗ ರಿಲಯನ್ಸ್ ಜಿಯೋ ಕೂಡ 40% ರಷ್ಟು ದರ ಹೆಚ್ಚಿಸುವುದಾಗಿ ತಿಳಿಸಿದೆ. ಈ ಹೊಸ ದರವು ಡಿಸೆಂಬರ್ 6 ರಿಂದ ಜಾರಿಗೆ ಬರಲಿದೆ.

"ಜಿಯೋ ಸಂಸ್ಥೆಯು ಗ್ರಾಹಕರ ಹಿತಾಸಕ್ತಿಗೆ ಬದ್ಧವಾಗಿದ್ದು, ಭಾರತೀಯ ದೂರಸಂಪರ್ಕ ಉದ್ಯಮವನ್ನು ಉಳಿಸಿಕೊಳ್ಳಲು ಈ ಕ್ರಮ ತೆಗೆದುಕೊಳ್ಳುತ್ತಿದೆ" ಎಂದು ರಿಲಯನ್ಸ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ ಜಿಯೋ ಸಂಸ್ಥೆಯು, ಸರ್ಕಾರ ಒಪ್ಪಿದರೆ ಮಾತ್ರ ದರ ಹೆಚ್ಚಿಸುವುದಾಗಿ ತಿಳಿಸಿತ್ತು. ಇತರ ಅಪರೇಟರ್​​ಗಳಂತೆ, ನಾವು ಸರ್ಕಾರದ ನಿಯಮಾವಳಿಗೆ ಬದ್ಧವಾಗಿರುತ್ತೇವೆ. ಭಾರತೀಯ ಗ್ರಾಹಕರಿಗೆ ಮತ್ತು ಉದ್ಯಮಕ್ಕೆ ತೊಂದರೆಯಾಗದ ರೀತಿಯಲ್ಲಿ ಬೆಲೆ ಹೆಚ್ಚಳ ಮಾಡುವ ಉದ್ದೇಶವಿದೆ ಎಂದು ತಿಳಿಸಿತ್ತು.

ದರಗಳ ಹೆಚ್ಚಳವೇಕೆ?
ಭಾರತದಲ್ಲಿ ಮೊಬೈಲ್ ಡೇಟಾ ಶುಲ್ಕಗಳು ವಿಶ್ವದ ಅತ್ಯಂತ ಕಡಿಮೆ ದರದಲ್ಲಿವೆ. ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಡೇಟಾ ಸೇವೆಗಳ ಅಗತ್ಯಕ್ಕೆ ಅನುಸಾರವಾಗಿ ಚಂದಾದಾರರಿಗೆ ಕಡಿಮೆ ಬೆಲೆಗೆ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಆದರೆ ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶದಂತೆ ಏರ್​ಟೆಲ್, ವೊಡಾಫೋನ್-ಐಡಿಯಾ ಮತ್ತು ಇತರ ಟೆಲಿಕಾಂ ಆಪರೇಟ್ ಕಂಪೆನಿಗಳು ಸರ್ಕಾರಕ್ಕೆ 1.4 ಲಕ್ಷ ಕೋಟಿ ರೂ.ಗಳನ್ನು ಪಾವತಿಸಬೇಕಾಗಿದೆ.ಇದನ್ನೂ ಓದಿ: Viral Video: ಹಾಡು ಮರೆತು ಇಂಗ್ಲಿಷ್ ಮಾತಾಡಿ ಮತ್ತೆ ಟ್ರೋಲ್ ಆದ ರಾನು ಮಂಡಲ್

ಟೆಲಿಕಾಂ ಕಂಪೆನಿಗಳ ವಾರ್ಷಿಕ ಹೊಂದಾಣಿಕೆಯ ಒಟ್ಟು ಆದಾಯವನ್ನು (ಎಜಿಆರ್) ಲೆಕ್ಕಾಚಾರ ಮಾಡುವಲ್ಲಿ ದೂರಸಂಪರ್ಕೇತರ ವ್ಯವಹಾರಗಳಿಂದ ಬರುವ ಆದಾಯವನ್ನು ಸೇರಿಸುವ ಕುರಿತು ಸರ್ಕಾರದ ನಿಲುವನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಎತ್ತಿಹಿಡಿದಿದೆ. ಅದರಲ್ಲಿ ಒಂದು ಭಾಗವನ್ನು ಬೊಕ್ಕಸಕ್ಕೆ ಪರವಾನಗಿ ಮತ್ತು ಸ್ಪೆಕ್ಟ್ರಮ್ ಶುಲ್ಕವಾಗಿ ಪಾವತಿಸಲಾಗುತ್ತದೆ. ನ್ಯಾಯಾಲಯಕ್ಕೆ ಸಲ್ಲಿಸಿದ ಸಂಖ್ಯೆಗಳ ಪ್ರಕಾರ, ಭಾರ್ತಿ ಏರ್​ಟೆಲ್ 21,682 ಕೋಟಿ ಹಾಗೂ ವೋಡಾಫೋನ್ ಐಡಿಯಾ 19,823 ಕೋಟಿ ಹಾಗೂ ರಿಲಾಯನ್ಸ್ ಕಮ್ಯುನಿಕೇಷನ್ಸ್ 16,456 ಕೋಟಿ ಹಣವನ್ನು ಸರ್ಕಾರಕ್ಕೆ ಪಾವತಿಸಬೇಕಿದೆ. ಈ ಹಿನ್ನಲೆಯಲ್ಲಿ ಟ್ಯಾರಿಫ್ ದರದಲ್ಲಿ ಹೆಚ್ಚಳ ಮಾಡಲು ಕಂಪೆನಿಗಳು ಮುಂದಾಗಿವೆ.
First published:December 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ