ಯಾತ್ರಿಕರ ಅನುಕೂಲಕ್ಕಾಗಿ ಕುಂಭ ಜಿಯೋಫೋನ್ ಬಿಡುಗಡೆ..!

ಯಾತ್ರಿಕರಿಗೆ ಎದುರಾಗುವ ಗೊಂದಲಗಳು, ಮಾಹಿತಿ ಕೊರತೆ ಮೊದಲಾದ ಸಮಸ್ಯೆಗಳನ್ನು ಬಗೆಹರಿಸಲು ಜಿಯೋ ಮುಂದಾಗಿದೆ. ಭಕ್ತರ ಅಗತ್ಯಗಳಿಗೆ ತಕ್ಕಂತೆ ಹೊಸ ಆವೃತ್ತಿಯ ವಿಶೇಷ ಕುಂಭ ಜಿಯೋಫೋನ್​ ಬಿಡುಗಡೆ ಮಾಡಿದೆ.

Latha CG | news18india
Updated:January 11, 2019, 5:14 PM IST
ಯಾತ್ರಿಕರ ಅನುಕೂಲಕ್ಕಾಗಿ ಕುಂಭ ಜಿಯೋಫೋನ್ ಬಿಡುಗಡೆ..!
ಸಾಂದರ್ಭಿಕ ಚಿತ್ರ
 • Share this:
ವಿಶ್ವದಲ್ಲೇ ಅತಿದೊಡ್ಡ ಮಾನವ ಸಮ್ಮೇಳನವಾದ ಕುಂಭಮೇಳ ಜನವರಿ 15 ರಿಂದ ಮಾರ್ಚ್​ 4 ರವರೆಗೆ  ಉತ್ತರಪ್ರದೇಶದ ಪ್ರಯಾಗ್​ರಾಜ್​​ನಲ್ಲಿ ನಡೆಯಲಿದೆ. 55 ದಿನಗಳ ಕಾಲ ನಡೆಯುವ ಈ ಮೇಳಕ್ಕೆ ಕೋಟ್ಯಾಂತರ ಭಕ್ತರು ಆಗಮಿಸಿ ಗಂಗೆಯಲ್ಲಿ ಮಿಂದೇಳುತ್ತಾರೆ. ಈ ವೇಳೆ ಯಾತ್ರಿಕರಿಗೆ ಎದುರಾಗುವ ಗೊಂದಲಗಳು, ಮಾಹಿತಿ ಕೊರತೆ ಮೊದಲಾದ ಸಮಸ್ಯೆಗಳನ್ನು ಬಗೆಹರಿಸಲು ಜಿಯೋ ಮುಂದಾಗಿದೆ. ಭಕ್ತರ ಅಗತ್ಯಗಳಿಗೆ ತಕ್ಕಂತೆ ಹೊಸ ಆವೃತ್ತಿಯ ವಿಶೇಷ 'ಕುಂಭ ಜಿಯೋಫೋನ್​' ಬಿಡುಗಡೆ ಮಾಡಿದೆ.

'ಕುಂಭ ಜಿಯೋಫೋನ್' ​ನಲ್ಲಿರುವ  ಸೇವೆಗಳು:

ಕುಂಭಮೇಳಕ್ಕೆ ಆಗಮಿಸುವ ಯಾತ್ರಿಕರ ಅಗತ್ಯಗಳಿಗೆ ತಕ್ಕಂತೆ ರೂಪಿಸಲಾಗಿರುವ ಅನೇಕ ಅನುಕೂಲಗಳನ್ನು ಜಿಯೋಫೋನ್ ನೀಡುತ್ತದೆ.


 • ತತ್‌ಕ್ಷಣದ ಪ್ರಯಾಣ ಮಾಹಿತಿ (ವಿಶೇಷ ರೈಲುಗಳು, ಬಸ್ಸುಗಳು ಇತ್ಯಾದಿ)

 • ಟಿಕೆಟ್ ಕಾಯ್ದಿರಿಸುವಿಕೆ

 • ನಿಲ್ದಾಣಗಳಲ್ಲಿ ಯಾತ್ರಿ-ಆಶ್ರಯ
 • ತುರ್ತು ಸಹಾಯವಾಣಿ ಸಂಖ್ಯೆಗಳು

 • ಪ್ರಾದೇಶಿಕ ಮಾರ್ಗಗಳು ಹಾಗೂ ನಕ್ಷೆಗಳು

 • ಸ್ನಾನ ಹಾಗೂ ಧಾರ್ಮಿಕ ದಿನಗಳ ಪೂರ್ವಪ್ರಕಾಶಿತ ಪಟ್ಟಿ

 • ರೈಲ್ವೇ ಕ್ಯಾಂಪ್ ಮೇಳ

 • ಫ್ಯಾಮಿಲಿ ಲೊಕೇಟರ್

 • ಖೋಯಾ ಪಾಯಾ (ಕಳೆದದ್ದು ಮತ್ತು ಸಿಕ್ಕಿದ್ದು)

 • ಕುಂಭ ದರ್ಶನ (ಕುಂಭದ ಹಿಂದಿನ ದೃಶ್ಯಾವಳಿಗಳ ಜೊತೆಯಲ್ಲಿ ಜಿಯೋಟೀವಿಯಲ್ಲಿ ವಿಶೇಷ ಕುಂಭ ಕಾರ್ಯಕ್ರಮಗಳ ಪ್ರಸಾರ)

 • ಸುದ್ದಿ ಪ್ರಸಾರ

 • ಮನರಂಜನೆ

 • ದೈನಿಕ ಕ್ವಿಜ್


ಇದನ್ನೂ ಓದಿ: ಜಿಯೋ ಡಬಲ್ ಧಮಾಕಾ: ಪ್ರತಿದಿನ ಸಿಗುತ್ತೆ ಹೆಚ್ಚುವರಿ 2GB ಡೇಟಾ

ಇವಿಷ್ಟು ಕುಂಭ ಮೇಳಕ್ಕೆ ಸಂಬಂಧಪಟ್ಟ ಸೇವೆಗಳಾಗಿವೆ. ಈ ಪೋನ್​​ನಲ್ಲಿ ಹೆಚ್ಚುವರಿ ಸೌಲಭ್ಯಗಳನ್ನು ನೀಡಲಾಗುತ್ತಿದೆ.

 • ಉಚಿತ ವಾಯ್ಸ್ ಕರೆಗಳು

 • ಅನ್​​ಲಿಮಿಟೆಟ್​ ಡಾಟಾ ಸೇವೆ

 • ಜಿಯೋ ಟೀವಿ

 • ಜಿಯೋಸಿನಿಮಾ

 • ಜಿಯೋಸಾವನ್ ಮ್ಯೂಸಿಕ್

 • ಜಿಯೋಗೇಮ್ಸ್

 • ಫೇಸ್‌ಬುಕ್

 • ವಾಟ್ಸ್‌ಆಪ್

 • ಯೂಟ್ಯೂಬ್

 • ಗೂಗಲ್ ಮ್ಯಾಪ್ಸ್

 • ಗೂಗಲ್ ವಾಯ್ಸ್ ಅಸಿಸ್ಟೆಂಟ್


ಕುಂಭಕ್ಕಾಗಿ ರೂಪಿಸಿರುವ ಸವಲತ್ತುಗಳು ಜಿಯೋಫೋನ್‌ನ ಸದ್ಯದ ಹಾಗೂ ಹೊಸ ಬಳಕೆದಾರರೆಲ್ಲರಿಗೂ ಲಭ್ಯವಿರಲಿವೆ. ಜಿಯೋಫೋನ್‌ನಲ್ಲಿರುವ ಜಿಯೋಸ್ಟೋರ್ ಮೂಲಕ ಗ್ರಾಹಕರು ಕುಂಭ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಜಿಯೋಫೋನ್ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ರಿಲಯನ್ಸ್ ರೀಟೇಲ್ ‘1991’ ಎಂಬ ವಿಶೇಷ ಸಹಾಯವಾಣಿ ಸಂಖ್ಯೆಯನ್ನು ರೂಪಿಸಿದೆ.​

First published:January 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ