ಕೇವಲ 501 ರೂಪಾಯಿಗೆ ವಾಟ್ಸಾಪ್, ಫೇಸ್​ಬುಕ್ ಮತ್ತು ಯೂಟ್ಯೂಬ್ ಬಳಸಬಹುದಾದ ಫೋನ್​!


Updated:July 20, 2018, 5:24 PM IST
ಕೇವಲ 501 ರೂಪಾಯಿಗೆ ವಾಟ್ಸಾಪ್, ಫೇಸ್​ಬುಕ್ ಮತ್ತು ಯೂಟ್ಯೂಬ್ ಬಳಸಬಹುದಾದ ಫೋನ್​!

Updated: July 20, 2018, 5:24 PM IST
ನ್ಯೂಸ್​ 18 ಕನನ್ಡ

ಮುಂಬೈ(ಜು.20): ಸಾಮಾನ್ಯ ಮನುಷ್ಯನ ಸ್ಮಾರ್ಟ್ ಫೋನ್ ಕನಸು ನನಸಾಗೋ‌ ಟೈಂ ಬಂದಿದೆ. ಕೇವಲ 501 ರೂಪಾಯಿಗೆ ವಾಟ್ಸಾಪ್, ಫೇಸ್​ಬುಕ್ ಮತ್ತು ಯೂಟ್ಯೂಬ್ ಆಪ್ಶನ್ ಇರೋ ಫೋನು ಕೈಗೆ ಸಿಗಲಿದೆ. ಹೇಗೆ ಅಂತೀರಾ? ಇಲ್ಲಿದೆ ವಿವರ

ರಿಲಯನ್ಸ್ ಜಿಯೋ ಎಂಬುವುದು ಅಸ್ತಿತ್ವಕ್ಕೆ ಬರುತ್ತಿದ್ದ ಹಾಗೆ ದೂರಸಂಪರ್ಕ ಲೋಕದಲ್ಲಿ ಕ್ರಾಂತಿಯಾಗಿತ್ತು. ಆ ಬಳಿಕ ಜಿಯೋ ಸ್ಮಾರ್ಟ್ ಫೀಚರ್ ಇರೋ ಫೋನನ್ನು ಪರಿಚಯಿಸಿದ್ದು, ರಿಲಿಯನ್ಸ್ ಜಿಯೋ ಮಾನ್ಸೂನ್ ಹಂಗಾಮ ಇಂದಿನಿಂದ ಪ್ರಾರಂಭವಾಗಲಿದೆ. ಇಂದು ಸಂಜೆ 5 ಗಂಟೆಯಿಂದ ಜಿಯೋ‌ ಮಳಿಗೆಗಳಲ್ಲಿ ಗ್ರಾಹಕರಿಗೆ ಈ ಫೋನ್ ಸಿಗಲಿದೆ‌.

ಗ್ರಾಹಕರು ತಮ್ಮ ಬಳಿಯಿರೋ ಕೀ ಪ್ಯಾಡ್ ಫೀಚರ್ ಇರೋ ಯಾವುದೇ ಫೋನ್ ವಾಪಸ್​​ ಮಾಡಿ, ಅದರ ಜೊತೆ‌ 501ರೂಪಾಯಿ ಕೊಟ್ರೆ ಹೊಸ ಜಿಯೋ ಸ್ಮಾರ್ಟ್​ ಫೋನ್ ನೀಡಲಾಗುತ್ತೆ. ಎಕ್ಸ್​ಚೇಂಜ್​ಗೆ ನಿಮ್ಮ ಬಳಿ ಫೋನ್‌ ಇಲ್ಲದಿದ್ರೆ 1,500 ರೂಪಾಯಿಗೆ ಹೊಸ ಸ್ಮಾರ್ಟ್​ ಫೋನ್ ನಿಮ್ಮ ಕೈ ಸೇರಲಿದೆ.

ಈಗಾಗಲೇ 500 ಮಿಲಿಯನ್​ ಜನ ಫ್ಯೂಚರ್​ ಫೋನ್​ ಬಳಕೆ ಮಾಡುತ್ತಿದ್ದು, ಇಂಟರ್ನೆಟ್​ ಬಳಕೆ ಮಾಡ್ತಿಲ್ಲ. ಇದೀಗ ಜಿಯೋ ಬದಲಾವಣೆ ತರುತ್ತಿದ್ದು, ಜಿಯೋ ಮಾನ್ಸೂನ್​ ಹಂಗಾಮದಲ್ಲಿ ಕೇವಲ 501 ರೂಪಾಯಿ ಕೊಟ್ಟರೆ ಹೊಸ ಜಿಯೋ ಫೋನ್​ ಇಂಟರ್ನೆಟ್​ ಬಳಕೆ ಸಮೇತ ಸಿಗಲಿದೆ.

ಜಿಯೋ ಸ್ಮಾರ್ಟ್​ ಫೋನ್​ನಲ್ಲಿ ಪ್ರಪಂಚದ ಬಹುಮುಖ್ಯ ಆ್ಯಪ್​ಗಳು ಲಭ್ಯವಿದ್ದು, ಫೇಸ್​ಬುಕ್​, ವಾಟ್ಸಾಪ್​, ಯೂಟ್ಯೂಬ್​, ಎಜುಕೇಷನ್​, ಮನರಂಜನೆ, ನ್ಯೂಸ್​ ಸೇರಿದಂತೆ ಬಹುಮುಖ್ಯವಾದ ಆ್ಯಪ್​ಗಳು ಇರುತ್ತವೆ.. ವಾಯ್ಸ್​ ಕಮಾಂಡ್​ ಕೂಡ ಇರಲಿದ್ದು, ಅನಕ್ಷರಸ್ತರೂ ಬಳಸಬಹುದಾಗಿದೆ.
First published:July 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ