• Home
  • »
  • News
  • »
  • tech
  • »
  • Reliance Jio 5G Network: 5G ಸೇವೆಯಲ್ಲಿ ಜಿಯೋ ದಾಖಲೆ! ಗ್ರಾಹಕರಿಗೆ ಸಿಗಲಿದೆ ಬಿಗ್ ಅಪ್ಡೇಟ್

Reliance Jio 5G Network: 5G ಸೇವೆಯಲ್ಲಿ ಜಿಯೋ ದಾಖಲೆ! ಗ್ರಾಹಕರಿಗೆ ಸಿಗಲಿದೆ ಬಿಗ್ ಅಪ್ಡೇಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Technology: ಈಗಿನ ಮಾರುಕಟ್ಟೆಯಲ್ಲಿ ಹೊಸ ತಂತ್ರಜ್ಞಾನಗಳು ಅಳವಡಿಕೆ ಆಗುತ್ತಲೇ ಇರುತ್ತದೆ. ಅದರಲ್ಲಿ ಈ 5G ಸೇವೆಯೂ ಒಂದು. ತಂತ್ರಜ್ಞಾನ ಬಳಕೆಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ ಹೊರತು ಕಡಿಮೆಯಗುವುದಿಲ್ಲ. ಅತ್ಯಂತ ವೇಗವಾಗಿ ಓಡುತ್ತಿರುವ ಜಗತ್ತಿಗೆ ಇಂಟರ್​ನೆಟ್ ಸ್ಪೀಡ್ ಕೂಡಾ ಅಷ್ಟೇ ವೇಗದಲ್ಲಿ ಬೇಕು. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಈಗ ಬಿಗ್ ಅಪ್ಡೇಟ್ ಸಿಕ್ಕಿದೆ.

ಮುಂದೆ ಓದಿ ...
  • Share this:

ಇದೀಗ ದೇಶದಲ್ಲಿ 5G ಸೇವೆ ಹೊರತಂದಿರುವ ಕಾರಣ ನೆಟ್‌ವರ್ಕ್‌ನ (Network) ವೇಗ ಇನ್ನಷ್ಟು ಹೆಚ್ಚಾಗುತ್ತಿದೆ. ಇದರಲ್ಲೂ ದೆಹಲಿಯಲ್ಲಿ ರಿಲಯನ್ಸ್‌ ಜಿಯೋದ (Reliance Jio) ನೆಟ್‌ವರ್ಕ್‌ ಸುಮಾರು 600 Mbps ನಷ್ಟು ಡೌನ್ ಲೋಡ್‌ (Download) ವೇಗವನ್ನು (Speed) ದಾಖಲಿಸಿದೆ. ಆದರೆ ದೇಶದಲ್ಲಿ ಒಟ್ಟಾರೆಯಾಗಿ 5G ಸೇವೆಗಳನ್ನು ನೋಡಿದರೆ ಭಾರತದಲ್ಲಿ 5G ವೇಗವು 500 Mbps ಅನ್ನು ದಾಖಲಿಸಿದೆ ಎಂದು ವರದಿಯೊಂದು ತೋರಿಸಿದೆ. Ookla ಅವರ “Speedtest Intelligence” ವರದಿಯ ಪ್ರಕಾರ, ಹೆಚ್ಚಾಗಿ ಟೆಲಿಕಾಂ ಅಪರೇಟರ್‌ಗಳು (Telicom Operator) ತಮ್ಮ ನೆಟ್‌ವರ್ಕ್‌ಗಳನ್ನು ಪರಿಶೀಲಿಸುತ್ತಾರೆ. ಇದರಲ್ಲಿ 5G ಡೌನ್‌ಲೋಡ್‌ ವೇಗ 16.27 Mbps ನಿಂದ 809.94 Mbps ವರೆಗೆ ದಾಖಲಾಗಿರುವುದನ್ನು ಅವರು ವೀಕ್ಷಿಸಿದ್ದಾರೆ ಎಂದು ವರದಿ ಮಾಡಿದ್ದಾರೆ. ಇದರಲ್ಲೂ JIO ಮತ್ತು AIRTEL ನ ನೆಟ್‌ವರ್ಕ್‌ನಲ್ಲಿ ನಾವು ಹೆಚ್ಚು ವೇಗವನ್ನು ಕಾಣಬಹುದಾಗಿದೆ.


ದೆಹಲಿಯ ನಾಲ್ಕು ನಗರಗಳಲ್ಲಿ 5G ಡೌನ್‌ಲೋಡ್‌ ವೇಗ ದಾಖಲು


ಓಕ್ಲಾ ಪ್ರಕಾರ ದೆಹಲಿಯಲ್ಲಿ ಏರ್‌ಟೆಲ್‌ 197.98 mbps ನಲ್ಲಿ ಸುಮಾರು 200 Mbps ಸರಾಸರಿ ಡೌನ್‌ಲೋಡ್‌ ವೇಗವನ್ನು ತಲುಪಿದೆ. ಕೊಲ್ಕತ್ತಾದಲ್ಲಿ ಜೂನ್​​ನಲ್ಲಿ ಲಭ್ಯವಿದ್ದ ನೆಟ್‌ವರ್ಕ್‌ ಸೇವೆಯು ಅಂದಿಗಿಂತ ಇಂದಿಗೆ ಹೆಚ್ಚು ಬದಲಾವಣೆಯನ್ನು ಕಂಡಿದೆ. ಅಂದರೆ ಏರ್ಟೆಲ್‌ನ ಸರಾಸರಿ ಡೌನ್‌ಲೋಡ್‌ ವೇಗವು 33.83 Mbps ಆಗಿದ್ದರೆ ಜಿಯೋ ಡೌನ್ ಲೋಡ್‌ ವೇಗವು 482.02 ನಷ್ಟು ಇದೆ. ಮುಂಬೈನಲ್ಲಿ ಏರ್ಟೆಲ್‌ ನೆಟ್‌ವರ್ಕ್‌ನ ಡೌನ್‌ಲೋಡ್‌ ವೇಗವು 271.07 Mbps ನಷ್ಟಿದ್ದರೆ, ಜಿಯೋ ನೆಟ್​ವರ್ಕ್​ ವೇಗ 515.38 ಡೌನ್‌ಲೋಡ್‌ ಸ್ಪೀಡ್ ಹೊಂದಿದೆ.




ವಾರಣಾಸಿಯಲ್ಲಿ  ಜಿಯೋ ಮತ್ತು ಏರ್ಟೆಲ್‌ನ ನೆಟ್‌ವರ್ಕ್‌ ವೇಗವು ಬಹುತೇಕ ಒಂದೇ ರೀತಿಯಲ್ಲಿದೆ. ಇಲ್ಲಿ ಜಿಯೋ  485.22 Mbps ನೆಟ್‌ವರ್ಕ್‌ ಸ್ಪೀಡ್‌ ಹೊಂದಿದೆ. ಆದರೆ  ಇಲ್ಲಿ ಏರ್ಟೆಲ್‌ ಜಿಯೋಗಿಂತ ಹೆಚ್ಚು ವೇಗ ಹೊಂದಿದ್ದು 516.57 Mbps ನಷ್ಟು ಇಂಟರ್​ನೆಟ್ ಸ್ಪೀಡ್ ದಾಖಲಿಸಿದೆ.


ಇದನ್ನೂ ಓದಿ: Jio ಬಿಡುಗಡೆ ಮಾಡಲಿದೆ ಬರೀ 15 ಸಾವಿರ ರೂಪಾಯಿಯ ಲ್ಯಾಪ್​ಟಾಪ್


ಎಲ್ಲೆಲ್ಲಿ ಏರ್ಟೆಲ್, ಜಿಯೋ 5ಜಿ ಸೇವೆ ಆರಂಭ?


ಏರ್ಟೆಲ್‌ ಒಟ್ಟಾಗಿ ಎಂಟು ನಗರಗಳಲ್ಲಿ ತಮ್ಮ 5G ಸೇವೆಗಳನ್ನು ಪ್ರಾರಂಭಿಸಿದೆ. ಆದರೆ ಜಿಯೋ  ತನ್ನ 5G  ಸೇವೆಗಳನ್ನು ಈಗ ದೆಹಲಿ, ಮುಂಬೈ, ಕೊಲ್ಕತ್ತಾ ಮತ್ತು ವಾರಣಾಸಿ ಈ ನಾಲ್ಕು ನಗರಗಳಿಗೆ ಸೀಮಿತವಾಗಿಸಿದೆ. ಈ 5G ನೆಟ್‌ವರ್ಕ್‌ ಸ್ಪೀಡ್‌ ಹೆಚ್ಚಿರುವುದರಿಂದ ಅಧಿಕ ಸಂಖ್ಯೆಯಲ್ಲಿ ಸ್ಮಾರ್ಟ್ ಫೋನ್‌ ಬಳಕೆದಾರರು 5Gಗೆ ಅಪ್‌ಗ್ರೇಡ್‌ ಮಾಡಲು ರೆಡಿಯಾಗಿದ್ದಾರೆ. 5G ಬೆಳವಣಿಗೆಯಾಗಲು ಇದೂ ಕೂಡಾ ಒಂದು ರೀತಿಯಲ್ಲಿ ಕಾರಣ ಅಂತ ಹೇಳಬಹುದು. ಈ 5G ವೇಗವು ಬ್ಯುಸಿನೆಸ್‌ ಕ್ಷೇತ್ರಗಳಲ್ಲಿ ಹೆಚ್ಚು ನೆರವಾಗಲಿದೆ ಎಂದು ಹೇಳಬಹುದು. ಇಲ್ಲಿ ಇಂಟರ್​ನೆಟ್ ವೇಗದಲ್ಲಿರುವ ಸ್ಥಿರತೆ ಪ್ಲಸ್ ಪಾಯಿಂಟ್ ಆಗಿದೆ.


ಇದನ್ನೂ ಓದಿ:  ಗೂಗಲ್​ನಲ್ಲಿ ಈ ಮೂರು ವಿಚಾರ ಸರ್ಚ್​ ಮಾಡಿದ್ರೆ ಜೈಲು ಸೇರೋದು ಗ್ಯಾರಂಟಿ!


ಭಾರತ ನೆಟ್​​ವರ್ಕ್ ಸ್ಪೀಡ್ ವಿಚಾರದಲ್ಲಿ ಎಷ್ಟನೇ ಸ್ಥಾನದಲ್ಲಿದೆ?


ಸ್ಪೀಡ್‌ಟೆಸ್ಟ್​ ಗ್ಲೋಬಲ್‌ ಇಂಡೆಕ್ಸ್‌ನ ಪ್ರಕಾರ ಆಗಸ್ಟ್‌ನಲ್ಲಿ ಭಾರತದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಡೌನ್‌ಲೋಡ್ ವೇಗವು 13.52 Mbps‌ನಷ್ಟು ಇತ್ತು. ಆಗ ಭಾರತವು ವಿಶ್ವದಲ್ಲಿ 117ನೇ ಸ್ಥಾನವನ್ನು ಹೊಂದಿತ್ತು. ಅದರೆ ಈಗ ಭಾರತದಲ್ಲಿ ಇಂಟರ್​ನೆಟ್ ಸ್ಪೀಡ್ ಅದಕ್ಕಿಂತ ಹೆಚ್ಚಿದೆ.


ಈಗಿನ ಮಾರುಕಟ್ಟೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸುತ್ತಾ ಇರುತ್ತಾರೆ . ಅದರಲ್ಲಿ ಈ 5G ಸೇವೆ ಕೂಡ ಒಂದು. ಮೊಬೈಲ್, ಲ್ಯಾಪ್​ಟಾಪ್ ಸೇರಿದಂತೆ ಗ್ಯಾಜೆಟ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವುದರಿಂದ ಭಾರತದಲ್ಲಿ 5ಜಿ ನೆಟ್​ವರ್ಕ್ ಹೊಸ ಮೈಲುಗಲ್ಲಾಗಲಿದೆ.

Published by:Harshith AS
First published: