ಲಾಕ್ಡೌನ್ ಅವಧಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್ಗಳ ಬಳಕೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ರಿಲಾಯನ್ಸ್ ಜಿಯೋ ಸಂಸ್ಥೆ ಹೊಸದೊಂದು ವಿಡಿಯೋ ಕಾಲಿಂಗ್ ಫೀಚರ್ ಇರುವ ಆ್ಯಪ್ವೊಂದನ್ನು ಅಭಿವೃದ್ಧಿಪಡಿಸಿದೆ. ಈ ನೂತನ ಆ್ಯಪ್ಗೆ ಜಿಯೋ ಮೀಟ್ ಎಂದು ಹೆಸರಿಟ್ಟಿದೆ. ಸದ್ಯದಲ್ಲೇ ಜಿಯೋ ಮೀಟ್ ವಿಡಿಯೋ ಕಾನ್ಫರೆನ್ಸ್ ಆ್ಯಪ್ ಅನ್ನು ಗ್ರಾಹಕರಿಗೆ ಪರಿಚಯಿಸುವುದಾಗಿ ರಿಲಾಯನ್ಸ್ ಇಂಡಸ್ಟ್ರೀ ತಿಳಿಸಿದೆ.
ಲಾಕ್ಡೌನ್ ಅವಧಿಯಲ್ಲಿ ಚೀನಾ ಮೂಲಕ ವಿಡಿಯೋ ಕಾನ್ಫರೆನ್ಸ್ ಜೂಮ್ ಆ್ಯಪ್ನ ಬಳಕೆ ಗಣನೀಯವಾಗಿ ಏರಿಕೆಯಾಗಿದ್ದು, ಭಾರತದಲ್ಲಿ ಸಾಕಷ್ಟು ಜನರು ಜೂಮ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಬಳಸುತ್ತಿದ್ದರು. ಇತ್ತೀಚೆಗೆ ಜೂಮ್ ಆ್ಯಪ್ನಲ್ಲಿ ನ್ಯೂನತೆಗಳಿವೆ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಮಾತ್ರವಲ್ಲದೆ, ಜೂಮ್ ಆ್ಯಪ್ ಬಳಕೆಗೆ ಯೋಗ್ಯವಲ್ಲ ಎಂದು ಹೇಳಿತ್ತು. ಇದೀಗ ರಿಲಾಯನ್ಸ್ ಇಂಡಸ್ಟ್ರೀ ಬಳಕೆದಾರರಿಗೆ ಉಪಯೋಗವಾಗಲೆಂದು ಜಿಯೋ ಮೀಟ್ ಎಂಬ ವಿಡಿಯೋ ಕಾನ್ಫರೆನ್ಸ್ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ.
ಈ ಬಗ್ಗೆ ರಿಲಯನ್ಸ್ ಜಿಯೋ ಇನ್ಫೋಕಾಂನ ಹಿರಿಯ ಉಪಾಧ್ಯಕ್ಷ ಪಂಕಜ್ ಪವಾರ್ ಮಾತನಾಡಿದ್ದು, ಜಿಯೋ ಎಲ್ಲಾ ಡಿವೈಸ್ಗಳಲ್ಲಿ ಮತ್ತು ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.
ನಂತರ ಮಾತನಾಡಿದ ಅವರು ಜಿಯೋ ಮೀಟ್ ವಿಡಿಯೋ ಕಾನ್ಫರೆನ್ಸ್ ಆ್ಯಪ್ ಮಾತ್ರವಲ್ಲ. ಈ ಆ್ಯಪ್ ಸಹಾಯದಿಂದ ಬಳಕೆದಾರರು ವೈದ್ಯರೊಂದಗೆ ಮಾತನಾಡಬಹುದಾಗಿದೆ. ಜೊತೆಗೆ ಸಂವಹನ ನಡೆಸಲು ಇದು ಸಹಕಾರಿಯಾಗಿದೆ ಎಂದು ಹೇಳಿದರು.
ಇದರ ಜೊತೆಗೆ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಮಾಡಲು ಜಿಯೋ ಮೀಟ್ ಸಹಕಾರಿಯಾಗಲಿದೆ. ಸದ್ಯದಲ್ಲೇ ಈ ಆ್ಯಪ್ ಅನ್ನು ಬಿಡುಗಡೆ ಮಾಡಲಿದ್ದೇವೆ. ಬಳಕೆದಾರರು ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಬಳಸಬಹುದಾಗಿದೆ ಎಂದು ಪಂಕಜ್ ಪವಾರ್ ಹೇಳಿದ್ದಾರೆ.
ಇನ್ನು ಜಿಯೋ ಮೀಟ್ ಆ್ಯಪ್ ಮೂಲಕ ಏಕ ಕಾಲದಲ್ಲಿ 10 ಜನರೊಂದಿಗೆ ವಿಡಿಯೋ ಕಾಲ್ನಲ್ಲಿ ಭಾಗವಹಿಸಬಹುದಾಗಿದೆ.ಇತ್ತೀಚೆಗೆ ಗೂಗಲ್ ಕೂಡ ಜಿಮೇಲ್ ಅಕೌಂಟ್ ಹೊಂದಿದವರಿಗೆ ಮೀಟ್ ಆ್ಯಪ್ ಅನ್ನು ಉಚಿತವಾಗಿ ಬಳಸಬಹುದೆಂದು ಹೇಳಿದೆ. ಈ ಆ್ಯಪ್ನಲ್ಲೂ ಏಕ ಕಾಲಕ್ಕೆ 100 ಜನರು ವಿಡಿಯೋ ಕರೆಯಲ್ಲಿ ಭಾಗವಹಿಸಬಹುದಾಗಿದೆ.
ದರ್ಶನ್ ಅವರ ಆ ಒಂದು ಸ್ಪರ್ಶಕ್ಕೆ ಕಾದಿದ್ದ ಬಸವನಿಗೆ ಅನಾರೋಗ್ಯ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ