ಜಿಯೋ​ ಭರ್ಜರಿ ಆಫರ್​: ಒಂದು ಬಾರಿ ರಿಜಾರ್ಚ್​ ಮಾಡಿದ್ರೆ 6 ತಿಂಗಳು ಎಲ್ಲವೂ ಉಚಿತ

297 ರೂ. ಮೊತ್ತದ ರಿಜಾರ್ಚ್​ ಪ್ಲಾನ್​ನ ವಾಲಿಟಿಡಿಯು 84 ದಿನಗಳು ಮಾತ್ರ. ಇಲ್ಲಿ ಬಳಕೆದಾರರು ಅನಿಯಮಿತ ಡೇಟಾ ಸೌಲಭ್ಯ ಪಡೆದುಕೊಳ್ಳಬಹುದು. ಅಂತೆಯೇ ಪ್ರತಿದಿನ 0.5GB ಹೈಸ್ಪೀಡ್​ ಡೇಟಾ ದೊರೆಯಲಿದೆ.

zahir | news18
Updated:January 24, 2019, 3:44 PM IST
ಜಿಯೋ​ ಭರ್ಜರಿ ಆಫರ್​: ಒಂದು ಬಾರಿ ರಿಜಾರ್ಚ್​ ಮಾಡಿದ್ರೆ 6 ತಿಂಗಳು ಎಲ್ಲವೂ ಉಚಿತ
ಸಾಂದರ್ಭಿಕ ಚಿತ್ರ
  • News18
  • Last Updated: January 24, 2019, 3:44 PM IST
  • Share this:
ರಿಲಯನ್ಸ್​ ಜಿಯೋ ಟೆಲಿಕಾಂ ಕಂಪೆನಿ ತನ್ನ ಜಿಯೋಫೋನ್​ ಬಳಕೆದಾರರಿಗೆ ಎರಡು ಹೊಸ ರಿಜಾರ್ಚ್​ ಪ್ಲಾನ್​ಗಳನ್ನು ಪರಿಚಯಿಸಿದೆ. ಈ  ಪ್ರಿಪೇಯ್ಡ್ ಯೋಜನೆಗಳಲ್ಲಿ ದೀರ್ಘಾವಧಿ ವಾಲಿಟಿಡಿ ನೀಡಿದ್ದು ಅದರೊಂದಿಗೆ ಮತ್ತಷ್ಟು ಉಚಿತ ಸೇವೆಗಳನ್ನು ಪಡೆಯಬಹುದಾಗಿದೆ. ಜಿಯೋ ಪ್ರಸ್ತುತಪಡಿಸಿರುವ 594 ರೂ. ಮತ್ತು 297 ರೂ. ಪ್ಲಾನ್​ಗಳಿಂದ ಗ್ರಾಹಕರಿಗೆ ಸಿಗುವ ಲಾಭಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

594 ರೂ. ಯೋಜನೆ:
ಈ ಪ್ಲಾನ್​ನಲ್ಲಿ ಜಿಯೋಫೋನ್​ ಬಳಕೆದಾರರು ರಿಜಾರ್ಚ್​ ಮಾಡಿಕೊಂಡರೆ 168 ದಿನಗಳ ವಾಲಿಟಿಡಿ ದೊರಕಲಿದೆ. ಅದರೊಂದಿಗೆ ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯಗಳನ್ನು ಪಡೆಯಬಹುದು. ಪ್ರತಿದಿನ 0.5GB ಹೈಸ್ಪೀಡ್​ ಡೇಟಾ ದೊರೆಯಲಿದ್ದು, ಇದರ ಬಳಿಕ 64Kbps ಸ್ಪೀಡ್​ನಲ್ಲಿ ಅನಿಯಮಿತ ಇಂಟರ್​ನೆಟ್​ ಬಳಸಬಹುದು. ಹಾಗೆಯೇ 28 ದಿನಗಳವರೆಗೆ 300 ಉಚಿತ ಎಸ್​ಎಂಎಸ್ ಲಭ್ಯವಿರಲಿದ್ದು, 168 ದಿನಗಳವರೆಗೆ ಒಟ್ಟು 1800 ಉಚಿತ ಎಸ್​ಎಂಎಸ್​ಗಳನ್ನು ಕಳುಹಿಸಬಹುದು.

ಇದನ್ನೂ ಓದಿ: VIDEO: ಲೋ ಕರಿಯ..ನಿನ್ನ @#$*#@&#&# ದ. ಆಫ್ರಿಕಾ ಆಟಗಾರನನ್ನು ಹೀನಾಯವಾಗಿ ನಿಂದಿಸಿದ ಪಾಕ್ ತಂಡದ​ ನಾಯಕ!

297 ರೂ. ಯೋಜನೆ:
297 ರೂ. ಮೊತ್ತದ ರಿಜಾರ್ಚ್​ ಪ್ಲಾನ್​ನ ವಾಲಿಟಿಡಿಯು 84 ದಿನಗಳು ಮಾತ್ರ. ಇಲ್ಲಿ ಬಳಕೆದಾರರು ಅನಿಯಮಿತ ಡೇಟಾ ಸೌಲಭ್ಯ ಪಡೆದುಕೊಳ್ಳಬಹುದು. ಅಂತೆಯೇ ಪ್ರತಿದಿನ 0.5GB ಹೈಸ್ಪೀಡ್​ ಡೇಟಾ ದೊರೆಯಲಿದ್ದು, ಇದರ ಬಳಿಕ 64Kbps ಸ್ಪೀಡ್​ನಲ್ಲಿ ಅನಿಯಮಿತ ಇಂಟರ್​ನೆಟ್​ ಬಳಸಬಹುದು. ಅದೇ ರೀತಿ ಈ ಪ್ಲಾನ್​ನಲ್ಲೂ ಅನಿಯಮಿತ ಕರೆ ಮತ್ತು 28 ದಿನಗಳವರೆಗೆ 300 ಉಚಿತ ಎಸ್​ಎಂಎಸ್ ಲಭ್ಯವಿದೆ. 84 ದಿನಗಳ ವಾಲಿಟಿಡಿ ಹೊಂದಿರುವ ಈ ಪ್ಲಾನ್​ನಲ್ಲಿ ಒಟ್ಟು 900 ಎಸ್​ಎಂಎಸ್​ಗಳನ್ನು ಉಚಿತವಾಗಿ ಕಳುಹಿಸಬಹುದು.

ಇದನ್ನೂ ಓದಿ: VIDEO: ಹೆಲ್ಮೆಟ್​ ಏಕೆ ಧರಿಸಬೇಕು? ಬೆಚ್ಚಿ ಬೀಳಿಸುತ್ತಿದೆ ಈ ಭೀಕರ ದೃಶ್ಯ..!ವಿಶೇಷ ಉಚಿತ ಆಫರ್:
ಈ ಪ್ಲಾನ್​ಗಳನ್ನು ರೀಜಾರ್ಚ್​ ಮಾಡಿಕೊಂಡ ಗ್ರಾಹಕರಿಗೆ ಜಿಯೋ ಫೋನ್​, ಜಿಯೋ ಸಿನಿಮಾ, ಜಿಯೋಸಾವನ್ ಮ್ಯೂಸಿಕ್​ನಂತಹ ಅಪ್ಲಿಕೇಶನ್​​​ ಚಂದಾದಾರಿಕೆಯು ಉಚಿತವಾಗಿ ನೀಡಲಿದೆ.

ಇದನ್ನೂ ಓದಿ: ಮಹೀಂದ್ರಾ ಕಂಪೆನಿಯ ಹೊಸ ಕಾರಿಗೆ ಹೆಸರು ನೀಡಿದ್ರೆ 2 ಕಾರುಗಳು ಉಚಿತ..!

ಇದನ್ನೂ ಓದಿ: VIDEO: ಕಿವೀಸ್​ ವಿರುದ್ದ ಭರ್ಜರಿ ಜಯ: ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ ಧೋನಿ-ಕೊಹ್ಲಿ

First published:January 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ