HOME » NEWS » Tech » RELIANCE JIO IS WORKING ON A JIOBOOK LAPTOP CALLED ITS RUN JIOOS HG

ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಕಡಿಮೆ ಬೆಲೆಯ ಜಿಯೋ ಲ್ಯಾಪ್​ಟಾಪ್; ಇದರ ವಿಶೇಷತೆ ಏನು ಗೊತ್ತಾ?

ಜಿಯೋ ಸಿದ್ಧಪಡಿಸಿದ್ದ ಜಿಯೋ ಬುಕ್​ ಲ್ಯಾಪ್​​​ಟಾಪ್​ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಕಡಿಮೆ ಬೆಲೆಯ ಫೋನ್​ ಪರಿಚಯಿಸಿರುವ ಜಿಯೋ ಇದೀಗ ಲ್ಯಾಪ್​ಟಾಪ್​ ಮೂಲಕ ಜನರ ಮನಗೆಲ್ಲಲು ಮುಂದಾಗಿದೆ.

news18-kannada
Updated:March 5, 2021, 4:57 PM IST
ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಕಡಿಮೆ ಬೆಲೆಯ ಜಿಯೋ ಲ್ಯಾಪ್​ಟಾಪ್; ಇದರ ವಿಶೇಷತೆ ಏನು ಗೊತ್ತಾ?
ಪ್ರಾತಿನಿಧಿಕ ಚಿತ್ರ
  • Share this:
ಜಿಯೋ ಹೊಸ ಲ್ಯಾಪ್​ಟಾಪ್​​ವೊಂದನ್ನು ಸಿದ್ಧಪಡಿಸುತ್ತಿರುವ ಬಗ್ಗೆ ಈ ಹಿಂದೆಯೇ ಹೇಳಿಕೊಂಡಿತ್ತು. ಆದರೀಗ ನೂತನ ಲ್ಯಾಪ್​ಟಾಪ್ ​ ಬಿಡುಗಡೆ ಸಿದ್ಧವಾಗಿದ್ದು, ಮಾರುಕಟ್ಟೆ ಪ್ರವೇಶಿಸಲು ತಯಾರಾಗಿನಿಂತಿದೆ.

ರಿಲಯನ್ಸ್​​ ಜಿಯೋ 2018ರಲ್ಲಿಯೇ ಜಿಯೋ ಬುಕ್​  ಹೆಸರಿನ ಲ್ಯಾಫ್​ಟಾಪ್​ ಅನ್ನು ಸಿದ್ಧಪಡಿಸಲು ಯೋಜನೆ ಹಾಕಿಕೊಂಡಿತ್ತು. 2019ರ ವೇಳೆಗೆ ಈ ವಿನೂತನ ಪ್ರಯೋಗಕ್ಕೆ ಚಾಲನೆ ನೀಡಿತ್ತು. ಇದೀಗ 'Jio Book' ಹೆಸರಿನಡಿ ಲ್ಯಾಪ್​ಟಾಪ್​ ಅನ್ನು ಸಿದ್ಧಪಡಿಸುವ ಮೂಲಕ ಗ್ರಾಹಕರಿಗೆ ಹೊಸ ಅನುಭವವನ್ನು ನೀಡಲು ಮುಂದಾಗಿದೆ.

ಅಂದಹಾಗೆಯೇ ಜಿಯೋ ಸಿದ್ಧಪಡಿಸಿದ್ದ ಜಿಯೋ ಬುಕ್​ ಲ್ಯಾಪ್​​​ಟಾಪ್​ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಕಡಿಮೆ ಬೆಲೆಯ ಫೋನ್​ ಪರಿಚಯಿಸಿರುವ ಜಿಯೋ ಇದೀಗ ಲ್ಯಾಪ್​ಟಾಪ್​ ಮೂಲಕ ಜನರ ಮನಗೆಲ್ಲಲು ಮುಂದಾಗಿದೆ

ಜಿಯೋ ಬುಕ್ ​ 13.3 ಇಂಚಿನ ಫುಲ್​ ಹೆಚ್​ಡಿ ಡಿಸ್​ಪ್ಲೇ ಹೊಂದಿದ್ದು, 4G ಲ್ಯಾಪ್​ಟಾಪ್​ ಇದಾಗಿದೆ. 16:9 ಮಾದರಿಯಲ್ಲಿ 1920x1080 p ರೆಸಲ್ಯೂಷನ್​ ಹೊಂದಿದೆ. ವೇಗದ ಕಾರ್ಯಚರಣೆಗಾಗಿ 4GB RAM ಮತ್ತು 64GB ಇಂಟರ್​ನಲ್​ ಮೊಮೊರಿಯನ್ನು ನೀಡಿದೆ.

ಇಂಟೆಲ್​​ ಪೆನ್​ಟಿಮ್​ ಕ್ವಾಡ್​ಕೋರ್​ ಪ್ರೊಸಸರ್​ ಅಳವಡಿಸಿರುವ ಈ ಜಿಯೋ ಬುಕ್​ನಲ್ಲಿ HD ಕ್ಯಾಮೆರಾವನ್ನು ಅಳವಡಿಸಲಾಗಿದೆ. ವಿಡಿಯೋ ಕಾಲಿಂಗ್​ ಸೇವೆಗಾಗಿ ಈ ಸೌಲಭವ್ಯವನ್ನು ಇದರಲ್ಲಿ ನೀಡಿದೆ. ಅಷ್ಟು ಮಾತ್ರವಲ್ಲದೆ, ಸ್ಮಾರ್ಟ್​ಫೋನ್​ನಂತೆಯೇ ಸಿಮ್​ ಕಾರ್ಡ್​ ಸಪೋರ್ಟ್​ ಹೊಂದಿದ್ದು, ಇದರ ಮೂಲಕ ಹೈ ಸ್ಪೀಡ್​ ಇಂಟರ್​ನೆಟ್​ ಬಳಸಿಕೊಂಡು ಬಳಸಬಹುದಾಗಿದೆ.

ಇನ್ನು ತನ್ನದೇ ಆದ ಆಪರೇಟಿಂಗ್​ ಸಿಸ್ಟಂ ಅನ್ನು ಜಿಯೋ ಬುಕ್​ ಹೊಂದಿದ್ದು, ಅದನ್ನು ಜಿಯೋ ಓಎಸ್​ ಎಂದು ಕರೆಯಲಾಗಿದೆ. ನೂತನ ಲ್ಯಾಪ್ಟಾಪ್​ ಸಿದ್ಧಪಡಿಸಲು  ರಿಲಯನ್ಸ್​ ಚೀನಾ ಮೂಲದ ಕಂಪನಿಯಾದ ಬ್ಲೂಬ್ಯಾಂಕ್​​ ಸಹಭಾಗಿತ್ವವನ್ನು ಪೆಡೆದುಕೊಂಡಿದೆ

ನೂತನ ಲ್ಯಾಪ್​ಟಾಪ್​ನಲ್ಲಿ ಹೆಚ್​ಡಿಎಮ್​ಐ ಕನೆಕ್ಟರ್​​, ಡುಯೆಲ್​​ ಬ್ಯಾಂಡ್​ ವೈ-ಫೈ ಮತ್ತು ಬ್ಲೂಟೂತ್​. ಜೊತೆಗೆ 3 ಅಕ್ಸೆಲೆರೊಮೀಟರ್​ ಮತ್ತು ಕ್ಯಾಲ್​ಕಾಮ್​ ಆಡಿಯೋ ಚಿಪ್ ನೀಡಲಾಗಿದೆ.

ನೆಟ್​ವರ್ಕ್​ ಕ್ಷೇತ್ರದಲ್ಲಿ, ಫೋನ್​ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ರಿಲಯನ್ಸ​ ಜಿಯೋ ಇದೀಗ ಜಿಯೋ ಬುಕ್​ ಪರಿಚಯಿಸುವ ಮೂಲಕ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಗ್ರಾಹಕರ ತನ್ನತ್ತ ಮನಸೆಳೆದುಕೊಳ್ಳಲಿದೆ. ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಇದೇ ಜೂನ್​ ಅಥವಾ ಜುಲೈ ತಿಂಗಳಿನಲ್ಲಿ ಜಿಯೋ ಬುಕ್​ ಮಾರುಕಟ್ಟೆಗೆ  ಪ್ರವೇಶಿಸಲಿದೆ ಎಂದು ಹೇಳಲಾಗುತ್ತಿದೆ.
Published by: Harshith AS
First published: March 5, 2021, 4:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories