ಜಿಯೋನ ಹೊಸ ಆಫರ್: 149 ರೂಪಾಯಿ ಪ್ಲಾನ್​ನಲ್ಲಿ ಪ್ರತಿದಿನ ಪಡೆದುಕೊಳ್ಳಿ 1ಜಿಬಿ ಡೇಟಾ!


Updated:January 7, 2018, 4:35 PM IST
ಜಿಯೋನ ಹೊಸ ಆಫರ್: 149 ರೂಪಾಯಿ ಪ್ಲಾನ್​ನಲ್ಲಿ ಪ್ರತಿದಿನ ಪಡೆದುಕೊಳ್ಳಿ 1ಜಿಬಿ ಡೇಟಾ!

Updated: January 7, 2018, 4:35 PM IST
-ನ್ಯೂಸ್ 18 ಕನ್ನಡ

ರಿಲಾಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ವರ್ಷದ ಹೊಸ ಗಿಫ್ಟ್​ ನೀಡುತ್ತಾ ನೂತನ ಆಫರ್ ಒಂದನ್ನು ಬಿಡುಗಡೆಗೊಳಿಸಿದೆ. ಹ್ಯಾಪಿ ನ್ಯೂ ಇಯರ್ 2018 ಹೆಸರಿನ ಈ ಮೂಲಕ ಈ ಆಫರ್ ಪರಿಚಯಿಸಲಾಗಿದ್ದು, ಈ ಮೂಲಕ ಗ್ರಾಹಕರಿಗೆ ಪ್ರತಿನಿತ್ಯ 1ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಇದನ್ನು ಹೊರತುಪಡಿಸಿ ಸೇ. 50ರಷ್ಟು ಹೆಚ್ಚುವರಿ ಡೇಟಾ ಇಲ್ಲವೇ 50 ರೂಪಾಯಿ ಕಡಿಮೆ ದರದ ರೀಚಾರ್ಜ್​ ಕೂಡಾ ಇರಲಿದೆ. ಅಂದರೆ ಈವರೆಗಿದ್ದ 199 ರೂಪಾಯಿಗಳ ರೀಚಾರ್ಜ್​ 149 ರೂಪಾಯಿಗಳಿಗೆ ಸಿಗಲಿದೆ.

ಜಿಯೋ ಬಿಡುಗಡೆಗೊಳಿಸಿರುವ ಈ ಆಫರ್ ಟೆಲಿಕಾಂ ಕ್ಷೇತ್ರದ ಈವರೆಗಿನ ಅತಿ ಕಡಿಮೆ ವೆಚ್ಚದ ಡೇಟಾ ಪ್ಲಾನ್ ಆಗಿದೆ. ಜಿಯೋ ಹೊರತುಪಡಿಸಿ ಬೇರಾವ ಕಂಪೆನಿಯೂ 149 ರೂಪಾಯಿಗಳಿಗೆ ಪ್ರತಿನಿತ್ಯ 1ಜಿಬಿಯ ಡೇಟಾ ನೀಡುವುದಿಲ್ಲ.

ಇದಲ್ಲದೇ 399 ರೂಪಾಯಿಯ ಪ್ಲಾನ್​ನಲ್ಲಿ 20 ಶೇಕಡಾ ಹೆಚ್ಚುವರಿ ಡೇಟಾ ನೀಡಲಾಗುತ್ತಿದೆ. ಇದಲ್ಲದೇ ಈ ಆಫರ್​ ಮೂಲಕ 70 ದಿನಗಳ ಬದಲಾಗಿ 84 ದಿನಗಳ ವ್ಯಅಲಿಡಿಟಿಯನ್ನು ನೀಡಲಾಗುತ್ತಿದೆ. ಇನ್ನು ಗ್ರಾಹಕರು ಹೆಚ್ಚಿನ ಡೇಟಾ ಬಳಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿನಿತ್ಯ 1.5 ಜಿಬಿಯ ಆಫರ್​ನ್ನು ಕೂಡಾ ಬಿಡುಗಡೆಗೊಳಿಸಿದೆ. ಜನವರಿ 9ರಂದು ಈ ಆಫರ್ ಗ್ರಾಹಕರಿಗೆ ಸಿಗಲಿದೆ.
First published:January 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ